Home
ಸುದ್ದಿಜಾಲ

ಜಿಯೋ ಮೀರಿಸುವಂತಹ ಮತ್ತೊಂದು ಸಂಸ್ಥೆ ಕಟ್ಟಲು ಮುಂದಾದ ಮುಖೇಶ್ ಅಂಬಾನಿ!

ದೇಶದ ದೈತ್ಯ ಸಂಸ್ಥೆ ರಿಲಾಯನ್ಸ್​ ಇಂಡಸ್ಟ್ರೀಸ್ ಇದೀ ಡಿಜಿಟಲ್​ ಸೇವೆಗಳನ್ನು ನೀಡುವ ಸಲುವಾಗಿಯೇ ಹೊಸದೊಂದು ಅಂಗ ಸಂಸ್ಥೆಯನ್ನು ತೆರೆಯಲು ನಿರ್ಧರಿಸಿದೆ. ಆರ್ಐಎಲ್ ತನ್ನ ಟೆಲಿಕಾಂ ಮತ್ತು ಡಿಜಿಟಲ್ ಉಪಕ್ರಮಗಳ ವ್ಯವಹಾರವನ್ನು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗೆ ವರ್ಗಾಯಿಸಲು ಯೋಜಿಸುತ್ತಿದ್ದು, ಈ ಯೋಜನೆಗಾಗಿ ಸುಮಾರು 1,08,000 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತಿದೆ. ಈ ಯೋಜನೆಯು ಜಿಯೋ ಕಂಪೆನಿಯನ್ನು ಸಂಪೂರ್ಣ ಸಾಲ ಮುಕ್ತ ಕಂಪನಿಯನ್ನಾಗಿ ಮಾಡುವ ಯೋಜನೆ ಕೂಡ ಆಗಿದೆ.

ರಿಲಾಯನ್ಸ್​

ಹೌದು, ರಿಲಾಯನ್ಸ್​ ಸಂಸ್ಥೆ ಈಗಾಗಲೇ ಜಿಯೋ ಹೆಸರಲ್ಲಿ ಡಿಜಿಟಲ್​ ಸೇವೆ ನೀಡುತ್ತಿದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಜಿಯೋ ನ್ಯೂಸ್​ಗಳಂತ ಅಪ್ಲಿಕೇಶನ್​​ಗಳು, ಡಿಜಿಟಲ್​ ಗ್ರಾಹಕರನ್ನ ಸೆಳೆದಿದೆ. ಆದರೀಗ ಇದಕ್ಕಿಂತ ಹೆಚ್ಚು ಡಿಜಿಟಲ್​ ಲೋಕಕ್ಕೆ ಗ್ರಾಹಕರನ್ನ ಕರೆದೊಯ್ಯಲು, ಹೊಸದಾಗಿ ಅಂಗಸಂಸ್ಥೆಯನ್ನೇ ಸ್ಥಾಪಿಸಲು ರಿಲಾಯನ್ಸ್​ ಮುಂದಾಗಿದ್ದು, ಇದಕ್ಕಾಗಿ ಸುಮಾರು 65 ಸಾವಿರ ಕೋಟಿ ರೂಪಾಯಿ ಹಣವನ್ನು ಹೊಸ ಸಂಸ್ಥೆ ಮೇಲೆ ಹೂಡಲು, ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ರಿಲಯನ್ಸ್ ಇಂಡಸ್ಟ್ರೀಸ್

ಷೇರು ವಿನಿಮಯ ಕೇಂದ್ರಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನೀಡಿದ ಹೇಳಿಕೆಯಲ್ಲಿ, ಡಿಜಿಟಲ್ ಪ್ಲಾಟ್‌ಫಾರ್ಮ್ ಉಪಕ್ರಮಗಳಿಗಾಗಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ("ಡಬ್ಲ್ಯುಒಎಸ್") ರಚನೆಗೆ ಆರ್‌ಐಎಲ್‌ನ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.ಪ್ರಸ್ತುತ ಇರುವ ಸ್ಪೆಕ್ಟ್ರಮ್ ಜಿಯೋ ಜೊತೆ ಉಳಿಯುತ್ತದೆ, ಸ್ಪೆಕ್ಟ್ರಮ್ ಪರವಾನಗಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ವರದಿ ಹೇಳುತ್ತದೆ. ಹೊಸ ವಹಿವಾಟು ಯಾವುದೇ ಷೇರುದಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರ್ಐಎಲ್ ತಿಳಿಸಿದೆ.

