ಆಧುನಿಕ ಸಂವಹನಕ್ಕೆ ಬುನಾದಿ ಹಾಕಿದ ಯಾಹೂ ಮೆಸೆಂಜರ್ ಸೇವೆ ಇನ್ನಿಲ್ಲ..!

By Avinash
|

ಸದ್ಯ ಎಲ್ಲರ ಮೊಬೈಲಗಳಲ್ಲೂ ಇನ್‌ಸ್ಟಾಂಟ್‌ ಮೆಸೆಜಿಂಗ್ ಆಪ್‌ಗಳಿವೆ. ಇಂತಹ ಇನ್‌ಸ್ಟಾಂಟ್ ಮೆಸೆಜಿಂಗ್ ವ್ಯವಸ್ಥೆಯನ್ನು ತಂದು ಆಧುನಿಕ ಸಂವಹನಕ್ಕೆ ಬಹುದೊಡ್ಡ ದಾರಿ ಹುಡುಕಿದ್ದು ಯಾಹೂ ಎಂದರೆ ತಪ್ಪಲ್ಲ. ಯಾಹೂ ತೋರಿಸಿದ ದಾರಿಯಲ್ಲಿ ವಾಟ್ಸ್‌ಆಪ್, ಸ್ನಾಪ್‌ಚಾಟ್‌, ಇನ್ಸಟಾಗ್ರಾಂನಂತಹ ಮೆಸೆಜಿಂಗ್ ಆಪ್‌ಗಳು ಮುನ್ನುಗ್ಗುತ್ತಿವೆ. ಆದರೆ, ಈ ಸಂವಹನಕ್ಕೆ ಬುನಾದಿ ಹಾಕಿದ ಯಾಹೂ ಮೆಸೆಂಜರ್ ಮಾತ್ರ 20 ವರ್ಷಗಳ ನಂತರ ಇಂದು ತನ್ನ ಸೇವೆಯನ್ನು ನಿಲ್ಲಿಸಿದೆ.

ಆಧುನಿಕ ಸಂವಹನಕ್ಕೆ ಬುನಾದಿ ಹಾಕಿದ ಯಾಹೂ ಮೆಸೆಂಜರ್ ಸೇವೆ ಇನ್ನಿಲ್ಲ..!

ಹೌದು, ತನ್ನ ಬ್ಲಾಗ್‌ನಲ್ಲಿ ಯಾಹೂ ಬರೆದುಕೊಂಡಿದ್ದು, ಯಾಹೂ ಮೆಸೆಂಜರ್‌ ಸೇವೆಯನ್ನು ಇಂದು ನಿಲ್ಲಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಆದರೆ, ಯಾಹೂ ಮೇಲ್ ಮತ್ತು ಫ್ಯಾಂಟಸಿ ಸೇವೆಯನ್ನು ಮುಂದುವರೆಸುವುದಾಗಿ ಹೇಳಿಕೊಂಡಿದೆ. ತನ್ನ ಎರಡು ದಶಕದ ಕಾರ್ಯನಿರ್ವಹಣೆಗೆ ಇತಿಶ್ರೀ ಹಾಡಿದೆ.

ಯಾಹೂ ಪೇಜರ್

ಯಾಹೂ ಪೇಜರ್

ಯಾಹೂ ಮೆಸೆಂಜರ್ ಮಾರ್ಚ್‌ 9, 1998ರಂದು ಯಾಹೂ ಪೇಜರ್ ಆಗಿ ಆನ್‌ಲೈನ್‌ ಲೋಕದ ಬಾಗಿಲು ತಟ್ಟಿತು. ನಂತರ ಜೂನ್‌ 21, 1999ರಲ್ಲಿ ಈ ಸೇವೆಯನ್ನು ಯಾಹೂ ಮೆಸೆಂಜರ್ ಎಂದು ಬದಲಾಯಿಸಲಾಯಿತು.

ಮೊದಲ ಗ್ಲೋಬಲ್ ಮೆಸೆಜಿಂಗ್ ಆಪ್

ಮೊದಲ ಗ್ಲೋಬಲ್ ಮೆಸೆಜಿಂಗ್ ಆಪ್

ಯಾಹೂ ಮೆಸೆಂಜರ್ ಆಪ್ ಮೊದಲ ಜಾಗತಿಕ ಮೆಸೆಜಿಂಗ್ ಆಪ್ ಎಂದು ಕರೆಸಿಕೊಳ್ಳುತ್ತದೆ. ಡಯಲ್ ಅಪ್‌ ಸಂಪರ್ಕ ಹಾಗೂ 1Mbps ವೇಗ ಹೊಂದಿದ ಕಾಲದಲ್ಲಿ ಅಲೆ ಎಬ್ಬಿಸಿದ್ದ ಯಾಹೂ ಮೆಸೆಂಜರ್ 2000 ವರ್ಷದ ಆಸುಪಾಸಿನಲ್ಲಿ ಮೆಟ್ರೋ ಮತ್ತು ಸಣ್ಣ ಸಣ್ಣ ನಗರಗಳ ಸೈಬರ್ ಕೆಫೆ, ಚಾಟ್‌ ರೂಂಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಆಗಿನ ಯುವಕರು ಯಾಹೂ ಮೆಸೆಂಜರ್‌ಗೆ ಮುಗಿಬಿದ್ದು, ಗಂಟೆ ಗಟ್ಟಲೆ ಸಮಯವನ್ನು ಯಾಹೂ ಮೆಸೆಂಜರ್‌ನಲ್ಲಿಯೇ ಕಳೆಯುತ್ತಿದ್ದರು.

ವಾಟ್ಸ್‌ಆಪ್‌ ನಂತರ ಮಂಕಾದ ಯಾಹೂ

ವಾಟ್ಸ್‌ಆಪ್‌ ನಂತರ ಮಂಕಾದ ಯಾಹೂ

ತಂತ್ರಜ್ಞಾನ ಬದಲಾದಂತೆ ಮೊಬೈಲ್ ಕ್ಷೇತ್ರದಲ್ಲಿ ಸ್ಮಾರ್ಟ್‌ಫೋನ್ ಯುಗ ಪ್ರಾರಂಭವಾಯಿತು. ಸ್ಮಾರ್ಟ್‌ಫೋನ್‌ಗೆ ಬಂದ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ ಮೆಸೆಂಜರ್ ಮುಂದೆ ಯಾಹೂ ಮೆಸೆಂಜರ್ ಮಂಕಾಗಿ ತನ್ನ ಚಾರ್ಮ್‌ ಕಳೆದುಕೊಂಡಿತು. ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ ದಿನಕ್ಕೊಂದು ಅಪ್‌ಡೇಟ್‌ ಮತ್ತು ಬಳಕೆದಾರ ಸ್ನೇಹಿಯಾಗಿ ಬಳಕೆದಾರರನ್ನು ಆಕರ್ಷಿಸುತ್ತಾ ಸಾಗಿದಂತೆ ಯಾಹೂ ಮೆಸೆಂಜರ್‌ನ್ನು ಜನ ಮರೆತರು.

ಚಾಟ್‌ರೂಂಗಳು

ಚಾಟ್‌ರೂಂಗಳು

ಯಾಹೂ ಮೆಸೆಂಜರ್ ಸಹ ಹಲವು ವಿಶೇಷ ಫೀಚರ್‌ಗಳಿಂದ ಗಮನ ಸೆಳೆಯುತ್ತದೆ. ಅದರಲ್ಲಿ ಪ್ರಮುಖವಾಗಿರುವುದು ಸಾರ್ವಜನಿಕ ಚಾಟ್‌ರೂಂಗಳು. ಅನೇಕ ಚಾಟ್‌ರೂಂಗಳ ಜತೆ ಸಾರ್ವಜನಿಕವಾಗಿ ಮಾತನಾಡುವ ಆಯ್ಕೆಯನ್ನು ಯಾಹೂ ನೀಡಿತ್ತು. ಅದಲ್ಲದೇ ಬಳಕೆದಾರ ಸ್ನೇಹಿಯಾಗಿ ಮತ್ತು ಸರಳವಾದ ಯೂಸರ್ ಇಂಟರ್‌ಫೇಸ್‌ಗೆ ಆಪ್‌ನ್ನು ಬದಲಾಯಿಸಿತ್ತು. ಫಾಂಟ್‌ ಗಾತ್ರ ಮತ್ತು ಶೈಲಿಯಲ್ಲಿ ಅನೇಕ ಬದಲಾವಣೆಯನ್ನು ಯಾಹೂ ತಂದಿತ್ತು. ಆದರೆ, ಯಾಹೂ ಚಾಟ್‌ರೂಂ ಸೇವೆಯನ್ನು 2012ರಲ್ಲಿ ನಿಲ್ಲಿಸಲಾಯಿತು. ಬಳಕೆದಾರರಿಗೆ ತಮ್ಮದೇ ಆದ ಚಾಟ್‌ರೂಂ ಸೃಷ್ಟಿಸಲು ಸಾಧ್ಯವಾಗದಂತೆ ಮಾಡಲಾಯಿತು.

ವಿಡಿಯೋ ಕರೆಗಳು

ವಿಡಿಯೋ ಕರೆಗಳು

ವಾಟ್ಸ್‌ಆಪ್‌ ವಿಡಿಯೋ ಕಾಲ್ ಮತ್ತು ಐಫೋನ್‌ನ ಫೇಸ್‌ಟೈಂಗಿಂತಲೂ ಬಹಳ ವರ್ಷಗಳ ಮುಂಚೆಯೇ ಯಾಹೂ ಮೆಸೆಂಜರ್‌ ವಿಡಿಯೋ ಕರೆ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡಿತ್ತು. ಈಗಿನ ಹೈ ರೆಸಲೂಷನ್ ಕ್ಯಾಮೆರಾ ಮತ್ತು ವೇಗದ ತಂತ್ರಜ್ಞಾನಕ್ಕೆ ಹೋಲಿಸಿದರೆ, ಆಗಿನ ಲೋ ರೆಸಲೂಷನ್ ವಿಜಿಎ ಕ್ಯಾಮೆರಾ ಮತ್ತು ಕನಿಷ್ಠ ಮಟ್ಟದ ಬ್ರಾಡ್‌ಬ್ಯಾಂಡ್‌ ಸಂಪರ್ಕದಲ್ಲಿ ಗುಣಮಟ್ಟದ ವಿಡಿಯೋ ಕರೆಯನ್ನು ಅನೇಕ ಫನ್‌ಗಳಿಂದ ಮಾಡಬಹುದಾಗಿತ್ತು.

ಬಜ್ಜಿಂಗ್

ಬಜ್ಜಿಂಗ್

ನೀವು ಕಳಿಸಿದ ಸಂದೇಶಗಳನ್ನು ಯಾರಾದರೂ ಬಹಳಷ್ಟು ಸಮಯದಿಂದ ನಿರ್ಲಕ್ಷಿಸುತ್ತಿದ್ದರೆ, ನೀವು ಅವರಿಗೆ ಬಜ್ ಸೆಂಡ್ ಮಾಡಿದರೆ ಸಾಕಿತ್ತು. ಆಗ ಅವರ ಇಡೀ ಮೆಸೇಜ್ ಬಾಕ್ಸ್‌ ಅಲ್ಲಾಡಿ ಅವರು ನಿಮ್ಮ ಮೆಸೇಜ್‌ನತ್ತ ಗಮನ ಕೊಡುವ ವೈಶಿಷ್ಟ್ಯ ನೀಡಲಾಗಿತ್ತು. ಈ ವೈಶಿಷ್ಟ್ಯ ಸಾಕಷ್ಟು ಮನರಂಜನೆಯನ್ನು ಬಳಕೆದಾರರಿಗೆ ನೀಡುತ್ತಿತ್ತು. ಯಾಹೂ ಮೆಸೆಂಜರ್‌ನ ಬಜ್ ಫೀಚರ್ ಬ್ಲಾಕ್‌ಬೆರ್ರಿಯ ಬಿವಿಎಂ ಪಿಂಗ್‌ ಫೀಚರ್‌ಗೆ ಸ್ಫೂರ್ತಿಯಾಯಿತು.

ಸ್ಟಿಕ್ಕರ್‌ ಮತ್ತು ಎಮೋಜಿ

ಸ್ಟಿಕ್ಕರ್‌ ಮತ್ತು ಎಮೋಜಿ

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸ್ಟಿಕ್ಕರ್‌ ಬರುವುದಕ್ಕಿಂತ ಬಹಳ ವರ್ಷಗಳ ಮುಂಚೆಯೇ ಯಾಹೂ ಮೆಸೆಂಜರ್ ಬಹಳ ದೊಡ್ಡ ಕಸ್ಟಮ್‌ ಸ್ಟಿಕ್ಕರ್‌ ಸಂಪನ್ಮೂಲವನ್ನು ಹೊಂದಿತ್ತು. ಅದಲ್ಲದೇ ಇದರಲ್ಲಿ ಭಾರತೀಯರಿಗಾಗಿ ಪ್ರತ್ಯೇಕವಾಗಿ ಸ್ಟಿಕ್ಕರ್‌ಗಳನ್ನು ಯಾಹೂ ಪರಿಚಯಿಸಿತ್ತು. ಅದಲ್ಲದೇ ಎಮೋಜಿಗಳು ಸಹ ಬಹಳಷ್ಟು ಜನಪ್ರಿಯವಾಗಿದ್ದವು.

Best Mobiles in India

English summary
RIP Yahoo Messenger: Looking back at top features of iconic messaging app. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X