ವಿದ್ಯಾರ್ಥಿಗಳೇ ಕಂಡುಹಿಡಿದಿರುವ ಈ ಚಿಕ್ಕ 'ರೋಬೋಟ್' ಲಕ್ಷಾಂತರ ಜನರ ಜೀವ ಉಳಿಸುತ್ತಿದೆ!!
ನಿಮಗೆ ಈ ಮಾಹಿತಿ ಬಹುತೇಕ ತಿಳಿದಿರುತ್ತದೆ. ಭಾರತೀಯ ರೈಲ್ವೆಯಲ್ಲಿನ ಅಚಾತುರ್ಯಗಳಿಂದಾಗಿ ಪ್ರತಿ ವರ್ಷವೂ ಸರಾಸರಿ 10,000ಕ್ಕೂ ಹೆಚ್ಚು ಜನರು ಸಾವನಪ್ಪುತ್ತಾರೆ. ಕನಿಷ್ಠವೆಂದರೂ 100ಕ್ಕೂ ಹೆಚ್ಚು ರೈಲ್ವೆ ಹಳಿತಪ್ಪುವ ಅವಘಡಗಳು ಜರುಗುತ್ತವೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಮಾಧ್ಯಮ ವರದಿಗಳಿಂದ ನಿಮಗೆ ಸಿಗುತ್ತಿದೆ.!
ಹಾಗಾಗಿಯೇ, ರೈಲು ಹಳಿತಪ್ಪುವ ಅವಘಡಗಳನ್ನು ತಪ್ಪಿಸಲು ಇಲಾಖೆಯೂ 'ಗ್ಯಾಂಗ್ ಮ್ಯಾನ್'ಗಳನ್ನು ನೇಮಿಸಿಕೊಳ್ಳುತ್ತದೆ. ರೈಲ್ವೆ ಕಂಬಿಗಳ ಜಾಡು ಹಿಡಿದು ಅವುಗಳು ಬಿರುಕು ಬಿಟ್ಟಿವೆಯೇ ಎಂಬುದನ್ನು ಪರೀಕ್ಷಿಸಿ ಇವರು ಇಲಾಖೆಗೆ ವರದಿ ನೀಡುತ್ತಾರೆ. ಆದರೆ, ದುಖಃದ ಸಂಗಂತಿ ಎಂದರೆ ಪ್ರತಿ ವರ್ಷವೂ ಸರಾಸರಿ 400ಗ್ಯಾಂಗ್ ಮ್ಯಾನ್‌ಗಳು ಅಪಘಾತದಲ್ಲಿ ಸಾಯುತ್ತಾರೆ.

ಹೌದು, ಇಂತಹದೊಂದು ಶಾಕಿಂಗ್ ವರದಿಯನ್ನು ನೋಡಿದಾಗ ಮಾತ್ರ ಈ ಇಂಜಿನಿಯರಿಂಗ್ ಸಂಶೋಧನಾ ವಿದ್ಯಾರ್ಥಿಗಳು ಕಂಡುಹಿಡಿದಿರುವ ಒಂದು ರೋಬೋಟ್ ಬೆಲೆ ಎಲ್ಲರಿಗೂ ತಿಳಿಯುತ್ತದೆ. ಭಾರತೀಯ ರೈಲ್ವೆಯಲ್ಲಿನ ಸುಧಾರಣೆಗಾಗಿ ಮದ್ರಾಸ್ ಐಐಟಿ ವಿದ್ಯಾರ್ಥಿಗಳು ಕಂಡುಹಿಡಿದಿರುವ ರೋಬೋಟ್ ಸಾವಿರಾರು ಜನರ ಜೀವವನ್ನು ಕಾಪಾಡಿ ರಕ್ಷಿಸುತ್ತದೆ.

