ಮೋದಿ ವಿರುದ್ಧ ಟ್ರಂಪ್‌ಗೆ ದೂರು ನೀಡಿದ ಮಾಸ್ಟರ್‌ಕಾರ್ಡ್‌!..ಏಕೆ ಗೊತ್ತಾ?

|

ಒಂದು ಕಾಲದಲ್ಲಿ ಕೇವಲ ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳಿಗೆ ಸೀಮಿತವಾಗಿದ್ದ ಆನ್‌ಲೈನ್ ವ್ಯವಹಾರಗಳನ್ನು ಸ್ವದೇಶಿ ರುಪೇ ಕಾರ್ಡ್ ಕಬಳಿಸುತ್ತಿರುವುದು ನಿಮಗೆಲ್ಲಾ ಈಗಾಗಲೇ ತಿಳಿಸಿದೆ. ಇದೇ ವಿಷಯದಲಲ್ಲಿ ಪ್ರಧಾನಿ ಮೋದಿಯವರು ದೇಶಭಕ್ತಿಯ ಹೆಸರಿನಲ್ಲಿ ರುಪೇ ಕಾರ್ಡ್ ಅನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಇದರಿಂದ ನಮ್ಮ ಕಾರ್ಡ್‌ ಬಿಸಿನೆಸ್‌ಗೆ ಹೊಡೆತ ಬೀಳುತ್ತಿದೆ ಎಂದು ಮಾಸ್ಟರ್‌ಕಾರ್ಡ್‌ ಸಂಸ್ಥೆ ಅಮೆರಿಕದ ಟ್ರಂಪ್ ಸರಕಾರಕ್ಕೆ ದೂರು ನೀಡಿದೆ.

ಹೌದು, ಕೇವಲ 6 ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಭಾರತದ ರುಪೇ ಕಾರ್ಡ್‌, ಎಲ್ಲರೂ ಅಚ್ಚರಿಗೀಡಾಗುವಂತೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅಮೆರಿಕ ಮೂಲದ ಅಂತಾರಾಷ್ಟ್ರೀಯ ದಿಗ್ಗಜ ಕಾರ್ಡ್‌ ಕಂಪನಿಗಳಾದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ಗೂ ಈ ಬೆಳವಣಿಗೆ ನಡುಕ ಹುಟ್ಟಿಸಿದೆ. ಈ ಸಮಯದಲ್ಲಿ ರುಪೇ ಕಾರ್ಡ್‌ ಬಳಸುವ ಮೂಲಕ ದೇಶಸೇವೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟಿರುವುದು ಅವುಗಳಿಗೆ ನುಂಗಲಾರದ ತುತ್ತಾಗಿದೆ.

ಮೋದಿ ವಿರುದ್ಧ ಟ್ರಂಪ್‌ಗೆ ದೂರು ನೀಡಿದ ಮಾಸ್ಟರ್‌ಕಾರ್ಡ್‌!..ಏಕೆ ಗೊತ್ತಾ?

ಕೇವಲ 6 ವರ್ಷಗಳಲ್ಲಿ ಹುಟ್ಟಿದ ದೇಶದ ರುಪೇ ಕಾರ್ಡ್ ಈಗಾಗಲೇ 50 ಕೋಟಿಯಷ್ಟು ಬಳಕೆಯಾಲ್ಲಿದ್ದು, ವಿದೇಶಿ ಕಂಪನಿಗಳಿಗೆ ಗ್ರಾಹಕರ ಸಂಖ್ಯೆ ಸಾಕಷ್ಟು ಇಳಿದಿದೆ.ಈ ಸಮಯದಲ್ಲೇ ಪ್ರಧಾನಿ ಮೋದಿಯವರು ರುಪೇ ಕಾರ್ಡ್ ಬಳಸಲು ಕರೆಕೊಟ್ಟಿರುವುದು ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ಗಳಿಗೆ ಭಯ ಉಂಟುಮಾಡಿದೆ. ಹಾಗಾಗಿ, ಹಾಗಾದರೆ, ಏನಿದು ವರದಿ? ಮಾಸ್ಟರ್‌ಕಾರ್ಡ್‌ ಸಂಸ್ಥೆ ಮೋದಿಯವರ ವಿರುದ್ಧ ಏನೆಂದು ದೂರು ಸಲ್ಲಿಸಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಪ್ರಧಾನಿ ಮೋದಿ ಏನೆಂದಿದ್ದರು?

ಪ್ರಧಾನಿ ಮೋದಿ ಏನೆಂದಿದ್ದರು?

ಈಗ ಭಾರತದಲ್ಲಿ 50 ಕೋಟಿ ರುಪೇ ಕಾರ್ಡ್‌ ಜನರ ಜೇಬಿನಲ್ಲಿದೆ.ನಾವು ವಿದೇಶಿ ಮೂಲದ ಕಾರ್ಡ್‌ಗಳನ್ನು ಬಳಸಿದರೆ, ಅದಕ್ಕೆ ತಗಲುವ ಶುಲ್ಕ ವಿದೇಶಕ್ಕೆ ಹೋಗುತ್ತದೆ. ಆದರೆ ರುಪೇ ಕಾರ್ಡ್‌ ಬಳಸಿದರೆ ನಮ್ಮ ದೇಶದಲ್ಲೇ ದುಡ್ಡು ಇರುತ್ತದೆ. ಅದರಿಂದ ಸರಕಾರ ಗಳಸುವ ಆದಾಯವನ್ನು ಸಾರ್ವಜನಿಕ ಆಸ್ಪತ್ರೆ, ಬಡವರಿಗೆ ಶಿಕ್ಷಣ, ಗ್ರಾಮಗಳಲ್ಲಿ ಮೂಲ ಸೌಕರ್ಯ ಇತ್ಯಾದಿಗಳಿಗೆ ಖರ್ಚು ಮಾಡಬಹುದು. ಇನ್ನು ಎಲ್ಲರಿಗೂ ಗಡಿಗೆ ತೆರಳಿ ದೇಶ ಕಾಯಲು ಸಾಧ್ಯವಾಗದು. ಆದರೆ ರುಪೇ ಕಾರ್ಡ್‌ ಬಳಸಿಯೂ ದೇಶ ಸೇವೆ ಮಾಡಬಹುದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.

 ಮಾಸ್ಟರ್‌ ಕಾರ್ಡ್‌ಗೆ ಆತಂಕ!

ಮಾಸ್ಟರ್‌ ಕಾರ್ಡ್‌ಗೆ ಆತಂಕ!

ಪ್ರಧಾನಿ ಮೋದಿಯವರು ದೇಶಭಕ್ತಿಯ ಹೆಸರಿನಲ್ಲಿ ರುಪೇ ಕಾರ್ಡ್ ಅನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದ್ದು ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ಗಳಿಗೆ ಆತಂಕ ಶುರುವಾಗಿದೆ. ದೇಶದ ಪ್ರಧಾನಿಯವರೇ ಹೀಗೆ ಹೇಳಿದರೆ ತನ್ನ ಮತ್ತಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಭಯ ಈ ಎರಡು ಕಂಪೆನಿಗಳನ್ನು ಆವರಿಸಿದೆ. ರುಪೇ ಕಾರ್ಡ್‌ ಬಳಸಿ ದೇಶ ಸೇವೆ ಮಾಡಬಹುದು ಎಂಬ ಮಾತುಗಳು ಖಂಡಿತವಾಗಿ ಜನರ ಮನಸನ್ನು ಸೆಳೆಯುತ್ತವೆ ಎಂಬುದು ಅವುಗಳ ನಂಬಿಕೆ. ಹಾಗಾಗಿ, ವ್ಯವಹಾರ ಮತ್ತು ಸೇವೆಯಲ್ಲಿ ದೇಶಭಕ್ತಿಯಂತಹ ಭಾವನಾತ್ಮಕ ವಿಷಯಗಳನ್ನು ತರುತ್ತಿರುವುದನ್ನು ಮಾಸ್ಟರ್ ಕಾರ್ಡ್ ವಿರೋಧಿಸಿ ದೂರನ್ನು ಸಲ್ಲಿಸಿದೆ.

