'ಡೆಬಿಟ್ ಕಾರ್ಡ್' ಬದಲಾಯಿಸಿ ಎಂಬ ಸಂದೇಶ ಬಂದರೆ ನಿರ್ಲಕ್ಷಿಸಬೇಡಿ!..ಇಲ್ಲಿ ನೋಡಿ!!

|

ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ ಎಂದು ಪದೇ ಪದೇ ಬ್ಯಾಂಕ್ ಸಂದೇಶಗಳು ಮೊಬೈಲ್‌ಗೆ ಬರುತ್ತಿದ್ದರೆ ನಿರ್ಲಕ್ಷಿಸಬೇಡಿ. ಏಕೆಂದರೆ, ಡಿಸೆಂಬರ್ 31ರ ನಂತರ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡು ಅಂತ್ಯವಾಗಬಹುದು. ಹಾಗಾಗಿ, ನೀವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬದಲಾವಣೆ ಅನವಶ್ಯಕ ಮೆಸೇಜ್ ಎಂದು ತಳ್ಳಿಹಾಕುವಂತಿಲ್ಲ.

ಹೌದು, ಇದು ಮುಖ್ಯ ಸಂದೇಶವಾಗಿದ್ದು, ನಿಮ್ಮಲ್ಲಿ ಚಿಪ್ ಆಧಾರಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳಿಲ್ಲದಿದ್ದರೆ ಅಥವಾ ಹಳೆಯ ಕಾರ್ಡುಗಳನ್ನು ಹೊಂದಿದ್ದರೆ ಅದು ಡಿಸೆಂಬರ್ 31ರವರೆಗೆ ಮಾತ್ರ ಮೌಲ್ಯವನ್ನು ಹೊಂದಿರುತ್ತದೆ. ಹಾಗಾಗಿ, ಅಂತಹ ಕಾರ್ಡುಗಳನ್ನು ಈ ವರ್ಷದ ಅಂತ್ಯದೊಳಗೆ ಹೊಸ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಲೇಬೇಕಿದೆ ಎಂದು ಬ್ಯಾಂಕ್‌ಗಳು ತಿಳಿಸಿವೆ.

'ಡೆಬಿಟ್ ಕಾರ್ಡ್' ಬದಲಾಯಿಸಿ ಎಂಬ ಸಂದೇಶ ಬಂದರೆ ನಿರ್ಲಕ್ಷಿಸಬೇಡಿ!..ಇಲ್ಲಿ ನೋಡಿ!!

ಹಣ ಪಡೆಯುವುದಕ್ಕೆ, ವಸ್ತುಗಳನ್ನು ಖರೀದಿಸುವುದಕ್ಕೆ ಸೇರಿದಂತೆ ಬಿಟ್ ಕಾರ್ಡ್‌ ಕೂಡ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹೀಗೆ ಹಲವು ಸಂದರ್ಭಗಳಲ್ಲಿ ನಮಗೆ ನೆರವಾಗುವ ಈ ಕಾರ್ಡ್‌ ಒಂದು ದಿನ ಸ್ಥಗಿತವಾದರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸ್ಥಗಿತವಾಗುವ ಮುನ್ನ ಏನು ಮಾಡಬೇಕು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಯಾವ ಕಾರ್ಡ್‌ಗಳು ಸ್ಥಗಿತವಾಗುತ್ತಿವೆ?

ಯಾವ ಕಾರ್ಡ್‌ಗಳು ಸ್ಥಗಿತವಾಗುತ್ತಿವೆ?

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬದಿಯಲ್ಲಿ ಯಾವುದೇ ಚಿಪ್‌ ಇಲ್ಲದಿದ್ದರೆ ಅದು ಸಾಮಾನ್ಯ ಮ್ಯಾಗ್ನೆಟಿಕ್ ಕಾರ್ಡ್‌ ಎಂದು ಅರ್ಥ. ಬ್ಯಾಂಕ್‌ಗಳು ಇಂತಹ ಕಾರ್ಡ್‌ಗಳನ್ನು ಹತ್ತು ವರ್ಷದ ಅವಧಿವರೆಗೆ ಬಳಕೆಗೆ ತಂದವು. ಈ ಅವಧಿ ಮುಗಿದ ನಂತರ ಅವುಗಳ ಆಯಸ್ಸನ್ನು ಮತ್ತೆ ಹತ್ತು ವರ್ಷ ಹೆಚ್ಚಿಸಿದವು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಇತ್ತೀಚಿನ ಆದೇಶಗಳ ‍ಪ್ರಕಾರ, ಈ ಮ್ಯಾಗ್ನೆಟಿಕ್ ಕಾರ್ಡ್‌ಗಳು ಡಿಸೆಂಬರ್ 31ರ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ.

ಬದಲಾಯಿಸಿಕೊಳ್ಳುವುದು ಹೇಗೆ?

