ಹ್ಯಾಂಡ್‌ ಸ್ಯಾನಿಟೈಸರ್‌ ನೀಡೋಕೆ ಬಂತು ರೋಬೋಟ್‌ ಡಾಗ್‌!

|

ಚೀನಾದ ವ್ಯೂಹನ್‌ ನಗರದಲ್ಲಿ ಹುಟ್ಟಿದ ಕೊರೋನಾ ವೈರಸ್ ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳನ್ನ ಆವರಿಸಿಕೊಂಡಿದೆ. ವಿಶ್ವದ ನಾನಾ ರಾಷ್ಟ್ರಗಳು ಕೋವಿಡ್‌-19 ವಿರುದ್ದ ಹೋರಾಟ ನಡೆಸುತ್ತಿವೆ. ಇದಕ್ಕೆ ಭಾರತ ದೇಶವೂ ಹೊರತಾಗಿಲ್ಲ. ಅಷ್ಟೇ ಅಲ್ಲ ಎಲ್ಲಾ ವಲಯಗಳು ಕೂಡ ಈ ಹೋರಾಟದಲ್ಲಿ ಕೈ ಜೋಡಿಸಿವೆ. ಇನ್ನು ಪ್ರತಿ ಭಾರಿಯಂತೆ ಈ ಬಾರಿಯು ಸಾಂಕ್ರಾಮಿಕ ರೋಗಗಳು ಎದುರಾದಾಗ ಮನುಷ್ಯನಿಗೆ ರಕ್ಷಣಾ ಕವಚವಾಗಿ ಟೆಕ್ನಾಲಜಿ ಸಹಾಯಕ್ಕೆ ಬರಲಿದೆ. ಅದರಂತೆ ಕೊರೋನಾ ವಿರುದ್ದದ ಹೋರಾಟದಲ್ಲಿ ಹಲವು ಮಾದರಿಯ ಟೆಕ್ನಾಲಜಿ ಆಧಾರಿತ ಪ್ರಾಡಕ್ಟ್‌ಗಳು ಸಹಾಯಕ್ಕೆ ಬಂದಿವೆ. ಇವುಗಳಲ್ಲಿ ರೋಬೋಟ್‌ ಮಾದರಿಗಳು ಕೂಡ ಸೇರಿಕೊಂಡಿವೆ.

ರೋಬೋಟ್

ಹೌದು, ಸದ್ಯದ ಕೊರೋನಾ ವಿರುದ್ದ ಹೋರಾಟದಲ್ಲಿ ಟೆಕ್ನಾಲಜಿಯು ಕೂಡ ಸಹಾಯಕ್ಕೆ ಬಂದಿದೆ. ಇನ್ನು ಕೊರೋನಾ ವೈರಸ್‌ ವಿರುದ್ದ ಹೋರಾಟದಲ್ಲಿ ಸದ್ಯ ಥೈಲ್ಯಾಂಡ್‌ನಲ್ಲಿ ಕೊರೋನಾ ವಿರುದ್ದದ ಹೋರಾಟದಲ್ಲಿ ಹೊಸ ಮಾದರಿಯ ರೋಬೋಟ್‌ ಡಾಗ್‌ ಒಂದನ್ನ ಪರಿಚಯಿಸಲಾಗಿದೆ. ಸದ್ಯ K9 ಎಂಬ ಹೆಸರಿನ ರೋಬೋಟ್ ಡಾಗ್‌ ಅಲ್ಲಿನ ವ್ಯಾಪಾರಿಗಳಿಗೆ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ವಿತರಿಸುವ ಕಾರ್ಯವನ್ನ ಮಾಡಲಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ರೋಬೋಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೋಬೊಟ್‌ ಡಾಗ್

ಕೊರೋನಾ ವೈರಸ್‌ ವಿರುದ್ದ ಹೋರಾಟ ಮಾಡುವಾಗ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸುವುದು ಉತ್ತಮ, ಆಗಾಗ ಕೈ ತೊಳೆದುಕೊಳ್ಳುವುದು ಉತ್ತಮ. ಆದರಂತೆ ಇದೀಗ ನೀವು ನಾವೆಲ್ಲಾ ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಲು ಸ್ಯಾನಿಟೈಸರ್‌ ನೀಡುವುದಕ್ಕೆ ಅಂತಾನೇ ಥೈಲ್ಯಾಂಡ್‌ನಲ್ಲಿ ರೋಬೊಟ್‌ ಡಾಗ್‌ ಅನ್ನ ಬಳಸಲಾಗ್ತಿದೆ. ಈ ರೋಬೋಟ್‌ ಅನ್ನು ಹೈಟೆಕ್ ಹೌಂಡ್ ಅನ್ನು 5G ಬಳಸಿ ಕಂಟ್ರೋಲ್‌ ಮಾಡಲಾಗುತ್ತದೆ. ಇನ್ನು ಈ ಟೆಕ್ನಾಲಜಿಯ ಸೂಪರ್-ಫಾಸ್ಟ್ ಇಂಟರ್‌ನೆಟ್‌ ವೇಗವನ್ನು ತಕ್ಷಣದ ಪ್ರತಿಕ್ರಿಯೆಯ ಸಮಯದೊಂದಿಗೆ ಭರವಸೆ ನೀಡುತ್ತದೆ. ಇದಲ್ಲದೆ ರೋಬೋಟ್‌ ನಾಯಿ ಮಾದರಿಯನ್ನ ಹೊಂದಿದೆ.

