ಬ್ಯಾಂಕ್‌ಗಳಿಗೂ ದಾಳಿಇಡಲಿರುವ ಭಯಂಕರ ವೈರಸ್

Written By:

ಭಾರತೀಯ ಬ್ಯಾಂಕ್‌ಗಳಿಗೆ ಭಯವನ್ನುಂಟು ಮಾಡುವ ಸಂಗತಿಯೊಂದನ್ನು ರಶ್ಯಾದ ಯುವಕನೊಬ್ಬ ಅನ್ವೇಷಿಸಿದ್ದಾನೆ. ಎಟಿಎಮ್‌ಗಳಲ್ಲಿ ಟ್ಯುಪಿಕಿನ್ ಎಂಬ ವೈರಸ್ ಅನ್ನು ಬಳಸಿ ಎಟಿಎಮ್‌ನಿಂದ ಹಣ ಹೊರಹಾಕಬಹುದು ಎಂಬುದಾಗಿ ತಿಳಿಸಿದ್ದಾನೆ.

ಕೆಲವು ತಿಂಗಳುಗಳ ಹಿಂದೆ, ವಿಶ್ವದ ಅತಿ ದೊಡ್ಡ ಎಟಿಎಮ್ ತಯಾರಕ ಸಂಸ್ಥೆ ಈ ಮಾಲ್‌ವೇರ್ ಕುರಿತು ಬ್ಯಾಂಕ್‌ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ಸೂರತ್‌ನಲ್ಲಿ ಯಂತ್ರಗಳನ್ನು ದೋಚಲು ಇಂತಹ ಸನ್ನಾಹವೊಂದು ನಡೆದಿದೆ ಎಂಬುದಾಗಿ ತಿಳಿದು ಬಂದಿದೆ. ಗುಜರಾತ್ ಪೋಲೀಸರು ವ್ಯಕ್ತಿಗಳನ್ನು ಬಂಧಿಸಿದ್ದು ಈ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಟಿಎಮ್ ರೀಬೂಟ್

ಎಟಿಎಮ್ ರೀಬೂಟ್

ಎಟಿಎಮ್ ರೀಬೂಟ್

ಯುಎಸ್‌ಬಿ ಡ್ರೈವ್ ಅಥವಾ ಎಟಿಎಮ್ ರೀಬೂಟ್ ಮಾಡುವುದರ ಮೂಲಕ ಎಟಿಎಮ್‌ಗೆ ಈ ವೈರಸ್ ಅನ್ನು ನುಗ್ಗಿಸಲಾಗುತ್ತದೆ.

ಸುಳಿವೇ ಸಿಗುವುದಿಲ್ಲ

ಸುಳಿವೇ ಸಿಗುವುದಿಲ್ಲ

ಸುಳಿವೇ ಸಿಗುವುದಿಲ್ಲ

ಒಮ್ಮೆ ಇದು ಬಾಧಿಸಿದಲ್ಲಿ, ನಂತರ ಎಟಿಎಮ್‌ನಿಂದ ದುಡ್ಡು ಬರುತ್ತಲೇ ಇರುತ್ತದೆ ಇದರ ಬಗ್ಗೆ ಯಾರಿಗೂ ಸುಳಿವೇ ಸಿಗುವುದಿಲ್ಲ.

ಸೈಬರ್ ದಾಳಿ

ಸೈಬರ್ ದಾಳಿ

ಸೈಬರ್ ದಾಳಿ

ಯುರೋಪ್ ಮತ್ತು ಏಷ್ಯಾದ ಬ್ಯಾಂಕ್‌ಗಳಲ್ಲಿ ಸೈಬರ್ ದಾಳಿ ನಡೆದಿದ್ದು ರಷ್ಯಾದ ಗ್ಯಾಂಗ್ ಆದ ಅನುನಾಕ್ ವಿಶ್ವದಲ್ಲೇ ಸೈಬರ್ ಕ್ರೈಮ್‌ಗೆ ಹೆಸರುವಾಸಿಯಾಗಿದೆ.

ಮಾಲ್‌ವೇರ್ ದಾಳಿ

ಮಾಲ್‌ವೇರ್ ದಾಳಿ

ಮಾಲ್‌ವೇರ್ ದಾಳಿ

ಎಲ್ಲಾ ಪ್ರಕಾರದ ಎಟಿಎಮ್‌ಗಳು ಮಾಲ್‌ವೇರ್ ದಾಳಿಗೆ ಗುರಿಯಾಗಲಿವೆ ಎಂಬುದಾಗಿ ತಿಳಿದು ಬಂದಿದೆ. ಪಾಸ್‌ವರ್ಡ್ ಸುರಕ್ಷತೆ, ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡುವುದು ಮತ್ತು ಎಟಿಎಮ್ ಸಾಫ್ಟ್‌ವೇರ್ ಅನ್ನು ವೈಟ್‌ಲಿಸ್ಟಿಂಗ್ ಮಾಡುವಂತೆ ಎನ್‌ಸಿಆರ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ನವರೋಝ್ ದಸ್ತೂರ್ ತಿಳಿಸಿದ್ದಾರೆ.

