30 ನಿಮಿಷದ ವೀಡಿಯೋಗೆ 300 ರುಪಾಯಿ : ಪೇಟಿಎಂ ಗರ್ಲ್ಸ್ ನಿಂದ ಇನ್ಸ್ಟಾಗ್ರಾಂನಲ್ಲಿ ಭಾರತೀಯರಿಗೆ ಮಾರಾಟ

By Gizbot Bureau
|

ಇತ್ತೀಚೆಗೆ ವೇಶ್ಯಾವಾಟಿಕೆಯ ರೂಪುರೇಷೆ ಬದಲಾಗುತ್ತಿರುವಂತೆ ಕಾಣುತ್ತಿದೆ. ಹೌದು ಇದು ನಿಜವೋ ಅಥವಾ ಸ್ಕ್ಯಾಮರ್ ಗಳು ಪೇಟಿಎಂ ಗರ್ಲ್ಸ್ ಪೋಸ್ ನ್ನು ಇನ್ಸ್ಟಾಗ್ರಾಂನಲ್ಲಿ ಮಾರಾಟ ಮಾಡುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಬಹಳಷ್ಟು ಭಾರತೀಯರು ಕೇವಲ ತಮ್ಮ ಹಾಲಿಡೇ ಮೂಡ್ ನ ಫೋಟೋಗಳನ್ನು ಶೇರ್ ಮಾಡುವುದಕ್ಕಾಗಿ ಇನ್ಸ್ಟಾಗ್ರಾಂ ಆಪ್ ಅಥವಾ ವೆಬ್ ಸೈಟ್ ನ್ನು ಬಳಸುತ್ತಿಲ್ಲ ಬದಲಾಗಿ ಸೆಕ್ಸ್ ಚಾಟ್, ಬೆತ್ತಲೆ ಫೋಟೋಗಳು ಮತ್ತು ಅಶ್ಲೀಲ ವೀಡಿಯೋಗಳಿಗಾಗಿ ಬಳಕೆ ಮಾಡುತ್ತಿದ್ದಾರೆ ಮತ್ತು ಅವರು ಇದನ್ನು "#paytmgirl" ಮತ್ತು "#paytmgirls" ಹೆಸರಿನ ಹ್ಯಾಷ್ ಟ್ಯಾಗ್ ಬಳಸಿ ಮಾಡುತ್ತಿದ್ದಾರೆ.

ಪೇಟಿಎಂ ಗರ್ಲ್ಸ್ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲತೆ:

ಪೇಟಿಎಂ ಗರ್ಲ್ಸ್ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲತೆ:

ಎಕಾನಿಮಿಕ್ ಟೈಮ್ಸ್ ನ ವರದಿಯು ತಿಳಿಸುವಂತೆ ಸೆಕ್ಸ್ ವಿಚಾರದ ಮಾರಾಟಕ್ಕಾಗಿ ದಿನದಿಂದ ದಿನಕ್ಕೆ ಭಾರತದಲ್ಲಿ ಇನ್ಸ್ಟಾಗ್ರಾಂ ಬಳಕೆ ಅಧಿಕಗೊಳ್ಳುತ್ತಿದೆಯಂತೆ. "#paytmgirl" ನಲ್ಲಿ ಸುಮಾರು 12,000 ಫಲಿತಾಂಶಗಳು ಮತ್ತು "#paytmgirls" ನಲ್ಲಿ ಸುಮಾರು 2,458 ಪೋಸ್ಟ್ ಗಳು ಸರ್ಚ್ ರಿಸಲ್ಟ್ ನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ಹೆಚ್ಚಿನವು ಸೆಮಿ-ನ್ಯೂಡ್ ಆಗಿರುವ ಹುಡುಗಿಯರ ಚಿತ್ರಗಳು ಮತ್ತು ವೀಡಿಯೋಗಳನ್ನು ಹೊಂದಿದೆ.

ಹಳೆಯ ಟ್ರೆಂಡ್, ಪತ್ತೆಯಾಗಿದ್ದು ಮಾತ್ರ ಈಗ!

ಹಳೆಯ ಟ್ರೆಂಡ್, ಪತ್ತೆಯಾಗಿದ್ದು ಮಾತ್ರ ಈಗ!

