Samsung: ಎರಡು ಮೊಬೈಲ್‌ಗಳ ಜೊತೆಗೆ ರಿಂಗ್ ಬಿಡುಗಡೆಗೆ ಸಿದ್ಧವಾದ ಸ್ಯಾಮ್‌ಸಂಗ್..! ಸ್ಥಳ, ದಿನಾಂಕದ ಮಾಹಿತಿ
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳು (Samsung Galaxy Phone) ವಿಶೇಷವಾದ ಬೇಡಿಕೆ ಹೊಂದಿವೆ. ಇವುಗಳು ತಮ್ಮ ವಿಶೇಷ ಫೀಚರ್ಸ್ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತವೆ. ಹಾಗೂ ಈ ಮೊಬೈಲ್‌ಗಳು ತಮ್ಮದೇ ಆದ ಗ್ರಾಹಕರ ಬಳಗವನ್ನು ಹೊಂದಿವೆ.
ಇದೀಗ ಸ್ಯಾಮ್‌ಸಂಗ್ ಎರಡು ನೂತನ ಮೊಬೈಲ್‌ಗಳ ಜೊತೆಗೆ ಒಂದು ಸ್ಯಾಮ್ಸಂಗ್ ರಿಂಗ್ ಅನ್ನು ಕೂಡ ಬಿಡುಗಡೆಗೊಳಿಸಲು ಸಂಸ್ಥೆ ಸಿದ್ಧವಾಗಿದೆ ಎಂಬ ಅಂಶ ತಿಳಿದು ಬಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ z ಫೋಲ್ಡ್6 (Samsung Galaxy Z Fold6), ಸ್ಯಾಮ್‌ಸಂಗ್ ಗ್ಯಾಲಕ್ಸಿ Z Flip6 (Samsung Galaxy Z Flip6) ಮತ್ತು ಗ್ಯಾಲಕ್ಸಿ ರಿಂಗ್‌ನ ಅನ್‌ಬಾಕ್ಸ್ ಈವೆಂಟ್ ಜುಲೈ 10ರಂದು ಪ್ಯಾರಿಸ್ ನಲ್ಲಿ ನಡೆಯಲಿದೆ ಎಂದು ಕೊರಿಯನ್ ಮಾಧ್ಯಮಗಳು ವರದಿ ಮಾಡಿವೆ.

ಈ ಮೊಬೈಲ್‌ಗಳ ಬಿಡುಗಡೆ ಜುಲೈನಲ್ಲಿ ನಡೆಯಲಿದೆ ಎಂದು ಈ ಹಿಂದೆಯೇ ಮಾರ್ಚ್‌ನಲ್ಲಿ ವದಂತಿಗಳು ಹಬ್ಬಿತ್ತು ಆದರೆ, ಇದೀಗ ಕೊರಿಯನ್ ಮಾಧ್ಯಮಗಳು ವರದಿ ಮಾಡಿದ್ದು ಜುಲೈ 10ರಂದು ಪ್ಯಾರಿಸ್‌ನಲ್ಲಿ ಈ ಎರಡು ಮೊಬೈಲ್‌ಗಳು ಹಾಗೂ ಗ್ಯಾಲಕ್ಸಿ ರಿಂಗ್‌ನ ಲಾಂಚಿಂಗ್ ಈವೆಂಟ್ ನಡೆಯಲಿವೆ ಎಂದು ಕೊರಿಯನ್ ಮಾಧ್ಯಮಗಳು ವರದಿಯಲ್ಲಿ ತಿಳಿಸಿವೆ.
ಸ್ಯಾಮ್‌ಸಂಗ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿಕೃತ ಪಾಲುದಾರರಾಗಿದ್ದು, ಪ್ಯಾರಿಸ್‌ನಲ್ಲಿ ಬೇಸಿಗೆ ಒಲಿಂಪಿಕ್ಸ್ ಜರುಗುವ ಎರಡು ವಾರಗಳ ಮೊದಲೇ ಈ ಡಿವೈಸ್‌ಗಳ ಬಿಡುಗಡೆಗೆ ಪ್ಯಾರಿಸ್ ಅನ್ನು ಸ್ಥಳವಾಗಿ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಮತ್ತು ಫೋಲ್ಡ್ 6: ಗ್ಯಾಲಕ್ಸಿ Z ಸರಣಿ ಬಿಡುಗಡೆಯು ಹಿಂದಿನ ವರ್ಷದ ಆಗಸ್ಟ್ ತಿಂಗಳಿನಲ್ಲಿ ಜರುಗಿತ್ತು ಇದೀಗ ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ಒಂದು ತಿಂಗಳು ಮುಂಚಿತವಾಗಿ ಈ ಎರಡು ಮೊಬೈಲ್‌ಗಳನ್ನು ಕಂಪನಿ ಜಾರಿಗೆ ತರುತ್ತಿದೆ ಅದಕ್ಕಾಗಿ ಸ್ಯಾಮ್‌ಸಂಗ್ ಬಳಕೆದಾರರು ಸಂಸ್ಥೆಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
Z ಫೋಲ್ಡ್ 6 ಮಾಡೆಲ್ ಅದರ ಹಿಂದಿನ ಮಾಡೆಲ್‌ಗಿಂತಲೂ ಸ್ಟ್ಯಾಂಡರ್ಡ್ ಆಗಿದ್ದು, ಹಿಂದಿನ ಮಾಡೆಲ್ ಹೋಲಿಸಿದರೆ ತೆಳ್ಳಗಿನ ವಿನ್ಯಾಸ ಹೊಂದಿದೆ. ಆರಂಭಿಕ ಸ್ಟೈಲಿಷ್ ಮಾಡೆಲ್‌ಗೆ ಹೋಲಿಸಿದರೆ ಈ ಮೊಬೈಲ್ ಇನ್ನಷ್ಟು ತೆಳ್ಳಗಿನ ವಿನ್ಯಾಸ ಹೊಂದಿರಲಿದೆ. ಮೊಬೈಲ್ ಬೆಲೆಯನ್ನು ಕಡಿತ ಮಾಡುವ ಉದ್ದೇಶವನ್ನು ಕಂಪನಿ ಹೊಂದಿರುವುದಾಗಿ ತಿಳಿದು ಬಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಮತ್ತು ಫೋಲ್ಡ್ 6 ಮೊಬೈಲ್‌ಗಳು ಗ್ರಾಹಕರನ್ನು ಸೆಳೆಯಲು ಸ್ನಾಪ್‌ಡ್ರಾಗನ್ 8ಜೆನ್ 3SoC (Snapdragon 8 Gen 3 SoC) ಅಳವಡಿಸಿಕೊಳ್ಳಲು ಕಂಪನಿ ಮುಂದಾಗಿದೆ ಎಂಬ ಅಂಶ ತಿಳಿದು ಬಂದಿದ್ದು, ಆ ಮೂಲಕ ಗ್ರಾಹಕರನ್ನು ಸೆಳೆಯಲು ಪ್ಲಾನ್ ಮಾಡಿಕೊಂಡಿದೆ. ಗ್ಯಾಲಕ್ಸಿ ಬ್ರ್ಯಾಂಡಿಂಗ್ ಹೊರತುಪಡಿಸಿ ಗ್ಯಾಲಕ್ಸಿ S24 ಸರಣಿಯನ್ನು ಬಳಸಲು ನಿರ್ಧರಿಸಿದೆ.
2024ರ ಕೊನೆಯಲ್ಲಿ ಸ್ನಾಪ್‌ಡ್ರಾಗನ್ 7s ಜೆನ್ 2 / Exynos 2200 ಬಳಿಸಿಕೊಂಡು ಕಡಿಮೆ ಬೆಲೆಯಲ್ಲಿ ಗ್ಯಾಲಕ್ಸಿ Z ಫೋಲ್ಡ್ FE ಮತ್ತು Z ಫ್ಲಿಪ್ FE ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ.
2024 ರಲ್ಲಿ ರಿವಿಲ್ ಮಾಡಲಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಕುರಿತಾಗಿ ಮುಂದಿನ ಜುಲೈನಲ್ಲಿ ನಡೆಯಲಿರುವ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಈ ರಿಂಗ್‌ನ ಕುರಿತಾದ ಬೆಲೆ ಹಾಗೂ ಫೀಚರ್ಸ್ ಕುರಿತಾದ ಮಾಹಿತಿಯನ್ನು ನೀಡುವ ವದಂತಿಗಳು ಹರಿದಾಡುತ್ತಿವೆ.
ಗ್ಯಾಲಕ್ಸಿ ರಿಂಗ್‌ನಲ್ಲಿ ಬಳಕೆದಾರರು ತಮ್ಮ ಆರೋಗ್ಯದ ಕುರಿತಾದ ಮಾಹಿತಿಯನ್ನು ಹಗಲು ಹಾಗೂ ರಾತ್ರಿ ಯಾವುದೇ ಸಂದರ್ಭದಲ್ಲಿಯಾದರೂ ತಿಳಿದುಕೊಳ್ಳಬಹುದಾಗಿದೆ. ಸಂಪರ್ಕಿತ ಡಿಜಿಟಲ್ ವೆಲ್‌ನೆಸ್ ಪ್ಲಾಟ್‌ಫಾರ್ಮ್‌ಗಾಗಿ ಸ್ಯಾಮ್‌ಸಂಗ್‌ನ ವಿಶಾಲ ದೃಷ್ಟಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ.


Click it and Unblock the Notifications








