ಬೈಟ್‌ಡ್ಯಾನ್ಸ್‌ ನಿಂದ ಹೊಸ ಮ್ಯೂಸಿಕ್‌ ಸ್ಟ್ರೀಮಿಂಗ್ ಆಪ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಸ್ಟ್ರೀಮಿಂಗ್‌, ವಿಡಿಯೋ ಸ್ಟ್ರೀಮಿಂಗ್‌ ಆಧಾರಿತ ಆಪ್‌ಗಳು ಭಾರಿ ಜನಪ್ರಿಯತೆಯನ್ನ ಪಡೆದುಕೊಳ್ಳುತ್ತಿವೆ. ಆದರಲ್ಲೂ ಟಿಕ್‌ಟಾಕ್‌, ಹಲೋ ಅಂತಹ ಆಪ್‌ಗಳು ಸಾಕಷ್ಟು ಸೌಂಡ್‌ ಮಾಡ್ತಿರೋದು ನಿಮಗೆಲ್ಲಾ ಗೊತ್ತೆ ಇದೆ. ಇದೀಗ ಈಗಾಗ್ಲೆ ಟಿಕ್‌ಟಾಕ್‌ ಆಪ್‌ ಅನ್ನು ಪರಿಚಯಿಸಿ ಜಗತ್ತಿನ ಎಲ್ಲೆಡೆ ಸಂಚಲನ ಸೃಷ್ಟಿಸಿರುವ ಬೈಟ್‌ಡ್ಯಾನ್‌ ಕಂಪೆನಿ ಮತ್ತೊಂದು ಹೊಸ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು

ಹೌದು, ಟಿಕ್‌ಟಾಕ್‌ ಆಪ್‌ ಪರಿಚಯಿಸಿ ಎಲ್ಲೆಡೆ ಜನಪ್ರಿಯತೆ ಗಳಿಸಿರುವ ಬೈಟ್‌ಡ್ಯಾನ್ಸ್‌ ಕಂಪೆನಿ ಹೊಸ ಮ್ಯೂಸಿಕ್‌ ಸ್ಟ್ರೀಮಿಂಗ್‌ ''ರೆಸ್ಸೊ'' ಆಪ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದು ವಿಶ್ವದ ಮೊದಲ ಸೊಶೀಯಲ್‌ ಮ್ಯೂಸಿಕ್‌ ಸ್ಟ್ರೀಮಿಂಗ್ ಅಪ್ಲಿಕೇಶನ್ ಎಂದು ಹೇಳಲಾಗಿದೆ. ಇನ್ನು ಈ ಅಪ್ಲಿಕೇಶನ್‌ , ವಿಡಿಯೋಗಳು, ಕಾಮೆಂಟ್‌ಗಳು, ಮ್ಯೂಸಿಕ್‌ ಲಿರಿಕ್ಸ್‌ ಫೀಚರ್ಸ್‌ಗಳನ್ನ ಒಳಗೊಂಡಿರಲಿದೆ. ಅಲ್ಲದೆ ರೆಸ್ಸೂ ಆಪ್‌ ಆಂಡ್ರಾಯ್ಡ್‌ಹಾಗೂ ಐಒಎಸ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ.

ರೆಸ್ಸೂ ಆಪ್‌

ರೆಸ್ಸೂ ಆಪ್‌

ರೆಸ್ಸೊ ಆಪ್‌ ಕೂಡ ಟಿಕ್‌ಟಾಕ್ ಆಪ್‌ ನಂತಹ ಇಂಟರ್ಫೇಸ್ ವ್ಯವಸ್ಥೆಯನ್ನ ಹೊಂದಿದ್ದು, ಬಳಕೆದಾರರು ಒಂದು ಹಾಡನ್ನ ಕೇಳುತ್ತಿರುವಾಗಲೇ ಮತ್ತೊಂದು ಹಾಡಿಗೆ ಮುಂದುವರೆಯಲಿ ಸ್ವೈಪ್ ಮಾಡಬಹುದು. ಅಲ್ಲದೆ ಈ ಆಪ್‌ನಲ್ಲಿಯೂ ಕೂಡ ಟಿಕ್‌ಟಾಕ್‌ನಲ್ಲಿ ಕಂಡುಬರುವಂತೆ ಹಾರ್ಟ್‌ ಐಕಾನ್, ಕಾಮೆಂಟ್‌ ಸೆಕ್ಷನ್‌, ಶೇರ್‌ ಟೂಲ್‌ಗಳಂತಹ ಇಂಟರ್‌ಆಕ್ಟಿವ್‌ ಫೀಚರ್ಸ್‌ಗಳನ್ನ ನೀಡಲಾಗಿದೆ. ಇನ್ನು ರೆಸ್ಸೊ ಅಪ್ಲಿಕೇಶನ್‌ನ ಬಹುಮುಖ್ಯವಾದ ಫೀಚರ್ಸ್‌ ಎಂದರೆ ಬ್ಯಾಕ್‌ರೌಂಡ್‌ ವಿಡಿಯೋಗಳನ್ನ ನೀಡಿರುವುದು. ಈ ವಿಡಿಯೋಗಳು ಆರು ಸೆಕೆಂಡುಗಳ ವೀಡಿಯೊಗಳಾಗಿದ್ದು, ಲೂಪ್ಸ್‌ನಲ್ಲಿ ಪ್ಲೇ ಆಗಲಿವೆ.