ರೈಲ್ವೆ ಸುಧಾರಣೆಗೆ ರೋಬೋಟ್!!
ಮೇಲಿನ ವರದಿಯನ್ನು ತಿಳಿದ ನಂತರ ನಿಮಗೆ ಈ ರೋಬೋಟ್ ಏನು ಎಂಬುದು ಅರ್ಥವಾಗಿರಬಹುದು. ಸಂಶೋಧನಾ ವಿದ್ಯಾರ್ಥಿಗಳು ಅಭಿವೃದ್ದಿಪರಡಿಸಿರುವ ಒಂದು ರೋಬೋಟ್ ರೈಲ್ವೆ ಕಂಬಿಗಳ ಜಾಡು ಹಿಡಿದು ಅವುಗಳು ಬಿರುಕು ಬಿಟ್ಟಿವೆಯೇ ಎಂಬುದನ್ನು ಪರೀಕ್ಷಿಸಿ ವರದಿಯನ್ನು ನೀಡುತ್ತದೆ. ಇದರಿಂದ ಸುಲಭವಾಗಿ ರೈಲ್ವೆಗೆ ನಿಖರ ಮಾಹಿತಿ ಸಿಗುತ್ತದೆ.!

ಇದು ಆರ್ಟೆಮಿಸ್ ರೋಬೋಟ್!!
ರೈಲ್ವೆ ಹಳಿಗಳ ಜಾಡು ಹಿಡಿದು ಅವುಗಳನ್ನು ಪರೀಕ್ಷಿಸುವ ಈ ರೋಬೋಟ್‌ಗೆ ಆರ್ಟೆಮಿಸ್ ಎಂದು ಹೆಸರಿಡಲಾಗಿದೆ. ಮದ್ರಾಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು ಈ ರೋಬೋಟ್ ಅನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ತಂತ್ರಜ್ಞಾನವನ್ನು ಸುರಕ್ಷತೆಗಾಗಿ ಬಳಸಿಕೊಳ್ಳುವುದನ್ನು ರೈಲ್ವೆಗೆ ತೋರಿಸಿಕೊಟ್ಟಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ ಈ ರೋಬೋಟ್?!
ಐಐಟಿ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿರುವ ಈ ಆರ್ಟೆಮಿಸ್ ರೋಬೋಟ್ ಸ್ವಯಂಚಾಲಿತವಾಗಿ ರೈಲ್ವೆ ಕಂಬಿಗಳ ಜಾಡು ಹಿಡಿದು ನಿಯಮಿತವಾಗಿ ಪರೀಕ್ಷಿಸುತ್ತದೆ. ಒಂದು ಸೆಕೆಂಡ್ ಸಮಯದಲ್ಲಿ ಒಂದು ಮೀಟರ್ ರೈಲ್ವೆ ಹಳಿಯನ್ನು ಪರೀಕ್ಷಿಸಿ ಅದರಲ್ಲಿ ಯಾವುದಾದರೂ ಬಿರುಕು ಬಿಟ್ಟಿದೆಯೇ ಎಂಬುದನ್ನು ಸ್ವಯಂಚಾಲಿತ ಅರ್ಧಯಯನ ನಡೆಸಿ ತಿಳಿಸುತ್ತದೆ.

ಹೇಗೆ ತಯಾರಾಗಿದೆ ಈ ರೋಬೋಟ್?!
ಈ ಆರ್ಟೆಮಿಸ್ ರೋಬೋಟ್ 1.5 ಅಡಿ ಉದ್ದವಿದ್ದು, ಆರು ಚಕ್ರಗಳನ್ನು ಹೊಂದಿದೆ, 1 ಮೀ / ಸೆ ವೇಗದಲ್ಲಿ ಹಿಮ್ಮುಖವಾಗಿಯೂ ಚಲಿಸಬಹುದಾದ ಆಕ್ತಿ ಈ ರೋಬೋಟ್‌ಗಿದೆ. ರೈಲ್ವೆ ಹಳಿಗಳ ಪರೀಕ್ಷಿಸಿ ಮಾಹಿತಿ ಸಂಗ್ರಹಿಸಲು ಅಲ್ಟ್ರಾಸಾನಿಕ್ ಮತ್ತು ಅತಿಗೆಂಪು ಸಂವೇದಕಗಳನ್ನು ಹೊಂದಿದೆ. ರೋಬಾಟ್ ಒಳಗಿನ ಮೈಕ್ರೋಚಿಪ್ ಮಾಹಿತಿಗಳನ್ನು ಸಂಗ್ರಹಿಸುತ್ತದೆ.

ಸೌರ ಫಲಕಗಳ ಜೋಡಣೆ!
ಜಿಪಿಎಸ್ ಮಾಡ್ಯೂಲ್ ಮತ್ತು ಜಿಎಸ್ಎಮ್ ಸಿಮ್ ಮೂಲಕ ಕಾರ್ಯ ನಿರ್ವಹಿಸುವ ಈ ರೋಬೋಟ್ ಬ್ಯಾಟರಿಗೆ ಸೌರ ಫಲಕಗಳನ್ನು ಜೋಡಿಸಿರುವುದಾಗಿ ಮತ್ತು ರೋಬೋಟ್ ಮಾಡ್ಯುಲರ್ ವಿನ್ಯಾಸವನ್ನು ಹೊಂದಿವುದರಿಂದ ಅದನ್ನು ಉಪಯೋಗಿಸಲು ಯಾವುದೇ ತಾಂತ್ರಿಕ ಪರಿಣತಿ ಅಗತ್ಯವಿಲ್ಲ ಎಂದು ಐಐಟಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ರಿಯಲ್ ಟೈಮ್ ಡೇಟಾ ನೀಡುತ್ತದೆ.!!
ಸ್ವಯಂಚಾಲಿತವಾಗಿ ರೈಲ್ವೆ ಕಂಬಿಗಳ ಜಾಡು ಹಿಡಿದು ನಿಯಮಿತವಾಗಿ ಪರೀಕ್ಷಿಸುವ ಈ ಆರ್ಟೆಮಿಸ್ ರೋಬೋಟ್ ರಿಯಲ್ ಟೈಮ್ ಡೇಟಾವನ್ನು ರೈಲ್ವೆ ಅಧಿಕಾರಿಗಳಿಗೆ ಕಳುಹಿಸುತ್ತದೆ. ರೈಲ್ವೆ ಹಳಿಯಲ್ಲಿ ಒಂದು ಸಣ್ಣ ಬಿರುಕಿದ್ದರು ಈ ರೋಬೋಟ್ ನೀಡಲಿದೆ. ಹೆಚ್ಚಿನ ತೊಂದರೆ ಕಂಡುಬಂದರೆ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯನ್ನು ಭಾರಿಸುತ್ತದೆ.

ತಯಾರಕ ವಿದ್ಯಾರ್ಥಿಗಳು ಹೇಳುವುದೇನು?
ಆರ್ಟೆಮಿಸ್ ತಂಡದ ಸದಸ್ಯರಲ್ಲಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿ ಶಾಶ್ವತ್ ಸಾಹೂ ಅವರು, ನಾವು ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುವ ರೋಬೋಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ. ರೈಲ್ವೆ ಹಳಿಗಳ ತೊಂದರೆಗಳ ಬಗ್ಗೆ ನೈಜ ಸಮಯದ ಡೇಟಾವನ್ನು ಈ ರೋಬೋಟ್ ನೀಡಲಿದೆ. ಇದರಿಂದ ಸಾವಿರಾರು ಜನರ ಜೀವದ ಜೊತೆಗೆ ಮಾನವ ಶಕ್ತಿ ಸಹ ಉಳಿತಾಯವಾಗುತ್ತದೆ ಎಂದು ಹೇಳಿದ್ದಾರೆ.

