Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ಹೊಸ ಪವರ್‌ಬ್ಯಾಂಕ್‌ ಲಾಂಚ್‌ ! ಇದರ ಕಾರ್ಯದಕ್ಷತೆ ಹೇಗಿದೆ

ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಪವರ್‌ ಬ್ಯಾಂಕ್‌ಗಳಿಗೂ ಕೂಡ ಭಾರಿ ಬೇಡಿಕೆಯಿದೆ. ಇದಕ್ಕೆ ಅನುಗುಣವಾಗಿ ಸ್ಯಾಮ್‌ಸಂಗ್‌ ಕಂಪೆನಿ ಹಲವು ವಿಧದ ಪವರ್‌ಬ್ಯಾಂಕ್‌ಗಳನ್ನು ಪರಿಚಯಿಸಿದೆ. ಇದೀಗ ಹೊಸದಾಗಿ Samsung 20000mAh 45W ಪವರ್‌ಬ್ಯಾಂಕ್ ಅನ್ನು ಪರಿಚಯಿಸಿದೆ. ಈ ಪವರ್‌ ಬ್ಯಾಂಕ್‌ ಅನ್ನು ಯುನೈಟೆಡ್ ಕಿಂಗ್‌ಡಂನ ಚಿಲ್ಲರೆ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ಹೊಸ ಪವರ್‌ಬ್ಯಾಂಕ್ Samsung 20000mAh 45W ಅನ್ನು ಅನಾವರಣಗೊಳಿಸಿದೆ. ಇದನ್ನು ಏಕೈಕ ಬೀಜ್ ಬಣ್ಣದಲ್ಲಿ ಪಟ್ಟಿ ಮಾಡಲಾಗಿದೆ. ಇದು ಮೂರು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳೊಂದಿಗೆ ಬರಲಿದ್ದು, ಮಲ್ಟಿ-ಡಿವೈಸ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಹಾಗಾದ್ರೆ Samsung 20000mAh 45W ಪವರ್‌ ಬ್ಯಾಂಕ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನಿಂದ ಹೊಸ ಪವರ್‌ಬ್ಯಾಂಕ್‌ ಲಾಂಚ್‌ ! ಇದರ ಕಾರ್ಯದಕ್ಷತೆ ಹೇಗಿದೆ

Samsung 20000mAh 45W ಪವರ್‌ಬ್ಯಾಂಕ್ ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್ ಪವರ್‌ಬ್ಯಾಂಕ್ 20000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇನ್ನು ಈ ಪವರ್‌ಬ್ಯಾಂಕ್ ಒಂದೇ ಡಿವೈಸ್‌ನೊಂದಿಗೆ ಗರಿಷ್ಠ 45W ವಿದ್ಯುತ್‌ ಉತ್ಪಾದನೆಯನ್ನು ಬೆಂಬಲಿಸಲಿದೆ. ಇದಲ್ಲದೆ ಪವರ್‌ ಬ್ಯಾಂಕ್‌ ಒಟ್ಟು ಮೂರು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳೊಂದಿಗೆ ಬರಲಿದ್ದು, ಮಲ್ಟಿ ಡಿವೈಸ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಆದರೆ ಅನೇಕ ಸಾಧನಗಳು ಪವರ್‌ಬ್ಯಾಂಕ್‌ಗೆ ಸಂಪರ್ಕಗೊಂಡಾಗ ಔಟ್‌ಪುಟ್‌ನ ಸ್ಥಗಿತವನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.

ಅಂದರೆ ಪವರ್‌ಬ್ಯಾಂಕ್ ಒಂದೇ ಸಮಯದಲ್ಲಿ ಎರಡು ಸಾಧನಗಳನ್ನು ಚಾರ್ಜ್ ಮಾಡುವುದನ್ನು ಮಾತ್ರ ಬೆಂಬಲಿಸುತ್ತದೆ. ಇನ್ನು ಪರಿಸರ ಸ್ನೇಹಿ ಟ್ಯಾಗ್ ಅನ್ನು ಸುರಕ್ಷಿತವಾಗಿರಿಸಲು ಪವರ್‌ಬ್ಯಾಂಕ್ ಯುಎಲ್-ಪ್ರಮಾಣೀಕೃತ ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ ಎನ್ನಲಾಗಿದೆ. ಮರುಬಳಕೆಯ ವಸ್ತುಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರಿಂದ ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಅಂದರೆ ಈ ಪವರ್‌ಬ್ಯಾಂಕ್ ಅನ್ನು ಕನಿಷ್ಠ 20% ನಂತರದ ಗ್ರಾಹಕ ಮರುಬಳಕೆಯ ವಸ್ತುಗಳ ಮೂಲಕ ಸಿದ್ದಪಡಿಸಲಾಗಿದೆ.

