ಜಿಯೋದಲ್ಲೂ ಈ ಆಫರ್ ಇಲ್ಲ: ಕೇವಲ 7 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು 4G ಡೇಟಾ..!

Written By:

ಜಿಯೋ ಸಹ ನೀಡಲು ಸಾಧ್ಯವಿಲ್ಲದಂತಹ ಆಫರ್ ವೊಂದನ್ನು ವೊಡಾಫೋನ್ ನೀಡಲು ಮುಂದಾಗಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಸಾರವಾಗಿ ಡೇಟಾ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಯಾವುದೇ ಮಿತಿ ಇಲ್ಲದೇ ಅತೀ ಕಡಿಮೆ ಬೆಲೆಗೆ ನೀಡುವ ಆಫರ್ ಘೋಷಣೆ ಮಾಡಿದೆ.

ಓದಿರಿ: ನಾಳೆಯಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆರಂಭ: ಶೇ. 40-70 ವರೆಗೂ ಕಡಿತ.!!

ಜಿಯೋದಲ್ಲೂ ಈ ಆಫರ್ ಇಲ್ಲ: ಕೇವಲ 7 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು 4G ಡೇಟಾ..!!

ಅನಿಯಮಿತ ಡೇಟಾ ಮತ್ತು ಕರೆಗಳನ್ನು ನೀಡುವ ಆಫರ್ ಬಿಡುಗಡೆ ಮಾಡಿರುವ ವೊಡಾಫೋನ್, ಕೇವಲ ಗಂಟೆಗಳ ಆಧಾರದ ಮೇಲೆ ಕೇವಲ 7 ರೂ.ಗೆ ಅನಿಯಮಿತ 4G ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಪರ್ ಅವರ್- ಆನ್‌ಲಿಮಿಟೆಡ್ ಕರೆ

ಸುಪರ್ ಅವರ್- ಆನ್‌ಲಿಮಿಟೆಡ್ ಕರೆ

ವೊಡಾಫೋನ್ ತನ್ನ ಪ್ರೀಪೇಯ್ಡ್ ಮತ್ತು ಫೋಸ್ಟ್ ಪೇಯ್ಡ್ ಬಳಕೆದಾರಿಗೆ ರೂ.7ಗೆ ಒಂದು ಗಂಟೆಕಾಲ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದು ವೊಡಾಫೋನ್ ಟು ವೊಡಾಫೋನ್ ನಡುವೆ ಮಾತ್ರವೇ ಎನ್ನಲಾಗಿದೆ.

ಸುಪರ್ ಅವರ್- ಆನ್‌ಲಿಮಿಟೆಡ್ ಡೇಟಾ

ಸುಪರ್ ಅವರ್- ಆನ್‌ಲಿಮಿಟೆಡ್ ಡೇಟಾ

ಇದಲ್ಲದೇ ಇನ್ನೊಂದು ವೊಡಾಫೋನ್ ಆಫರ್ ಇದ್ದು, ಇದರಲ್ಲಿ ಒಂದು ಗಂಟೆಗಳ ಕಾಲದಲ್ಲಿ ಉಚಿತ 4G 3G ಡೇಟಾವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ರೂ.21 ದರವನ್ನು ವಿಧಿಸಿದೆ.

4G ಹ್ಯಾಂಡ್ ಸೆಟ್ ಬೇಕಾಗಿಲ್ಲ:

4G ಹ್ಯಾಂಡ್ ಸೆಟ್ ಬೇಕಾಗಿಲ್ಲ:

ಜಿಯೋ ನಂತರದಲ್ಲಿ ಎಲ್ಲಾ ಕಂಪನಿ 4G ಹ್ಯಾಂಡ್ ಸೆಟ್ ಇದ್ದವರಿಗೆ ಮಾತ್ರವೇ ಆಫರ್ ನೀಡುವುದಾಗಿ ಷರತ್ತು ವಿಧಿಸುತ್ತಿದ್ದರೂ, ಆದರೆ ಈ ಆಫರ್ 3G ಇಂಟರ್ನೆಟ್ ಆಯ್ಕೆಯನ್ನು ನೀಡಿರುವುದು ಗ್ರಾಹಕರಿಗೆ ಲಾಭವಾಗಲಿದೆ.

ಬಳಕೆಗೆ ಮಿತಿ ಇಲ್ಲ:

ಬಳಕೆಗೆ ಮಿತಿ ಇಲ್ಲ:

ಈ ಆಫರ್ ಗಳು ಕೇವಲ ಒಂದು ಗಂಟೆ ಅವಧಿಗೆ ಮಾತ್ರವೇ ಸೀಮಿತವಾಗಿದ್ದು, ಆ ಅವಧಿಯಲ್ಲಿ ಬಳಕೆದಾರರು ಏಷ್ಟು ಬೇಕಾದರು ಸಹ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ. ಅದಕ್ಕೆ ಯಾವುದೇ ಮಿತಿಯನ್ನು ವೊಡಾಫೋನ್ ವಿಧಿಸಿಲ್ಲ.

ಆಫರ್ ಪಡೆಯುವುದು ಹೇಗೆ:

ಆಫರ್ ಪಡೆಯುವುದು ಹೇಗೆ:

ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಬಳಕೆದಾರು ಈ ಆಫರ್ ಗಳ ಲಾಭವನ್ನು ಪಡೆಯಬಹುದಾಗಿದೆ. ಇದಕ್ಕಾಗಿ *444*21# ಡಯಲ್ ಮಾಡುವ ಮೂಲಕ ತಮಗೆ ಬೇಕಾದ ಆಫರ್ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Vodafone launched some hourly packs called ‘SuperHours’ that allowed a user to get unlimited data for one hour. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot