Home
ಸುದ್ದಿಜಾಲ

ಮಾರುಕಟ್ಟೆಗೆ ಬಂತು ಮತ್ತೊಂದು ಪ್ರೀಮಿಯಂ ಡಿಸ್‌ಪ್ಲೇ ಸ್ಮಾರ್ಟ್‌ವಾಚ್‌ !

ಜನಪ್ರಿಯ ಸ್ಮಾರ್ಟ್‌ವಾಚ್‌ ಕಂಪೆನಿಗಳಲ್ಲಿ ಒಂದಾದ Rogbid ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಇದನ್ನು ರೋವಾಚ್ 5 ಸ್ಮಾರ್ಟ್ ವಾಚ್ ಎಂದು ಹೆಸರಿಸಲಾಗಿದೆ. ಇದು ಪ್ರೀಮಿಯಂ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 3D ಬಾಗಿದ ಡಯಲ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಒಳಗೊಂಡಿದೆ.

ಹೌದು, ಚೈನೀಸ್ ಸ್ಮಾರ್ಟ್ ವಾಚ್ ತಯಾರಕ Rogbid ಹೊಸ ರೋವಾಚ್‌ 5 ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ತಡೆರಹಿತ ನ್ಯಾವಿಗೇಷನ್‌ಗಾಗಿ ಭೌತಿಕ ಬಟನ್‌ನೊಂದಿಗೆ ಬರುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಾಪನ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಹಾಗಾದ್ರೆ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾರುಕಟ್ಟೆಗೆ ಬಂತು ಮತ್ತೊಂದು ಪ್ರೀಮಿಯಂ ಡಿಸ್‌ಪ್ಲೇ ಸ್ಮಾರ್ಟ್‌ವಾಚ್‌ !

ರೋವಾಚ್ 5 ಫೀಚರ್ಸ್‌ ಹೇಗಿದೆ?
ರೋವಾಚ್ 5 ಸ್ಮಾರ್ಟ್‌ವಾಚ್‌ ಲೋಹದ ಮುಕ್ತಾಯದೊಂದಿಗೆ 3D ಬಾಗಿದ ಡಯಲ್ ಅನ್ನು ಹೊಂದಿದೆ. ಇದು 2.1 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿರುವ ಸ್ಕ್ವೇರ್‌ ಡಯಲ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇ 320 x 386 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್‌ ಬಳಕೆದಾರರ ಆದ್ಯತೆಗಳಿಗೆ ಸರಿಹೊಂದುವಂತೆ ವೈಯಕ್ತೀಕರಿಸಬಹುದಾದ ಹಲವಾರು ವಾಚ್ ಫೇಸ್‌ಗಳನ್ನು ಸಹ ಒಳಗೊಂಡಿದೆ.

ಇನ್ನು ಸ್ಮಾರ್ಟ್‌ವಾಚ್‌ ಕ್ರಿಯಾತ್ಮಕ ತಿರುಗುವ ಕಿರೀಟ ಮತ್ತು ತಡೆರಹಿತ ನ್ಯಾವಿಗೇಷನ್‌ಗಾಗಿ ಫಿಸಿಕಲ್‌ ಬಟನ್‌ ಹೊಂದಿದೆ. ಇದು ಬಹಳ ಸೊಗಸಾದ ಹಾಗೂ ಕಲಾತ್ಮಕವಾದ ವಿನ್ಯಾಸದ ಮೂಲಕ ಆಕರ್ಷಕವಾಗಿ ಕಾಣಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಬೆವರು, ಧೂಳಿನ ನೀರಿನ ಸ್ಪ್ಲಾಶ್‌ಗಳ ವಿರುದ್ಧ ರಕ್ಷಣೆಗಾಗಿ IP67 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇನ್ನು ಹೆಲ್ತ್‌ ಫೀಚರ್ಸ್‌ಗಳಲ್ಲಿ ಕೂಡ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಪ್ರಮುಖವಾಗಿ ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕವನ್ನು ಟ್ರ್ಯಾಕ್‌ ಮಾಡಲಿದೆ.

