Rolex watch: 50 ವರ್ಷಗಳ ಬಳಿಕ ಸಿಕ್ಕಿತು ಕಳೆದುಕೊಂಡ 'ರೋಲೆಕ್ಸ್' ವಾಚ್: ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಅದು 1970ರ ದಶಕದ ಆರಂಭ. ಬ್ರಿಟಿಷ್ ರೈತ ತನ್ನ ಅಮೂಲ್ಯವಾದ ರೋಲೆಕ್ಸ್ ವಾಚ್ (watch) ಅನ್ನು ಕಳೆದುಕೊಂಡಿದ್ದ ಸಂದರ್ಭ. ರೈತ ಜೇಮ್ಸ್ ಸ್ಟೀಲ್ ಅವರು ವಾಚ್ ಶಾಶ್ವತವಾಗಿ ನನ್ನಿಂದ ದೂರವಾಗಿದೆ ಅಂತ ಭಾವಿಸಿದ್ದರು. ಅನಿರೀಕ್ಷಿತವಾಗಿ ಕೆಳಗಡೆ ಬಿದ್ದಿದ್ದ Rolex watch ಅನ್ನು ಹಸು ಮೇವಿನೊಂದಿಗೆ ತಿಂದು ಬಿಟ್ಟಿದೆ ಅಂತ ನಿರ್ಧರಿಸಿದ್ದರು. ಆದರೀಗ, ರೈತ ಜೇಮ್ಸ್ ಸ್ಟೀಲ್ ಅಚ್ಚರಿಗೆ ಒಳಗಾಗಿದ್ದಾರೆ. ತಾನು ಕಳೆದುಕೊಂಡಿದ್ದ ವಾಚ್ ಅರ್ಧ ದಶಕದ ನಂತರ, ಅಂದರೆ 50 ವರ್ಷಗಳ ಬಳಿಕ ಸಿಕ್ಕಿದೆ. ಈ ಮುರಿದ ಗಡಿಯಾರ ಕಂಡ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಹೌದು, ಕಳೆದುಕೊಂಡ ವಸ್ತು ಸಿಕ್ಕರೆ ಯಾರಿಗೆ ತಾನೆ ಖುಷಿ ಆಗಲ್ಲ ಹೇಳಿ.. ಅದು ಕೆಲವರಿಗೆ ಅಮೂಲ್ಯವಾದ ವಸ್ತುವಾದರೆ, ಇನ್ನೂ ಕೆಲವರಿಗೆ ಜೀವ ಹಾಗೂ ಜೀವನದ ಭಾಗವೇ ಆಗಿರುತ್ತದೆ. ಆಕಸ್ಮಿಕವಾಗಿ ಕಳೆದುಕೊಂಡ ಆ ವಸ್ತು ಮರಳಿ ಕೈಗೆ ಬಂದ್ರೆ ಸಂತೋಷಕ್ಕೆ ಪಾರವೇ ಇರಲ್ಲ. ಅದು 50 ವರ್ಷಗಳ ಬಳಿಕ ಸಿಕ್ಕರೆ ಆ ವ್ಯಕ್ತಿ ಅಚ್ಚರಿಗೆ ಒಳಗಾಗದೇ ಇರಲು ಸಾಧ್ಯವೇ..? ಇಂಥದೊಂದು ಅಪರೂಪದ ಪ್ರಸಂಗ ಲಂಡನ್‌ನಲ್ಲಿ ನಡೆದಿದೆ.

ಈ ವಾಚ್ ನೆನಪಿಗಾಗಿ ಇಟ್ಟುಕೊಳ್ಳಲು ನಿರ್ಧಾರ
50 ವರ್ಷಗಳ ಹಿಂದೆ ಕಳೆದುಹೋಗಿದ್ದ ರೋಲೆಕ್ಸ್ ಕೈ ಗಡಿಯಾರವು (watch) ಲೋಹ ಪತ್ತೆ ಮಾಡುವ ವ್ಯಕ್ತಿಯೊಬ್ಬರ ಕಾಳಜಿಯಿಂದಾಗಿ ರೈತನಿಗೆ ಸಿಕ್ಕಿದೆ. ಈ watch ಆಸ್ಟೆಸ್ಟ್ರಿಯಲ್ಲಿನ ಮೊರ್ದಾ ಬಳಿಯ ಟ್ರೆಫ್‌ಲ್ಯಾಚ್ ಹಾಲ್ ಮಾಲೀಕರೂ ಆದ ಬ್ರಿಟಿಷ್ ರೈತ ಸ್ಟೀಲ್ ಎಂಬುವವರಿಗೆ ಸೇರಿದ್ದು. ಈ ವಾಚ್ ಅನ್ನು ನೆನಪಿಗೆ ಇಟ್ಟುಕೊಳ್ಳಲು ಅವರು ನಿರ್ಧರಿಸಿದ್ದಾರೆ.
ರಿಪೇರಿ ಮಾಡಿಸಲು ಎಷ್ಟು ಹಣ ಬೇಕು?
ಲೋಹ ಪತ್ತೆ ಮಾಡುವ ಯಂತ್ರವನ್ನು ಬಳಸಿ ವ್ಯಕ್ತಿಯೊಬ್ಬರು ಅವರದ್ದೇ ಜಮೀನಿನಲ್ಲಿ ಹುಡುಕಾಟ ನಡೆಸಿದ್ದಾಗ ಈ watch ಪತ್ತೆಯಾಗಿದೆ. ಇನ್ನಷ್ಟು ವಸ್ತುಗಳು ಸಿಗುವ ಸಾಧ್ಯತೆ ಇರುವುದರಿಂದ ಹುಡುಕಾಟ ಮುಂದುವರಿಸುವಂತೆ ಲೋಹ ಪತ್ತೆ ಮಾಡುವ ವ್ಯಕ್ತಿಗೆ ಜಮೀನಿನ ಮಾಲೀಕರು ಸೂಚಿಸಿದ್ದಾರೆ. ಪತ್ತೆಯಾಗಿರುವ ವಾಚ್ ಹಸಿರು ಬಣ್ಣಕ್ಕೆ ತಿರುಗಿದೆ. ಮುಳ್ಳುಗಳು ಚಲಿಸುತ್ತಿಲ್ಲ. ಅದನ್ನು ರಿಪೇರಿ ಮಾಡಿಸಲು ಹೊರಟರೆ ದೊಡ್ಡ ಮೊತ್ತವನ್ನು ವ್ಯಯಿಸಬೇಕಿದೆ.
ವಾಚ್ ಬಗ್ಗೆ ರೈತ ಸ್ಟೀಲ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಸ್ಟೀಲ್, 1970ರಲ್ಲಿ ಕೈಗಡಿಯಾರದ ಬ್ರೇಸ್‌ಲೆಟ್ ತುಂಡಾಗಿ ಬಿದ್ದಿತ್ತು. ಇದು ಬಹುಮಾನವಾಗಿ ಬಂದಿದ್ದ ವಾಚ್. ನಾನೆಲ್ಲೋ ಹಸುವು ಮೇವಿನೊಟ್ಟಿಗೆ watch ಅನ್ನೂ ನುಂಗಿಬಿಟ್ಟಿತ್ತು ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. 92 ವರ್ಷ ವಯಸ್ಸಿನ ಸ್ಟೀಲ್ ಅವರಿಗೆ ತಮ್ಮ ಕೈಗಡಿಯಾರ 50 ವರ್ಷಗಳ ನಂತರ ದೊರೆತಿರುವುದು ಪವಾಡ ಎಂದೆನಿಸಿದೆ. ಅದೃಷ್ಟವಶಾತ್ ಅದು ಸಿಕ್ಕಿದೆ. ಇದನ್ನು ನೆನಪಿಗಾಗಿ ಇಟ್ಟುಕೊಳ್ಳಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ವಾಚ್ ಅನ್ನು ಹಸು ತಿಂದಿದೆ ಅಂತ ನಂಬಿದ್ದರು!
92 ವರ್ಷ ವಯಸ್ಸಿನ ಸ್ಟೀಲ್ ಮೂಲತಃ ರೈತರು. ಮನೆಯಲ್ಲಿ ಹಸುವನ್ನು ಸಾಕಿದ್ದರು. ಸದಾ ಕೆಲಸದಲ್ಲಿ ತಲ್ಲೀನರಾಗಿದ್ದ ಅವರು ತನಗೆ ಅರಿವಿಲ್ಲದೆಯೇ ಈ watch ಅನ್ನು ಕಳೆದುಕೊಂಡಿದ್ದರು. ಮನಸ್ಸಿನಲ್ಲಿ ವಾಚ್ ಹೇಗೆ ಕಳೆದುಕೊಂಡೆ ಎಂದು ಸಾಕಷ್ಟು ಪ್ರಶ್ನೆ ಉದ್ಭವಿಸಿದ್ದವು. ಕೊನೆಗೆ ನನ್ನ ವಾಚ್ ಅನ್ನು ಹಸು ತಿಂದೆ ಅಂತ ನಂಬಿದ್ದರು.
ಮನೆಯಲ್ಲಿ ಸಾಕಿದ್ದ ಹಸುವಿಗೆ ಮೇವು ಹಾಕುವಾಗ watch ಕೆಳಗೆ ಬಿದ್ದಿರಬಹುದು. ಅದನ್ನು ಹಸುವು ಮೇವಿನೊಂದಿಗೆ ನುಂಗಿರಬಹುದು ಅಂತ ರೈತ ಸ್ಟೀಲ್ ಭಾವಿಸಿದ್ದರು. ಬಳಿಕ, ವಾಚ್ ಬಗ್ಗೆ ಹೆಚ್ಚು ತಲೆಗೆಡಿಸಿಕೊಂಡಿರಲಿಲ್ಲ. ಇದೀಗ, ಪವಾಡ ಎಂಬಂತೆ 50 ವರ್ಷಗಳ (ಅರ್ಧ ಶತಮಾನ) ಬಳಿಕ ರೋಲೆಕ್ಸ್ ವಾಚ್ ಸಿಕ್ಕಿದೆ. ಇದರಿಂದ ರೈತ ಸ್ಟೀಲ್ ಫುಲ್ ಖುಷ್ ಆಗಿದ್ದಾರೆ.


Click it and Unblock the Notifications