ಕೆಲವು ಇನ್ಸ್ಟಾಗ್ರಾಂ ಅಕೌಂಟ್ ಗಳಲ್ಲಿ ಮಕ್ಕಳನ್ನೂ ಕೂಡ ಅಶ್ಲೀಲತೆಗೆ ಬಳಸಿಕೊಳ್ಳಲಾಗಿದೆ.ಪೇಟಿಎಂ ಗರ್ಲ್ ಬಗೆಗಿನ ವಿಚಾರವು ಸುದ್ದಿಯಾಗುತ್ತಿದ್ದಂತೆ ತಿಳಿದಿರುವ ವಿಚಾರವೇನೆಂದರೆ ಇದು ಹೊಸದಾಗಿರುವ ಟ್ರೆಂಡ್ ಏನಲ್ಲ ಮತ್ತು ಇದು ಕೇವಲ ಇನ್ಸ್ಟಾಗ್ರಾಂಗೆ ಮಾತ್ರವೇ ಸೀಮಿತವಾಗಿಯೂ ಉಳಿದಿಲ್ಲವಂತೆ.

ಟ್ವೀಟರ್ ನಲ್ಲಿ ಆರಂಭವಾಗಿರುವ ಶಂಕೆ!

ಟ್ವೀಟರ್ ನಲ್ಲಿ ಆರಂಭವಾಗಿರುವ ಶಂಕೆ!

ಮೂರು ವರ್ಷಗಳ ಮುಂಚೆಯೇ ಟ್ವೀಟರ್ ನಲ್ಲಿ ಇದು ಆರಂಭವಾಗಿರುವ ಸಾಧ್ಯತೆ ಇದೆ. ಭಾರತೀಯ ಹುಡುಗಿಯರಿಂದ ಮ್ಯಾನೇಜ್ ಮಾಡಲ್ಪಟ್ಟಿರುವ ಕೆಲವು ಟ್ವೀಟರ್ ಅಕೌಂಟ್ ಗಳಲ್ಲಿ ಸೆಕ್ಸ್ ಚಾಟ್, ಅಶ್ಲೀಲ ಚಿತ್ರಗಳು ಮತ್ತು ಅಡಲ್ಟ್ ವೀಡಿಯೋಗಳು ಹಂಚಿಕೆ ಮತ್ತು ಮಾರಾಟ ನಡೆದಿದೆ. ಪ್ರತಿ ವೀಡಿಯೋಗೂ ಕೂಡ ಹಣ ಪಾವತಿ ಮಾಡುವಂತೆ ಕೇಳಲಾಗುತ್ತದೆ.

ಇನ್ಸ್ಟಾಗ್ರಾಂ ಫೀಚರ್ ಗಳ ಬಳಕೆ:

ಇನ್ಸ್ಟಾಗ್ರಾಂ ಫೀಚರ್ ಗಳ ಬಳಕೆ:

ತಮ್ಮ ಸೇವೆಯ ಬಗ್ಗೆ ಡೆಮೊ ನೀಡುವುದಕ್ಕೆ ಇನ್ಸ್ಟಾಗ್ರಾಂ ನ ಸ್ಟೋರೀಸ್ ಫೀಚರ್ ನ್ನು ಅವರು ಬಳಸಿಕೊಂಡಿದ್ದಾರೆ ಮತ್ತು ಅವರ ಸೇವೆಗಳಿಗೆ ಇರುವ ಬೆಲೆ ಕೂಡ ವಿಭಿನ್ನವಾಗಿದೆ.

ಯಾವುದಕ್ಕೆ ಎಷ್ಟು ಹಣ?

ಯಾವುದಕ್ಕೆ ಎಷ್ಟು ಹಣ?

ವರದಿಯು ತಿಳಿಸುವಂತೆ paytm_manshu ಅನ್ನುವ ಅಕೌಂಟ್ ವೊಂದರಲ್ಲಿ ಈ ಕೆಳಕಂಡಂತೆ ಬೆಲೆ ನಿಗದಿಸಲಾಗಿತ್ತು. 5 ನಿಮಿಷದ ವೀಡಿಯೋ ಕರೆಗೆ ರುಪಾಯಿ 100, 10 ನಿಮಿಷದ ವೀಡಿಯೋ ಕರೆಗೆ 150 ರುಪಾಯಿ, 30 ನಿಮಿಷಕ್ಕೆ 300 ರುಪಾಯಿ ಮತ್ತು ಒಂದು ಘಂಟೆಯ ಕರೆಗೆ 500 ರುಪಾಯಿ.

ವೀಡಿಯೋ ಇಲ್ಲದ ಕೇವಲ ಆಡಿಯೋ ಕರೆಗಳಿಗೆ ಬೇರೆಯದ್ದೇ ರೇಟ್ ಇರುತ್ತದೆ. ಅದಕ್ಕಾಗಿ ಗ್ರಾಹಕರು 200 ರುಪಾಯಿ ಪಾವತಿಸಬೇಕಾಗುತ್ತದೆ. ಒಂದು ಘಂಟೆಯ ಸೆಕ್ಸ್ ಚಾಟ್ ಜೊತೆಗೆ ಪಿಕ್ಚರ್ ಕಳುಹಿಸುವುದಕ್ಕೆ 150 ರುಪಾಯಿ ಪಾವತಿಸಬೇಕಾಗುತ್ತದೆ.ಪಾವತಿಯನ್ನು ಪೇಟಿಎಂ ಮೂಲಕ ಮಾಡುವಂತೆ ಕೋರಲಾಗುತ್ತದೆ. ಹಾಗಾಗಿಯೇ ಇವರಿಗೆ ಪೇಟಿಎಂ ಗರ್ಲ್ಸ್ ಎಂದು ಹೆಸರಿಸಲಾಗಿದೆ.

ಇನ್ಸ್ಟಾಗ್ರಾಂನ ಪ್ರತಿಕ್ರಿಯೆ:

ಇನ್ಸ್ಟಾಗ್ರಾಂನ ಪ್ರತಿಕ್ರಿಯೆ:

ಇನ್ಸ್ಟಾಗ್ರಾಂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸಾಮಾಜಿಕ ಜಾಲತಾಣವನ್ನು ಈ ರೀತಿ ಹೊಲಸು ಮಾಡುತ್ತಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿಗೆ ಮತ್ತು ಹ್ಯಾಷ್ ಟ್ಯಾಕ್ ಬಳಸಲಾಗಿರುವ ಇಮೇಜ್ ಗಳನ್ನು ಪರಿಶೀಲಿಸಲಾಗುವುದು ಮತ್ತು ಇನ್ಸ್ಟಾಗ್ರಾಂನ ನೀತಿ-ನಿಯಮಗಳನ್ನು ಉಲ್ಲಂಘನೆ ಮಾಡಿದ ಅಕೌಂಟ್ ಗಳನ್ನು ರಿಮೂವ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಯಾರ ಕೈವಾಡ:

ಯಾರ ಕೈವಾಡ:

ಈ ರೀತಿಯ ಮಾರಾಟ ಪ್ರಕ್ರಿಯೆಯಲ್ಲಿ ಸೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುವ ಮಂದಿ ಇದ್ದಾರೆಯೇ ಅಥವಾ ಸೈಬರ್ ಸ್ಕ್ಯಾಮರ್ ಮಾಡುತ್ತಿರುವ ಕುತಂತ್ರವೇ ಎಂದು ತಿಳಿಯಬೇಕಾಗಿದೆ. ಪೇಟಿಎಂ ಗರ್ಲ್ಸ್ ನ ಹೆಚ್ಚಿನ ಅಕೌಂಟ್ ಗಳಿಗೆ ಪುರುಷರೇ ಅಡ್ಮಿನ್ ಗಳಾಗಿದ್ದಾರೆ. ಇಂತಹ ಕೆಲವು ಅಕೌಂಟ್ ಗಳಿಗೆ ಪಬ್ಲಿಕೇಷನ್ ನವರು ಕರೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಇವೆಲ್ಲವೂ ಪುರುಷ ಅಡ್ಮಿನ್ ಗಳನ್ನು ಹೊಂದಿದೆ ಮತ್ತು ಅವರು ಆ ಅಕೌಂಟಿಗೆ ಸಂಬಂಧಿಸಿದವರ ಅಣ್ಣಂದಿರು ಎಂದು ಹೇಳಿದ್ದಾರೆ.

ಕಠಿಣ ಕ್ರಮದ ಅಗತ್ಯ:

ಒಟ್ಟಾರೆ ಭಾರತದಲ್ಲಿ ಈ ರೀತಿ ಸೆಕ್ಸ್ ಸಂಬಂಧಿ ವಿಚಾರಗಳ ಮಾರಾಟ ಮತ್ತು ವೇಶ್ಯಾವಾಟಿಕೆ ಕಾನೂನುಬಾಹಿರವಾಗಿದೆ. ಇನ್ಸ್ಟಾಗ್ರಾಂನಲ್ಲಿ ಇಂತಹ ಚಟುವಟಿಕೆಗಳು ನಡೆದರೆ ನಿಜವಾದ ಬಳಕೆದಾರರಿಗೆ ಕಿರಿಕಿರಿಯಾಗುವ ಸಾಧ್ಯತೆ ಇರುತ್ತದೆ. ಆ ನಿಟ್ಟಿನಲ್ಲಿ ಇನ್ಸ್ಟಾಗ್ರಾಂ ಒಂದು ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.


Best Mobiles in India

Read more about:
English summary
Rs 300 for 30-min video call, Paytm girls on Instagram sell phone sex, nude photos, raunchy chats to Indians

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X