Subscribe to Gizbot

ನಿರಂತರ ಸಂಗೀತದ ಘಮಲು ಇನ್ನು ರಾಕಿ ಮೂಲಕ

Written By:

ಮನೆಯ ನೆಟ್‌ವರ್ಕ್ ಅನ್ನು ಬಳಸಿಕೊಂಡು ಮ್ಯೂಸಿಕ್ ಆಸ್ವಾದಿಸುವ ಪ್ರಥಮ ಡಿವೈಸ್ ಅನ್ನು ಆಪಲ್ 2004 ರಲ್ಲಿ ಹೊರತಂದಿತು. ಆಪಲ್ ಎಕ್ಸ್ಟ್ರೀಮ್ ಎಕ್ಸ್‌ಪ್ರೆಸ್ ಎಂಬುದು ಡಿವೈಸ್ ಹೆಸರಾಗಿತ್ತು. ಅದರ ನಂತರ ಬ್ಲ್ಯೂಟೂತ್ ಸಂಪರ್ಕವಿರುವ ಸ್ಪೀಕರ್‌ಗಳು ಮಾರುಕಟ್ಟೆಗೆ ಪ್ರವೇಶವನ್ನು ಪಡೆದುಕೊಂಡು ಮೊಬೈಲ್‌ನಲ್ಲೇ ಸಂಗೀತ ಆಸ್ವಾದಿಸುವ ಹೊಸ ಸ್ಟೈಲ್ ಮೂಡಿಬಂದಿತು.

ನಿರಂತರ ಸಂಗೀತದ ಘಮಲು ಇನ್ನು ರಾಕಿ ಮೂಲಕ

ಆದರೆ ಬ್ಲ್ಯೂಟೂತ್ ಕೇವಲ 30 ಫೀಟ್‌ವರೆಗೆ ಸಂಪರ್ಕವನ್ನು ಹೊಂದಿದ್ದು ನಂತರ ಸಂಪರ್ಕ ಕಡಿತಗೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲೆಂದೇ ರಾಕಿ ಎಂಬ ಮ್ಯೂಸಿಕ್ ಸ್ಟ್ರೀಮಿಂಗ್ ಡಿವೈಸ್ ಉತ್ತಮ ಪರಿಹಾರಕ ಡಿವೈಸ್‌ ಆಗಿ ಮೂಡಿ ಬಂದಿದೆ. ಇದನ್ನು ಬಳಸಲು ಹೆಡ್‌ಫೋನ್, ಬ್ಲ್ಯೂಟೂತ್ ಯಾವುದೂ ಬೇಡ. ನಿಮ್ಮ ವೈಫೈನಲ್ಲೇ ಸ್ಪೀಕರ್‌ಗಳನ್ನು ಇದು ಹೊಂದಿದೆ.

ನಿರಂತರ ಸಂಗೀತದ ಘಮಲು ಇನ್ನು ರಾಕಿ ಮೂಲಕ

ಆಂಡ್ರಾಯ್ಡ್ ಅಪ್ಲಿಕೇಶನ್ ನಿಮ್ಮ ಫೋನ್ ಟ್ಯಾಬ್ಲೆಟ್‌ಗೆ ರಾಕಿಯನ್ನು ಸಂಪರ್ಕಪಡಿಸಲಿದ್ದು ರಾಕಿಯನ್ನು ಬಹು ಫೋನ್‌ಗಳ ಮೂಲಕ ಕೂಡ ನಿಯಂತ್ರಿಸಬಹುದಾಗಿದೆ. ಇದು ನಿಮ್ಮ ಕೈಯಲ್ಲಿ ನೀಟಾಗಿ ಕುಳಿತುಕೊಳ್ಳುವಂತಿದ್ದು ಬಳಸಲು ಅತ್ಯಂತ ಸುಲಭವಾಗಿದೆ. ಇದು ಯಾವ ಫೈಲ್ ಫಾರ್ಮೆಟ್‌ನಲ್ಲಿ ಕೂಡ ಕಾರ್ಯನಿರ್ವಹಿಸುತ್ತದೆ ಮತ್ತು ಎಮ್‌ಪಿ 3 ಯನ್ನು ಯಾವುದೇ ತೊಂದರೆಯಿಲ್ಲದೆ ಇದು ಪ್ಲೇ ಮಾಡುತ್ತದೆ.

English summary
This article tells about music streaming device rocki which is giving you entertainment 24 hours without bluetooth and headphone help.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot