Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಸಚಿನ್‌

By Super
ಫೇಸ್‌ಬುಕ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಸಚಿನ್‌

ಕ್ರಿಕೆಟ್‌ ದೇವರು ಮಾಸ್ಟರ್‌ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ ಸೋಮವಾರ ಬೆಳಗ್ಗೆ ವಿಶ್ವದ ನಂಬರ್‌ 1 ಸಾಮಾಜಿಕ ತಾಣವಾದ ಫೇಸ್‌ಬುಕ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸಾಮಾಜಿ ತಾಣ ಪ್ರವೇಶದ ಕೆಲವೇ ಗಂಟೆಗಳಲ್ಲಿ ಸಚಿನ್ ಬರೊಬ್ಬರಿ 4,07,908 ಲೈಕ್ಸ್ ಪಡೆದಿದ್ದಾರೆ.

ಸಚಿನ್ ಮೊದಲಿಗೆ 2010 ರಲ್ಲಿ ಟ್ವಿಟ್ಟರ್‌ ಮೂಲಕ ಅಂತರ್ಜಾಲ ಪ್ರವೇಶಿಸಿದ್ದು ಮೊದಲನೇ ದಿನವೇ ಟ್ವಿಟ್ಟರ್‌ನ ಹೆಚ್ಚು ಜನಪ್ರಿಯ ತಾರೆ ಎಂದೆನಿಸಿಕೊಂಡಿದ್ದಾರೆ. ಸಧ್ಯಕ್ಕೆ ಕ್ರಿಕೆಟ್ ತಾರೆಯ ಹಿಂದೆ ಟ್ವಿಟ್ಟರ್‌ನಲ್ಲಿ 26,80,791 ಮಂದಿ ಫಾಲೋ ಮಾಡುತ್ತಿದ್ದಾರೆ.

http://www.facebook.com/SachinTendulkar ಪೇಜ್‌ನ ಮೂಲಕ ತೆಂಡೂಲ್ಕರ್‌ ಪರಸ್ಪರವಾಗಿ ಅಭಿಮಾನಿಗಳೊಂದಿಗೆ ತಮ್ಮ ಫೋಟೊಗಳು, ವಿಡಿಯೋಗಳು ಹಾಗೂ ಪಂದ್ಯಾವಳಿಯ ಅಪ್ಡೇಟ್‌ಗಳನ್ನು ಹಂಚಿಕೊಳ್ಳಲಿದ್ದಾರೆ. ಇದಲ್ಲದೇ ಪೇಜ್‌ನಲ್ಲಿ ಸಚಿನ್‌ರ ಅಪರೂಪದ ಫೋಟೊಗಳನ್ನು ಸಹ ನೋಡಬಹುದಾಗಿದೆ.

ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಟೆಸ್ಟ್(190) ಹಾಗೂ ಒನ್ ಡೇ(463) ಪಂದ್ಯ ಗಳನ್ನಾಡಿರುವ ಏಕೈಕ ಆಟಗಾರ ಎಂದೆನಿಸಿ ಕೊಂಡಿರುವ ಸಚಿನ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ 22 ವರ್ಷಗಳ ಸುದೀರ್ಘ ಕ್ರಿಕೆಟ್‌ ಪಯಣದ ಕುರಿತು ಅನುಭವ ಹಂಚಿಕೊಂಡಿದ್ದಾರೆ.

ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ವಿಶ್ವಕಪ್ ಎತ್ತುಹಿಡಿದ ಭಾರತದ ಕಿರಿಯರ ಕ್ರಿಕಟ್‌ ತಂಡಕ್ಕೆ ಶುಭಹಾರೈಸಿದ್ದಾರೆ.

ಅಲ್ಲದೇ ಕ್ಯಾನ್ಸರ್‌ ವಿರುದ್ಧ ಹೋರಾಡಿ ತಂಡಕ್ಕೆ ಹಿಂದಿರುಗುತ್ತಿರುವ ಯುವ್‌ರಾಜ್‌ ಸಿಂಗ್‌ ಬಗ್ಗೆಯೂ ಮಾತನಾಡಿರುವ ಸಚಿನ್‌, ಆರೋಗ್ಯದ ಸಮಸ್ಯೆಯ ನಡುವೆಯೂ ಯುವಿ ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನಕ್ಕೆ ಪಂದ್ಯಾವಳಿಯ ಶ್ರೇಷ್ಠ ಆಟಗಾರನೆಂಬ ಗೌರವ ದೊರೆತದ್ದು ನನಗೆ ಖುಷಿ ನೀಡಿದೆ, "ಯುವಿ ಈಸ್ ಮೈ ಚಾಂಪಿಯನ್‌" ಎಂದು ಹೊಗಳಿದ್ದಾರೆ.

ಇತ್ತೀಚೆಗೆ ತಾನೆ ಮುಗಿದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯಾವಳಿಯಲ್ಲಿ ಕೀವೀಸ್ ವೇಗಿಗಳಿಗೆ ಸತತ 3 ಬಾರಿ ಬೌಲ್ಡ ಔಟ್‌ ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವ ಸಚಿನ್ ಅವರಿಗೆ ಫೇಸ್‌ಬುಕ್ ಮೂಲಕ ಅವರ ಅಭಿಮಾನಿಗಳಿಂದ ಯಾವರೀತಿ ಪ್ರತಿಕ್ರಿಯೇ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದಲ್ಲದೇ ಸಚಿನ್‌ರ ಸಮಕಾಲೀನರಾದ ಅನಿಲ್ ಕುಂಬ್ಳೆ, ಸೌರವ್‌ ಗಂಗೂಲೀ, ರಾಹುಲ್‌ ದ್ರಾವಿಡ್‌ ಹಾಗೂ ವಿ.ವಿ.ಎಸ್ ಲಕ್ಷ್ಮಣ್ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದು ಹಲವರು ಸಚಿನ್‌ಗೆ ನಿವೃತ್ತಿ ಹೊಂದಲು ಸೂಕ್ತ ಸಂದರ್ಭ ಎಂದು ದನಿಯೆತ್ತಿರುವಾಗ ಸಾಮಾಜಿಕ ತಾಣ ಪ್ರವೇಶಿಸಿರು ಮಾಸ್ಟರ್‌ ಬ್ಲಾಸ್ಟರ್‌ಗೆ ಯಾವರೀತಿ ಪ್ರತಿಕ್ರಿಯೆಗಳು ಬರಲಿವೆ ಎಂಬುದು ಕತೂಹಲ ಮೂಡಿಸಿದೆ.ಏನೇ ಟೀಕೆ ಟಿಪ್ಪಣಿಗಳಿದ್ದರೂ ಅವುಗಳೆಲ್ಲಾ ಸಚಿನ್‌ ತಮ್ಮ ಬ್ಯಾಟ್‌ನಿಂದ 101 ಶತಕ ಸಿಡಿಸಿದ ಮರುಕ್ಷಣವೇ ಮೂಲೆಗುಂಪಾಗುತ್ತವೆ ಎಂಬುದು ಸುಳ್ಳಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+