ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!
ಫೋಟೋಗ್ರಾಫರ್‌ಗಳ ಫೋಟೋಗಳು ಲಕ್ಷ ರೂಪಾಯಿಯಲ್ಲಿ ಖರೀದಿ ಮಾಡುವುದು ನೀವು ಕೇಳಿರಬಹುದು. ಆದರೆ ಲಂಡನ್‌ನಲ್ಲಿ ಚಿಂಪಾಜಿಯೊ೦ಂದು ತೆಗದ ಫೋಟೋಗಳು 44 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಲಂಡನ್‌ನ ಸೋಥೆಬಿ ಹರಾಜಿನಲ್ಲಿ ಈ ಫೋಟೋಗಳು ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಸಿದೆ. ರಷ್ಯಾದ ಸರ್ಕಸ್ ಕಂಪೆನಿಯ 'ಮಿಕ್ಕಿ' ಎನ್ನುವ ಚಿಂಪಾಂಜಿ ಈ ಫೋಟೋಗಳನ್ನು ತೆಗೆದಿದ್ದು 18 ಫೋಟೋಗಳಲ್ಲಿ ಕೆಲವೊಂದು ಫೋಟೋಗಳು ಬ್ಲರ್ ಆದ್ರೂ ಕೆಲವು ಫೋಟೋಗಳು ಚೆನ್ನಾಗಿವೆ. ಸರ್ಕಸ್ ಕಂಪೆನಿಯ ಕಲಾವಿದರಾದ ಕೊಮಾರ್ ಮತ್ತು ಅಲೆಕ್ಸಾಂಡರ್ ಮೆಲಾಮಿಡ್ ಈ ಚಿಂಪಾಂಜಿಗೆ ಫೋಟೋ ತೆಗೆಯವುದರ ಬಗ್ಗೆ ತರಬೇತಿ ನೀಡಿದ್ದರು.
'ಮಿಕ್ಕಿ ಕಣ್ಣಲ್ಲಿ ನಮ್ಮ ರಷ್ಯಾ' ಎಂಬ ಕಲ್ಪನೆಯಲ್ಲಿ ಇವರಿಬ್ಬರು 1990ರಲ್ಲಿ ಈ ಫೋಟೋಗಳನ್ನು ಮಿಕ್ಕಿ ಕೈಯಲ್ಲಿ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋಗಳು ಐವತ್ತು, ಎಪ್ಪತ್ತು ಸಾವಿರ ಪೌಂಡ್ ಮಧ್ಯೆ ಹರಾಜು ಆಗಬಹುದು ಎಂದು ಸೋಥೆಬಿ ಅಂದಾಜಿಸಿತ್ತು.ಈಗ ಈ ಫೋಟೋಗಳು ಐವತ್ತು ಸಾವಿರ ಪೌಂಡ್(44 ಲಕ್ಷ) ಹರಾಜಾಗಿದೆ.
ಆದರೆ ಸಿಹಿ ಸುದ್ದಿಯ ಸಂಭ್ರಮವನ್ನು ಕಲಾವಿದರೊಂದಿಗೆ ಆಚರಿಸಲು ಮಿಕ್ಕಿ ಈಗ ಇಲ್ಲ. 2007 ರಲ್ಲಿ ಈ ಪ್ರತಿಭಾವಂತ ಫೋಟೋಗ್ರಾಫರ್ ಚಿಂಪಾಜಿ 'ಮಿಕ್ಕಿ' ಮೃತಪಟ್ಟಿದೆ.. ಹೀಗಾಗಿ ಇಲ್ಲಿ ಮಿಕ್ಕಿ ತೆಗದ ಫೋಟೋ ಮತ್ತು ಈ ಲಂಡನ್ ಹರಾಜಿನ ವೀಡಿಯೋ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

ಹರಾಜಿನಲ್ಲಿ ಚಿಂಪಾಂಜಿ ತೆಗೆದ ಫೋಟೋಗಳಿಗೆ ಬಂಪರ್ ದುಡ್ಡು.!

Click it and Unblock the Notifications