Subscribe to Gizbot

'ಮಾರುಕಟ್ಟೆಗೆ ಬರಲಿದೆ ಸಚಿನ್ ಸ್ಮಾರ್ಟ್‌ಫೋನ್': ಮೇ 3ಕ್ಕೆ ಬಿಡುಗಡೆ

Written By:

ಕ್ರಿಕೆಟ್ ದೈತ್ಯ ಸಚಿನ್ ತೆಂಡೂಲ್ಕರ್ ಜೊತೆಗೂಡಿದ ಸ್ಮಾರ್ಟ್ರಾನ್ ಹೊಸ ಸ್ಮಾರ್ಟ್‌ಫೋನ್‌ ವೊಂದನ್ನು ಮಾರಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಸಚಿನ್ ಹೆಸರನ್ನ ತನ್ನ ಸ್ಮಾರ್ಟ್‌ಫೋನ್‌ಗೆ ಇಟ್ಟಿದೆ. ಈ ಕಂಪನಿಯ ಬಂಡವಾಳಗಾರರಲ್ಲಿ ಸಚಿನ್ ಸಹ ಒಬ್ಬರು ಎನ್ನಲಾಗಿದೆ.

'ಮಾರುಕಟ್ಟೆಗೆ ಬರಲಿದೆ ಸಚಿನ್ ಸ್ಮಾರ್ಟ್‌ಫೋನ್': ಮೇ 3ಕ್ಕೆ ಬಿಡುಗಡೆ

ಭಾರತೀಯ ಮೂಲದ ಸ್ಮಾರ್ಟ್ರಾನ್ ಕಂಪನಿ ಈಗಾಗಲೇ ಎರಡು ಮೂರು ಫೋನ್‌ಗಳನ್ನು ಬಿಡುಗಡೆ ಮಾಡಿದ್ದರೆ ದೊಡ್ಡ ಪ್ರಮಾಣದ ಯಶಸ್ಸು ಕಂಡಿಲ್ಲ. ಈ ಹಿನ್ನಲೆಯಲ್ಲಿ ಸಚಿನ್ ಮುಂದಿಟ್ಟುಕೊಂಡು ಡೊಡ್ಡ ಮಟ್ಟದ ಪ್ರಚಾರವನ್ನು ಪಡೆಯುವುದಲ್ಲದೇ, ಸಚಿನ್‌ಗೆ ಗೌರವ ಸಲ್ಲಿಸುವುದು ಈ ಕಂಪನಿಯ ಉದ್ದೇಶವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
SRT ಫೋನ್‌:

SRT ಫೋನ್‌:

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲಕದ ಕಂಪನಿಗಳ ಆರ್ಭಟವೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಭಾರತೀಯ ಮೂಲಕ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯೊಂದು ಮಾರುಕಟ್ಟೆಯಲ್ಲಿ ಹೊಸ ಪ್ರಯತ್ನ ಮಾಡುತ್ತಿದೆ. ಸಚಿನ್ ಅಭಿಮಾನಿಗಳು ಸೆಳೆಯುವ ದೃಷ್ಠಿಯಿಂದ ತನ್ನ ಫೋನಿಗೆ SRT ಫೋನ್‌ ಎಂದು ನಾಮಕರಣ ಮಾಡಿದೆ

ಮೇ 3ಕ್ಕೆ ಬಿಡುಗಡೆ:

ಮೇ 3ಕ್ಕೆ ಬಿಡುಗಡೆ:

ಕ್ರಿಕೆಟ್ ದೈತ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿರುವ ಪೋನ್ ಮೇ 3 ರಂದು ಲಾಂಚ್ ಆಗಲಿದೆ ಎನ್ನಲಾಗಿದೆ. ಈಗಾಗಲೇ ಸಚಿನ್ ಅಭಿಮಾನಿಗಳು ಈ ಫೋನನ್ನು ಕೊಳ್ಳಲು ಕಾತುರರಾಗಿದ್ದಾರೆ.

ಮೊದಲ ಬಾರಿಗೆ ಪಾಲುದಾರಿಕೆ ಮುಂದಾದ ಸಚಿನ್:

ಮೊದಲ ಬಾರಿಗೆ ಪಾಲುದಾರಿಕೆ ಮುಂದಾದ ಸಚಿನ್:

ಭಾರತೀಯ ಮೂಲದ ಸ್ಮಾರ್ಟ್ರಾನ್ ಕಂಪನಿ ಯೊಂದಿಗೆ ಸಚಿನ್ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಪಾಲುದಾರಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ರಾಯಭಾರಿ ಆಗುತ್ತಿದ್ದ ಸಚಿನ್ ಮೊದಲ ಬಾರಿಗೆ ಹೂಡಿಕೆ ಮಾಡಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ.

SRT ಫೋನ್‌ ವಿಶೇಷತೆ:

SRT ಫೋನ್‌ ವಿಶೇಷತೆ:

SRT ಫೋನ್‌ ನಲ್ಲಿ ಅಮೊಲೈಡ್ ಫುಲ್ HD ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 810 ಪ್ರೋಸೆಸರ್ ಹಾಗೂ 4 GB RAM ಅನ್ನು ಈ ಫೋನಿನಲ್ಲಿ ಇದೆ ಎನ್ನಲಾಗಿದೆ.

4G ಸಪೋರ್ಟ್ ಮಾಡಲಿದೆ:

4G ಸಪೋರ್ಟ್ ಮಾಡಲಿದೆ:

SRT ಫೋನ್‌ 4G ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ನೋಡಲು ಉತ್ತಮ ವಿನ್ಯಾಸವನ್ನು ಈ ಫೋನಿನಲ್ಲಿ ನೀಡಲಾಗಿದೆ. ಈ ಫೋನಿನ ಕುರಿತ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ, ಇದಕ್ಕಾಗಿ ಮೇ 3 ವರೆಗೆ ಕಾಯಲೇಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Smartron is set to launch its next smartphone which will be in association with cricket legend Sachin Tendulkar. know to more kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot