Home
ಸುದ್ದಿಜಾಲ

6ನೇ ವಯಸ್ಸಿಗೆ ವರ್ಷಕ್ಕೆ 100ಕೋಟಿ ದುಡಿಯುವ ಪೋರನ ಜೊತೆ ವಾಲ್‌ಮಾರ್ಟ್ ಒಪ್ಪಂದ!!

By Bhaskar N J

ಕಳೆದ ವರ್ಷ ಯೂಟ್ಯೂಬ್ ಮೂಲಕ ಅತ್ಯಧಿಕ ಆದಾಯ ಗಳಿಸುತ್ತಿರುವ ಸ್ಟಾರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಆರು ವರ್ಷದ ಬಾಲಕ ರ್ಯಾನ್ ಇದೀಗ ಅಮೆರಿಕದ ಅತಿದೊಡ್ಡ ಮಾರಾಟ ಮಳಿಗೆ ಬ್ರಾಂಡ್‌ ವಾಲ್‌ಮಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆ. ತನ್ನದೇ ಹೆಸರಿನ ಬ್ರಾಂಡ್‌ನ‌ಡಿ ವಾಲ್‌ಮಾರ್ಟ್‌ನಲ್ಲಿ ಈತ ಇನ್ಮುಂದೆ ಆಟಿಕೆಗಳನ್ನು ಮಾರಾಟ ಮಾಡಲಿದ್ದಾನೆ.

ವಾಲ್‌ಮಾರ್ಟ್‌ನಲ್ಲಿ ಇದಕ್ಕೆ ರ್ಯಾನ್ ವರ್ಲ್ಡ್ ಎಂದು ಹೆಸರಿಡಲಾಗಿದ್ದು, ಅಕ್ಟೋಬರ್‌ನಿಂದ ಅಮೆರಿಕದ ವಾಲ್‌ಮಾರ್ಟ್ ಮಳಿಗೆಗಳಲ್ಲೂ ಈ ಬ್ರ್ಯಾಂಡ್‌ನ‌ ಆಟಿಕೆಗಳು ಲಭ್ಯವಾಗಲಿವೆ. ಯೂಟ್ಯೂಬ್‌ನಲ್ಲಿ ಆಟಿಕೆಗಳನ್ನು ರಿವ್ಯೂ ಮಾಡುವುದರಿಂದಲೇ ವಿಶ್ವದ ಗಮನ ಸೆಳೆದಿದ್ದ ರ್ಯಾನ್ ಇದೀಗ ಸ್ವಂತ ಆಟಿಕೆ ಉದ್ದಯಮ ಕ್ಷೇತ್ರದ ಬ್ರಾಡ್ ಅಂಬಾಸಿಡರ್ ಆಗಿದ್ದಾನೆ.

6ನೇ ವಯಸ್ಸಿಗೆ ವರ್ಷಕ್ಕೆ 100ಕೋಟಿ ದುಡಿಯುವ ಪೋರನ ಜೊತೆ ವಾಲ್‌ಮಾರ್ಟ್ ಒಪ್ಪಂದ!!

ಕಳೆದ ಮೂರು ವರ್ಷಗಲ್ಲಿ ವಿಶ್ವದ ಆಟಿಕೆ ರಿವ್ಯೂ ಪ್ರಪಂಚದಲ್ಲಿ ಹೆಚ್ಚು ಹೆಸರಾದ ಯೂಟ್ಯೂಬರ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ 'ರ್ಯಾನ್' ತನಗೆ ಅರಿವಿಲ್ಲದಂತೆಯೇ ಇಂತಹ ಸಾಧನೆ ಮಾಡಿದ್ದಾನೆ. ಹಾಗಾದರೆ, ಯಾರೀತ ರ್ಯಾನ್? ವಿಶ್ವದೆಲ್ಲೆಡೆ ಆರು ವರ್ಷದ ಬಾಲಕನೋರ್ವ ರ್ಯಾನ್ ಮನೆಮಾತಾಗಿದ್ದು ಏಕೆ? ಎಂಬ ಕುತೂಹಲದ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ವಿಶ್ವವನ್ನೇ ಚಕಿತಗೊಳಿಸಿದ್ದ ಬಾಲಕ

ವಿಶ್ವವನ್ನೇ ಚಕಿತಗೊಳಿಸಿದ್ದ ಬಾಲಕ

ಕೇವಲ ಗೊಂಬೆಗಳ ಜತೆ ಆಟವಾಡುವ ಮೂಲಕ (ಯೂಟ್ಯೂಬ್‌ನಲ್ಲಿ ಆಟಿಕೆಗಳ ರಿವ್ಯೂ) 11 ದಶಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 71 ಕೋಟಿ) ಸಂಪಾದಿಸಿ ವಿಶ್ವವನ್ನೇ ಚಕಿತಗೊಳಿಸಿದ್ದ ಬಾಲಕ ರ್ಯಾನ್, ಈಗ ಅಮೆರಿಕದ ವಾಲ್‌ಮಾರ್ಟ್ ಮಳಿಗೆಗಳಲ್ಲಿ ತನ್ನದೇ ಬ್ರ್ಯಾಂಡ್‌ನ‌ ಆಟಿಕೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ.

ಯಾರೀತ ರ್ಯಾನ್?

ಯಾರೀತ ರ್ಯಾನ್?

ರ್ಯಾನ್ ಎಂಬ ಆರು ವರ್ಷದ ಪೋರ ಒಟ್ಟು ಆರು ಯೂಟ್ಯೂಬ್ ಚಾನೆಲ್‌ಗ‌ಳನ್ನು ಹೊಂದಿದ್ದಾನೆ. ತಿಂಗಳಲ್ಲಿ ಈತನ ವಿಡಿಯೋಗಳು 100 ಕೋಟಿ ವೀಕ್ಷಣೆ ಪಡೆಯುತ್ತವೆ. 2015ರ ಮಾರ್ಚ್‌ನಿಂದ ಈತ ಆಟಿಕೆಗಳೊಂದಿಗೆ ಆಟವಾಡುವ ಹಾಗೂ ಅದರ ಸ್ಪೆಸಿಫಿಕೇಶನ್ ವಿಶ್ಲೇಷಿಸುವ ವಿಡಿಯೋಗಳನ್ನು ಮಾಡುತ್ತಾನೆ.

'ರ್ಯಾನ್ ಟಾಯ್ಸ್ ರಿವ್ಯೂ'!

'ರ್ಯಾನ್ ಟಾಯ್ಸ್ ರಿವ್ಯೂ'!

ನಾಲ್ಕು ವರ್ಷಗಳ ವಯಸ್ಸಿನಲ್ಲಿ ಆತನ ಆಸಕ್ತಿ ಗಮನಿಸಿದ ತಂದೆತಾಯಿ ವೀಡಿಯೋಗಳನ್ನು ತೆಗೆದು 'ರ್ಯಾನ್ ಟಾಯ್ಸ್ ರಿವ್ಯೂ' ಎಂಬ ಯೂಟ್ಯೂಬ್ ಚಾನೆಲ್ ಸೃಷ್ಟಿಸಿ ಅದರಲ್ಲಿ ಆ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾ ಬಂದಿದ್ದಾರೆ. ರ್ಯಾನ್ ವಿಡಿಯೋಗಳಾಗಿರುವುದರಿಂದ ಪೋಷಕರು ಎಲ್ಲ ಹೆಗ್ಗಳಿಕೆಯನ್ನ ರ್ಯಾನ್‌ಗೆ ನೀಡಿದ್ದಾರೆ.

ಹೆಸರಾಂತ ಆಟಿಕೆ ಯೂಟ್ಯೂಬರ್!

ಹೆಸರಾಂತ ಆಟಿಕೆ ಯೂಟ್ಯೂಬರ್!

ಎಲ್ಲ ಮಕ್ಕಳಂತೆ ರ್ಯಾನ್‌ಗೆ ಗೊಂಬೆಗಳೆಂದರೆ ಇಷ್ಟ. ಆದರೆ, ಅದು ಸ್ವಲ್ಪ ಜಾಸ್ತಿ ಎಂದೇ ಹೇಳಬೇಕು.ಆತನ ಕೈಗೆ ಒಂದು ಗೊಂಬೆ ಆತನ ಕೈಗೆ ಸಿಕ್ಕಿದೆ ಎಂದರೆ ಅದನ್ನು ಅಮೂಲಾಗ್ರವಾಗಿ ಪರಿಶೀಲಿಸುತ್ತಾನೆ. ಅದೇನು, ಅದರಲ್ಲಿನ ವಿಶೇಷತೆಗಳೇನು ಎಂಬುದನ್ನು ಸಂಪೂರ್ಣ ಸ್ಟಡಿ ಮಾಡುತ್ತಿರುತ್ತಾನೆ. ಇದನ್ನು ವೀಕ್ಷಿಸಲು ಜನರು ಮುಗಿಬೀಳುತ್ತಾರೆ.

8ನೇ ಸ್ಥಾನದಲ್ಲಿದೆ ಈತನ ಚಾನೆಲ್!

8ನೇ ಸ್ಥಾನದಲ್ಲಿದೆ ಈತನ ಚಾನೆಲ್!

ಕಳೆದ ವರ್ಷ 71 ಕೋಟಿ ರೂ.ಗಳಿಸಿದ್ದ ರ್ಯಾನ್ ಯೂಟ್ಯೂಬ್ ಚಾನೆಲ್‌ಗೆ 1.5 ಕೋಟಿ ಸಬ್‌ಸ್ಕ್ರೈಬರ್ ಗಳಿದ್ದಾರೆ. ಯೂಟ್ಯೂಬ್‌ನಿಂದ ಅತ್ಯಂತ ಹೆಚ್ಚು ಪೇಮೆಂಟ್ ಪಡೆಯುವ ಚಾನೆಲ್‌ಗ‌ಳ ಪೈಕಿ ರ್ಯಾನ್‌ನ ಈ ಚಾನೆಲ್‌ 8ನೇ ಸ್ಥಾನದಲ್ಲಿದೆ.ಈಗ ರ್ಯಾನ್‌ ಹೆಸರಲ್ಲಿ ಹಲವು ಉತ್ಪನ್ನಗಳೂ ಮಾರುಕಟ್ಟೆಗೆ ಬಂದಿವೆ.

ಈ ಅಪರೂಪದ ಮೊಬೈಲ್‌ ಫೋನ್‌ಗಳ ಹೆಸರುಗಳನ್ನು ಖಂಡಿತ ನೀವು ಕೇಳಿರಲ್ಲ..

ಈ ಅಪರೂಪದ ಮೊಬೈಲ್‌ ಫೋನ್‌ಗಳ ಹೆಸರುಗಳನ್ನು ಖಂಡಿತ ನೀವು ಕೇಳಿರಲ್ಲ..

ಹೆಸರಿನಲ್ಲಿ ಏನಿದೆ? ಎಂದರೆ ಹೌದು ಹೆಸರಿನಲ್ಲಿದೆ.. ನಮ್ಮ ನಿಮ್ಮೆಲ್ಲರನ್ನು ಗುರುತಿಸುವುದು ಹೆಸರಿನಿಂದಲೇ ಎಂಬುದನ್ನು ಮರೆಯುವಂತಿಲ್ಲ. ಯಾವುದೇ ಕ್ಷೇತ್ರದಲ್ಲಾಗಲಿ, ಮನುಷ್ಯ ಆಗಲಿ, ಉತ್ಪನ್ನಗಳಾಗಲಿ ಹೆಸರೇ ಪ್ರಮುಖ. ಜನರನ್ನು ತಲುಪುವ, ಜನರನ್ನು ಆಕರ್ಷಿಸುವ ಹೆಸರುಗಳು ಬೇಕು. ಅದಕ್ಕಾಗಿಯೇ ಟೆಕ್‌ ಲೋಕದಲ್ಲೂ ಕೂಡ ಹೆಸರಿಡುವಾಗ ಅನೇಕ ಪ್ರಯೋಗಗಳು ಆಗಿವೆ.

ಹೌದು ಸ್ಮಾರ್ಟ್‌ಫೋನ್‌ ಲೋಕದಲ್ಲಿ ದಿನಕ್ಕೊಂದರಂತೆ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುತ್ತಲೆ ಇರುತ್ತವೆ. ಜನ ಅವುಗಳನ್ನು ನೆನಪಿಟ್ಟುಕೊಳ್ಳುವುದು ಹೆಸರಿನಿಂದಲೇ ಎಂಬುದಂತೂ ಸತ್ಯ. ಅದಕ್ಕಾಗಿಯೇ ಸ್ಮಾರ್ಟ್‌ಫೋನ್ ಕಂಪನಿಗಳು ಸಹ ತಮ್ಮ ಮೊಬೈಲ್‌ಗಳಿಗೆ ಜನರು ನೆನಪಿಟ್ಟುಕೊಳ್ಳುವ ಹೆಸರುಗಳನ್ನು ಇಡಲು ಪ್ರಯತ್ನಿಸುತ್ತಾರೆ. ಆದರೆ, ಸ್ಮಾರ್ಟ್‌ಫೋನ್‌ ಕಂಪನಿಗಳು ಅನೇಕ ಸಲ ಅಪರೂಪದ ಹೆಸರುಗಳನ್ನು ತಮ್ಮ ಉತ್ಪನ್ನಗಳಿಗೆ ಇಟ್ಟಿವೆ.
ಅವುಗಳು ಜನರಿಗೆ ಹತ್ತಿರವಾಗಿದ್ದರೂ ಯಶಸ್ವಿ ಉತ್ಪನ್ನವಂತೂ ಆಗಿಲ್ಲ ಎನ್ನಬಹುದು. ಅಂತಹ 25 ಅಪರೂಪದ ಹೆಸರುಗಳನ್ನು ಹೊಂದಿದ ಮೊಬೈಲ್‌ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ.

ಸೋನಿ ಎರಿಕ್ಸನ್ ಲೈವ್ ವಿತ್ ವಾಕ್‌ಮ್ಯಾನ್‌ Sony Ericsson Live With Walkman

ಸೋನಿ ಎರಿಕ್ಸನ್ ಲೈವ್ ವಿತ್ ವಾಕ್‌ಮ್ಯಾನ್‌ Sony Ericsson Live With Walkman

2011ರಲ್ಲಿ ಬಿಡುಗಡೆಯಾದ ಈ ಫೋನ್‌ ಹೆಸರು ಸ್ಮಾರ್ಟ್‌ಫೋನ್‌ ಎನ್ನುವುದಕ್ಕಿಂತ ಸಂಗೀತ ಕಛೇರಿಯ ಹೆಸರು ಕೇಳಿದಂತೆ ಆಗುತ್ತದೆ.

ಹೆಚ್‌ಟಿಸಿ ಚಾಚಾ HTC ChaCha

ಹೆಚ್‌ಟಿಸಿ ಚಾಚಾ HTC ChaCha

ಚಾಚಾ ಎನ್ನುವುದು ನೃತ್ಯರೂಪಕದ ಒಂದು ವಿಧವಾಗಿದೆ. 2011ರಲ್ಲಿ ಹೆಚ್‌ಟಿಸಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ ನೃತ್ಯದ ಹೆಸರು ಪಡೆದುಕೊಂಡಿತು. ಯಾಕಂದ್ರೇ ನಿಜ ಗೊತ್ತಿಲ್ಲ.

ಹೆಚ್‌ಟಿಸಿ HTC Salsa

ಹೆಚ್‌ಟಿಸಿ HTC Salsa

ಸ್ಮಾರ್ಟ್‌ಫೋನ್‌ಗೆ ಚಾಚಾ ನೃತ್ಯ ರೂಪಕದ ಹೆಸರಿಟ್ಟ ಹೆಚ್‌ಟಿಸಿ ಮತ್ತೊಂದು ಫೋನ್‌ಗೆ ಸಾಲ್ಸಾ ಎಂಬ ನೃತ್ಯದ ಹೆಸರಿಟ್ಟು ಸರಣಿಯನ್ನು ಮುಂದುವರೆಸಿತು. ಇದು ಸಹ 2011ರಲ್ಲಿ ಬಿಡುಗಡೆಯಾಗಿದೆ. ಅಂದಿನ ಸಮಯದಲ್ಲಿ ಹೆಚ್‌ಟಿಸಿ ಕಂಪನಿಯಲ್ಲಿ ಯಾರೋ ಡ್ಯಾನ್ಸ್‌ ಪ್ರೇಮಿ ಈ ಹೆಸರುಗಳನ್ನು ಇಟ್ಟಿರಬಹುದು.

ಸ್ಯಾಮ್‌ಸಂಗ್ ಮೆಸೆಜರ್ Samsung Messager

ಸ್ಯಾಮ್‌ಸಂಗ್ ಮೆಸೆಜರ್ Samsung Messager

2010ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಬಿಡುಗಡೆ ಮಾಡಿದ ಫೋನ್‌ ಹೆಸರು ಮೆಸೆಜರ್. ಅಂದರೆ ಈ ಮೊಬೈಲ್ ಕರೆ ಮಾಡುವುದುಕ್ಕೆ ಉಪಯೋಗಿಸಲು ಆಗುವುದಿಲ್ವಾ ಅಂತ ಪ್ರಶ್ನೆ ಹುಟ್ಟಬಹುದು. ಆದರೆ, ಸ್ಯಾಮ್‌ಸಂಗ್‌ ತಲೆಯಲ್ಲಿ ಏನು ಒಡುತ್ತಿತ್ತೋ ಅವತ್ತು.

