Home
ಸುದ್ದಿಜಾಲ

ಹಿಂದೆ ನಿಮ್ಮ ಲೂಟಿ ಮಾಡಿದ್ದ ಟೆಲಿಕಾಂ ಕಂಪನಿಗಳು ಈಗ ಬೆಲೆತೆರುತ್ತಿರುವುದು ಹೇಗೆ ಗೊತ್ತಾ..?

ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಯಾವ ಮಟ್ಟದಲ್ಲಿ ಬದಲಾವಣೆಯನ್ನು ಮಾಡಿದೆ ಎನ್ನುವುದಕ್ಕೆ ಸಣ್ಣ ಉದಾಹರಣೆಯೊಂದನ್ನು ನಿಮ್ಮ ಮುಂದೆ ಇಡುವ ಪ್ರಯತ್ನವು ಇದಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಮೆರೆಯುತ್ತಿದ್ದ ಕಂಪನಿಗಳು ಗ್ರಾಹಕರನ್ನು ಒಂದೇ ಸಮನೆ ಲೂಟಿ ಮಾಡುತ್ತಿದ್ದವು ಎಂದರೆ ತಪ್ಪಾಗುವುದಿಲ್ಲ. ಈ ಕಂಪನಿಗಳು ಹೇಗೆ ಲೂಟಿ ಮಾಡುತ್ತಿದ್ದವು. ಜಿಯೋ ಆರಂಭದ ನಂತರದಲ್ಲಿ ಅದಕ್ಕೆ ಹೇಗೆ ಕಡಿವಾಣ ಬಿತ್ತು ಎಂಬುದರ ಸಂಪೂರ್ಣ ವಿವಿರ ಇಲ್ಲಿದೆ.

ಹಿಂದೆ ನಿಮ್ಮ ಲೂಟಿ ಮಾಡಿದ್ದ ಟೆಲಿಕಾಂ ಕಂಪನಿಗಳು ಈಗ ಬೆಲೆತೆರುತ್ತಿರುವುದು ಹೇಗೆ..

ಜಿಯೋ ಆರಂಭಕ್ಕೂ ಮುನ್ನ, ಅಂದರೆ ಎರಡು ವರ್ಷದ ಹಿಂದೆ ಬಳಕೆದಾರರಿಗೆ ಏರ್‌ಟೆಲ್ ಸೇರಿದಂತೆ ವೊಡಾಫೋನ್ ಮತ್ತು ಐಡಿಯಾ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ಕೇವಲ ಕರೆ ಮಾಡುವವರಿಗೆ ಮಾತ್ರವೇ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದವು. ಅಲ್ಲದೇ ಒಂದು GB ಡೇಟಾವನ್ನು ಪಡೆದುಕೊಳ್ಳಲು ಬಳಕೆದಾರರು ದೊಡ್ಡ ಮಟ್ಟದ ಹಣವನ್ನು ಪಾವತಿ ಮಾಡಬೇಕಾಗಿತ್ತು. ಇದರಿಂದಾಗಿ ಬಳಕೆದಾರರು ಹೆಚ್ಚಿನ ಪ್ರಮಾಣದ ಡೇಟಾ ಬಳಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.

ಎರಡು ವರ್ಷದ ಹಿಂದಿನ ಬೆಲೆ:

ಎರಡು ವರ್ಷದ ಹಿಂದಿನ ಬೆಲೆ:

ಇದೇ ಎರಡು ವರ್ಷದ ಹಿಂದೆ ಬಳಕೆದಾರರಿಗೆ ಟೆಲಿಕಾಂ ಕಂಪನಿಗಳು ಒಂದು GB 3G ಡೇಟಾವನ್ನು ರೂ.255ಕ್ಕೆ ಮಾರಾಟ ಮಾಡುತ್ತಿದ್ದವು ಎನ್ನಲಾಗಿದೆ. ಕೇವಲ ಒಂದೇ ಒಂದು GB ಡೇಟಾವನ್ನು ಇಷ್ಟು ದೊಡ್ಡ ಬೆಲೆಗೆ ಮಾರಾಟ ಮಾಡುವುದಲ್ಲದೇ ಅದಕ್ಕಾಗಿ ನೀಡುತ್ತಿದ್ದ ವ್ಯಾಲಿಡಿಟಿಯೂ ತೀರಾ ಕಡಿಮೆ ಇರುತ್ತಿತು. ಆದರೆ ಇಂದು ಈ ಪರಿಸ್ಥಿರಿ ಬದಲಾವಣೆಯಾಗಿದೆ.