ರೋಬೋಟ್

ಇನ್ನು ಈ ನಾಯಿ ಮಾದರಿಯ K9 ರೋಬೋಟ್‌ ಡೌನ್ಟೌನ್ ಬ್ಯಾಂಕಾಕ್‌ನ ಜನಪ್ರಿಯ ಸೆಂಟ್ರಲ್ ವರ್ಲ್ಡ್ ಮಾಲ್‌ನಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಹಿಡಿದು ಸುತ್ತತ್ತದೆ. ಇನ್ನು ಈ ರೋಬೋಟ್‌ ಬೆನ್ನಿಗೆ ಸ್ಯಾನಿಟೈಸರ್‌ ಬಾಟಲಿಯನ್ನ ಜೋಡಿಸಲಾಗಿದೆ. ಇದರಿಂದ ಸ್ಯಾನಿಟೈಸರ್‌ ಜೆಲ್ ಪಡೆಯಲು ವ್ಯಾಪಾರಿಗಳು ತುಂಬಾನೆ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ ಈ ರೋಬೋಟ್‌ ಅಲ್ಲಿನ ಮಕ್ಕಳ ಗಮನವನ್ನು ಸಹ ತನ್ನಡೆಗೆ ಸೆಳೆಯುತ್ತಿದೆ. ಇನ್ನು ಈ ರೋಬೋಟ್‌ ಅನ್ನು ಮೊಬೈಲ್ ಆಪರೇಟರ್ ಅಡ್ವಾನ್ಸ್ಡ್ ಇನ್ಫೋ ಸರ್ವೀಸಸ್ (ಎಐಎಸ್) ಅಭಿವೃದ್ದಿ ಪಡಿಸಿದೆ ಎನ್ನಲಾಗ್ತಿದೆ.

ರೋಬೋಟ್‌

ಇದಲ್ಲದೆ ಈ ರೋಬೋಟ್‌ ಇಡೀ ಮಾಲ್‌ ಅನ್ನು ಸತ್ತಲಿದ್ದು ತನ್ನ ಬೆನ್ನ ಹಿಂದೆ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಹಿಡಿದುಕೊಂಡು ಚಲಿಸಲಿದೆ. ಸದ್ಯ ಇದು ಥೈಲ್ಯಾಂಡ್‌ನಲ್ಲಿ ತುಂಬಾನೆ ಸದ್ದು ಮಾಡ್ತಿದ್ದು ಉತ್ತಮ ಉಪಾಯ ಎಂದು ಕೇಳಿ ಬರುತ್ತಿದೆ. ಹಾಗಂತ ಕೊರೋನಾ ವೈರಸ್‌‌ ಸಂದರ್ಭದಲ್ಲಿ ರೋಬೋಟ್‌ ಬಳಕೆ ಮಾಡಿಕೊಂಡು ಆದರ ಉಪಯೋಗ ಪಡೆದುಕೊಂಡಿರುವುದು ಇದೇ ಮೊದಲೇನಲ್ಲ. ನಮ್ಮ ದೇಶದಲ್ಲಿಯೂ ಆದರಲ್ಲೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೂ ಸಹ ರೋಬೋಟ್‌ ಬಳಕೆಯನ್ನ ಮಾಡಲಾಗಿತ್ತು. ಕೊರೋನಾ ಸೊಖಿತರ ಕೊಠಡಿಗಳಿಗೆ ಆಹಾರ ಸಾಮಗ್ರಿಗಳನ್ನ ಸಾಗಿಸುವುದಕ್ಕೆ ರೋಬೋಟ್‌ ಬಳಕೆ ಮಾಡಲಾಗಿತ್ತು ಅನ್ನೊದು ವಿಶೇಷವಾಗಿದೆ.

Best Mobiles in India

Read more about:
English summary
A scurrying robot dog named K9 dispenses hand sanitiser to curious children and wary shoppers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X