Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ಒಂದು ಕೋಟಿ ರೂ. ಬೆಲೆಯ ಸ್ಮಾರ್ಟ್‌ಟಿವಿ ಲಾಂಚ್‌; ಅಂತಹದ್ದೇನಿದೆ ಇದರಲ್ಲಿ!

ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಡಿಮ್ಯಾಂಡ್‌ ಹೊಂದಿವೆ. ವಿಭಿನ್ನ ಬೆಲೆ ಶ್ರೇಣಿಯ ಸ್ಮಾರ್ಟ್‌ಟಿವಿಗಳಿಂದ ಗುರುತಿಸಿಕೊಂಡಿರುವ ಸ್ಯಾಮ್‌ಸಂಗ್‌ ಕಂಪೆನಿ ಇದೀಗ ಹೊಸ ಸ್ಮಾರ್ಟ್‌ಟಿವಿ ಪರಿಚಯಿಸಿದೆ. ಇದನ್ನು ಸ್ಯಾಮ್‌ಸಂಗ್‌ ಮೈಕ್ರೋ ಎಲ್‌ಇಡಿ ಟಿವಿ ಎಂದು ಹೆಸರಿಸಲಾಗಿದ್ದು, ತನ್ನ ಐಷಾರಾಮಿ ಟಿವಿ ಇದಾಗಿದೆ.

ಹೌದು, ಸ್ಯಾಮ್‌ಸಂಗ್‌ ಮೈಕ್ರೋ ಎಲ್‌ಇಡಿ ಟಿವಿ ಬಿಡುಗಡೆ ಆಗಿದೆ. ಇದು 110 ಇಂಚಿನ ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಐಷಾರಾಮಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಆದರೆ ಇದರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಯಾಕಂದ್ರೆ ಈ ಸ್ಮಾರ್ಟ್‌ಟಿವಿ ಬೆಲೆ ಒಂದು ಕೋಟಿ ರೂ.ಗಳಿಗೂ ಅಧಿಕವಾಗಿದೆ. ಹಾಗಾದ್ರೆ ಕೋಟಿ ರೂ. ಬೆಲೆಬಾಳುವ ಈ ಸ್ಮಾರ್ಟ್‌ಟಿವಿಯಲ್ಲಿ ಅಂತಹದ್ದೇನಿದೆ? ಇದರ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನಿಂದ ಒಂದು ಕೋಟಿ ರೂ. ಬೆಲೆಯ ಸ್ಮಾರ್ಟ್‌ಟಿವಿ ಲಾಂಚ್‌;

ಸ್ಯಾಮ್‌ಸಂಗ್‌ ಮೈಕ್ರೋ ಎಲ್‌ಇಡಿ ಟಿವಿ ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್‌ ಮೈಕ್ರೋ ಎಲ್‌ಇಡಿ ಟಿವಿ 110 ಇಂಚಿನ ಮೈಕ್ರೋ LED 4K ಡಿಸ್‌ಪ್ಲೇ ಹೊಂದಿದೆ. ಇದು ನೀಲಮಣಿ ಗ್ಲಾಸ್ (sapphire glass) ಬಳಸಿ ಮಾಡಿದ 24.8 ಮಿಲಿಯನ್ ಮೈಕ್ರೋ-ಎಲ್‌ಇಡಿಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯು ಉತ್ತಮ ಸ್ಪಷ್ಟತೆ ಮತ್ತು ಕಾಂಟ್ರಾಸ್ಟ್‌ನೊಂದಿಗೆ ರೋಮಾಂಚಕ ಬಣ್ಣಗಳ ಮೂಲಕ ತಲ್ಲೀನಗೊಳಿಸುವ ವ್ಯೂ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ 120 FPS ನಲ್ಲಿ 4 ಸ್ಟ್ರೀಮ್‌ಗಳಿಗೆ ಬೆಂಬಲಿಸಲಿದೆ.

ಇನ್ನು ಸ್ಮಾರ್ಟ್‌ಟಿವಿ ಮೈಕ್ರೋ HDR, ಮಲ್ಟಿ-ಇಂಟೆಲಿಜೆನ್ಸ್ AI ಅಪ್‌ಸ್ಕೇಲಿಂಗ್, ವ್ಯೂ ಅಡಾಪ್ಟಿವ್ ಕಾಂಟ್ರಾಸ್ಟ್ ಮತ್ತು ಡೈನಾಮಿಕ್ ರೇಂಜ್ ಎಕ್ಸ್‌ಪಾನ್ಶನ್+ ನಂತಹ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಟಿವಿ ಮೈಕ್ರೋ ಎಲ್‌ಇಡಿ ಟಿವಿ ಮಲ್ಟಿ ವ್ಯೂ ಫೀಚರ್ಸ್‌ ಹೊಂದಿದೆ. ಇದು ಬಳಕೆದಾರರಿಗೆ ನಾಲ್ಕು ವಿಭಿನ್ನ ಮೂಲಗಳಿಂದ ಸೆಕೆಂಡಿಗೆ 120 ಫ್ರೇಮ್‌ಗಳವರೆಗೆ ಕಂಟೆಂಟ್‌ ಅನ್ನು ವ್ಯೂ ಮಾಡುವುದಕ್ಕೆ ಅನುಮತಿಸಲಿದೆ. ಇನ್ನು ಸ್ಮಾರ್ಟ್‌ಟಿವಿ M1 AI ಪ್ರೊಸೆಸರ್‌ನಲ್ಲಿ ರನ್‌ ಆಗಲಿದೆ. ಇದು ಕ್ಯೂ-ಸಿಂಫನಿಯೊಂದಿಗೆ ಬರಲಿದೆ.

ಸ್ಯಾಮ್‌ಸಂಗ್ ಮೈಕ್ರೋ LED 4K ಸ್ಮಾರ್ಟ್‌ಟಿವಿಯು ಮಿನಿಮಲಿಸ್ಟಿಕ್ ಮೊನೋಲಿತ್ ಡಿಸೈನ್‌ ಹೊಂದಿದೆ. ಇದರ ಸ್ಲಿಮ್‌ ಎಡ್ಜ್‌ಗಳ ಜೊತೆಗೆ ಯಾವುದೇ ಅಂತರವನ್ನು ಹೊಂದಿರುವ ಅದೃಶ್ಯ ರತ್ನದ ಉಳಿಯ ಮುಖವನ್ನು ನೀಡುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ, ಸ್ಮಾರ್ಟ್‌ಟಿವಿಯಲ್ಲಿ ನಿರ್ದಿಷ್ಟ ಆರ್ಟ್ ಮೋಡ್ ಮತ್ತು ಆಂಬಿಯೆಂಟ್ ಮೋಡ್ + ಫೀಚರ್ಸ್‌ ಅನ್ನು ನೀಡಲಾಗಿದೆ. ಇದು ಟಿವಿಯನ್ನು ಆರ್ಟ್ ಡಿಸ್‌ಪ್ಲೇ ವಾಲ್‌ ಆಗಿ ಮಾಡುವುದಕ್ಕೆ ಅನುಮತಿಸಲಿದೆ.

ಇನ್ನು ಸ್ಮಾರ್ಟ್‌ಟಿವಿಯಲ್ಲಿರುವ ಮೈಕ್ರೋ ಎಲ್‌ಇಡಿಗಳಿಂದಾಗಿ, ಸ್ಯಾಮ್‌ಸಂಗ್ ಮೈಕ್ರೋ ಎಲ್‌ಇಡಿ ಟಿವಿ ಮೈಕ್ರೋ ಕಾಂಟ್ರಾಸ್ಟ್, ಮೈಕ್ರೋ ಕಲರ್, ಮೈಕ್ರೋ ಎಚ್‌ಡಿಆರ್‌ನಂತಹ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇನ್ನು ಈ ಫೀಚರ್ಸ್‌ಗಳು ಮೈಕ್ರೋ ಎಐ ಪ್ರೊಸೆಸರ್‌ನಿಂದ ಚಾಲಿತವಾಗಿವೆ ಎಂದು ಹೇಳಲಾಗಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯಲ್ಲಿ ಅತ್ಯುತ್ತ ಸೌಂಡ್‌ ಸಿಸ್ಟಂಗಾಗಿ 6.2.2 ಚಾನಲ್‌ನಲ್ಲಿ 100W RMS ಸೌಂಡ್ ಸಿಸ್ಟಮ್‌ ಅಳವಡಿಸಲಾಗಿದೆ. ಇದು OTS ಪ್ರೊ, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಕ್ಯೂ-ಸಿಂಫನಿ ಬೆಂಬಲದೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸ್ಯಾಮ್‌ಸಂಗ್‌ 110 ಇಂಚಿನ ಮೈಕ್ರೋ LED ಟಿವಿ 1,14,99,000ರೂ. ಬೆಲೆಯನ್ನು ಹೊಂದಿದೆ. ಇದನ್ನು Samsung.com ಮೂಲಕ ಖರೀದಿಸಬಹುದು. ಜೊತೆಗೆ ದೇಶದಾದ್ಯಂತ ಆಯ್ದ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದು.

ಇನ್ನು ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 7.6 ಇಂಚಿನ ಇನರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಕವರ್‌ ಡಿಸ್‌ಪ್ಲೇ 6.2 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದೆ. ಇನ್ನು ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 13-ಆಧಾರಿತ One UI 5.1.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.

Best Mobiles in India

English summary
Samsung 110-Inch Micro LED Smart 4K TV Launched in India: Price Rs. 1 Crore only
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+