ಸುಭದ್ರ

ಸುಭದ್ರ

ಸುಭದ್ರ

ಫೈರ್‌ವಾಲ್‌ಗಳನ್ನು ಬಳಸಿ ಮತ್ತು ಸಾಫ್ಟ್‌ವೇರ್ ಅನ್ನು ಸುಭದ್ರವಾಗಿ ಅಪ್‌ಡೇಟ್ ಮಾಡುವ ಮೂಲಕ ಎಟಿಎಮ್‌ಗಳಿಗೆ ಏನನ್ನಾದರೂ ಸಂಪರ್ಕಿಸುವುದರ ಬಗ್ಗೆ ನಿಗಾವಹಿಸಲಾಗಿದೆ.

ಅಧಿಕೃತ ಪ್ರೊಗ್ರಾಮ್‌

ಅಧಿಕೃತ ಪ್ರೊಗ್ರಾಮ್‌

ಅಧಿಕೃತ ಪ್ರೊಗ್ರಾಮ್‌

ಅಧಿಕೃತ ಪ್ರೊಗ್ರಾಮ್‌ಗಳು ಮತ್ತು ಪೂರ್ವ ಅನುಮೋದಿತ ಅಪ್ಲಿಕೇಶನ್‌ಗಳು ಎಟಿಎಮ್‌ನಲ್ಲಿ ಚಾಲನೆ ಮಾಡಬಹುದು ಎಂಬುದನ್ನು ವೈಟ್‌ಲಿಸ್ಟಿಂಗ್ ಮಾಡುವುದು ಸಹಾಯ ಮಾಡುತ್ತದೆ.

ಹೊಸ ಸಾಫ್ಟ್‌ವೇರ್

ಹೊಸ ಸಾಫ್ಟ್‌ವೇರ್

ಹೊಸ ಸಾಫ್ಟ್‌ವೇರ್

ಹ್ಯಾಕರ್‌ಗಳು ಹೊಸ ಸಾಫ್ಟ್‌ವೇರ್ ಅನ್ನು ಅಳವಡಿಸಿದಲ್ಲಿ, ಮೆಶೀನ್ ಇದನ್ನು ಚಾಲನೆ ಮಾಡುವುದಿಲ್ಲ. ಕೆಲವೊಂದು ಬ್ಯಾಂಕ್‌ಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಗ್ರಾಹಕರ ಡೇಟಾ

ಗ್ರಾಹಕರ ಡೇಟಾ

ಗ್ರಾಹಕರ ಡೇಟಾ

ಆನ್‌ಲೈನ್‌ನಲ್ಲಿ ಗ್ರಾಹಕರ ಡೇಟಾವನ್ನು ಕದ್ದು ದುಡ್ಡು ವರ್ಗಾವಣೆ ಮಾಡಿಕೊಳ್ಳುವುದು ಹೆಚ್ಚು ನಡೆಯುತ್ತಿದ್ದು ಬ್ಯಾಂಕ್‌ಗಳಿಗೆ ಇದು ಮುಗಿಯದ ಸಮಸ್ಯೆಯಾಗಿದೆ. ಅದಕ್ಕೆಂದೇ ರಿಸರ್ವ್ ಬ್ಯಾಂಕ್ ಚಿಪ್ ಆಧಾರಿತ ಮತ್ತು ಪಿನ್ ಸಕ್ರಿಯಗೊಂಡಿರುವ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಿದೆ.

ಸೈಬರ್ ಭದ್ರತಾ ಸುರಕ್ಷತೆ

ಸೈಬರ್ ಭದ್ರತಾ ಸುರಕ್ಷತೆ

ಸೈಬರ್ ಭದ್ರತಾ ಸುರಕ್ಷತೆ

ಇನ್ನು ಬ್ಯಾಂಕ್‌ಗಳಲ್ಲಿ ಕೂಡ ಸೈಬರ್ ಭದ್ರತಾ ಸುರಕ್ಷತೆಗಳನ್ನು ಅಳವಡಿಸಲಾಗುತ್ತಿದ್ದು ಇದು ಹ್ಯಾಕರ್‌ಗಳ ದಾಳಿಗೆ ತಡೆಯನ್ನು ಒಡ್ಡಲಿದೆ.

ಹೊಸ ಮಾಲ್‌ವೇರ್

ಹೊಸ ಮಾಲ್‌ವೇರ್

ಹೊಸ ಮಾಲ್‌ವೇರ್

ಬ್ಯಾಂಕ್‌ಗಳು ಈ ಹೊಸ ಮಾಲ್‌ವೇರ್ ಕುರಿತು ಹೆಚ್ಚು ಜಾಗರೂಕವಾಗಿದ್ದು ಏನಾದರೂ ಅನುಮಾನ ಕಂಡುಬಂದಲ್ಲಿ ಅದನ್ನು ಕೂಡಲೇ ತಡೆಹಿಡಿಯುವ ಕ್ರಮವನ್ನು ಅನುಸರಿಸಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A shadowy Russian teenager has emerged as the new threat to Indian banks. He's said to hack ATMs using 'Tyupkin' - a virus that has the sinister power to force cash machines into maintenance mode and spew out currency notes.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot