Home
ಸುದ್ದಿಜಾಲ

ನಿವೃತ್ತ ಐಎಎಸ್‌ ಅಧಿಕಾರಿಗೆ ಪಂಗನಾಮ ಹಾಕಿದ ವಂಚಕರು!..ವಿಚಾರ ಗೊತ್ತಾದ್ರೆ ಶಾಕ್‌ ಆಗ್ತೀರಾ?

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಸ್ಕ್ಯಾಮ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾಮಾನ್ಯ ಜನರು ಮಾತ್ರವಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಕೂಡ ಆನ್‌ಲೈನ್‌ ಸ್ಕ್ಯಾಮ್‌ಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಇದೀಗ ಲಕ್ನೋದಲ್ಲಿ ಇಂತಹದ್ದೇ ಘಟನೆ ವರದಿಯಾಗಿದೆ. ಇದರಲ್ಲಿ ಮೋಸ ಹೋಗಿರುವುದು ನಿವೃತ್ತ ಐಎಎಸ್‌ ಅಧಿಕಾರಿ ಆಗಿರೋದು ಆತಂಕದ ವಿಚಾರವಾಗಿದೆ.

ಹೌದು, ಲಕ್ನೋದ ಪ್ರಗ್ ನಾರಾಯಣ ರಸ್ತೆಯ ನಿವಾಸಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಆನ್‌ಲೈನ್‌ ಸ್ಕ್ಯಾಮ್‌ನಿಂದ ಹಣ ಕಳೆದುಕೊಂಡಿದ್ದಾರೆ. ಇವರನ್ನು ರಾಮ್ ಕುನ್ವರ್ ಎಂದು ಗುರುತಿಸಲಾಗಿದ್ದು, ಇಲ್ಲಿ ಸ್ಕ್ಯಾಮರ್‌ಗಳು ಅನುಸರಿಸುವ ವಿಧಾನ ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಹಾಗಾದ್ರೆ ನಿವೃತ್ತ ಐಎಎಸ್‌ ಅಧಿಕಾರಿಯನ್ನು ಸ್ಕ್ಯಾಮರ್‌ಗಳು ಯಾಮಾರಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿವೃತ್ತ ಐಎಎಸ್‌ ಅಧಿಕಾರಿಗೆ ಪಂಗನಾಮ ಹಾಕಿದ ವಂಚಕರು!.ಗೊತ್ತಾದ್ರೆ ಶಾಕ್‌ ಆಗ್ತೀರಾ

ನಿವೃತ್ತ ಐಎಎಸ್‌ ಅಧಿಕಾರಿಯಾಗಿರುವ ರಾಮ್‌ ಕುನ್ವರ್‌ ಅವರಿಗೆ ಕೋಟಿ ಕೋಟಿ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿರುವಂತೆ ಆಸೆ ತೋರಿಸಿ ನಂತರ ಹಣವನ್ನು ಆನ್‌ಲೈನ್‌ ಸ್ಕ್ಯಾಮ್‌ರ್‌ಗಳು ಹಣ ಎಗರಿಸಿದ್ದಾರೆ. ಅಂದರೆ ಅಕ್ಟೋಬರ್ 3 ರಂದು ರಾಮ್‌ ಕುನ್ವರ್‌ ಅವರ ಬ್ಯಾಂಕ್ ಖಾತೆಗೆ 29.78 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ ಎಂಬ ಸಾಮಾನ್ಯ ಸಂದೇಶ ಬಂದಿದೆ. ಇದರಿಂದ ಶಾಕ್‌ಗೆ ಒಳಗಾದ ರಾಮ್‌ ಕುನ್ವರ್‌ ಕೂಡಲೇ ಸೆಂಟ್ರಲ್ ಬ್ಯಾಂಕ್‌ನ ಜೋಪ್ಲಿಂಗ್ ರೋಡ್ ಶಾಖೆಯನ್ನು ಸಂಪರ್ಕಿಸಿ ಈ ಸಂದೇಶದ ಬಗ್ಗೆ ಚರ್ಚಿಸಿದ್ದಾರೆ.

ಆದರೆ ಬ್ಯಾಂಕ್‌ ಮ್ಯಾನೇಜರ್‌ ಈ ರೀತಿಯ ಸಂದೇಶವನ್ನು ನಮ್ಮ ಬ್ಯಾಂಕ್‌ನಿಂದ ಕಳುಹಿಸಿಲ್ಲ ಎಂದು ದೃಢಪಡಿಸಿದ್ದಾರೆ. ಅಲ್ಲದೆ ಈ ರೀತಿಯ ಸಂದೇಶದ ಮೂಲದ ಬಗ್ಗೆ ಯಾವುದೇ ವಿವರಣೆಯನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಇದೇ ಸಮಯದಲ್ಲಿ ರಾಮ್‌ ಕುನ್ವರ್‌ಗೆ ಬ್ಯಾಂಕ್‌ನ ಹಿರಿಯ ಅಧಿಕಾರಿ ಅವಿನಾಶ್ ಎಂದು ಹೇಳಿಕೊಂಡು ಅಪರಿಚಿತ ಕರೆ ಬಂದಿದೆ. ಅಲ್ಲದೆ ನಿಮ್ಮ ಖಾತೆಗೆ 29.78 ಕೋಟಿ ರೂ.ಗಳನ್ನು ಆಕಸ್ಮಿಕವಾಗಿ ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ನಿವೃತ್ತ ಐಎಎಸ್‌ ಅಧಿಕಾರಿಗೆ ಪಂಗನಾಮ ಹಾಕಿದ ವಂಚಕರು!.ಗೊತ್ತಾದ್ರೆ ಶಾಕ್‌ ಆಗ್ತೀರಾ

