Home
ಸುದ್ದಿಜಾಲ

ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟ ರೋಬೋಟ್‌..! ರಕ್ತ ಪರೀಕ್ಷೆ ಮಾಡಲು ಸಿದ್ಧ..!

By Gizbot Bureau

ಕಳೆದ ತಿಂಗಳು ಆಯೋಜಿಸಿದ್ದ ಗ್ರಾಹಕ ಎಲೆಕ್ಟ್ರಾನಿಕ್ಸ್ ಪ್ರದರ್ಶನ (ಸಿಇಎಸ್) ಭವಿಷ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. ರೋಗಿಗಳು ಮತ್ತು ಆರೋಗ್ಯ ವ್ಯವಸ್ಥೆಗೆ ಅನುಕೂಲವಾಗುವಂತೆ ವಿಜ್ಞಾನಿಗಳು ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಬಲವಾದ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಆ ಪ್ರಯೋಗಗಳ ಫಲವಾಗಿ ಸಂಶೋಧಕರು ರೋಬೋಟ್ ಸೃಷ್ಟಿಸಲು ಈಗ ಯಶಸ್ವಿಯಾಗಿದ್ದು, ಅದು ರಕ್ತದ ಮಾದರಿ ಪರೀಕ್ಷೆಯಂತಹ ಮೂಲಭೂತ ಕಾರ್ಯಗಳನ್ನು ಮಾಡುತ್ತದೆ.

ಮೌಂಟ್ ಸಿನಾಯ್

ಮೌಂಟ್ ಸಿನಾಯ್ ಆಸ್ಪತ್ರೆ ಮತ್ತು ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಈ ರೋಬೋಟ್‌ನ್ನು ರಚಿಸಿದ್ದಾರೆ. ಇದು ಚರ್ಮದ ಅಡಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಮತ್ತು ಸೋಂಕುಗಳು ಮತ್ತು ಥ್ರಂಬೋಸಿಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೂಜಿಯ ನಿಯೋಜನೆಗೆ ಮಾರ್ಗದರ್ಶನ ನೀಡಲು ಯಂತ್ರವು ತನ್ನ ಅಂತರ್ನಿರ್ಮಿತ ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ಬಳಸಬಹುದು, ಆದರೆ, ಇಡೀ ವ್ಯವಸ್ಥೆಯು ಮಾದರಿಗಳನ್ನು ನಿರ್ವಹಿಸಲು ಮಾಡ್ಯೂಲ್ ಮತ್ತು ಕೇಂದ್ರಾಪಗಾಮಿ ಆಧಾರಿತ ರಕ್ತ ವಿಶ್ಲೇಷಕವನ್ನು ಸಹ ರೋಬೋಟ್‌ ಒಳಗೊಂಡಿದೆ.

ರಕ್ತನಾಳ

ಸುಲಭ ಪ್ರವೇಶದ ರಕ್ತನಾಳಗಳ ಸಂದರ್ಭದಲ್ಲಿ, ರೋಬೋಟ್‌ನಿಂದ ರಕ್ತವನ್ನು ಸೆಳೆಯುವ ಯಶಸ್ಸಿನ ಪ್ರಮಾಣವು ಶೇ.97 ರಷ್ಟಿದ್ದರೆ, ಒಟ್ಟಾರೆ ಯಶಸ್ಸಿನ ಪ್ರಮಾಣ ಶೇ.87 ರಷ್ಟಿದೆ ಎನ್ನಲಾಗ್ತಿದೆ. ಈಗಿನಂತೆ, ರೋಬೋಟ್‌ ಒಂದು ಮೂಲ ಮಾದರಿಯದ್ದಾಗಿದ್ದು, ಅದರ ಯಶಸ್ಸಿನ ಪ್ರಮಾಣವನ್ನು ಸುಧಾರಿಸಲು ಸಂಶೋಧಕರಿಗೆ ಅವಕಾಶವಿದೆ, ಇದರಿಂದ ಒಂದು ದಿನ ಈ ಯಂತ್ರವನ್ನು ಆಂಬ್ಯುಲೆನ್ಸ್‌ಗಳು, ಐಸಿಯು ಸೇರಿ ಇತ್ಯಾದಿ ಕಡೆಗಳಲ್ಲಿ ಬಳಸಬಹುದಾಗಿದೆ.

ವೆನಿಪಂಕ್ಚರ್

ವೆನಿಪಂಕ್ಚರ್, ಇದು ಮೂಲತಃ ರಕ್ತದ ಮಾದರಿಯನ್ನು ಪಡೆಯಲು ಸೂಜಿಯನ್ನು ರಕ್ತನಾಳಕ್ಕೆ ಸೇರಿಸುವ ಕ್ರಿಯೆಯಾಗಿದೆ, ಇದು ವಿಶ್ವದ ಸಾಮಾನ್ಯ ಕ್ಲಿನಿಕಲ್ ವಿಧಾನವಾಗಿದೆ. ಯುಎಸ್‌ನಲ್ಲಿಯೇ, ವಾರ್ಷಿಕ 1.4 ಬಿಲಿಯನ್ ವೆನಿಪಂಕ್ಷರ್‌ಗಳನ್ನು ನಡೆಸಲಾಗುತ್ತದೆ.

ವೈದ್ಯರು

"ವೈದ್ಯರು ರಕ್ತದ ಮಾದರಿಗಳನ್ನು ಸುರಕ್ಷಿತವಾಗಿ, ವಿಶ್ವಾಸಾರ್ಹವಾಗಿ ಮತ್ತು ತ್ವರಿತವಾಗಿ ಈ ಸಾಧನದ ಮೂಲಕ ತೆಗೆಯಬಹುದು. ಅನೇಕ ಸೂಜಿ ಅಳವಡಿಸುವ ಪ್ರಯತ್ನಗಳಿಂದ ರೋಗಿಗಳಲ್ಲಿ ಅನಗತ್ಯ ನೋವು ಮತ್ತು ತೊಂದರೆಗಳನ್ನು ತಡೆಯಲು ಈ ಸಾಧನ ಸಹಾಯ ಮಾಡುತ್ತದೆ" ಎಂದು ರಟ್ಜರ್ಸ್ ವಿಶ್ವವಿದ್ಯಾಲಯದ ಬಯೋಮೆಡಿಕಲ್ ಎಂಜಿನಿಯರಿಂಗ್ ಡಾಕ್ಟರೇಟ್ ವಿದ್ಯಾರ್ಥಿ ಹಾಗೂ ಸಂಶೋಧಕ ಜೋಶ್ ಲೀಫೈಮರ್ ಹೇಳುತ್ತಾರೆ.

Best Mobiles in India

English summary
Robots To Accurately Sample Blood; Does It Mean Job Loss For Humans?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+