ಬದಲಾಯಿಸಿಕೊಳ್ಳುವುದು ಹೇಗೆ?

ಎಲ್ಲ ಬ್ಯಾಂಕ್‌ಗಳೂ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗಳಾಗಿ ಬದಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕಾರ್ಡ್ ಬದಲಿಸಿಕೊಳ್ಳುವಂತೆ ಗ್ರಾಹಕರ ಮೊಬೈಲ್‌ಫೋನ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. ನೀವು ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳಿ.

ಯಾವುದೇ ಶುಲ್ಕವಿಲ್ಲ.

ಯಾವುದೇ ಶುಲ್ಕವಿಲ್ಲ.

ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗೆ ಬದಲಾಯಿಸಿಕೊಳ್ಳಲು ಯಾವುದೇ ಶುಲ್ಕ ವಸೂಲಿ ಮಾಡುತ್ತಿಲ್ಲ. ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳುವುದು ಮಾತ್ರ. ಈ ಬಗ್ಗೆ ಇತರರಿಗೆ ಯಾವುದೇ ಮಾಹಿತಿಯನ್ನು ನೀಡುವ ಅಗತ್ಯತೆ ಸಹ ಇಲ್ಲಿಲ್ಲ.

ಏನಿದು ಯುರೊಪೇ ಮಾಸ್ಟರ್ ವೀಸಾ?

ಏನಿದು ಯುರೊಪೇ ಮಾಸ್ಟರ್ ವೀಸಾ?

ಖಾತೆದಾರ ನಮೂದಿಸುವ ಪಿನ್, ವಹಿವಾಟಿಗೆ ಎರಡು ಹಂತದ ರಕ್ಷಣೆ ಒದಗಿಸುವ ನೂತನ ತಂತ್ರಜ್ಞಾನದ ಚಿಪ್ ಕಾರ್ಡ್ಗಳನ್ನು ಯುರೊಪೇ ಮತ್ತು ಮಾಸ್ಟರ್‌ ವೀಸಾ ಸಂಸ್ಥೆಗಳು ಜೊತೆಗೂಡಿ ತಂದಿದ್ದಾವೆ. ಈ ಕಾರ್ಡ್‌ನ ಮುಂಬದಿಯಲ್ಲಿರುವ ಚಿಪ್‌ನಲ್ಲಿ ಖಾತೆದಾರನ ಬ್ಯಾಂಕ್ ವಿವರ ಎನ್‌ಕ್ರಿಪ್ಟ್ ರೂಪದಲ್ಲಿ ಅಡಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಇಎಂವಿ ಕಾರ್ಡ್‌ನ ವಿಶೇಷಗಳೇನು?

ಇಎಂವಿ ಕಾರ್ಡ್‌ನ ವಿಶೇಷಗಳೇನು?

ಈ ಕಾರ್ಡ್‌ ಅನ್ನು ಸ್ವೈಪ್ ಮಾಡಿದ ಪ್ರತಿ ಬಾರಿ, ಆ ವಹಿವಾಟಿಗೆ ಮಾತ್ರ ಸೀಮಿತವಾಗುವಂತೆ ಒಂದು ಪ್ರತ್ಯೇಕ ಕೋಡ್‌ ರಚನೆಯಾಗುತ್ತದೆ. ಈ ಕೋಡ್ ಮತ್ತೊಂದು ವಹಿವಾಟಿಗೆ ಉಪಯೋಗವಾಗುವುದಿಲ್ಲ. ಹೀಗಾಗಿ ಖಾತೆಯಲ್ಲಿನ ಹಣ ಸೋರಿಕೆಯಾಗುವುದಿಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸಲು ಸಹ ಸಾಧ್ಯವಾಗುತ್ತದೆ.

ಗ್ರಾಹಕರಿಗೆ ಎಚ್ಚರ ಅಗತ್ಯ.

ಗ್ರಾಹಕರಿಗೆ ಎಚ್ಚರ ಅಗತ್ಯ.

ಯಾವುದೇ ಬ್ಯಾಂಕ್‌ನವರು ಸಹ ಮೊಬೈಲ್ ಮೂಲಕ ಅಥವಾ ಇಮೇಲ್ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಫೋನ್ ಮೂಲಕವಾಗಲೀ, ಇ-ಮೇಲ್ ಮೂಲಕವಾಗಲೀ ಖಾತೆ ಮತ್ತು ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನೇರವಾಗಿ ಬ್ಯಾಂಕ್‌ಗೆ ತೆರಳಿ ನಿಮ್ಮ ಕೆಲಸ ಮುಗಿಸಿಕೊಳ್ಳಿ.

Best Mobiles in India

English summary
Rush! Get your debit, credit cards replaced by December 31; Here's why. The RBI has ordered the banks to provide its existing, as well as new. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X