ಈ ಸಮಸ್ಯೆಯನ್ನು ಬಗೆ ಹರಿಸಲು AnyDesk ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸೂಚಿಸಿದ್ದಾರೆ. ಇದನ್ನು ನಂಬಿದ ಕುನ್ವರ್‌ AnyDesk ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಪಾಸ್‌ವರ್ಡ್‌ ಅನ್ನು ಸ್ಕ್ಯಾಮರ್‌ಗೆ ನೀಡಿದ್ದಾರೆ. ಕೂಡಲೇ ಸ್ಕ್ಯಾಮರ್‌ ಕುನ್ವರ್‌ ಅವಕ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕದ್ದಿದ್ದಾನೆ. ಇದರಿಂದ ಕುನ್ವರ್ ಅವರ ಸೆಂಟ್ರಲ್ ಬ್ಯಾಂಕ್ ಖಾತೆಯಿಂದ 4.65 ಲಕ್ಷ ರೂಪಾಯಿಗಳು ಕಡಿತಗೊಂಡಿದೆ. ಜೊತೆಗೆ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೆಚ್ಚುವರಿ 50,000 ರೂ.ಗಳು ಸಹ ಕಡಿತಗೊಂಡಿದೆ. ಇದರಿಂದ ಶಾಕ್‌ಗೆ ಒಳಗಾದ ರಾಮ್‌ ಕುನ್ವರ್‌ ತಾವು ಆನ್‌ಲೈನ್‌ ಸ್ಕ್ಯಾಮ್‌ಗೆ ಬಲಿಯಾಗಿರುವುದನ್ನು ಅರಿತುಕೊಂಡಿದ್ದಾರೆ.

ತಕ್ಷಣವೇ ರಾಮ್‌ ಕುನ್ವರ್‌ ಹತ್ತಿರದ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಸಿದ್ದಾರೆ. ಇದೀಗ ಸೈಬರ್ ಸೆಕ್ಯುರಿಟಿ ತಜ್ಞರು, ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಇದೊಂದು ಕಾದಂಬರಿ ಸ್ಕ್ಯಾಮಿಂಗ್ ತಂತ್ರದಂತೆ ತೋರುತ್ತಿದೆ ಎಂದು ಸಲಹೆ ನೀಡಿದ್ದಾರೆ.

ನಿವೃತ್ತ ಐಎಎಸ್‌ ಅಧಿಕಾರಿಗೆ ಪಂಗನಾಮ ಹಾಕಿದ ವಂಚಕರು!.ಗೊತ್ತಾದ್ರೆ ಶಾಕ್‌ ಆಗ್ತೀರಾ

ಇದೇ ಸಂದರ್ಭದಲ್ಲಿ ಮತ್ತೊಂದು ಆನ್‌ಲೈನ್‌ ಸ್ಕ್ಯಾಮರ್‌ಗಳು ಮೊದಲು ಆಭರಣ ಅಂಗಡಿಯ ಇಮೇಲ್ ವಿಳಾಸವನ್ನು ಕದ್ದಿದ್ದಾರೆ. ನಂತರ ಸ್ಟೋರ್‌ನ ಖಾತೆಯನ್ನು ಹೊಂದಿರುವ ಬ್ಯಾಂಕ್‌ನೊಂದಿಗೆ ಸಂವಹನ ನಡೆಸಲು ಇದನ್ನು ಬಳಕೆ ಮಾಡಿದ್ದಾರೆ. ಆ ಇಮೇಲ್ ಐಡಿ ಬಳಸಿ, ವಂಚಕರು ಬ್ಯಾಂಕ್ ಮ್ಯಾನೇಜರ್‌ಗೆ ಇಮೇಲ್ ಒಂದನ್ನು ಕಳುಹಿಸಿದ್ದಾರೆ. ಈ ಮೂಲಕ ಎರಡು ವಿಭಿನ್ನ ಖಾತೆಗಳಿಗೆ 18 ಲಕ್ಷ ರೂಪಾಯಿಗಳನ್ನು ವರ್ಗಾಯಿಸುವಂತೆ ಕೇಳಿದ್ದಾರೆ. ಇದು ಅಸಲಿ ಇಮೇಲ್ ಎಂದು ಭಾವಿಸಿ, ಬ್ಯಾಂಕ್ ಮ್ಯಾನೇಜರ್ ಹಣ ವರ್ಗಾವಣೆ ಮಾಡಿದ್ದಾರೆ.

ಇದಾದ ನಂತರದಲ್ಲಿ ಚಿನ್ನಾಭರಣ ಮಳಿಗೆ ಮಾಲೀಕರು ಬ್ಯಾಂಕ್‌ಗೆ ಖುದ್ದು ಭೇಟಿ ನೀಡಿ ಅನಧಿಕೃತ ವಹಿವಾಟಿನ ಬಗ್ಗೆ ಮಾಹಿತಿ ಕೇಳಿದಾಗ ಸಹಕಾರಿ ಬ್ಯಾಂಕ್‌ಗೆ ವಂಚನೆ ಮಾಡಿರುವುದು ವ್ಯವಸ್ಥಾಪಕರಿಗೆ ತಿಳಿದುಬಂದಿದೆ. ಪರಿಣಾಮ ತಕ್ಷಣವೇ ಅವರು ಸೈಬರ್ ಪೊಲೀಸರಿಗೆ ಘಟನೆಯನ್ನು ವರದಿ ಮಾಡಿದ್ದು, ವಂಚನೆ, ನಕಲಿ ಮತ್ತು ಗುರುತಿನ ಕಳ್ಳತನಕ್ಕಾಗಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Best Mobiles in India

English summary
Retired IAS officer lost Rs 5 lakh in a new online scam: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+