ಸೆಲ್ಫೀಗಾಗಿಯೇ ಹುಟ್ಟಿರುವ ಈ ವಿಚಿತ್ರ ಸಾಧನಗಳ ಕಲ್ಪನೆ ಕೂಡ ನಿಮಗಿರುವುದಿಲ್ಲ!!
ಇಂದು ಜಗತ್ತಿಗೆರಗಿದ ಮಾರಕ ಕಾಯಿಲೆಯೊಂದಾಗಿ ಸೆಲ್ಫೀ ಹುಚ್ಚನ್ನು ಗುರುತಿಸುತ್ತಾರೆ. ತನ್ನ ಸ್ವಚಿತ್ರವನ್ನು ವಿಧ ವಿಧ ಭಂಗಿಗಳಲ್ಲಿ, ಅಪಾಯಕಾರಿ ಜಾಗಗಳಲ್ಲಿ, ಜೀವದ ಅರಿವಿಲ್ಲದೇ ಕ್ಲಿಕ್ಕಿಸುವ ಒಂದು ರೀತಿಯ ಫ್ಯಾಶನ್ ಆಗಿರುವ ಈ ಸೆಲ್ಫೀ ಸಮೂಹ ಸನ್ನಿಗೆ ತನ್ನ ಜೀವವನ್ನೇ ಬಲಿಯಾಗಿಸಿಕೊಂಡವರ ಸಂಖ್ಯೆ ಕೂಡ ಬಹಳಷ್ಟಿದೆ.!
ಆದರೆ, ಇಂದಿನ ವಿಷಯ ಇದಕ್ಕೆ ಭಿನ್ನವಾಗಿದೆ. ತಂತ್ರಜ್ಞಾನ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಪ್ರವೃತ್ತಿಯ ಕಡೆಗೆ ಚಲಿಸುವುದರಿಂದ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕ ಉಪಕರಣಗಳು ಸೆಲ್ಫೀಗಾಗಿಯೇ ರೂಪುಗೊಂಡಿವೆ. ಸ್ವಯಂಗೀಳಾಗಿರುವ ಸೆಲ್ಫೀ ಒಲವನ್ನು ಮತ್ತಚ್ಟು ಹೆಚ್ಚಿಸುವ ಸಲುವಾಗಿ ಹತ್ತಾರು ವಿಶಿಷ್ಟ ಸೆಲ್ಫೀ ಪೂರಕ ಗ್ಯಾಜೆಟ್‌ಗಳು ಬಿಡುಗಡೆಯಾಗುತ್ತಿವೆ.
ಆಧುನಿಕ ಉಪಕರಣಗಳು ಹೆಚ್ಚಾದಂತೆ ಸೆಲ್ಫೀ ಮೆನಿಯಾ ಕೂಡ ಬದಲಾವಣೆ ಕಾಣುತ್ತಾ ಹೋಗುತ್ತಿದೆ. ಮೊಬೈಲ್‌ನಲ್ಲಿ ಸೆಲ್ಫೀ ತೆಗೆದುಕೊಳ್ಳಲು ಸೆಲ್ಫೀ ಸ್ಟಿಕ್ ಹುಟ್ಟಿದಂತೆಯೇ ಹಲವಾರು ಸೆಲ್ಫೀ ಆಧಾರಿತ ಗ್ಯಾಜೆಟ್ಸ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹಾಗಾಗಿ, ಸೆಲ್ಫೀಗಾಗಿಯೇ ರೂಪುಗೊಂಡ ವಿಶಿಷ್ಟ ಆಧುನಿಕ ಉಪಕರಣಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಸೆಲ್ಫೀ ಟೋಸ್ಟ್!!
ಈಗ ಸೆಲ್ಫೀಯನ್ನು ಎಲ್ಲಿ ಬೇಕಾದರೂ ಚಿತ್ರಿಸಬಹುದು ಎಂಬುದಕ್ಕೆ ಸೆಲ್ಫೀ ಟೋಸ್ಟ್ ನಿಮಗೆ ಆಶ್ಚರ್ಯ ಮೂಡಿಸುತ್ತದೆ. ಬ್ರೆಡ್ ಟೋಸ್ಟ್ ಅನ್ನು ಮೇಲೆ ಕೂಡ ನಿಮ್ಮ ಸೆಲ್ಫೀ ಚಿತ್ರವನ್ನು ಬಿಡಿಸುವ ಸಾಧನ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯ ಗ್ಯಾಜೆಟ್ ಆಗಿದೆ.!

ಸೆಲ್ಫೀ ಬೇಬಿ ಆಪ್!
ನಿಮ್ಮ ಸೆಲ್ಫೀಯನ್ನು ಉತ್ತಮಪಡಿಸಲು ನೂರಾರು ಸೆಲ್ಫೀ ಆಪ್‌ಗಳು ಇರುವುದನ್ನು ನೀವು ನೋಡಿದ್ದೀರಾ. ಆದರೆ, ಚಿಕ್ಕ ಮಕ್ಕಳಿಗಾಗಿಯೇ ಸೆಲ್ಫೀ ಆಪ್ ಅಭಿವೃದ್ದಿಯಾಗಿದೆ ಎಂದರೆ ನೀವು ನಂಬಲೇಬೇಕು. ಏಕೆಂದರೆ, ಈಗಿನ ಮಕ್ಕಳಿಗೆ ಸೆಲ್ಫೀ ಬಹುಮುಖ್ಯ ಕೂಡ.!

