ಇನ್ಮುಂದೆ ಆನ್‌ಲೈನ್‌ನಲ್ಲಿ ಔಷಧ ಖರೀದಿ ಸುಲಭವಲ್ಲ...ವ್ಯವಹಾರ ಹೀಗಿರಲಿದೆ!!

medicines, epharmacy, online, ಆನ್‌ಲೈನ್‌, ಇಫಾರ್ಮಸಿ, ಔಷಧ, news

|

ಭಾರೀ ರಿಯಾಯಿತಿ ದರದಲ್ಲಿ ಆನ್‌ಲೈನ್‌ನಲ್ಲಿ ಔಷಧಗಳನ್ನು ಖರೀದಿಸುತ್ತಿದ್ದ ಸಾರ್ವಜನಿಕರಿಗೆ ಇನ್ಮುಂದೆ ನಿರಾಶೆ ಕಾದಿದೆ. ಆನ್‌ಲೈನ್‌ನಲ್ಲಿ ಔಷಧ ಮಾರಾಟ ವ್ಯವಸ್ಥೆಯ ಜನಪ್ರಿಯತೆ ಹೆಚ್ಚಾದ ನಂತರ 'ಇ-ಫಾರ್ಮಸಿ'ಗಳನ್ನು ಕಾನೂನುಬದ್ಧಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾಗಿ, ಇನ್ಮುಂದೆ ಆನ್‌ಲೈನ್ 'ಇ-ಫಾರ್ಮಸಿ' ವ್ಯವಹಾರ ಕಷ್ಟವಾಗಲಿದೆ.

ಸದ್ಯ ದೇಶದಲ್ಲಿ ಆನ್‌ಲೈನ್‌ ಮೂಲಕ ಔಷಧ ಮಾರಾಟ ಮಾಡುವುದು ಕಾನೂನುಬದ್ಧವಲ್ಲವಾಗಿರುವುದರಿಂದ ಇ-ಫಾರ್ಮಸಿ ಮೂಲಕ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಲು 'ಔಷಧ ಮತ್ತು ಸೌಂದರ್ಯವರ್ಧಕ ನಿಯಂತ್ರಣ ಕಾಯ್ದೆ(1945)'ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಈ ಕಾಯ್ದೆ ತಿದ್ದುಪಡಿಗೆ ಕರಡು ನಿಯಮಾವಳಿಗಳನ್ನೂ ಬಿಡುಗಡೆ ಮಾಡಿದೆ.

ಇನ್ಮುಂದೆ ಆನ್‌ಲೈನ್‌ನಲ್ಲಿ ಔಷಧ ಖರೀದಿ ಸುಲಭವಲ್ಲ...ವ್ಯವಹಾರ ಹೀಗಿರಲಿದೆ!!

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವಾರ ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ಕಾನೂನುಬದ್ಧಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸಿದೆ. ಹಾಗಾಗದರೆ, ಇನ್ಮುಮದೆ ಆನ್‌ಲೈನಿನಲ್ಲಿ 'ಇ-ಫಾರ್ಮಸಿ' ವ್ಯವಹಾರ ಹೇಗಿರಲಿದೆ ಎಂಬುದನ್ನು ಮುಂದೆ ಒದಿ ತಿಳಿಯಿರಿ.

‘ಇ–ಫಾರ್ಮಸಿ’ಗೆ ಹೊಸ ಹೆಸರು!

‘ಇ–ಫಾರ್ಮಸಿ’ಗೆ ಹೊಸ ಹೆಸರು!

ಆನ್‌ಲೈನಿನಲ್ಲಿ ಔಷಧ ಮಾರಾಟ ಮಾಡುವ ವಿಧಾನಕ್ಕೆ ಹೊಸ ವ್ಯಾಖ್ಯಾನವನ್ನು ನೀಡಲಾಗಿದೆ. ಆನ್‌ಲೈನ್, ವೆಬ್‌ ಪೋರ್ಟಲ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಮೂಲಕ ಔಷಧ ಮಾರಾಟ, ವಿತರಣೆ, ಸಂಗ್ರಹ, ಸರಬರಾಜು ವಹಿವಾಟು ನಡೆಸುವ ತಾಣ' ಎಂದು ಇ-ಫಾರ್ಮಸಿಯನ್ನು ಹೊಸದಾಗಿ ವ್ಯಾಖ್ಯಾನಿಸಲಾಗಿದೆ.