ಎಲ್‌ಜಿ ಚಾಕೋಲೆಟ್ LG Chocolate

ಎಲ್‌ಜಿ ಚಾಕೋಲೆಟ್ LG Chocolate

ಚಾಕೋಲೆಟ್‌ ಎಂದರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ ಅದಕ್ಕಾಗಿಯೇ ಎಲ್‌ಜಿ ಕಂಪನಿ ತಾನು 2009ರಲ್ಲಿ ಬಿಡುಗಡೆ ಮಾಡಿದ ಮೊಬೈಲ್‌ಗೆ ಚಾಕೋಲೆಟ್‌ ಹೆಸರಿಟ್ಟಿದ್ದು.

ಮೊಟೋರೋಲಾ ಸಿಟ್ರಸ್ Motorola Citrus

ಮೊಟೋರೋಲಾ ಸಿಟ್ರಸ್ Motorola Citrus

ಮೊಟೋರೋಲಾದಲ್ಲಿ ಯಾರೋ ಕಿತ್ತಳೆ ಹಣ್ಣಿನ ಪ್ರೇಮಿ ಇದ್ದರೇನೋ. ಅದಕ್ಕೆ 2010ರಲ್ಲಿ ಮೊಟೋರೋಲಾ ಬಿಡುಗಡೆ ಮಾಡಿದ ಮೊಬೈಲ್‌ಗೆ ಸಿಟ್ರಸ್‌ ಎಂದು ಹೆಸರಿಟ್ಟರು.

ಎಲ್‌ಜಿ ಫ್ಯೂಸಿಕ್ LG Fusic

ಎಲ್‌ಜಿ ಫ್ಯೂಸಿಕ್ LG Fusic

ಎಲ್‌ಜಿ 2006ರಲ್ಲಿ ಬಿಡುಗಡೆ ಮಾಡಿದ ಮೊಬೈಲ್‌ಗೆ ಸಂಗೀತದ ವಿಧವಾದ ಫ್ಯೂಸಿನ್‌ ರೂಪದ ಫ್ಯೂಸಿಕ್‌ ಎಂಬ ಹೆಸರಿಟ್ಟಿತು.

ಒನ್‌ಪ್ಲಸ್ ಒನ್ OnePlus One

ಒನ್‌ಪ್ಲಸ್ ಒನ್ OnePlus One

ಪ್ರಸ್ತುತ ದೊಡ್ಡ ಬ್ರಾಂಡ್ ಆಗಿರುವ ಒನ್‌ಪ್ಲಸ್ 2014ರಲ್ಲಿ ತನ್ನ ಸ್ಮಾರ್ಟ್‌ಫೋನ್‌ಗೆ ಒನ್‌ಪ್ಲಸ್‌ ಒನ್ ಎಂದು ಹೆಸರಿಟ್ಟಿತ್ತು.

ಸ್ಯಾಮ್‌ಸಂಗ್‌ ಮಿಥೀಕ್ Samsung Mythic

ಸ್ಯಾಮ್‌ಸಂಗ್‌ ಮಿಥೀಕ್ Samsung Mythic

2009ರಲ್ಲಿ ಬಿಡುಗಡೆಯಾದ ಈ ಮೊಬೈಲ್‌ ಹೆಸರೇ ಮಿಥೀಕ್ ಅಂದರೆ ಪುರಾಣ, ಅದಕ್ಕೆ ಬಹಳಷ್ಟು ಜನ ಈ ಸ್ಮಾರ್ಟ್‌ಫೋನ್‌ ನಿಜವಾಗಲೂ ಇತ್ತಾ? ಎಂಬ ಪ್ರಶ್ನೆಯನ್ನು ಸ್ಯಾಮ್‌ಸಂಗ್‌ಗೆ ಕೇಳುತ್ತಾರೆ.

ಮೊಟೋರೊಲಾ ಕರ್ಮ ಕ್ಯೂಎ1 Motorola Karma QA1

ಮೊಟೋರೊಲಾ ಕರ್ಮ ಕ್ಯೂಎ1 Motorola Karma QA1

2009ರಲ್ಲಿ ಮೊಟೋರೋಲಾ ಬಿಡುಗಡೆ ಮಾಡಿದ ಫೋನ್‌ಗೆ ಕರ್ಮ ಎಂದು ಹೆಸರಟ್ಟಿತ್ತು. ಕರ್ಮ ಎಂದರೆ ಏನೆಂಬುದನ್ನು ನಾವೇನೂ ಹೇಳಬೇಕಾಗಿಲ್ಲ ಆಲ್ವಾ. ಮೊಟೋರೋಲಾ ಈ ಹೆಸರನ್ನು ಆಯ್ಕೆ ಮಾಡಿದ್ದಾದರೂ ಏಕೆ?

ಹೆಚ್‌ಪಿ ವೀರ್ 4G HP Veer 4G

ಹೆಚ್‌ಪಿ ವೀರ್ 4G HP Veer 4G

ಹೆಚ್‌ಪಿ ಕಂಪನಿಯು 2011ರಲ್ಲಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ಗೆ ವೀರ್‌ ಎಂದು ಹೆಸರಿಟ್ಟಿತ್ತು. ವೀರ್ ಅರ್ಥ ನಿಮಗೆ ಗೊತ್ತೆ ಇದೆ. ಆದರೆ, ಈ ಫೋನ್ ಹೆಸರು ಇಂದಿಗೂ ಕೇಳದವರೇ ಹೆಚ್ಚು.

ಸ್ಯಾಮ್‌ಸಂಗ್ ಬ್ರೈಟ್‌ಸೈಡ್‌ Samsung Brightside

ಸ್ಯಾಮ್‌ಸಂಗ್ ಬ್ರೈಟ್‌ಸೈಡ್‌ Samsung Brightside

2011ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ಗೆ ಬ್ರೈಟ್‌ಸೈಡ್ ಎಂದು ಹೆಸರಿಟ್ಟಿತ್ತು. ಅಂದು ಸ್ಯಾಮ್‌ಸಂಗ್ ಆಶಾವಾದಿ ಮನಸ್ಥಿತಿಯಲ್ಲಿ ಇತ್ತು ಎಂದು ಕಾಣುತ್ತದೆ.

ಮೈಕ್ರೋಸಾಫ್ಟ್‌ ಕಿನ್ ಒನ್ Microsoft Kin One

ಮೈಕ್ರೋಸಾಫ್ಟ್‌ ಕಿನ್ ಒನ್ Microsoft Kin One

ಮೈಕ್ರೋಸಾಫ್ಟ್‌ 2010ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗೆ ಕಿನ್ ಒನ್ ಎಂದು ಕರೆದಿತ್ತು. ಇದರ ಜತೆ ಕಿನ್ ಟೂ ಎಂಬ ಹೆಸರಿನ ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಸಹ ಮೈಕ್ರೋಸಾಫ್ಟ್‌ ಬಿಡುಗಡೆ ಮಾಡಿತ್ತು.

ಎಲ್‌ಜಿಎಲಿ.ಜೆಪಿಜಿ LGAlly.jpg

ಎಲ್‌ಜಿಎಲಿ.ಜೆಪಿಜಿ LGAlly.jpg

ಇದು ಯಾವುದೋ ಪೋಟೋ ಫೈಲ್‌ ನೇಮ್ ಅಲ್ಲ. ಬದಲಾಗಿ 2010ರಲ್ಲಿ ಎಲ್‌ಜಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌.

ಸ್ಯಾಮ್‌ಸಂಗ್‌ ರ್ಯಾಂಟ್ Samsung Rant

ಸ್ಯಾಮ್‌ಸಂಗ್‌ ರ್ಯಾಂಟ್ Samsung Rant

ಸ್ಯಾಮ್‌ಸಂಗ್ ಕಂಪನಿಯು 2008ರಲ್ಲಿ ಬಿಡುಗಡೆ ಮಾಡಿದ ಸ್ಲೈಡರ್‌ ಫೋನ್‌ಗೆ ರ್ಯಾಂಟ್ ಎಂದು ಹೆಸರಿಟ್ಟಿದ್ದು ಗೊತ್ತೆ ಇಲ್ಲ.

ಮೈಕ್ರೋಸಾಫ್ಟ್‌ ಯೆಜ್‌ ಬಿಲ್ಲಿ 4.7 Microsoft Yezz Billy 4.7

ಮೈಕ್ರೋಸಾಫ್ಟ್‌ ಯೆಜ್‌ ಬಿಲ್ಲಿ 4.7 Microsoft Yezz Billy 4.7

ಯೆಜ್‌ ಬಿಲ್ಲಿ ನಿಜಕ್ಕೂ ಯಾರಿಗೂ ಗೊತ್ತಿರದ ಅಪರೂಪದ ಹೆಸರೇ. ಇದನ್ನು ಮೈಕ್ರೋಸಾಫ್ಟ್‌ 2014ರಲ್ಲಿ ಬಿಡುಗಡೆ ಮಾಡಿದ ವಿಂಡೋಸ್‌ ಫೋನ್‌ಗೆ ಈ ಹೆಸರಿಟ್ಟಿತ್ತು.

ಐಬಾಲ್‌ ಆಂಡಿ 5ಎನ್ ಡ್ಯೂಡ್ iBall Andi 5N Dude

ಐಬಾಲ್‌ ಆಂಡಿ 5ಎನ್ ಡ್ಯೂಡ್ iBall Andi 5N Dude

2016ರಲ್ಲಿ ಐಬಾಲ್ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ ಕೂಲ್‌ ಫ್ಯಾಕ್ಟರ್‌ಗೆ ಗಮನ ಸೆಳೆದಿತ್ತು. ಆದರೆ, ಇಂದು ಆ ಹೆಸರು ಯಾರಿಗೂ ನೆನಪಿಲ್ಲ. ಆ ಹೆಸರೇ ಐಬಾಲ್ ಆಂಡಿ 5N ಡ್ಯೂಡ್.

ಕ್ರಿಕೆಟ್ ಟಿಎಕ್ಸ್‌ಟಿಎಂ8 Cricket TxtM8

ಕ್ರಿಕೆಟ್ ಟಿಎಕ್ಸ್‌ಟಿಎಂ8 Cricket TxtM8

ಅಮೇರಿಕಾ ಮೂಲದ ಕ್ರಿಕೆಟ್ ವೈರ್‌ಲೆಸ್‌ ಕಂಪನಿ ಈ ಸ್ಮಾರ್ಟ್‌ಫೋನ್‌ನ್ನು 2009ರಲ್ಲಿ ಬಿಡುಗಡೆ ಮಾಡಿತು. ಕ್ರಿಕೆಟ್ ಎನ್ನುವ ಮೊಬೈಲ್ ಫೋನ್ ಇದೆ ಎಂಬುದು ಖಂಡಿತ ಗೊತ್ತಿದ್ದಿಲ್ಲ ಅಲ್ವಾ..!

ಲಾವಾ ಐರಿಸ್ ಎಫ್‌1 ಫ್ಯುಯಲ್ ಮಿನಿ Lava Iris F1 Fuel Mini

ಲಾವಾ ಐರಿಸ್ ಎಫ್‌1 ಫ್ಯುಯಲ್ ಮಿನಿ Lava Iris F1 Fuel Mini

ಇದ್ಯಾವುದೋ ಫಾರ್ಮುಲಾ ರೇಸ್‌ನ ಕಾರ್ ಅಲ್ಲ ಅಥವಾ ಯಾವುದೋ ಬಿಎಂಡಬ್ಲ್ಯೂ ಕಾರ್ ಅಲ್ಲ ಬದಲಾಗಿ ಲಾವಾ 2015ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗೆ ಐರಿಸ್‌ ಎಫ್‌1 ಫ್ಯುಯಲ್ ಮಿನಿ ಎಂದು ಹೆಸರಿಟ್ಟಿತು.

ನೋಕಿಯಾ ಎಕ್ಸ್‌3-02 ಟಚ್ ಅಂಡ್ ಟೈಪ್‌ Nokia X3-02 Touch And Type

ನೋಕಿಯಾ ಎಕ್ಸ್‌3-02 ಟಚ್ ಅಂಡ್ ಟೈಪ್‌ Nokia X3-02 Touch And Type

2010ರಲ್ಲಿ ನೋಕಿಯಾ ತನ್ನ ಫೋನ್‌ಗೆ ಟಚ್‌ ಅಂಡ್‌ ಟೈಪ್‌ ಎಂದು ಹೆಸರಿಟ್ಟಿತು. ಟಚ್ ಮಾಡದೇ ಟೈಪ್ ಹೇಗೆ ಮಾಡೋದು ಅಲ್ವಾ..! ಈ ಹೆಸರಿಟ್ಟಾಗ ನೋಕಿಯಾ ತಲೆಯಲ್ಲಿ ಏನಿತ್ತೋ ಏನೋ?

ಸ್ಯಾಮ್‌ಸಂಗ್ :) Samsung :)

ಸ್ಯಾಮ್‌ಸಂಗ್ :) Samsung :)

ಸ್ಯಾಮ್‌ಸಂಗ್ 2010ರಲ್ಲಿ ಬಿಡುಗಡೆ ಮಾಡಿದ ತನ್ನ ಪೋನ್‌ಗೆ ಏನು ಹೆಸರು ಕೊಡದೇ ಕೇವಲ :) ಈ ರೀತಿ ಹೆಸರು ಕೊಟ್ಟಿತ್ತು.

ಕ್ಯಾಸಿಯೋ ಜಿಜೋನ್ ಕಮಾಂಡೋ Casio G'zOne Commando

ಕ್ಯಾಸಿಯೋ ಜಿಜೋನ್ ಕಮಾಂಡೋ Casio G'zOne Commando

ಎನ್‌ಇಸಿ ಕ್ಯಾಸಿಯೋ ಮೊಬೈಲ್ ಕಮ್ಯುನಿಕೇಷನ್ ಕಂಪನಿ 2013ರಲ್ಲಿ ಬಿಡುಗಡೆ ಮಾಡಿದ ಈ ಫೋನ್ ಹೆಸರು ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಆದರೂ ಕ್ಯಾಸಿಯೋ ಜಿಜೋನ್ ಕಮಾಂಡೋ ಎಂಬ ಸ್ಮಾರ್ಟ್‌ಫೋನ್ ಇರುವುದಂತೂ ಸತ್ಯ.

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ ಎಸ್‌ II ಎಪಿಕ್ 4G ಟಚ್ Samsung Galaxy S II Epic 4G Touch

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ ಎಸ್‌ II ಎಪಿಕ್ 4G ಟಚ್ Samsung Galaxy S II Epic 4G Touch

ಸ್ಯಾಮ್‌ಸಂಗ್ 2011ರಲ್ಲಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ನಲ್ಲಿ 3 ರೀತಿಯ ಹೆಸರನ್ನು ನೀಡಿತ್ತು. ಟಚ್, 4G, ಎಪಿಕ್‌ ಯಾಕಂತ್ ಗೊತ್ತಿಲ್ಲ.

ಹೆಚ್‌ಪಿ ಪ್ರೇ 3 HP Pre 3

ಹೆಚ್‌ಪಿ ಪ್ರೇ 3 HP Pre 3

ಇದು ಖಂಡಿತ ರೈಮ್‌ ಅಲ್ಲ. ಹೆಚ್‌ಪಿ 2011ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್ ಪ್ರೇ 3 ಎಂಬ ಹೆಸರಿಟ್ಟುಕೊಂಡಿತು. ಹೆಸರಿನ ಕಾರಣಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಈ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಉಳಿಯಲಿಲ್ಲ.

ಹೆಚ್‌ಟಿಸಿ ಒನ್‌ಎಂ9+ ಸುಪ್ರಿಂ ಕ್ಯಾಮೆರಾ HTC One M9+ Supreme Camera

ಹೆಚ್‌ಟಿಸಿ ಒನ್‌ಎಂ9+ ಸುಪ್ರಿಂ ಕ್ಯಾಮೆರಾ HTC One M9+ Supreme Camera

2015ರಲ್ಲಿ ಹೆಚ್‌ಟಿಸಿ ತನ್ನ ಸ್ಮಾರ್ಟ್‌ಫೋನ್‌ಗೆ ಇಷ್ಟುದ್ದ ಹೆಸರಿಟ್ಟಿತ್ತು. ಯಾರ್ ನೆನಪಿಟ್ಕೋತಾರೆ ಇಷ್ಟು ದೊಡ್ಡ ಹೆಸರನ್ನು ಅಲ್ವಾ..!

Best Mobiles in India

English summary
six-year-old boy called Ryan, who reviews toys on YouTube will start selling his own brand of toys on Walmart. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+