Samsung 20000mAh 45W ಪವರ್‌ಬ್ಯಾಂಕ್ ಅನ್ನು USB ಟೈಪ್ C ಯಿಂದ USB ಟೈಪ್ C ಕೇಬಲ್‌ಗೆ ಇನ್‌ಪುಟ್ ಮಾಡುವುದಕ್ಕೆ ಅವಕಾಶವಿದೆ. ಅಲ್ಲದೆ ಪವರ್‌ಬ್ಯಾಂಕ್‌ನಿಂದ ಔಟ್‌ಪುಟ್ ಮಾಡಲು ಕೂಡ ಸಾದ್ಯವಿದೆ. ಜೊತೆಗೆ USB ಟೈಪ್ C ನಿಂದ USB ಟೈಪ್ ಕೇಬಲ್ 0.2m ಉದ್ದವನ್ನು ಹೊಂದಿದ್ದು, ಭಾಗ ಸಂಖ್ಯೆ EB-P4520XUEGEU ಅನ್ನು ಹೊಂದಿದೆ.ನೀವು ಇದನ್ನು 7.5 ಸೆಕೆಂಡುಗಳ ಕಾಲ ಪವರ್ ಬಟನ್ ಒತ್ತುವ ಮೂಲಕ ಪ್ರವೇಶಿಸಬಹುದಾಗಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಪವರ್‌ಬ್ಯಾಂಕ್‌ ಲಾಂಚ್‌ ! ಇದರ ಕಾರ್ಯದಕ್ಷತೆ ಹೇಗಿದೆ

Samsung 20000mAh 45W ಪವರ್‌ಬ್ಯಾಂಕ್ ಬೆಲೆ ಮತ್ತು ಲಭ್ಯತೆ
Samsung 20000mAh 45W ಪವರ್‌ಬ್ಯಾಂಕ್ ಅನ್ನು ಯುನೈಟೆಡ್ ಕಿಂಗ್‌ಡಂನ ಪ್ರಮುಖ ಇ-ಕಾಮರ್ಸ್ ಚಿಲ್ಲರೆ ವ್ಯಾಪಾರಿ ಮೊಬೈಲ್ ಫನ್‌ನಲ್ಲಿ ಪಟ್ಟಿ ಮಾಡಲಾಗಿದೆ. ಸದ್ಯ ಯುಎಸ್‌ನಲ್ಲಿ 20000mAh ಸಮರ್ಥ್ಯದ ಈ ಪವರ್‌ಬ್ಯಾಂಕ್ ಬೆಲೆ GBP 59.99 (ಅಂದಾಜು 6,350ರೂ)ಗಳಿಗೆ ಖರೀದಿಸಬಹುದಾಗಿದೆ.

Samsung Galaxy S24 Ultra ಸ್ಮಾರ್ಟ್‌ಫೋನ್‌ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 3120 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಈ ಡಿಸ್‌ಪ್ಲೇ 505 PPI ಪಿಕ್ಸೆಲ್‌ ಸಾಂದ್ರತೆಯೊಂದಿಗೆ, 2600 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಇದು 1-120Hz ನಡುವಿನ ವೇರಿಯಬಲ್ ರಿಫ್ರೆಶ್ ದರದೊಂದಿಗೆ ಸುಗಮ ದೃಶ್ಯ ಅನುಭವವನ್ನು ಒದಗಿಸುತ್ತದೆ.

ಇದು ನೋಟ್-ಟೇಕಿಂಗ್, ಡ್ರಾಯಿಂಗ್ ಮತ್ತು ಡಾಕ್ಯುಮೆಂಟ್ ಎಡಿಟಿಂಗ್‌ಗಾಗಿ ಎಸ್ ಪೆನ್ ಅನ್ನು ಬೆಂಬಲಿಸುತ್ತದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 12 GB RAM ಮತ್ತು 256GB, 512GB, ಹಾಗೂ 1TB ವರೆಗೆ ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ನೀಡಲಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Samsung 20000mAh 45W Powerbank Launched: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+