ಕಳಪೆಗೆ ಶಿಕ್ಷೆ ಮತ್ತು ಪರಿಹಾರ!

ಕಳಪೆಗೆ ಶಿಕ್ಷೆ ಮತ್ತು ಪರಿಹಾರ!

ಆನ್‌ಲೈನಿನಲ್ಲಿ ಔಷಧ ಮಾರಾಟಕ್ಕಿರುವ ಬಹುದೊಡ್ಡ ಸಮಸ್ಯೆ ಕಳಪೆ ದರ್ಜೆ ಅಥವಾ ಕಲಬೆರಕೆ ಔಷಧಗಳನ್ನು ತಡೆಯಲು ಆರೋಗ್ಯ ಸಚಿವಾಲಯ ಮುಂದಾಗಿದೆ. ಒಂದು ವೇಳೆ ಆನ್‌ಲೈನ್‌ ವೆಬ್‌ಸೈಟ್‌ಗಳು ಕಳಪೆ ದರ್ಜೆ ಅಥವಾ ಕಲಬೆರಕೆ ಔಷಧಗಳನ್ನು ಮಾರಾಟ ಮಾಡಿದರೆ, ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಪರಿಹಾರ ಪಡೆಯಬಹುದಾಗಿದೆ.

ಮಾದಕ ಔಷಧಗಳು ಬ್ಯಾನ್.

ಮಾದಕ ಔಷಧಗಳು ಬ್ಯಾನ್.

ಆನ್‌ಲೈನಿನಲ್ಲಿ ಫಾರ್ಮಸಿಯಲ್ಲಿ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ ಔಷಧಗಳ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಶೆಡ್ಯೂಲ್‌ 10 ಪಟ್ಟಿಯಲ್ಲಿ ಸೂಚಿಸಲಾಗಿರುವ ಉಪಶಮನಕಾರಿ, ನಿದ್ರೆ, ಉದ್ವೇಗ, ಉದ್ರೇಕ, ಖಿನ್ನತೆ ಮತ್ತು ಒತ್ತಡ ನಿವಾರಿಸುವ ಮಾತ್ರೆಗಳ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.

ವೈದ್ಯರ ಸಲಹೆ ಇಲ್ಲದೆ ಮಾತ್ರೆ ಇಲ್ಲ!

ವೈದ್ಯರ ಸಲಹೆ ಇಲ್ಲದೆ ಮಾತ್ರೆ ಇಲ್ಲ!

ಆನ್‌ಲೈನಿನಲ್ಲಿಯೂ ಕೂಡ ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ವೈದ್ಯರ ಸಲಹಾ ಚೀಟಿಯನ್ನು ದಾಖಲೆಯಂತೆ ಕಾಪಾಡುವುದು ಕಡ್ಡಾಯ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವೈದ್ಯರು ಮತ್ತು ರೋಗಿಯ ಮಾಹಿತಿಗಳನ್ನು ಪರಿಶೀಲಿಸುವ ಹೊಣೆ ಆನ್‌ಲೈನ್‌ ಔಷಧ ಮಾರಾಟ ಸಂಸ್ಥೆಗಳದ್ದಾಗಿರುತ್ತದೆ.

ಸಮಗ್ರ ಮಾಹಿತಿ ಸಿಗಬೇಕು.!

ಸಮಗ್ರ ಮಾಹಿತಿ ಸಿಗಬೇಕು.!

ಭಾರತದಲ್ಲಿ ಈಗಷ್ಟೇ ಅಭಿವೃದ್ದಿಯಾಗುತ್ತಿರುವ ಇ-ಫಾರ್ಮಸಿ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ತೆರದಿಡುವಂತೆ ಸೂಚಿಸಲಾಗಿದೆ. ಔಷಧ ಮಾರಾಟದ ಸಮಗ್ರ ಮಾಹಿತಿಯನ್ನು ಇ-ಫಾರ್ಮಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯ ಎಂದು ಸೂಚಿಸಲಾಗಿದೆ.

Best Mobiles in India

English summary
These are the draft rules of the government for the sale of medicines through e-pharmacy. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X