Home
ಸುದ್ದಿಜಾಲ

ಏರ್‌ಟೆಲ್ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸಿದವರಿಗೆ 47 ಕೋಟಿ ಹಣ!..ಬೆಚ್ಚಿ ಬೀಳಿಸುವ ಶಾಕಿಂಗ್ ಸುದ್ದಿ!!

!. ಸರ್ಕಾರ ಸುಮಾರು 47 ಕೋಟಿ ರೂ. ಮೊತ್ತದ ಸಬ್ಸಿಡಿ ಹಣವನ್ನು ವಿವಿಧ ಗ್ರಾಹಕರ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಆದರೆ, ಆ ಫಲಾನುಭವಿ ಗ್ರಾಹಕರು ಏರ್‌ಟೆಲ್‌ನಲ್ಲಿ ಖಾತೆ ತೆರೆದೇ ಇಲ್ಲ.!!

By Bhaskar N J

ಆಧಾರ್ ನಂಬರ್ ಅನ್ನು ಏರ್‌ಟೆಲ್‌ ಫೋನ್ ಸಂಖ್ಯೆಗೆ ಲಿಂಕ್ ಮಾಡಿಸಿದ್ದವರಿಗೆ ಬಹುದೊಡ್ಡ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.!. ಸರ್ಕಾರ ಸುಮಾರು 47 ಕೋಟಿ ರೂ. ಮೊತ್ತದ ಸಬ್ಸಿಡಿ ಹಣವನ್ನು ವಿವಿಧ ಗ್ರಾಹಕರ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಆದರೆ, ಆ ಫಲಾನುಭವಿ ಗ್ರಾಹಕರು ಏರ್‌ಟೆಲ್‌ನಲ್ಲಿ ಖಾತೆ ತೆರೆದೇ ಇಲ್ಲ.!!

ಹೌದು, ಇಂತಹದೊಂದು ಭಯಾನಕ ಸತ್ಯವನ್ನು ದಿ ಸ್ಟೇಟ್ ಪತ್ರಿಕೆ ವರದಿ ಮಾಡಿದ್ದು, ಕಳೆದ ಜೂನ್‌ನಿಂದ ಈವರೆಗೆ ಸುಮಾರು 23 ಲಕ್ಷ ಸಬ್ಸಿಡಿ ಅಡುಗೆ ಅನಿಲ ಬಳಕೆದಾರರಿಗೆ ಸೇರಿದ ಸುಮಾರು 47 ಕೋಟಿ ಮೊತ್ತದ ಸಬ್ಸಿಡಿ ಹಣ (ಸುಮಾರು 41 ಲಕ್ಷ ವಹಿವಾಟು) ಜನರಿಗೆ ತಿಳಿಯದಂತೆ ಏರ್‌ಟೆಲ್‌ ಬ್ಯಾಂಕ್ ವಿವಿಧ ಖಾತೆಗೆ ಜಮಾ ಆಗಿರುವ ಬಗ್ಗೆ ವರದಿಯಲ್ಲಿ ಹೇಳಿದೆ.!!

ಕಳೆದ ಐದು ತಿಂಗಳಿನಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಅಡುಗೆ ಅನಿಲ ಸಬ್ಸಿಡಿ ಹಣ ಪಾವತಿಯಾಗಿಲ್ಲ ಎಂದು ದೇಶಾದ್ಯಂತ ಹಲವು ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿಬಂದ ಜೊತೆಗೆ ಈ ಎಡವಟ್ಟು ಬೆಳಕಿಗೆ ಬಂದಿದ್ದು, ಏರಟೆಲ್ ಮೇಲೆ ತೂಗುಕತ್ತಿ ನೇತಾಡುತ್ತಿದೆ.!! ಹಾಗಾದರೆ, ಏನಿದು ವರದಿ? ಇದು ಏರ್‌ಟೆಲ್ ಮಾಡಿದ ಮೋಸವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏರ್‌ಟೆಲ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದೇ ಇಲ್ಲ.!!

ಏರ್‌ಟೆಲ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದೇ ಇಲ್ಲ.!!