ರುಪೇ ಮೈಲುಗಲ್ಲು

ರುಪೇ ಮೈಲುಗಲ್ಲು

2012 ಮಾರ್ಚ್‌ ತಿಂಗಳಿನಲ್ಲಿ ಚಾಲನೆ ಪಡೆದಿದ್ದ ರುಪೇ ಕಾರ್ಡ್, 2014, ಮೇ ತಿಂಗಳಿನಲ್ಲಿ ರಾಷ್ಟ್ರಪತಿಯವರಿಂದ ಲೋಕಾರ್ಪಣೆಯಾಯಿತು. 2014, ಜುಲೈ ತಿಂಗಳಿನಲ್ಲಿ ರುಪೇ ಪ್ಲಾಟಿನಮ್‌ ಕಾರ್ಡ್‌ ಬಿಡುಗಡೆಯಾಯ್ತು. 2017, ಮಾರ್ಚ್‌ ವೇಳೆ 700ಕ್ಕೂ ಹೆಚ್ಚು ಬ್ಯಾಂಕ್‌ಗಳಲ್ಲಿ ರುಪೇ ಸೌಲಭ್ಯ ಸಿಗುತ್ತಿದೆ. 2018 ಜುಲೈ ವೇಳೆಗೆ 50 ಕೋಟಿಗೂ ಅಧಿಕ ರುಪೇ ಕಾರ್ಡ್‌ಗಳು ಬಳಕೆಯಾಗುತ್ತಿವೆ. 2018, ಜುಲೈ ತಿಂಗಳ ವೇಳೆಗೆ ಮಾಸಿಕ 26 ಕೋಟಿ ಪೇಮೆಂಟ್‌ಗಳು ನಡೆದಿವೆ. ಇದು ರುಪೇ ಬೆಳವಣಿಗೆಯ ಒಂದು ಕಿರುನೋಟವಾಗಿದೆ.

ರುಪೇ ಕಾರ್ಡ್ ಪ್ರಯೋಜನಗಳು

ರುಪೇ ಕಾರ್ಡ್ ಪ್ರಯೋಜನಗಳು

ವಿದೇಶಿ ಡೆಬಿಟ್‌ ಕಾರ್ಡ್‌ಗೆ ಹೋಲಿಸಿದರೆ, ರುಪೇ ಕಾರ್ಡ್‌ನಲ್ಲಿ ಪೇಮೆಂಟ್‌ಗೆ ತಗಲುವ ವೆಚ್ಚ 2/3ರಷ್ಟು ಅಗ್ಗ. ಈ ಕಾರ್ಡ್ ಮೂಲಕ ಕಡಿಮೆ ವೆಚ್ಚ ಮತ್ತು ನಿರ್ವಹಣಾ ಸಾಮರ್ಥ್ಯ ವ್ಯವಹಾರ ಪ್ರಕ್ರಿಯೆ ದೇಶಿಯವಾಗಿ ನಡೆಯುವುದರಿಂದ ಕಡಿಮೆ ವೆಚ್ಚದಲ್ಲಿ ವಹಿವಾಟು ನಡೆಸಬಹುದು. ರುಪೇ ಕಾರ್ಡ್ ಬಳಕೆಯಿಂದ ವ್ಯವಹಾರ ಕೈಗೆಟಕುವ ವೆಚ್ಚದಲ್ಲಿ ನಡೆಸಬಹುದಾಗಿದ್ದು, ಉದ್ಯಮದಲ್ಲಿ ಕಾರ್ಡ್ ಬಳಕೆ ಹೆಚ್ಚಿಸಬಹುದು. ಈ ದೇಶಿಯ ಯೋಜನೆ ಕಸ್ಟಮೈಸ್ಡ್ ಉತ್ಪನ್ನಗಳ ಅಭಿವೃದ್ಧಿಗೆ ಬದ್ದವಾಗಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ಒದಗಿಸುತ್ತದೆ. ಇನ್ನು ಗ್ರಾಹಕರ ಮಾಹಿತಿ ದುರುಪಯೋಗಕ್ಕೆ ಇಲ್ಲಿ ಅವಕಾಶವಿರುವುದಿಲ್ಲ.

ರುಪೇ ಕಾರ್ಡ್‌ ಎಲ್ಲಿ ಸಿಗುತ್ತದೆ?

ರುಪೇ ಕಾರ್ಡ್‌ ಎಲ್ಲಿ ಸಿಗುತ್ತದೆ?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಸಿಟಿ ಬ್ಯಾಂಕ್‌ ಮತ್ತು ಎಚ್‌ಎಸ್‌ಬಿಸಿಯನ್ನು ರುಪೇ ಕಾರ್ಡ್‌ ವಿತರಣೆಗೆ 10 ಪ್ರಮುಖ ಬ್ಯಾಂಕ್‌ಗಳೆಂದು ಎನ್‌ಪಿಸಿಐ ಗುರುತಿಸಿದೆ. ಮಾತ್ರವಲ್ಲದೆ ಎಲ್ಲ ಪ್ರಮುಖ ಪಿಎಸ್‌ಯು ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳು ರುಪೇ ಕಾರ್ಡ್‌ ವಿತರಿಸುತ್ತಿವೆ.

Best Mobiles in India

Read more about:
English summary
RuPay: How a six-year-old card gave the scare to global biggies such as Visa and Mastercard. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X