Home
ಸುದ್ದಿಜಾಲ

ಐಸಿಸಿ ವರ್ಲ್ಡ್ ಕಪ್ ಕಣ್ಣಾರೆ ನೋಡಲು ಊಬರ್ ನಿಂದ ಹೊಸ ಅವಕಾಶ

By Gizbot Bureau

ವರ್ಲ್ಡ್ ಕಪ್ 2019 ನ್ನು ನೇರವಾಗಿ ನೋಡಬೇಕಾ? ಇಂಗ್ಲೆಂಡ್ ಗೆ ತೆರಳುವ ಆಸೆ ಇದೆಯಾ? ಅದಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಈ ಸ್ಟೋರಿಯನ್ನೂ ಒಮ್ಮೆ ನೋಡಿ ಬಿಡಿ.

ಐಸಿಸಿ ವರ್ಲ್ಡ್ ಕಪ್ ಕಣ್ಣಾರೆ ನೋಡಲು ಊಬರ್ ನಿಂದ ಹೊಸ ಅವಕಾಶ

ಐಸಿಸಿ ವರ್ಲ್ಡ್ ಕಪ್ 2019 ಕ್ಕೆ ನೀವೇನಾದರೂ ಬಸ್ ತಪ್ಪಿಸಿಕೊಂಡಿದ್ದರೆ ಮೇ 30 ರಿಂದ ಜುಲೈ 14,2019 ರ ವರೆಗೆ ಇಂಗ್ಲೆಂಡ್ ನಿಂದ ವೇಲ್ಸ್ ಗೆ ಪ್ರಯಾಣ ಬೆಳೆಸಲು ಇರುವ ಅನ್ಯಮಾರ್ಗ ಯಾವುದು ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ಹೌದು ಯುಕೆಯಲ್ಲಿ ನಲ್ಲಿ ನಡೆಯಲಿರುವ ಕ್ರಿಕೆಟ್ ಜಗತ್ತಿನ ದೊಡ್ಡ ಪಂದ್ಯಾವಳಿಗೆ ಸಾಕ್ಷಿಯಾಗಬೇಕು ಎಂದು ನೀವು ಬಯಸುತ್ತಿದ್ದು ಇಂಗ್ಲೆಂಡ್ ನಲ್ಲಿ ಬಸ್ ತಪ್ಪಿಸಿಕೊಂಡಿದ್ದರೆ ನಿಮಗೆ ಬೇರೆ ವ್ಯವಸ್ಥೆ ಇದೆ. ನೀವು ಆರಾಮಾಗಿ ವೇಲ್ಸ್ ಗೆ ಪ್ರಯಾಣ ಬೆಳೆಸಲು ನಿಮಗೆ ಅವಕಾಶ ಮಾಡಿಕೊಡಲಾಗುತ್ತದೆ.

ಊಬರ್ ರೈಡ್ ಬುಕ್ ಮಾಡಿ :

ಊಬರ್ ರೈಡ್ ಬುಕ್ ಮಾಡಿ :

ಆಶ್ಚರ್ಯಗೊಳ್ಳಬೇಡಿ. ಐಸಿಸಿ ವರ್ಲ್ಡ್ ಕಪ್ 2019 ಅಧಿಕೃತ ಸಹಭಾಗಿತ್ವವನ್ನು ಹೊಂದಿರುವ ಊಬರ್ ಆಯ್ದ ಕೆಲವು ಪ್ರಯಾಣಿಕರನ್ನು ಇಂಗ್ಲೆಂಡ್ ನಿಂದ ಕರೆದುಕೊಂಡು ಹೋಗಲಿದೆ. ಇದು ಬಹಳ ಸುಲಭ ಮತ್ತು ಸರಳವಾಗಿದೆ. ಊಬರ್ ರನ್ಸ್ ನ್ನು ಸ್ಕೋರ್ ಮಾಡಿ ನೀವು ಐಸಿಸಿ ವರ್ಲ್ಡ್ ಕಪ್ ಮತ್ತು ಇತರೆ ಸ್ವರಣೀಯತೆಯ ಕ್ಷಣಗಳಿಗೆ ಟಿಕೆಟ್ ಗೆಲ್ಲುವ ಅವಕಾಶವನ್ನು ಪಡೆದುಕೊಳ್ಳುತ್ತೀರಿ.

ಏನು ಮಾಡಬೇಕು ಗೊತ್ತಾ?

ಏನು ಮಾಡಬೇಕು ಗೊತ್ತಾ?

ಊಬರ್ ರೈಡ್ ಗಾಗಿ ನೀವು ವಿಲ್ಲೋವನ್ನು ಸ್ವಿಂಗ್ ಮಾಡಬೇಕಾಗಿಲ್ಲ. ಕ್ರಿಕೆಟ್ ಪ್ರೇಮಿಗಳು ಕೇವಲ ಊಬರ್ ಬಳಸಿ ಸಂಚರಿಸಿದರೆ ರನ್ ಗಳನ್ನು ಗಳಿಸಬಹುದು. ವಿಶ್ವಕಪ್ ಟಿಕೆಟ್ ಗೆಲ್ಲುವ ಸ್ಪರ್ಧಿಗಳ ಪೈಕಿ ಒಂದು ಅರ್ಹತೆ ಊಬರ್ ರೈಡ್ ಆಗಿರುತ್ತದೆ.

ಯಾವ ಬುಕ್ಕಿಂಗ್ ಗೆ ಎಷ್ಟು ಸ್ಕೋರ್?

ಯಾವ ಬುಕ್ಕಿಂಗ್ ಗೆ ಎಷ್ಟು ಸ್ಕೋರ್?

ಈ ವಾರದಲ್ಲಿ ಬಿಡುಗಡೆಗೊಂಡಿರುವ ಊಬರ್ ಸ್ಕ್ರೀಮ್ ನಲ್ಲಿ ಪ್ರತಿ ರೈಡ್ ನಲ್ಲೂ ಕೂಡ ರನ್ ಗಳು ದೊರೆಯುತ್ತವೆ. ಊಬರ್ ಆಟೋ, ಊಬರ್ ಮೋಟೋ, ಊಬರ್ ಪೂಲ್ ಅಥವಾ ಊಬರ್ ಗೋ ರೈಡ್ ಗಳು ನಾಲ್ಕು ರನ್ ಗಳನ್ನು ನೀಡುತ್ತದೆ. ಮೇಲಿನ ಅಂದರೆ ಊಬರ್ ಪ್ರೀಮಿಯರ್, ಊಬರ್ ಎಕ್ಸ್ಎಲ್ ಮತ್ತು ಊಬರ್ ಹೈಯರ್, ಊಬರ್ ಇಂಟರ್ ಸಿಟಿಗಳನ್ನು ಬುಕ್ ಮಾಡಿದರೆ ಪ್ರತಿ ಬುಕ್ಕಿಂಗ್ ಗೆ 6 ರನ್ ಗಳು ಲಭ್ಯವಾಗುತ್ತದೆ.

ಊಬರ್ ಪ್ಯಾಕೇಜ್:

ಊಬರ್ ಪ್ಯಾಕೇಜ್:

ಈ ಆಫರ್ ನಲ್ಲಿ ಇಂಗ್ಲೆಂಡ್ ಗೆ ಟ್ರಾವೆಲ್ ಪ್ಯಾಕೇಜ್ ನ ಆಫರ್ ಇರುತ್ತದೆ. ಜೊತೆಗೆ ಐಸಿಸಿ ಕ್ರಿಕೆಟ್ ಕಿಟ್ ಅಥವಾ ಜೆರ್ಸಿ ಗಳು ಲಭ್ಯವಿದ್ದು ಅದರಲ್ಲಿ ಊಬರ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ವಿರಾಹ್ ಕೋಹ್ಲಿ ಮಾಡಿರುವ ಹಸ್ತಾಕ್ಷರವಿರುತ್ತದೆ. ಜುಲೈ 14 ರ ಒಳಗೆ 50 ರನ್ ಸ್ಕೋರ್ ಮಾಡಿದವರಿಗೆ ಉಬರ್ ಪ್ರೋಮೋ ಗಳನ್ನು ವಿನ್ ಆಗುವ ಅವಕಾಶವನ್ನು ಐಸಿಸಿ ವರ್ಲ್ಡ್ ಕಪ್ ನ ಫೈನಲ್ ಮ್ಯಾಚ್ ನಲ್ಲಿ ನೀಡಲಾಗುತ್ತದೆ. ಈ ಹಿಂದೆ, ಐಸಿಸಿ ಕಮರ್ಷಿಯಲ್ ಪಾಟ್ನರ್ ಆಗಿರುವ ಬ್ರಿಟಾನಿಯಾ ಬ್ರಿಟಾನಿಯಾ ಕಹೋ ವರ್ಲ್ಡ್ ಕಪ್ ಜಾಯೋ ಆಫರ್ ನ್ನು ಮರುಪರಿಚಯಿಸಿದೆ.

Best Mobiles in India

English summary
Ride an Uber to the ICC World Cup 2019 in England and Wales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+