23 ಲಕ್ಷ ಸಬ್ಸಿಡಿ ಅಡುಗೆ ಅನಿಲ ಬಳಕೆದಾರರಿಗೆ ಸೇರಿದ ಸುಮಾರು 47 ಕೋಟಿ ಮೊತ್ತದ ಸಬ್ಸಿಡಿ ಹಣ ಏರ್‌ಟೆಲ್ ಬ್ಯಾಂಕ್‌ಗೆ ಹೋಗಿಬಿದ್ದಿದೆ. ಆದರೆ, ಸಬ್ಸಿಡಿ ಹಣ ಪಡೆದವರು ಏರ್‌ಟೆಲ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದೇ ಇಲ್ಲ.! ಆದರೆ, ಅವರಿಗೆ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ನಲ್ಲಿ ಅವರ ಅಕೌಂಟ್ ಶುರುವಾಗಿದೆ.!!

ಏರ್‌ಟೆಲ್‌ ಫೋನ್ ಸಂಖ್ಯೆಗೆ ಆಧಾರ್ ಲಿಂಕ್!!

ಏರ್‌ಟೆಲ್‌ ಫೋನ್ ಸಂಖ್ಯೆಗೆ ಆಧಾರ್ ಲಿಂಕ್!!

ಏರ್‌ಟೆಲ್ ಗ್ರಾಹಕರಿಗೆ ಗೊತ್ತಿಲ್ಲದಂತೆ ಅವರ ಏರ್‌ಟೆಲ್ ಬ್ಯಾಂಕ್ ಅಕೌಂಟ್ ಶುರುವಾಗಲು ಕಾರಣ ಏರ್‌ಟೆಲ್‌ ಫೋನ್ ಸಂಖ್ಯೆಗೆ ಆಧಾರ್ ಲಿಂಕ್! ಹೌದು, ಏರ್‌ಟೆಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡುವಾಗ ಏರ್‌ಟೆಲ್ ಗ್ರಾಹಕರಿಂದ ಅವರಿಗೆ ತಿಳಿಯದೆ ಅವರ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆದಿದೆ ಎನ್ನಲಾಗಿದೆ.!!

ಸಬ್ಸಿಡಿ ಹಣ ಏರ್‌ಟೆಲ್ ಪೇಮೆಂಟ್‌ಗೆ ಬಿದ್ದಿದ್ದೇಕೆ?

ಸಬ್ಸಿಡಿ ಹಣ ಏರ್‌ಟೆಲ್ ಪೇಮೆಂಟ್‌ಗೆ ಬಿದ್ದಿದ್ದೇಕೆ?

ಆಧಾರ್ ಸಂಬಂಧಿತ ಪಾವತಿಗಳು ಮತ್ತು ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅನಿಲ ಸಬ್ಸಿಡಿ ಹಣ ಪಾವತಿ ಮಾಡುತ್ತದೆ. ಹಾಗೆ ಮಾಡುವಾಗ ಕೊನೆಯಲ್ಲಿ ಆಧಾರ್ ಲಿಂಕ್ ಆದ ಬ್ಯಾಂಕ್ ಅಕೌಂಟ್‌ಗೆ ಹಣ ಹಾಕುವುದರಿಂದ ಸಬ್ಸಿಡಿ ಹಣ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ ಖಾತೆಗ ಜಮಾ ಆಗಿದೆ.!!

ಏರ್‌ಟೆಲ್ ಪೇಮೆಂಟ್ ಖಾತೆ ತೆರೆದದ್ದು ಹೇಗೆ?

ಏರ್‌ಟೆಲ್ ಪೇಮೆಂಟ್ ಖಾತೆ ತೆರೆದದ್ದು ಹೇಗೆ?

ಏರ್‌ಟೆಲ್‌ ರೀಟೇಲ್ ಕೌಂಟರಿನಲ್ಲಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಯ ವೇಳೆ, ಹೊಸ ಬ್ಯಾಂಕ್ ಖಾತೆ ತೆರೆಯುವ ಸಂಬಂಧ ನೀಡುವ ಆಯ್ಕೆಗೆ ‘ಹೌದು' ಎಂದು ಕ್ಲಿಕ್ ಮಾಡಿ, ಆಧಾರ್ ಸಂಬಂಧಿತ ಪಾವತಿಗಳನ್ನು ಈ ಖಾತೆಗೆ ಜೋಡಿಸಿ ಎಂಬ ಮತ್ತೊಂದು ಆಯ್ಕೆಯನ್ನು ಕ್ಲಿಕ್ ಮಾಡಿದರೆ ಏರ್‌ಟೆಲ್‌ ಬ್ಯಾಂಕ್ ಖಾತೆ ತೆರೆಯುತ್ತದೆ.!!

ಇದಕ್ಕೆ ಏರ್‌ಟೆಲ್ ಹೇಳಿದ್ದೇನು?

ಇದಕ್ಕೆ ಏರ್‌ಟೆಲ್ ಹೇಳಿದ್ದೇನು?

ಇಷ್ಟೆಲ್ಲಾ ಘಟನೆ ನಡೆದ ನಂತರ ಈ ವಿವಾದದಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಏರ್‌ಟೆಲ್‌ ಹೇಳಿದೆ. ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಲು ಆಧಾರ್ ಕಾರ್ಡು ಮತ್ತು ತಮ್ಮ ಬೆರಳಚ್ಚು ನೀಡಿದ ತನ್ನ ಗ್ರಾಹಕರ ಹೆಸರಿನಲ್ಲಿ ಏರ್‌ಟೆಲ್‌ ರೀಟೇಲ್ ಔಟ್‌ಲೆಟ್‌ಗಳು ಏರ್‌ಟೆಲ್‌ ಬ್ಯಾಂಕ್ ಖಾತೆಗಳನ್ನೂ ತೆರೆದಿವೆ ಎಂದು ಸ್ಪಷ್ಟನೆ ನೀಡಿದೆ.!!

ಇಲ್ಲಿ ಯಾರದ್ದು ತಪ್ಪು?

ಇಲ್ಲಿ ಯಾರದ್ದು ತಪ್ಪು?

ಏರ್‌ಟೆಲ್ ಗ್ರಾಹಕರ ಅನುಮತಿಯನ್ನೂ ಪಡೆಯದೆ ಅವರ ಗಮನಕ್ಕೇ ತರದೆ ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ವಿವಾದದಲ್ಲಿ ಏರ್‌ಟೆಲ್‌ ರೀಟೇಲ್ ಔಟ್‌ಲೆಟ್‌ಗಳ ಮೇಲೆ ಗೂಬೆ ಕೂರಿಸಲಾಗಿದೆಯಾದರೂ ಏರ್‌ಟೆಲ್ ಅವುಗಳಿಗೆ ಸರಿಯಾದ ಮಾಹಿತಿ ನೀಡದೆ ಆಧಾರ್ ಲಿಂಕ್ ಮಾಡುವ ಸೌಲಭ್ಯ ನೀಡಿರುವುದರಿಂದ ಇಲ್ಲ ಏರ್‌ಟೆಲ್ ತಪ್ಪಿತಸ್ಥನಾಗಿದೆ.!!

ಸರ್ಕಾರದ್ದು ಕೂಡ ತಪ್ಪಿದೆ.!!

ಸರ್ಕಾರದ್ದು ಕೂಡ ತಪ್ಪಿದೆ.!!

ಆಧಾರ್ ಸಂಬಂಧಿತ ಪಾವತಿಗಳು ಮತ್ತು ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಶೀಘ್ರದಲ್ಲಿ ಆಧಾರ್ ಲಿಂಕ್ ಆದ ಬ್ಯಾಂಕ್‌ ಅಕೌಂಟ್‌ಗೆ ಹಣ ಪಾವತಿ ಮಾಡಲಿದೆ. ಆದರೆ, ಅಕೌಂಟ್ ತೆರೆದಿರುವ ಬ್ಯಾಂಕ್ ಬಗ್ಗೆ ಪೂರ್ವಾಪರ ವಿಚಾರಿಸದೆ ಹಣ ಪಾವತಿ ಮಾಡುವ ಕೆಲಸ ಮೂರ್ಖತನದ್ದು ಎನ್ನಬಹುದು.!! ಹಾಗಾಗಿ, ನೀವು ಏರ್‌ಟೆಲ್ ಬಳಕೆದಾರರಾಗಿದ್ದು, ಸಬ್ಸಿಡಿ ಹಣ ಸಿಕ್ಕಿಲ್ಲ ಅಂದರೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ವಿಚಾರಿಸಿ!!

Best Mobiles in India

English summary
More than 23 lakh customers have received cooking gas subsidy of Rs 47 crore in their respective Airte Bank accounts. to kn ow more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+