ಬೆಲ್ಫಿ ಸ್ಟಿಕ್!
ಈ ರೀತಿಯ ಒಂದು ಸೆಲ್ಫೀ ಗ್ಯಾಜೆಟ್ ಇದೆ ಎಂಬ ಕಲ್ಪನೆ ಕೂಡ ನಿಮಗೆ ಇರುವುದಿಲ್ಲ. ಏಕೆಂದರೆ,, ಇದು ಸೆಲ್ಫೀ ಸ್ಟಿಕ್ ಅಲ್ಲ ಬೆಲ್ಫಿ ಸ್ಟಿಕ್! ಅಯ್ಯೋ ಇದೇನಿದು ಬೆಲ್ಫಿ ಸ್ಟಿಕ್ ಎಂದು ಆಸ್ಚರ್ಯವಾದರೆ, ಇದಕ್ಕೆ ಸಿಂಪಲ್ ಉತ್ತರ ಹಿಂಭಾಗದಲ್ಲಿ ಸೆಲ್ಫೀ ಸೆರೆಹಿಡಿಯುವುದು.!

ಸೆಲ್ಫಿ ಬ್ರಷ್!!
ಇದು ಕೇವಲ ಮಹಿಳೆಯರಿಗೆ ಮಾತ್ರ! ಏಕೆಂದರೆ, ಈ ಒಂದು ಗ್ಯಾಜೆಟ್‌ನಲ್ಲಿ ಅಗತ್ಯವಿರುವ ಎರಡು ವಿಷಯಗಳನ್ನು ಒಟ್ಟಿಗೆ ಉಪಯೋಗಿಸುವ ಟ್ರಿಕ್. ಸೆಲ್ಫಿ ಬ್ರಷ್ ಕೆಲವು ಮಹಿಳೆಯರು ಹೆಚ್ಚು ಇಷ್ಟಪಡುವ ಎರಡು ವಿಷಯಗಳನ್ನು ಒಟ್ಟಿಗೆ ಸೇರಿಸುತ್ತದೆ - ಒಂದು ಬಾಚಣಿಗೆ ಮತ್ತು ಸೆಲ್ಫೀ ಸಾಧನ.!

3D ಮೇಯನೇಸ್ ಸೆಲ್ಫಿ
ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಎಲ್ಲರಿಗೂ ಅವಮಾನ ಮಾಡುವಂತಹ ಸೆಲ್ಫೀ ಗ್ಯಾಜೆಟ್ ಇದು. ನಿವಿ ತಿನ್ನುವ ಫಿಜ್ಜಾ ಮತ್ತು ಬರ್ಗರ್ ಮೇಲೆ ವಿಶೇಷವಾಗಿ 3D ಸೆಲ್ಫೀ ಚಿತ್ರವನ್ನು ಮುದ್ರಿಸುವ ಸಾಧನ ಇದು. ಇಂತಹ ಶೋಕಿಯ ಸೆಲ್ಫೀ ಕಾಲ ಇನ್ನೇನು ಭಾರತಕ್ಕೂ ಕಾಲಿಡಬಹುದು.

ಸೆಲ್ಫೀ ಕನ್ನಡಿ!
ಆಧುನಿಕ ಸೆಲ್ಫೀ ಪ್ರಪಂಚದ ಮತ್ತೊಂದು ವಿಶೇಷ ಗ್ಯಾಜೆಟ್ ಈ ಸೆಲ್ಫೀ ಕನ್ನಡಿ. ನಿಮ್ಮ ಕನ್ನಡಿಯನ್ನು ನೋಡುತ್ತಿದ್ದೀರಿ ಮತ್ತು ನೀವು ನಿಮಗೇ ಯೋಚಿಸುತ್ತಿದ್ದರೆ - "ನಾನು ತುಂಬಾ ಚೆನ್ನಾಗಿ ಕಾಣುತ್ತೇನೆ, ಇದೀಗ ನಾನೊಬ್ಬ ಚಿತ್ರ ತೆಗೆದುಕೊಳ್ಳಬಹುದು ಎಂದು ನಾನು ಬಯಸುತ್ತೇನೆ", ಈ ಕನ್ನಡಿಯು ನಿಮ್ಮನ್ನು ಹಾಗೆ ಮಾಡಲು ಅನುಮತಿಸುತ್ತದೆ.