ಡಿಜಿಟಲ್​ ಅಂಗಸಂಸ್ಥೆ

ಹೊಸ ಡಿಜಿಟಲ್​ ಅಂಗಸಂಸ್ಥೆ ಸ್ಥಾಪನೆ ಬಗ್ಗೆ ಮಾಹಿತಿ ನೀಡಿರುವ ರಿಲಾಯನ್ಸ್​ ಚೇರ್ಮನ್​ ಮುಖೇಶ್​ ಅಂಬಾನಿ, ಈ ಹೊಸ ಕಂಪನಿ ನಿಜವಾದ ಡಿಜಿಟಲ್​ ಸೇವೆಗಳ ವೇದಿಕೆಯಾಗಲಿದೆ. ಇದು ದೇಶದ ನಂಬರ್​ ಒನ್​ ಸಂಪರ್ಕ ವೇದಿಕೆ ಮತ್ತು ವಿಶ್ವದ ಅತ್ಯುತ್ತಮ ಡಿಜಿಟಲ್​ ಅಪ್ಲೀಕೇಶನ್​ಗಳ ಸಾಮರ್ಥ್ಯವನ್ನ ಒಗ್ಗೂಡಿಸುತ್ತದೆ. ಜೊತೆಗೆ ಪ್ರತಿಯೊಬ್ಬ ಭಾರತೀಯನಿಗೂ ಈ ಸಂಸ್ಥೆ ನಿಜವಾದ ಡಿಜಿಟಲ್​ ಲೋಕವನ್ನ ಪರಿಚಯಿಸುತ್ತದೆ. ಜಿಯೋ ಸ್ಥಾಪಿಸುವ ಈ ಹೊಸ ಅಂಗಸಂಸ್ಥೆಯಿಂದ ಷೇರುದಾರರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹೇಳಿದ್ದಾರೆ.

 ರಿಲಯನ್ಸ್

ಆದರೆ, ರಿಲಯನ್ಸ್ ಕಂಪನಿಯ ಈ ಯೋಜನೆ ಟೆನ್ಸೆಂಟ್ ಮತ್ತು ಅಲಿಬಾಬಾದ ರಚನೆಯನ್ನು ನಕಲಿಸಲು ಪ್ರಯತ್ನಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಹೂಡಿಕೆಗಳನ್ನು ಆಕರ್ಷಿಸಲು ಇದು ಒಂದು ದೊಡ್ಡ ಕ್ರಮವಾಗಿದೆ. ಹಿಡುವಳಿ ಮತ್ತು ಬಂಡವಾಳೀಕರಣದ ರಚನೆಯು ಜಾಗತಿಕ ಪ್ಲಾಟ್‌ಫಾರ್ಮ್ ಕಂಪನಿಗಳಿಗೆ ಅನುಗುಣವಾಗಿದೆ" ಎಂದು ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ನಿರ್ದೇಶಕ ರೋಹನ್ ಧಮೀಜಾ, ಕನ್ಸಲ್ಟೆನ್ಸಿ ಸಂಸ್ಥೆಯ ಅನಾಲಿಸಿಸ್ ಮೇಸನ್ ಅವರು ಉಲ್ಲೇಖಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

Best Mobiles in India

English summary
Reliance Industries Limited (RIL) has announced its plan to make Jio a debt-free company. As a part of it, RIL is planning to transfer its telecom and digital initiatives business to a wholly-owned subsidiary. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+