ರೂ.28ಕ್ಕೆ 500MB:

ರೂ.28ಕ್ಕೆ 500MB:

ಇಂದು ಜಿಯೋ ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಇದೇ ಟೆಲಿಕಾಂ ಕಂಪನಿಗಳು ಕೇವಲ ರೂ.28ಕ್ಕೆ 500MB 4G ವೇಗದ ಡೇಟಾವನ್ನು ಬಳಕೆದಾರರಿಗೆ ನೀಡುತ್ತಿದೆ. ಕೇವಲ 10% ಬೆಲೆಗೆ ಡೇಟಾವನ್ನು ನೀಡುತ್ತಿರುವ ಟೆಲಿಕಾಂ ಕಂಪನಿಗಳು ಈ ಹಿಂದೆ ನಮ್ಮ-ನಿಮ್ಮಿಂದ ಎಷ್ಟು ದೊಡ್ಡ ಪ್ರಮಾಣದಲ್ಲಿ ಹಣವನ್ನು ಲೂಟಿ ಮಾಡಿದೆ ಎನ್ನುವುದನ್ನು ನೀವು ಗಮನಿಸಬಹುದಾಗಿದೆ.

ಹೊಸ ಪ್ಲಾನ್:

ಹೊಸ ಪ್ಲಾನ್:

ಏರ್‌ಟೆಲ್ ಸೇರಿದಂತೆ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಈ ಬಾರಿ ಬಳಕೆದಾರರಿಗೆ ರೂ.28ಕ್ಕೆ 28 ದಿನಗಳ ಕಾಲವಧಿಗೆ 500MB ಡೇಟಾವನ್ನು ಬಳಕೆದಾರರಿಗೆ ನೀಡುತ್ತಿದೆ. ಇದರಲ್ಲಿ ಬಳಕೆದಾರರಿಗೆ 4G ವೇಗದ ಡೇಟಾ ಸೇವೆಯೂ ಲಭ್ಯವಾಗುತ್ತಿದೆ.

ರೂ.50 1 GB:

ರೂ.50 1 GB:

ಇದೇ ಹಿಂದೆ ಒಂದು GB ಡೇಟಾಕ್ಕೆ ರೂ.255 ಪಡೆಯುತ್ತಿದ್ದ ಟೆಲಿಕಾಂ ಕಂಪನಿಗಳು ಇದು ಒಂದು GB ಡೇಟಾವನ್ನು ಒಂದು ತಿಂಗಳ ಬಳಕೆಗೆ ರೂ.50ಕ್ಕೆ ನೀಡುತ್ತಿವೆ. ಅದು ಹಿಂದೆ ನೀಡುತ್ತಿದ್ದು 3G ಡೇಟಾವನ್ನು ಆದರೆ ಇಂದು 4G ಡೇಟಾವನ್ನು ಅದಕ್ಕಿಂತಲೂ ಕಡಿಮೆ ಬೆಲೆಗೆ ನೀಡುತ್ತಿವೆ.

ನಿತ್ಯ 1.5GB:

ನಿತ್ಯ 1.5GB:

ಈ ಹಿಂದೆ ಒಂದು ತಿಂಗಳಿಗೆ ಒಂದು GB ಡೇಟಾವನ್ನು ನೀಡಿ ರೂ255 ಪಡೆಯುತ್ತಿದ್ದ ಟೆಲಿಕಾಂ ಕಂಪನಿಗಳು ಜಿಯೋ ಆರಂಭದ ನಂತರದಲ್ಲಿ ರೂ.199ಕ್ಕೆ 28 ದಿನಗಳ ಅವಧಿಗೆ ನಿತ್ಯ 1.5GB ಡೇಟಾವನ್ನು ನೀಡುತ್ತಿವೆ, ಅಲ್ಲದೇ ಇದರೊಂದಿಗೆ ಹೆಚ್ಚಿನದಾಗಿ ಕರೆ ಮಾಡುವ ಅವಕಾಶವನ್ನು ಸಹ ಮಾಡಿಕೊಡುತ್ತಿವೆ.

Best Mobiles in India

English summary
From Rs 255 for 1GB of Data Two Years Ago, Airtel and Other Telcos Now Offering 500MB Data at Rs 28. to know kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+