ರೆಸ್ಸೂ ಆಪ್‌ನ ವಿನ್ಯಾಸ

ರೆಸ್ಸೂ ಆಪ್‌ನ ವಿನ್ಯಾಸ

ಈ ಆಪ್‌ನಲ್ಲಿ ನೀವು ವಿಡಿಯೋಗಳನ್ನ ಅಪ್‌ಲೋಡ್‌ ಮಾಡಲು ಸುಲಭ ಆಯ್ಕೆಯನ್ನ ನೀಡಲಾಗಿದೆ. ಆರು ಸೆಕೆಂಡುಗಳ ಕಿರು ವಿಡಿಯೋಗಳನ್ನ ಬಳಕೆದಾರರು ಆಯ್ಕೆ ಮಾಡಿ ಆಪ್‌ಲೋಡ್‌ ಮಾಡಬಹುದಾಗಿದೆ. ಅಲ್ಲದೆ ಇದೊಂದು ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್ಲಿಕೇಶನ್‌ ಆಗಿದ್ದು ಥೇಟ್‌ ಆಪಲ್ ಮ್ಯೂಸಿಕ್ ಅಪ್ಲಿಕೇಶನ್‌ ನೀಡುವ ರಿಯಲ್‌ರ ಟೈಂ ಮ್ಯೂಸಿಕ್‌ ಫೀಲ್‌ ಅನ್ನು ನೀಡುತ್ತದೆ. ಅಲ್ಲದೆ ಆಡಿಯೋ ಜೊತೆಗೆ ವಿಡಿಯೋ ಕೂಡ ಇದರಲ್ಲಿ ಪ್ಲೇ ಆಗಲಿದ್ದು, ಸಾಹಿತ್ಯವು ಕೂಡ ಇದರ ಜೊತೆಗೆ ಪ್ಲೇ ಆಗಲಿದೆ.

ಕಾರ್ಯನಿರ್ವಹಣೆ ಹೇಗೆ?

ಕಾರ್ಯನಿರ್ವಹಣೆ ಹೇಗೆ?

ರಸ್ಸೂ ಆಪ್‌ನಲ್ಲಿ ನೀವು ಕೇಳಬಯಸುವ ಹಾಗೂ ಆಪ್‌ಲೋಡ್‌ ಮಾಡುವ ವಿಡಿಯೋದಲ್ಲಿನ ಹಾಡಿನಿಂದ ನಿಖರವಾದ ಸಾಲುಗಳನ್ನು ಆರಿಸುವ ಮೂಲಕ ಬಳಕೆದಾರರು ಈ ಸಾಹಿತ್ಯವನ್ನು ಇತರರೊಡನೆ ಹಂಚಿಕೊಳ್ಳಬಹುದು. ಅಲ್ಲದೆ ಈ ಲಿರಿಕಲ್‌ ಗೀತೆಗಳನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಂತಹ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಹಂಚಿಕೊಳ್ಳಬಹುದು. ಇದಕ್ಕಾಗಿ ರೆಸ್ಸೊ ಆಪ್‌ನಲ್ಲಿ ಸೋಶಿಯಲ್‌ ಮೀಡಿಯಾ ಆಪ್ಲಿಕೇಶನ್‌ಗಳಿಗೆ ಶೇರ್‌ ಮಾಡಲು ಅವಕಾಶ ನೀಡಲಾಗಿದೆ.

ರೆಸ್ಸೂ ಆಪ್‌ನ ವಿಶೇಷತೆ

ರೆಸ್ಸೂ ಆಪ್‌ನ ವಿಶೇಷತೆ

ಈ ಅಪ್ಲಿಕೇಶನ್‌ನಲ್ಲಿ ಮ್ಯೂಸಿಕ್‌ ಜಾನರ್ಸ್‌, ಮ್ಯೂಸಿಕ್‌ ಪ್ಲೇ ಲೀಸ್ಟ್‌, ಮತ್ತು ಟಾಪ್‌ ಚಾರ್ಟ್ಸ್‌, ವಿಭಾಗಗಳ ಮೂಲಕ ಹಾಡುಗಳನ್ನ ವಿಭಾಗಿಸಲಾಗಿರುತ್ತದೆ. ಇದಲ್ಲದೆ ಈ ಹಾಡುಗಳ ಜೊತೆಗೆ ಇತರೆ ಹಾಡುಗಳನ್ನ ನೀವು ಸರ್ಚ್‌ ಮಾಡಲು ಕೂಡ ನಿಮಗೆ ಅವಕಾಶವನ್ನ ನೀಡಲಾಗಿದೆ. ಇನ್ನು ಮ್ಯೂಸಿಕ್‌ ಸ್ಟ್ರೀಮಿಂಗ್‌ನಲ್ಲಿ ಇದು ಥೇಟ್‌ ಟಿಕ್‌ಟಾಕ್‌ ಆಪ್‌ ನಂತಿದೆ. ಆದರೆ ಮ್ಯೂಸಿಕ್‌ ಸ್ಟ್ರೀಮಿಂಗ್ ನಲ್ಲಿ ರೆಸ್ಸೊ ಸದ್ಯ ಗಾನಾ, ಸ್ಪಾಟಿಫೈ, ಜಿಯೋ ಸಾವ್ನ್ ಮತ್ತು ಆಪಲ್ ಮ್ಯೂಸಿಕ್‌ನಂತಹ ಮ್ಯೂಸಿಕ್‌ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಪೈಪೋಟಿಯನ್ನ ಎದುರಿಸಬೇಕಾಗಿದೆ.

ಆಡಿಯೋ ಸಂಸ್ಥೆಗಳ ಜೊತೆ ಸಹಭಾಗಿತ್ವ

ಆಡಿಯೋ ಸಂಸ್ಥೆಗಳ ಜೊತೆ ಸಹಭಾಗಿತ್ವ

ಇನ್ನು ರೆಸ್ಸೊ ಆಪ್‌ ಸೋನಿ ಮ್ಯೂಸಿಕ್ ಎಂಟರ್‌ಟೈನ್‌ಮೆಂಟ್, ವಾರ್ನರ್ ಮ್ಯೂಸಿಕ್ ಗ್ರೂಪ್, ಮೆರ್ಲಿನ್ ಮತ್ತು ಬೆಗ್ಗರ್ಸ್‌ ಗ್ರೂಪ್‌, ಟಿ-ಸೀರೀಸ್, ಸರೆಗಮಾ, ಜೀ ಮ್ಯೂಸಿಕ್, YRFಮ್ಯೂಸಿಕ್, ಟೈಮ್ಸ್ ಮ್ಯೂಸಿಕ್, ಟಿಪ್ಸ್, ವೀನಸ್, ಶೆಮರೂ ಆಡಿಯೋ ಸಂಸ್ಥೆಗಳ ಜೊತೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಇದು ಸ್ಪೀಡ್ ರೆಕಾರ್ಡ್ಸ್, ಆನಂದ್ ಆಡಿಯೋ, ಲಹರಿ ಮ್ಯೂಸಿಕ್, ಡಿವೊ, ಮೂಜಿಕ್‌ 247 ನಂತಹ ರಿಜೀನಲ್‌ ಮ್ಯೂಸಿಕ್‌ ಲೆಬಲ್‌ಗಳ ಜೊತೆ ಒಪ್ಪಂದಗಳನ್ನ ಮಾಡಿಕೊಂಡಿದೆ.

ಇತರೆ

ಇತರೆ

ರೆಸ್ಸೂ ಆಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಅಲ್ಲದೆ ರೆಸ್ಸೊ ಆಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ ಈ ಆಪ್‌ ಅನ್ನು ಬಳಸಲು ಆಂಡ್ರಾಯ್ಡ್‌ ಬಳಕೆದಾರರು ತಿಂಗಳಿಗೆ 99 ರೂ ಮತ್ತು ಐಒಎಸ್‌ ಬಳಕೆದಾರರು 119 ರೂ. ಅನ್ನು ಪಾವತಿಸಬೇಕಾಗಿದೆ, ಇದರಿಂದ ರೆಸ್ಸೊದ ಪಾವತಿಸಿದ ಆವೃತ್ತಿಯಲ್ಲಿ ಆಫ್‌ಲೈನ್ ವಿಡಿಯೋ ಡೌನ್‌ಲೋಡ್‌ಗಳು, ಮತ್ತು ಉತ್ತಮ-ಗುಣಮಟ್ಟದ ಆಡಿಯೊ ಫೀಚರ್ಸ್‌ಗಳನ್ನ ಕಾಣಬಹುದಾಗಿದೆ.

Best Mobiles in India

English summary
Resso comes with TikTok-like features which sets it apart from other music streaming players.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X