ಇದರೊಂದಿಗೆ ಬಳಕೆದಾರರ ನಿದ್ರೆಯ ಮಾದರಿಗಳು ಮತ್ತು ಒತ್ತಡದ ಮಟ್ಟವನ್ನು ಟ್ರ್ಯಾಕ್ ಮಾಡಲಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿರುವ ಸೆಡೆಂಟರಿ ಮೋಡ್ ಬಳಕೆದಾರರು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದಾಗ ಮಾಹಿತಿ ನೀಡಲಿದೆ. ಜೊತೆಗೆ ಇದು ಬ್ಲೂಟೂತ್ ಕಾಲಿಂಗ್‌ ಅನ್ನು ಸಹ ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚಚ್‌ ಮೂಲಕವೇ ಕಂಟ್ರೋಲ್‌ ಮಾಡಬಹುದಾಗಿದೆ. ಅಲ್ಲದೆ ಮ್ಯೂಸಿಕ್‌ ಮತ್ತು ಕ್ಯಾಮೆರಾವನ್ನು ಸಹ ಕಂಟ್ರೋಲ್‌ ಮಾಡಬಹುದಾಗಿದೆ. ಈ ವಾಚ್‌ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಮಾರುಕಟ್ಟೆಗೆ ಬಂತು ಮತ್ತೊಂದು ಪ್ರೀಮಿಯಂ ಡಿಸ್‌ಪ್ಲೇ ಸ್ಮಾರ್ಟ್‌ವಾಚ್‌ !

ಬೆಲೆ ಮತ್ತು ಲಭ್ಯತೆ
Rogbid Rowatch 5 ಪ್ರಸ್ತುತ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ $29.99 (ಅಂದಾಜು 2,497ರೂ)ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇದೇ ನವೆಂಬರ್ 11 ರಂದು ಸೇಲ್‌ ಆಗಲಿದೆ. ಅಲ್ಲದೆ ಈ ಹೊಸ ಮಾದರಿಯು ನಿಗದಿತ ನವೆಂಬರ್ 11 ರ ಈವೆಂಟ್‌ನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಇದೆಲ್ಲದರ ನಡುವೆ ಇತ್ತೀಚಿಗೆ ಸ್ಮಾರ್ಟ್‌ವಾಚ್ ಮಾರುಕಟ್ಟೆಯು ಸಾಕಷ್ಟು ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ತಮ್ಮ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಹಲವು ಸ್ಮಾರ್ಟ್‌ವಾಚ್‌ ಕಂಪನಿಗಳು 'ಬ್ರೂಸಿಂಗ್ ಪ್ರೈಸ್ ವಾರ್' ಅನ್ನು ಎದುರಿಸುತ್ತಿವೆ. ಅದರಲ್ಲೂ ಹೊಸ ಸ್ಮಾರ್ಟ್‌ವಾಚ್‌ಗಳು ಎಂಟ್ರಿ ಆದಂತೆ ಸ್ಮಾರ್ಟ್‌ವಾಚ್‌ ವಲಯದಲ್ಲಿ ಹೊಸ ಬದಲಾವಣೆ ಕಂಡುಬರುತ್ತಿದೆ. ಆದರೆ ಈ ಸ್ಮಾರ್ಟ್‌ವಾಚ್‌ಗಳ ಬೆಲೆ 3,000ರೂ ಕ್ಕಿಂತ ಕಡಿಮೆ ಇರುವುದು ಪರಸ್ಪರ ಬೆಲೆ ಪೈಪೋಟಿಗೆ ಕಾರಣವಾಗುತ್ತಿದೆ. ಇದರಿಂದ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಹಲವು ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ಗಳಿವೆ ಎನ್ನಲಾಗಿದೆ. ಪೈಪೋಟಿಯ ಕಾರಣಕ್ಕಾಗಿಯೇ ಸ್ಮಾರ್ಟ್‌ವಾಚ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗ್ತಿದೆ ಎಂದು ವರದಿಯಾಗಿದೆ.

Best Mobiles in India

English summary
Rogbid Rowatch 5 with a super-affordable price tag unveiled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+