ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ ರಿಚರ್ಡ್​​ ಬ್ರಾನ್ಸನ್'!

|

ತನ್ನ ಬದುಕಿನುದ್ದಕ್ಕೂ ಸಾಹಸಕಾರ್ಯಗಳಲ್ಲೇ ತೊಡಗಿ ಹೆಸರಾಗಿರುವ ಇಂಗ್ಲೆಂಡ್​ನ ಕೋಟ್ಯಧಿಪತಿ ಮತ್ತು ವರ್ಜಿನ್ ಕಂಪೆನಿಯ ಮಾಲಿಕ ರಿಚರ್ಡ್​​ ಬ್ರಾನ್ಸನ್ ಅವರು​ ಇನ್ನು ನಾಲ್ಕೈದು ತಿಂಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ. ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ 50 ನೇ ವರ್ಷದ ನೆನಪಿಗಾಗಿ ಇದೇ ವರ್ಷ ​​ಬ್ರಾನ್ಸನ್ ಅವರು ಚಂದ್ರನತ್ತ ಹಾರಲು ತಯಾರಾಗಿದ್ದಾರೆ.

ಹೌದು, ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ 50 ನೇ ವರ್ಷದ ನೆನಪಿಗಾಗಿ ಚಂದ್ರಲೋಕಕ್ಕೆ ಹೋಗುವ ಆಸೆ ಇದ್ದು, ಹೀಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರೇ ಹೇಳಿದ್ದಾರೆ. ಇದೇ ಜುಲೈ ವೇಳೆಗೆ ಪ್ರಯಾಣದ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಯೋಜಿಸಿದ್ದು, ಅದೇ ತಿಂಗಳಲ್ಲಿ ಚಂದ್ರಲೋಕಕ್ಕೆ ತೆರಳುತ್ತಿದ್ದೇವೆ ಎಂದು ರಿಚರ್ಡ್ ಬ್ರಾನ್ಸನ್ ಅವರು ತಿಳಿಸಿದ್ದಾರೆ.

ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ ರಿಚರ್ಡ್​​ ಬ್ರಾನ್ಸನ್'!

ವಿಶೇಷವೆಂದರೆ, ರಿಚರ್ಡ್​​ ಬ್ರಾನ್ಸನ್ ಅವರು​ ತಮ್ಮದೇ ಸ್ವಂತ ವರ್ಜಿನ್​ ಗ್ಯಾಲಕ್ಟಿಕ್​ ಬಾಹ್ಯಾಕಾಶ ನೌಕೆಯಲ್ಲಿ ಚಂದ್ರನತ್ತ ಪ್ರಯಾಣ ಬೆಳಸಲಿದ್ದು, ಬ್ರಾನ್ಸನ್ ಅವರ​ ಜೊತೆಗೆ 6 ಮಂದಿ ಇತರೆ ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್​​​ಗಳು ಚಂದ್ರಲೋಕಕ್ಕೆ ತೆರಳಲಿದ್ದಾರೆ. ಇಬ್ಬರು ಪೈಲಟ್​ಗಳು ಬಾಹ್ಯಾಕಾಶ ನೌಕೆಯನ್ನು ಮುನ್ನಡೆಸಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈಗಾಗಲೇ ವರ್ಜಿನ್​ ಗ್ಯಾಲಾಟಿಕ್​ ಮತ್ತು ಬ್ಲೂ ವರಿಜಿನ್​ ಎರಡು ಕಂಪನಿಗಳು ಜನರನ್ನು ಚಂದ್ರಲೋಕಕ್ಕೆ ಕಳುಹಿಸುವ ಕಾರ್ಯದಲ್ಲಿ ನಿರತವಾಗಿದ್ದು, ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಬಾಹ್ಯಾಕಾಶ ನೌಕೆಯ ಮುಂದಿನ ಪರೀಕ್ಷೆಯನ್ನು ಫೆಬ್ರವರಿ 20 ಕ್ಕೆ ಮಾಡಲಾಗುತ್ತಿದೆ. ಅದಾದ ನಂತರ ಜುಲೈ ತಿಂಗಳಲ್ಲಿ ಬ್ರಾನ್ಸನ್ ಅಂಡ್ ಚಂದ್ರಲೋಕಕ್ಕೆ ತೆರಳಲು ಸಿದ್ದವಾಗಿದೆ.

ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ ರಿಚರ್ಡ್​​ ಬ್ರಾನ್ಸನ್'!

ಅಮೆರಿಕಾದ ಅಪೋಲೋ 11 ಮಿಷನ್​ 1969 ರ ಜುಲೈ 20 ರಂದು ಚಂದ್ರನ ಮೇಲೆ ಕಾಲಿಟ್ಟ 50 ವರ್ಷಗಳ ನಂತರ ಚಂದ್ರನತ್ತ ಮತ್ತೆ ಮಾನವ ತನ್ನ ಕಾಲಿಡಲು ಮುಮದಾಗಿದ್ದಾರೆ. ಮಾಧ್ಯಮ ಮಾಹಿತಿಯಂತೆ, ವರ್ಜಿನ್​ ಗ್ಯಾಲಾಟಿಕ್​ ಮತ್ತು ಬ್ಲೂ ವರಿಜಿನ್ ಕಂಪನಿಗಳು 'ಸಬ್​ ಆರ್ಬಿಟಲ್'​ ವಿಮಾನಗಳಲ್ಲಿ ನೂರು ಅಥವಾ ಸಾವಿರ ಜನರನ್ನು ಚಂದ್ರಲೋಕಕ್ಕೆ ಕಳುಹಿಸಲಿವೆಯಂತೆ.

Best Mobiles in India

English summary
February 8, 2019. British billionaire Richard Branson plans to travel to space within the next four or five months aboard his own Virgin Galactic spaceship. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X