'ChatGPT'ಯನ್ನೇ ಮೀರಿಸಿದ ಸದ್ಗುರು ಅವರ 'Miracle of Mind' ಅಪ್ಲಿಕೇಶನ್!
ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ವಿಷಯದಲ್ಲಿ ಸದ್ಗುರು ಅವರು ಪ್ರಾರಂಭಿಸಿರುವ ಉಚಿತ ಧ್ಯಾನದ ಆಪ್ 'ಮಿರಾಕಲ್ ಆಫ್ ಮೈಂಡ್' (Miracle of Mind) ಚಾಟ್‌ಜಿಪಿಟಿ (ChatGPT) ಯನ್ನೇ ಮೀರಿಸಿ ಗಮನಸೆಳೆದಿದೆ. ಆಧ್ಯಾತ್ಮಿಕ ನಾಯಕ ಸದ್ಗುರು ಅವರ ಇಶಾ ಕೇಂದ್ರದಿಂದ (Isha foundation) 'ಮಿರಾಕಲ್ ಆಫ್ ಮೈಂಡ್' ಎಂಬ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಅಪ್ಲಿಕೇಷನ್ ಅನ್ನು AI- ಚಾಲಿತ ವೈಶಿಷ್ಟ್ಯದಲ್ಲಿ ಪರಿಚಯಿಸಲಾಗಿದ್ದು, ಇದೀಗ ಈ ಅಪ್ಲಿಕೇಶನ್ ದಾಖಲೆಯನ್ನು ನಿರ್ಮಿಸಿದೆ.
ಇದೇ ಮಹಾಶಿವರಾತ್ರಿಯಂದು (ಫೆಬ್ರವರಿ 26) ಬಿಡುಗಡೆಯಾದ ಹೊಸ 'ಮಿರಾಕಲ್ ಆಫ್ ಮೈಂಡ್' ಅಪ್ಲಿಕೇಶನ್ ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ, ಇದು ChatGPT ಯ ಆರಂಭಿಕ ಡೌನ್‌ಲೋಡ್‌ಗಳನ್ನೇ ಮೀರಿಸಿದೆ ಎಂದು ಹಲವು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ಇಷ್ಟೇ ಅಲ್ಲದೇ, ಭಾರತ, ಯುಎಸ್ಎ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಸಿಂಗಾಪುರ್, ಮಲೇಷ್ಯಾ, ಹಾಂಗ್ ಕಾಂಗ್, ಜರ್ಮನಿ, ಕೀನ್ಯಾ ಮತ್ತು ಯುಎಇ ಸೇರಿದಂತೆ 20 ದೇಶಗಳಲ್ಲಿ ಟ್ರೆಂಡಿಂಗ್‌ನಲ್ಲಿರುವ ಅಪ್ಲಿಕೇಶನ್ ಇದಾಗಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ.
ಇಂಗ್ಲಿಷ್, ಹಿಂದಿ, ತಮಿಳು, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿರುವ ಈ ಅಪ್ಲಿಕೇಶನ್‌ನ 7 ನಿಮಿಷಗಳ ಮಾರ್ಗದರ್ಶಿ ಧ್ಯಾನವನನ್ನು ಒಳಗೊಂಡಿದೆ, ಧ್ಯಾನದ ಸರಳತೆ ಮತ್ತು ಪರಿಣಾಮಕಾರಿತ್ವದಿಂದ ಪ್ರಪಂಚದಾದ್ಯಂತ ಬಳಕೆದಾರರನ್ನು ಆಕರ್ಷಿಸುತ್ತದೆ. ಧ್ಯಾನದ ಹೊರತಾಗಿ, ಅಪ್ಲಿಕೇಶನ್ AI- ಚಾಲಿತ ವೈಶಿಷ್ಟ್ಯವನ್ನು ನೀಡುತ್ತದೆ, ಅದು ವೈಯಕ್ತಿಕಗೊಳಿಸಿದ ಬುದ್ಧಿವಂತಿಕೆ ಮತ್ತು ಒಳನೋಟಗಳ ಜೊತೆಗೆ ವಿವಿಧ ವಿಷಯಗಳ ಕುರಿತು ಸದ್ಗುರು ಅವರ ವಿಚಾರಗಳನೊಳಗೊಂಡ ಬೋಧನೆಯನ್ನು ಸಹ ಒದಗಿಸುತ್ತದೆ. ಮತ್ತು ಅದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ X ನಲ್ಲಿ ಸದ್ಗುರು ಅವರು, "2050 ರ ವೇಳೆಗೆ, ವಿಶ್ವದ ಜನಸಂಖ್ಯೆಯ ಸುಮಾರು 30-33% ಜನರು ಮಾನಸಿಕ ಅಸ್ವಸ್ಥರಾಗುವ ಸಾಧ್ಯತೆ ಇದೆ. ಏಕೆಂದರೆ ನಾವು ಯಾವಾಗಲೂ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹೊರಗಡೆ ಹುಡುಕುತ್ತೇವೆ. ಆದರೆ, ಪರಿಹಾರಗಳು ನಮ್ಮ ಒಳಗೆಲ್ಲವೇ ಇದೆ, ಆದರೆ ನಮಗೆ ಅದರ ಅರಿವಿಲ್ಲ. ಮಿರಾಕಲ್ ಆಫ್ ಮೈಂಡ್ ಆಪ್ಲಿಕೇಶನ್ ನಿಮ್ಮನ್ನು ನಿಮ್ಮನ್ನು ಅರಿಯಲು ಸಹಾಯ ಮಾಡುತ್ತದೆ. ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಪ್ರತಿದಿನವೂ 7 ನಿಮಿಷ ಹೂಡಿಕೆ ಮಾಡುವುದು ಅಗತ್ಯವಾಗಿದೆ. ಇದನ್ನು ಸಾಧ್ಯವಾಗಿಸಲು ನಾವು ಪ್ರಯತ್ನಿಸೋಣ" ಎಂದು ಅವರು ಹೇಳಿದ್ದಾರೆ.
ಸೋಷಿಯಲ್ ಮಿಡಿಯಾ, ಗೇಮಿಂಗ್ ಮತ್ತು ಎಡಿಟಿಂಗ್ ಸಾಫ್ಟ್‌ವೇರ್ ನಂತಹ ಅಪ್ಲಿಕೇಶನ್‌ಗಳು ಹೆಚ್ಚು ಡೌನ್‌ಲೋಡ್ ಆಗುತ್ತಿದ್ದ ಸುದ್ದಿಗಳನ್ನು ನಾವು ಹೆಚ್ಚಾಗಿ ಕೇಳುತ್ತಿದ್ದೆವು. ಇದೀಗ ಮಾನಸಿಕ ಆರೋಗ್ಯದ ಸವಾಲುಗಳು ಹೆಚ್ಚುತ್ತಿರುವ ನಿರ್ಣಾಯಕ ಸಮಯದಲ್ಲಿ ' ಮಿರಾಕಲ್ ಆಫ್ ಮೈಂಡ್' ಅಪ್ಲಿಕೇಶನ್ ದಾಖಲೆಯನ್ನೇ ನಿರ್ಮಿಸಿದೆ. 2022 ರಲ್ಲಿ ಭಾರತದಲ್ಲಿ 1.71 ಲಕ್ಷ ಜನರು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿಪ್ರಸ್ತುತ ಸುಮಾರು 60 ರಿಂದ 70 ಮಿಲಿಯನ್ ಜನರು ಸಾಮಾನ್ಯ ಮತ್ತು ತೀವ್ರ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ ಎಂಬ ಅಂಶಗಳು ಕೂಡ ಇದಕ್ಕೆ ಕಾರಣ ಇರಬಹುದು.


Click it and Unblock the Notifications








