ಭವಿಷ್ಯದಲ್ಲಿ ಬರಲಿದೆ ಜೇಬಿನಲೇ ಇಟ್ಟುಕೊಳ್ಳ ಬಹುದಾದ ಟಿವಿ

Posted By: Staff
ಭವಿಷ್ಯದಲ್ಲಿ ಬರಲಿದೆ ಜೇಬಿನಲೇ ಇಟ್ಟುಕೊಳ್ಳ ಬಹುದಾದ ಟಿವಿ

ಭವಿಷ್ಯದಲ್ಲಿ ನೂತನ ಮಾದರಿಯ ಸಾಧನವೊಂದು ನಿಮ್ಮ ಕೈ ಸೇರಲಿದ್ದು ಈ ಸಾಧನವು ನಿಮ್ಮ ಟೆಲಿವಿಷನ್‌ ವೀಕ್ಷಣೆಯ ಅನುಭವವನ್ನು ದುಪ್ಪಟ್ಟು ಮಾಡಿಬಿಡುತ್ತದೆ. ಹೌದು ಬ್ರಟನ್‌ನ ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು ಈ ತಂತ್ರಜ್ಞಾನದ ನೆರವಿನಿಂದ ನೀವು ನಿಮ್ಮ ಜೇಬಿನಲ್ಲೇ ಸಂಪೂರ್ಣ ಟಿವಿ ಯೊಂದನ್ನು ಇಟ್ಟು ಕೊಳ್ಳಬಹುದಾಗಿದೆ.

ವಿಜ್ಞಾನಿಗಳು ಕ್ವಾಂಟಮ್‌ ಡಾಟ್ಸ್‌ ಎಂದು ಕರೆಯಲ್ಪಡುವ ನೂತನ ಮಾದರಿಯ ಲೈಟ್‌ ಎಮಿಟ್ಟಿಂಗ್‌ ಕ್ರಿಸ್ಟಲ್‌ ಅಭಿವೃದ್ದಿ ಪಡಿಸಿದ್ದು ಇದರ ನೆರವಿನಿಂದ ಅತ್ಯಂತ ತೆಳುವಾದ ಟೆಲಿವಿಷನ್‌ ತಯಾರಿಸಲು ನೆರವಾಗುತ್ತದೆ. ಈ ಕ್ರಿಸಟಲ್‌ಗಳು ಮಾನವನ ಕೂದಲಿಗಿಂತಲೂ 100,000 ಪ್ರಮಾಣದಷ್ಟು ತೆಳ್ಳಗಿದ್ದು ಇದನ್ನು ಮಡಿಚಿ ಇಡಬಹುದಾದಂತಹ ಪ್ಲಾಸ್ಟಿಕ್‌ನ ಮೇಲೆ ಪ್ರಿಂಟ್‌ ಮಾಡಿ ಪೇಪರ್‌ನಷ್ಟು ತೆಳುವಾದ ದರ್ಶಕಗಳನ್ನು ಸಿದ್ಧಪಟಿಸಬಹುದಾಗಿದೆ ಕೋಣೆ ಅಗಲದ ದೊಡ್ಡ ವಾಲ್ಪೇಪರ್‌ ಸಿದ್ಧ ಪಡಿಸ ಬಹುದಾಗದೆ.

ಇಂತಹ ನೂತನ ಮಾದರಿ ಟಿವಿ ಸಿದ್ಧ ಪಡಿಸಲಿರುವ ನೆನೊಕೊ ಸಂಸ್ಥೆಯ ಮುಖ್ಯಸ್ಥರಾದ ಮೈಕಲ್‌ ಎಲ್ಡ್‌ಮನ್‌ "ತಮ್ಮ ಸಂಸ್ಥೆಯು ಏಷ್ಯಾ ಮೂಲದ ತಾಂತ್ರಕ ಸಂಸ್ಥೆಯೊಂದಿಗೆ ಕೈ ಜೋಡಿಸಿ ಅಲ್ಟ್ರಾ ಸ್ಲಿಮ್‌ ಮಾದರಿಯ ಟೆಲಿವಿಷನ್‌ ನಿರ್ಮಾಣದ ರಿಸರ್ಚ್‌ ಮಾಡಲಾಗುತಿದ್ದು ಶೀಘ್ರದಲ್ಲಿಯೇ ಯಶಸ್ಸನ್ನು ಗಳಿಸಲಿದೆ" ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಸ್ಕೈಪ್‌ ಮೂಲಕ ವೆಬ್‌ಕ್ಯಾಮ್‌ ಚಾಟ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot