ಕಾಮದಲ್ಲಿ ರೋಬೋಟ್ ಬಳಕೆ, ರೋಗಗಳ ಇಳಿಕೆ

By Varun
|
ಕಾಮದಲ್ಲಿ ರೋಬೋಟ್ ಬಳಕೆ, ರೋಗಗಳ ಇಳಿಕೆ

ಮಾನವ ಕುತೂಹಲ ಜೀವಿ. ತನ್ನ ಸಂತೋಷಕ್ಕೆ ತಂತ್ರಜ್ಞಾನ ಬಳಸಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ದಾನೆ.ಮಾಡುತ್ತಾ ಇದ್ದಾನೆ. ಸೃಷ್ಟಿಯಲ್ಲಿ ಘರ್ಷಣೆ, ಆಕರ್ಷಣೆ, ಪ್ರೀತಿ, ಕಾಮ ಎಲ್ಲವೂ ಸಹಜ.ಇಲ್ಲದಿದ್ದರೆ ನಾವು ಹುಟ್ಟುತ್ತಲೇ ಇರಲಿಲ್ಲ. ಆದರೆ ಕೆಲವು ದೇಶಗಳಲ್ಲಿ ಇದರ ಬಗ್ಗೆ ಮಡಿವಂತಿಕೆ ಇದ್ದು, ಕಾಮದ ಬಗ್ಗೆ ಮುಕ್ತವಾಗಿ ಚರ್ಚಿಸಲು ಆಗುವುದಿಲ್ಲ. ಹಾಗಾಗಿಯೇ ಇಲ್ಲದ ಭ್ರಮೆ, ಪೂರ್ವಾಗ್ರಹ ಇರುವುದರಿಂದಲೇ ಹಲವಾರು ಸೆಕ್ಸ್ ಸಂಬಂಧೀ ಖಾಯಿಲೆಗಳು ಹರಡಲು ಕಾರಣವಾಗಿದೆ.

ತಮ್ಮ ಕಾಮ ತೃಷೆಯನ್ನು ತಣಿಸಿಕೊಳ್ಳಲು ಸೆಕ್ಸ್ ವರ್ಕರ್ಸ್ ಅಥವಾ ಲೈಂಗಿಕ ಕಾರ್ಯಕರ್ತೆಯರ (ಸೂಳೆ ಎಂದು ಕರೆದರೆ ತಪಾಗುತ್ತದೆ) ಮೊರೆಹೋಗುವ ಗಂಡಸರು ಅಸುರಕ್ಷಿತ ಲೈಂಗಿಕತೆಯಿಂದ ಕೆಲವೊಮ್ಮೆ, ಗುಪ್ತ ರೋಗವನ್ನು ತಮ್ಮ ಪಾರ್ಟನರ್ ಗೂ ಅಂಟಿಸುವ ಸಾದ್ಯತೆ ಇರುತ್ತದೆ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಕಾಮದ ಸುಖ ಬೇಕು, ಆದರೆ ರೋಗ ಅಂಟಿಸಿಕೊಳ್ಳಬಾರದು. ಇದಕ್ಕಾಗಿ ಏನು ಮಾಡುವುದುಎಂಬಯೋಚನೆಯಿಂದಾಗಿಯೇ ಮಾರುಕಟ್ಟೆಯಲ್ಲಿ ಸೆಕ್ಸ್ ಆಟಿಕೆಗಳು, ರೋಬೋಟ್ ಗಳ ಸೃಷ್ಟಿಯಾಗಿದೆ.

ವಿಕ್ಟೋರಿಯಾ ವಿ.ವಿ ಯ ಅದ್ಯಯನವೊಂದರ ಪ್ರಕಾರ 2050 ವೇಳೆಗೆ "ರೋಬೋಟ್ ಸೆಕ್ಸ್", ಲೈಂಗಿಕ ಕಾರ್ಯಕರ್ತೆಯರ ಜೊತೆ ಮಾಡುವ ಸೆಕ್ಸ್ ಅನ್ನೂ ಮೀರಿಸುತ್ತದೆಯಂತೆ. ಅವರ ಅಧ್ಯಯನದ ಪ್ರಕಾರ ರೋಬೋಟ್ ಸೆಕ್ಸ್ ನಿಂದ ರೋಗಗಳೂ ಹರಡುವುದಿಲ್ಲ, ತಾವು ಯಾವುದೋ ತಪ್ಪು ಮಾಡಿದ್ದೇವೆ ಎಂಬ ಅಪರಾಧೀ ಭಾವನೆ ಕೂಡಾ ಇರುವುದಿಲ್ಲ. ಮಸಾಜ್, ಲ್ಯಾಪ್ ಡ್ಯಾನ್ಸ್, ಸಂಭೋಗ, ಹೀಗೆ ಏನು ಬೇಕಾದರೂ ಮಾಡುವ ರೋಬೋಟ್ ಗಳು ಬರಲಿದ್ದು, ಗಂಡಸರ ಅಗತ್ಯಕ್ಕೆ ತಕ್ಕಂತೆ ಫಿಗರ್, ಶೇಪ್, ಸೈಜ್ ಇರುವ ರೋಬೋಟ್ಗಳನ್ನೇ ಆಯ್ಕೆ ಮಾಡಿಕೊಳ್ಳಬಹುದು.

ಈ ರೀತಿಯ ಬೆಳವಣಿಗೆಗಳು ಭಾರತದಲ್ಲಿ ನಡೆದರಂತೂ, ಪೋಲಿಸ್ ರೈಡ್, ಟಿವಿ ಚಾನಲ್ ಗಳಲ್ಲಿ ರೋಚಕ ಸುದ್ದಿಗೆ ಆಹಾರವಾಗುವ ಭಯ, ಪಾರ್ಟನರ್ ಜೊತೆ ಸುಳ್ಳು ಹೇಳಬೇಕಾದ ಅಗತ್ಯತೆ ಇರುವುದೇ ಇಲ್ಲ.

2050 ಇನ್ನೂ ದೂರಾ ಇದೆ, ಸದ್ಯಕ್ಕೆ ಏನ್ರೀ ಮಾಡೋದು ಅಂತೀರಾ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X