ಗ್ರಿಪ್ ಸ್ನ್ಯಾಪ್!
ಈ ಗ್ಯಾಜೆಟ್ ಸೆಲ್ಫೀ ಸ್ಟಿಕ್ ಪರ್ಯಾಯವಾದ ಒಂದು ಗ್ಯಾಜೆಟ್ ಆಗಿದೆ. ಕೈನಲ್ಲಿ ಸೆಲ್ಫೀ ಸ್ಟಿಕ್ ಹಿಡಿಯುವುದನ್ನು ತಪ್ಪಿಸುವ ಸಲುವಾಗಿ ಮಾರುಕಟ್ಟೆಗೆ ಬಂದಿರುವ ಈ ಸಾಧನವನ್ನು ನಿಮಗೆ ಬೇಕಾದಂತೆ ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಗೋಡೆ, ಗ್ಲಾಸ್, ಮರ ಹೀಗೆ ಯಾವುದಾದರೂ ಸರಿ.

ಸೆಲ್ಫ್ ಶರ್ಟ್
ಶರ್ಟ್ ಸೆಲ್ಫಿಯನ್ನು ತೆಗೆಯುತ್ತದೆಯೇ ಎಂದು ಗಾಬರಿಯಾಗಬೇಡಿ. ಏಕೆಂದರೆ, ವಾಸ್ತವವಾಗಿ ಇದು ಸೆಲ್ಫಿ ತೆಗೆಯುವುದಿಲ್ಲ. ಆದರೆ, ಇದು ಹಾಸ್ಯಾಸ್ಪದವಾಗಿದೆ. ಈ ಸೆಲ್ಫೀ ಶರ್ಟ್ ಹಾಕಿಕೊಂಡು ನೀವು ಸೆಲ್ಫೀ ಚಿತ್ರಿಸಿದರೆ ಅದು ನಿಮ್ಮನ್ನು ಕಂಫರ್ಟ್ ಫೀಲ್‌ನಲ್ಲಿ ಇರುವಂತೆ ಮಾಡುತ್ತದಂತೆ.!

ಸೆಲ್ಫ್ ಹ್ಯಾಟ್
ಸೆಲ್ಫೀ ಹ್ಯಾಟ್ ಎಂಬ ಪದದಿಂದಲೇ ನಿಮಗೆ ಈ ಸೆಲ್ಫೀ ಹ್ಯಾಟ್ ಕಾರ್ಯ ಏನು ಎಂಬುದು ನಿಮಗೆ ಅರ್ಥವಾಗಿರಬಹುದು. ತಲೆಯ ಮೇಲಿನ ಟೋಪಿಯಲ್ಲಿಯೇ ನೀವು ಸೆಲ್ಫೀ ತೆಗೆದುಕೊಳ್ಳಬಹುದಾದ ಆಯ್ಕೆ ಇದರಲ್ಲಿದೆ. ಆದರೆ, ಇದು ತೆಗೆಯುವ ಸೆಲ್ಫೀ ಹೇಗೆ ಕಾಣುತ್ತದೆ ಎಂಬುದೇ ಡೌಟ್.!

ಸೆಲ್ಫಿ ಡ್ರೋನ್
ಭಾರತದಲ್ಲಿ ಸೇರಿದಂತೆ ವಿಶ್ವದಲ್ಲಿಯೇ ಹೆಚ್ಚು ಪ್ರಚಲಿತವಾಗುತ್ತಿರುವ ಮತ್ತೊಂದು ವಿಶೇಷ ಸೆಲ್ಫೀ ಸಾಧನ ಸೆಲ್ಫಿ ಡ್ರೋನ್.! ಈ ಡ್ರೋಣ್ ಬಳಸಿಕೊಂಡು ತರೇಹವಾರಿ ಸೆಲ್ಫೀ ಚಿತ್ರಗಳನ್ನು ನೀವು ತೆಗೆದುಕೊಳ್ಳಬಹುದು. ಇದು ಈಗಾಗಲೇ ಭಾರತದಲ್ಲಿಯೂ ಲಭ್ಯವಿರುವ ಸೆಲ್ಫೀ ವಿಶೇಷ ಸಾಧನ.!
ಚಿತ್ರ ಕೃಪೆ: ದಿ ಬೆಟರ್ ಇಂಡಿಯಾ


Click it and Unblock the Notifications








