Home
ಸುದ್ದಿಜಾಲ

GTA 6 ಲಾಂಚ್ ಮತ್ತೆ ಮುಂದೂಡಿಕೆ: 10 ವರ್ಷದ ತಾಳ್ಮೆಗೆ ಮತ್ತೆ ಪರೀಕ್ಷೆ!

ಇಡೀ ವಿಶ್ವ ಗೇಮಿಂಗ್ ಲೋಕವೇ ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Grand Theft Auto VI (GTA 6) ಬಿಡುಗಡೆ ಸಮಯವು ಮತ್ತಷ್ಟು ಮುಂದೆ ಹೋಗಿದೆ.! ರಾಕ್‌ಸ್ಟಾರ್ ಗೇಮ್ಸ್ ಅಧಿಕೃತವಾಗಿ ಘೋಷಿಸಿರುವಂತೆ, ಬಹುನಿರೀಕ್ಷಿತ Grand Theft Auto VI ಬಿಡುಗಡೆ ದಿನಾಂಕವನ್ನು ಮುಂದೆ ಹಾಕಲಾಗಿದ್ದು, ಈ ಮೊದಲು ಮೇ 26, 2026ರಂದು ಬಿಡುಗಡೆ ಮಾಡಲು ಯೋಜಿಸಿದ್ದ ಗೇಮ್ ಅನ್ನು ನವೆಂಬರ್ 19, 2026 ರಂದು ಬಿಡುಗಡೆಗೊಳಿಸುವುದಾಗಿ ಕಂಪೆನಿ ತಿಳಿಸಿದೆ. ಈ ಮೂಲಕ ಈಗಾಗಲೇ ದಶಕಗಳಿಂದ ಕಾಯುತ್ತಿರುವ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಈ ಕುರಿತಾಗಿ, "ನಾವು ಸಮಯವನ್ನು ವಿಸ್ತರಿಸುತ್ತಿದ್ದೇವೆ ಎಂಬುದು ಗೊತ್ತಿದೆ, ಆದರೆ ಈ ಹೆಚ್ಚುವರಿ ತಿಂಗಳುಗಳು ಗೇಮ್‌ನ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ನೀವು ನಿರೀಕ್ಷಿಸಿರುವ ಮಟ್ಟದ ಪ್ಯಾಲಿಷ್ ನೀಡಲು ಸಹಾಯಮಾಡಲಿವೆ." ಎಂದು ರಾಕ್‌ಸ್ಟಾರ್ ಗೇಮ್ಸ್ ತನ್ನ ಪ್ರಕಟಣೆಯಲ್ಲಿ ಅಭಿಮಾನಿಗಳಿಗೆ ಕ್ಷಮೆ ಕೋರಿದೆ. GTA ಸರಣಿಯು ಯಾವಾಗಲೂ ಉನ್ನತ ಮಟ್ಟದ ತಂತ್ರಜ್ಞಾನ ಮತ್ತು ಕೌಶಲ್ಯದಿಂದ ನಿರ್ಮಿಸಲ್ಪಟ್ಟಿರುವುದರಿಂದ, ರಾಕ್‌ಸ್ಟಾರ್ ಹೊಸ ದಿನಾಂಕದಿಂದ ಗೇಮ್‌ನ್ನು ಇನ್ನಷ್ಟು ಪರಿಪೂರ್ಣಗೊಳಿಸಲು ಉದ್ದೇಶಿಸಿರುವುದರಿಂದ ಅಭಿಮಾನಿಗಳ ಕಾಯುವಿಕೆಯು ಮತ್ತೆ ಒಂದು ವರ್ಷ ಮುಂದೆ ಹೋಗಿದೆ.

GTA 6 ಟ್ರೈಲರ್‌ಗಳು ಈಗಾಗಲೇ ದಾಖಲೆ ಬರೆದಿವೆ
GTA 5 ಬಿಡುಗಡೆಯಾದ ಒಂದು ದಶಕದ ನಂತರ, 2023ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ GTA 6ರ ಮೊದಲ ಟ್ರೈಲರ್ ಯೂಟ್ಯೂಬ್‌ನಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು. ಈಗಾಗಲೇ 268 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳೊಂದಿಗೆ ಅದು ಗೇಮಿಂಗ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಿಸಲ್ಪಟ್ಟ ಟ್ರೈಲರ್ ಆಗಿದೆ. ಅದರ ನಂತರ ಬಿಡುಗಡೆಯಾದ ಎರಡನೇ ಟ್ರೈಲರ್, ಗೇಮ್‌ನ ಎರಡನೇ ನಾಯಕನಾದ "ಜೇಸನ್" ಮತ್ತು ವಾಯ್ಸ್ ಸಿಟಿಯ ವಿಶಾಲ ನಗರಜೀವನವನ್ನು ತೋರಿಸಿ 137 ಮಿಲಿಯನ್‌ ವೀಕ್ಷಣೆಗಳ ಗಡಿ ದಾಟಿದೆ.

GTA 6 ಲಾಂಚ್ ಮತ್ತೆ ಮುಂದೂಡಿಕೆ: 10 ವರ್ಷದ ತಾಳ್ಮೆಗೆ ಮತ್ತೆ ಪರೀಕ್ಷೆ!

2013 ರಿಂದ ಕಾಯುವಿಕೆ ಮತ್ತು ಲಾಭದ ಉದ್ದೇಶ?
GTA 5 ಬಿಡುಗಡೆಯಾದ 2013ರಿಂದ ಅಭಿಮಾನಿಗಳು ಹೊಸ ಆವೃತ್ತಿಯ ನಿರೀಕ್ಷೆಯಲ್ಲಿ ಇದ್ದಾರೆ. ಈ ಎರಡನೇ ಮುಂದೂಡಿಕೆ ಇದೀಗ ಆ ನಿರೀಕ್ಷೆಯನ್ನು ಮತ್ತೆ ಆರು ತಿಂಗಳು ವಿಸ್ತರಿಸಿದೆ. ರಾಕ್‌ಸ್ಟಾರ್‌ನ ಸಮಯವನ್ನು ತೆಗೆದುಕೊಳ್ಳುವ ತಂತ್ರವು ಹಿಂದೆ ಲಾಭಾಂಶದ ತಂತ್ರ ಇದೆ ಎಂಬುದನ್ನು ಸಹ ಉದ್ಯಮ ತಜ್ಞರು ಗಮನಿಸಿದ್ದಾರೆ. ಹಲವಾರು ವಿಳಂಬಗಳ ನಂತರ ಬಿಡುಗಡೆಯಾದ Grand Theft Auto V GTA 5, ಸಾರ್ವಕಾಲಿಕ ಹೆಚ್ಚು ಮಾರಾಟವಾದ ಮನರಂಜನಾ ಉತ್ಪನ್ನಗಳಲ್ಲಿ ಒಂದಾಗಿತ್ತು. ಇದು ಬಿಡುಗಡೆಯಾದಾಗಿನಿಂದ $8 ಬಿಲಿಯನ್‌ಗಿಂತಲೂ ಹೆಚ್ಚು ಆದಾಯವನ್ನು ಗಳಿಸಿದ್ದನ್ನು ಉಲ್ಲೇಖಿಸಲಾಗಿದೆ.

ಅತಿದೊಡ್ಡ ಬಿಡುಗಡೆಯಾಗಲಿದೆಯೇ GTA 6?
ವಿಶ್ಲೇಷಕರ ಪ್ರಕಾರ, GTA 6 ಬಿಡುಗಡೆಯಾಗುವಾಗ ಅದು ಕೇವಲ ಗೇಮಿಂಗ್ ಪ್ರಪಂಚದಲ್ಲೇ ಅಲ್ಲ, ಇಡೀ ಮನರಂಜನಾ ಕ್ಷೇತ್ರದಲ್ಲಿಯೇ ಅತಿದೊಡ್ಡ ಬಿಡುಗಡೆ ಆಗಲಿದೆ ಎಂದು ಅಂದಾಜಿಸಿದ್ದಾರೆ. ರಾಕ್‌ಸ್ಟಾರ್ ಗೇಮ್ಸ್ ಕೂಡ ಇದನ್ನೇ ಹೇಳಿಕೊಂಡಿದ್ದು,, GTA 6 "ಇತಿಹಾಸದಲ್ಲೇ ಅತಿದೊಡ್ಡ ಗೇಮ್ ಬಿಡುಗಡೆ" ಆಗಲಿದೆ. ಅಭಿಮಾನಿಗಳ ಸಹನೆ ಈಗ ಪರೀಕ್ಷೆಗೆ ಒಳಗಾಗಿದೆ. ಆದರೆ ಕಂಪನಿ ನೀಡುತ್ತಿರುವ ಹೆಚ್ಚುವರಿ ಸಮಯದಿಂದ ಗೇಮ್‌ನ ದೃಶ್ಯಗಳು, ಕಥಾನಕ ಮತ್ತು ತಾಂತ್ರಿಕ ಗುಣಮಟ್ಟ ಮತ್ತಷ್ಟು ಉನ್ನತವಾಗುವ ನಿರೀಕ್ಷೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

ಮಾರ್ವೆಲ್‌ನ ವುಲ್ವೆರಿನ್ ಬಿಡುಗಡೆ ಮುಂದೂಡಿಕೆ?
GTA 6 ಬಿಡುಗಡೆ ಸಮಯ ಈಗ 2026ರ ಕೊನೆ ಭಾಗಕ್ಕೆ ಸರಿಯುತ್ತಿರುವುದರಿಂದ, ಇತರ ಗೇಮ್ ಡೆವಲಪರ್‌ಗಳು ತಮ್ಮ ಬಿಡುಗಡೆ ಯೋಜನೆಗಳನ್ನು ಪುನಃ ಪರಿಗಣಿಸಬೇಕಾಗುತ್ತದೆ. ವಿಶೇಷವಾಗಿ ಮಾರ್ವೆಲ್‌ನ ವುಲ್ವೆರಿನ್, 2026ರ ಬೇಸಿಗೆ ಬಿಡುಗಡೆಯಾಗಬೇಕಾಗಿತ್ತು, ಆದರೆ GTA 6 ಸುತ್ತಲಿನ ಸಂಚಲನದ ಕಾರಣದಿಂದ ಅದು 2027ಕ್ಕೆ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂದು ಇತ್ತೀಚಿಗಷ್ಟೇ ವರದಿಯಾಗಿದೆ.

Best Mobiles in India

English summary
The much-anticipated Grand Theft Auto VI has officially been delayed. Originally slated for release on May 26, 2026, the game will now hit the shelves on November 19, 2026, according to the latest announcement from the company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+