ನಿಮ್ಮ ಆರೋಗ್ಯವನ್ನು ಕಾಪಾಡುವ ಫಿಟ್‌ನೆಸ್ ಟ್ರ್ಯಾಕರ್‌ಗಳು ಕೈಗೆಟಕುವ ಬೆಲೆಯಲ್ಲಿ
ಭಾರತದ ಹೊಸ ತಲೆಮಾರಿಗೆ ಅನುಗುಣವಾಗಿರುವಂತೆ ಇಂದಿನ ತಂತ್ರಜ್ಞಾನವು ಫಿಟ್‌ನೆಸ್ ಅಂಶಕ್ಕೆ ಹೆಚ್ಚಿನ ಮಹತ್ವವವನ್ನು ನೀಡುತ್ತಿದ್ದು ಮಾರುಕಟ್ಟೆಗೆ ಬರುತ್ತಿರುವ ಹೆಚ್ಚಿನ ಫಿಟ್‌ನೆಸ್ಟ್ ಟ್ರ್ಯಾಕರ್‌ಗಳು ಮತ್ತು ಬ್ಯಾಂಡ್‌ಗಳು ವಿನೂತನ ವೈಶಿಷ್ಟ್ಯಗಳನ್ನೊಳಗೊಂಡು ಬರುತ್ತಿವೆ. ಅದಕ್ಕನುಗುಣವಾಗಿ ಇದೀಗ ಭಾರತದಲ್ಲಿ ಫಿಟ್‌ನೆಸ್ ಟ್ರ್ಯಾಕರ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.

ವೇವ್ ಬಿಪಿ ಮತ್ತು ವೇವ್ ಫಿಟ್‌ನೆಸ್ ಟ್ರ್ಯಾಕರ್‌ಗಳು ಕೆಲವೊಂದು ಬಳಸಲು ಯೋಗ್ಯವಾಗಿರುವ ವೈಶಿಷ್ಟ್ಯತೆಗಳೊಂದಿಗೆ ಬರುತ್ತಿವೆ. ವೇವ್ ಬಿಪಿ ಬೆಲೆ ರೂ 3,299 ಆಗಿದ್ದು, ವೇವ್ ಫಿಟ್ ಬೆಲೆ ರೂ 2,199 ಆಗಿದೆ. ಎರಡೂ ಉತ್ಪನ್ನಗಳನ್ನು ಎಚ್ ಬ್ಯಾಂಡ್ 2.0 ಮತ್ತು ಆರ್‌ಎಸ್ ಬ್ಯಾಂಡ್ ಜೊತೆಗೆ ಸಂಪರ್ಕಪಡಿಸಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ಬಳಕೆದಾರರು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಬಿಪಿ ಮತ್ತು ವೇವ್ ಫಿಟ್ ಹೆಚ್ಚು ಸಾಮಾನ್ಯವಾಗಿರುವ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು ಇಂದಿನ ಲೇಖನದಲ್ಲಿ ಈ ಎರಡು ಫಿಟ್‌ನೆಸ್ ಟ್ರ್ಯಾಕರ್‌ಗಳ ಕುರಿತು ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ವೇವ್ ಬಿಪಿ ಟೆಕ್ನಿಕಲ್ ವಿಶೇಷತೆಗಳು
- ಸಿಪಿಯು: ನಾರ್ಡಿಕ್ nRF51822
- ಓಲೆಡ್ ಡಿಸ್‌ಪ್ಲೇ ಸ್ಕ್ರೀನ್: 0.87 ಇಂಚು
- ಹಾರ್ಟ್ ರೇಟ್ ಸೆನ್ಸಾರ್: PD70-01C-TR7
- ಅಕ್ಲರೇಶನ್ ಸೆನ್ಸಾರ್: KXT J2- 1009
- ಬ್ಯಾಟರಿ: Li-Polymer 70mAh
- ಪ್ರಸ್ತುತ ಚಾರ್ಜಿಂಗ್: 500 ಎಮ್‌ಎ
- ಬ್ಲ್ಯೂಟೂತ್ 4.1
- ಆಪರೇಟಿಂಗ್ ತಾಪಮಾನ: 10 - 45
- ಚಾರ್ಜಿಂಗ್ ವೇ: ಯುಎಸ್‌ಬಿ
- ವಾಟರ್‌ಪ್ರೂಫ್: IP67
- ಸ್ಟ್ಯಾಂಡ್‌ಬೈ ಟೈಮ್ - 3-5 ದಿನ
ವೇವ್ ಫಿಟ್ ತಾಂತ್ರಿಕ ಅಂಶಗಳು
- ಸಿಪಿಯು: ನಾರ್ಡಿಕ್ nRF51822
- ಓಲೆಡ್ ಡಿಸ್‌ಪ್ಲೇ ಸ್ಕ್ರೀನ್: 0.91 ಇಂಚು
- ಹಾರ್ಟ್ ರೇಟ್ ಸೆನ್ಸಾರ್: PD70-01C-TR7
- ಅಕ್ಲರೇಶನ್ ಸೆನ್ಸಾರ್: KXT J2- 1009
- ಬ್ಯಾಟರಿ: Li-Polymer 90mAh
- ಪ್ರಸ್ತುತ ಚಾರ್ಜಿಂಗ್: 500 ಎಮ್‌ಎ (ಆಪ್ಟಿಮಮ್)
- ಬ್ಲ್ಯೂಟೂತ್ 4.1
- ಆಪರೇಟಿಂಗ್ ತಾಪಮಾನ: 10 - 45
- ಚಾರ್ಜಿಂಗ್ ವೇ: ಹೂಕ್ ಚಾರ್ಜರ್
- ವಾಟರ್‌ಪ್ರೂಫ್: IP67
- ಸ್ಟ್ಯಾಂಡ್‌ಬೈ ಟೈಮ್ - 5-7 ದಿನ
ಅಮೆಜಾನ್ ಇಂಡಿಯಾದಲ್ಲಿ ಈ ಉತ್ಪನ್ನಗಳು ಲಭ್ಯವಿವೆ. ಫಿಟ್‌ನೆಸ್ ಟ್ರ್ಯಾಕರ್‌ಗಳ ಹೊಸ ಸಿರೀಸ್‌ಗಳ ಬಗ್ಗೆ ಮಾತನಾಡುವುದಾದರೆ ನವೀನ್ ಕುಮಾರ್ (ಸಿಇಒ ಭಾರತ) ಪ್ರಕಾರ ನಮ್ಮ ಪ್ರೀಮಿಯಂ ಟ್ರ್ಯಾಕರ್‌ಗಳ ಲಾಂಚ್ ಅನ್ನು ಮಾಡಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ. ವೇವ್ ಬಿಪಿ ಮತ್ತು ವೇವ್ ಫಿಟ್ ಈ ಎರಡೂ ಫಿಟ್‌ನೆಸ್ ಪರಿಕರಗಳು ಯುವ ಜನಾಂಗದ ದೈಹಿಕ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿವೆ.


Click it and Unblock the Notifications