ಅಮೆಜಾನ್ ನಲ್ಲಿ ಸ್ಯಾಮ್ ಸಂಗ್ ಎಕ್ಸ್ ಕ್ಲೂಸಿವ್ ಸ್ಮಾರ್ಟ್ ಫೋನ್ ಲಾಂಚ್..!

Written By: Lekhaka

ಆನ್ ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿರುವ ಅಮೆಜಾನ್ ಈಗಾಗಲೇ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಎಕ್ಸ್ ಕ್ಲೂಸಿವ್ ಆಗಿ ಲಾಂಚ್ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ವೊಂದನ್ನು ಎಕ್ಸ್ ಕ್ಲೂಸಿವ್ ಆಗಿ ಲಾಂಚ್ ಮಾಡಲು ಮುಂದಾಗಿದೆ. ಈ ಸ್ಮಾರ್ಟ್ ಫೋನ್ ಕುರಿತಂತೆ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಅಮೆಜಾನ್ ನಲ್ಲಿ ಸ್ಯಾಮ್ ಸಂಗ್ ಎಕ್ಸ್ ಕ್ಲೂಸಿವ್ ಸ್ಮಾರ್ಟ್ ಫೋನ್ ಲಾಂಚ್..!

'ಶೂಟ್.ಶಾಪ್.ಆನ್’ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಹೊಸ ಫೋನ್ ಟೀಸರ್ ಕಾಣಿಸಿಕೊಂಡಿದ್ದು, ಮೂಲಗಳ ಪ್ರಕಾರ ಸ್ಯಾಮ್ ಸಂಗ್ ನ ಆನ್ ಸರಣಿಯ ಮತ್ತೊಂದು ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ. ಹೊಸ ಲುಕ್ ಮತ್ತು ಸುಪರ್ ಪರ್ಫರ್ಮೆಸ್ಸ್ ಅನ್ನು ಈ ಸ್ಮಾರ್ಟ್ ಫೋನ್ ಹೊಂದಿರಲಿದೆ ಎನ್ನಲಾಗಿದೆ.

ಈ ವರ್ಷದಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ ನೆಕ್ಸ್ಟ್ ಮತ್ತು ಗ್ಯಾಲೆಕ್ಷಿ J7 ಮ್ಯಾಕ್ಸ್ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿತ್ತು. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ಈ ಬಾರಿ ಅಮೆಜಾನ್ ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಹಾನರ್ V 10 ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ ಲಾಂಚ್: ಅಮೆಜಾನ್ ನಲ್ಲಿ ಮಾತ್ರ..!

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ ನೆಕ್ಸ್ಟ್ ಮತ್ತು ಗ್ಯಾಲೆಕ್ಷಿ J7 ಮ್ಯಾಕ್ಸ್ ಸ್ಮಾರ್ಟ್ ಫೋನ್ ಗಳು ಭಾರತೀಯ ಮಾರುಕಟ್ಟೆಗೆ ಕಾಲಿಡಲಿದ್ದು, ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಹುಟ್ಟಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಚೀನಾ ಫೋನ್ ಗಳು ಸೇರಿದಂತೆ ಎಲ್ಲಾ ಫೋನ್ ಗಳು ನಷ್ಟವನ್ನು ಅನುಭವಿಸಲಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಗ್ಯಾಲೆಕ್ಸಿ J7 ಪ್ಲಸ್ ಸ್ಮಾರ್ಟ್ ಫೋನ್ 5.5 ಇಂಚಿನ ಡಿಸ್ ಪ್ಲೇಯನ್ನು ಒಳಗೊಂಡಿದ್ದು, FHD ಗುಣಮಟ್ಟದ ಅಮೊಲೈಡ್ ಡಿಸ್ ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ P20 ಪ್ರೋಸೆಸರ್ 4GB RAM ಹಾಗೂ 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ ಅಲ್ಲದೇ ಆಂಡ್ರಾಯ್ಡ್ 7.1 ನಲ್ಲಿ ಕಾರ್ಯನಿರ್ವಹಿಸಲಿದೆ.
Read more about:
English summary
Amazon India has hosted a teaser page on its website. This page teases the upcoming launch of a Samsung smartphone. For now, the details regarding the device are scarce but the teaser page hints that the smartphone will be an Amazon exclusive product and that it could belong to the Galaxy On series.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot