Subscribe to Gizbot

ವೆಬ್‌ಸೈಟಿನಲ್ಲಿಯೂ ಮಾಜಿ-ಹಾಲಿ ಸಿಎಂ ದ್ವೇಷ ಸಾಧನೆ

Posted By: Varun
ವೆಬ್‌ಸೈಟಿನಲ್ಲಿಯೂ ಮಾಜಿ-ಹಾಲಿ ಸಿಎಂ ದ್ವೇಷ ಸಾಧನೆ

ನಾಳೆ ಇಟಲಿ ಹಾಗು ಸ್ಪೇನ್ ದೇಶಗಳು ಯೂರೋ ಕಪ್ 2012 ಗಾಗಿ ಸೆಣೆಸಾಟ ನಡೆಸುವುದಕ್ಕಿಂತ ಮಜವಾಗಿದೆ, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಸದಾನಂದ ಗೌಡರ ಕಾಳಗ.

ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡೋದು ಅತ್ಲಾಕಡೆ ಇರ್ಲಿ, ಮುಖ ಕೊಟ್ಟು ಮಾತಾಡೋದ್ ಇರ್ಲಿ,ಇಬ್ಬರ ದ್ವೇಷ ಎಷ್ಟು ತಾರಕಕ್ಕೇರಿದೆ ಅಂದ್ರೆ, ಇಂಟರ್ನೆಟ್ ನಲ್ಲಿ ಇವರಿಬ್ಬರ ಮುಖವಾಣಿಯಾಗಿರುವ ವೆಬ್ಸೈಟ್ ನಲ್ಲಿ ಕೂಡ ಇದು ವ್ಯಕ್ತವಾಗಿದೆ.

ಸಾರ್ವಜನಿಕವಾಗಿ ಮುಸುಕಿನ ಗುದ್ದಾಟ ನಡೆಸುತ್ತಿರುವ ಇಬ್ಬರೂ ಕೂಡ ತಮ್ಮ ಬಗ್ಗೆ, ತಮ್ಮ ಆಡಳಿತಾವಧಿಯಲ್ಲಿ ತಾವು ಮಾಡಿದ/ಮಾಡಿರುವ ಸಾಧನೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರುವುದರ ಜೊತೆಗೆ ವೆಬ್ಸೈಟಿನಲ್ಲೂ ಅದನ್ನೇ ಮುಂದುವರೆಸಿದ್ದಾರೆ.

ಯಡಿಯೂರಪ್ಪ ತಮ್ಮ ವೆಬ್ಸೈಟಿನಲ್ಲಿ ತಮ್ಮ ಮೊಮ್ಮಗಳ ಮದುವೆ ಬಗ್ಗೆ, ಮೀಡಿಯಾದಲ್ಲಿ ತಮ್ಮ ಬಗ್ಗೆ ಬಂದಿರುವ ಲೇಖನಗಳ ಬಗ್ಗೆ, ಅವರ 3 ವರ್ಷದ ಸಾಧನೆಗಳ ಬಗ್ಗೆ ಹಾಕಿಕೊಂಡರೆ, ಸದಾನಂದ ಗೌಡರೂ ಇತ್ತೀಚಿಗೆ ಯಶಸ್ವಿಯಾದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ 2012 ರ ಸ್ಲೈಡರ್ ಹಾಗು "ಸಕಾಲ" ಯೋಜನೆಯ ಬಗ್ಗೆ ಮುಖಕ್ಕೆ ರಾಚುವಂತೆ ಹೋಂ ಪೇಜ್ ನಲ್ಲಿ ಹಾಕಿಕೊಂಡಿದ್ದಾರೆ.

ಆದರೆ ಇಬ್ಬರ ಗ್ಯಾಲರಿ ನೋಡಿದರೆ ಮಾತ್ರ ನಿಮಗೆ ಗೊತ್ತಾಗುತ್ತದೆ, ಇಬ್ಬರೂ ಪರಸ್ಪರ ಎಷ್ಟು ದ್ವೇಷ ಮಾಡುತ್ತಾರೆ ಅಂತ. ಸದಾನಂದ ಗೌಡರು ಹಿಂದೂ ಶಕ್ತಿ ಸಂಗಮ, ಸ್ವಾತಂತ್ರ್ಯ ದಿನಾಚರಣೆ, ಹಾಗು ತಮ್ಮದೇ ಭಾವಚಿತ್ರಗಳಿರುವ ಫೋಲ್ಡರ್ ಅನ್ನು ಫೋಟೋ ಗ್ಯಾಲರಿಯಲ್ಲಿ ಹಾಕಿಕೊಂಡಿದ್ದು, ಸುಮ್ಮರು 140 ಕ್ಕೂ ಹೆಚ್ಚು ಚಿತ್ರಗಳ ಪೈಕಿ ಒಂದು ಫೋಟೋ ಕೂಡ, ತಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪನವರ ಫೋಟೋ ಆಗಲಿ, ಅವರ ಜೊತೆ ಇರುವ ಫೋಟೋ ವನ್ನೂ ಹಾಕಿಕೊಂಡಿಲ್ಲ!!

ಇತ್ತ ಯಡಿಯೂರಪ್ಪನವರ ವೆಬ್ಸೈಟ್ ನ ಫೋಟೋ ಗ್ಯಾಲರಿಯಲ್ಲಿ ಏನಾದರೂ ಸದಾನಂದ ಗೌಡರ ಫೋಟೋ ಅಪ್ಪಿ ತಪ್ಪಿಇದ್ಯಾ ಎಂದು ನೋಡಿದರೆ, ನಿರಾಸೆ ಆಗುವುದು ಗ್ಯಾರಂಟಿ. ತಮ್ಮ ವಿದೇಶೀ ಪ್ರವಾಸಗಳ, ಅಸೆಂಬ್ಲಿಯಲ್ಲಿನ ಚರ್ಚೆಯ ಬಗ್ಗೆ, ಪಾರ್ಟಿ ಮೀಟಿಂಗ್, ಸಾರ್ವಜನಿಕ ಬದುಕಿನ, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದು, ಖ್ಯಾತ ವ್ಯಕ್ತಿಗಳ ಜೊತೆ, ಹೀಗೆ 200ಕ್ಕೂ ಹೆಚ್ಚು ಫೋಟೋಗಳಿದ್ದು, ಸೈಡಿನಲ್ಲಿ ಕೂಡ ಸದಾನಂದ ಗೌಡರ ಒಂದು ಸ್ಮೈಲಿಂಗ್ ಫೋಟೋ ಕೂಡ ಇಲ್ಲ.

ಆಶ್ಚರ್ಯ ಏನೆಂದರೆ, ತಮಗೆ ಕೈಕೊಟ್ಟ ಕುಮಾರಸ್ವಾಮಿಯವರ ಜೊತೆ ಇರುವ ಫೋಟೋವನ್ನು ಇನ್ನೂ ವೆಬ್ಸೈಟಿನಲ್ಲಿ ಹಾಕಿಕೊಂಡಿರುವ ಯಡಿಯೂರಪ್ಪನವರು ತಮ್ಮದೇ ಪಕ್ಷದ, ಸಿಎಂ ಆಗಲಿ ಅಂತ ತಾವೇ ಆಯ್ಕೆ ಮಾಡಿದ್ದ ಸದಾನಂದ ಗೌಡರ ಒಂದೇ ಒಂದು ಫೋಟೋವನ್ನೂ ವೆಬ್ಸೈಟ್ ನಲ್ಲೂ ಹಾಕಿಕೊಂಡಿಲ್ಲ ಅಂದರೆ ಮನಸ್ಸಲ್ಲಿ ಇನ್ನೆಷ್ಟು ದ್ವೇಷ ಇರಬಹುದು ಅಂತ ಗೊತ್ತಾಗುತ್ತೆ.

ನಿಮಗೆ ನಂಬಿಕೆ ಇಲ್ಲ ಅಂದ್ರೆ ಅವರ ವೆಬ್ಸೈಟ್ ಲಿಂಕ್ ಕೊಡ್ತೀವಿ, ಒಂದು ಟೂರ್ ಹೊಡ್ಕೊಂಡ್ ಬನ್ನಿ ಗೊತ್ತಾಗುತ್ತೆ -

ಸದಾನಂದ ಗೌಡರ ವೆಬ್ಸೈಟ್ - sadanandagowda.com

ಯಡಿಯೂರಪ್ಪನವರ ವೆಬ್ಸೈಟ್ - http://yeddyurappa.in

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot