ಸ್ಯಾಮ್‌ಸಂಗ್ ಆಪಲ್ ಸಮರ ಕೊನೆಗೂ ಅಂತ್ಯ
ಎರಡು ಸಮಾನ ಹೆಸರುಳ್ಳ ಮತ್ತು ಪೈಪೋಟಿಯಂದಿರುವ ಸಂಸ್ಥೆಗಳಲ್ಲಿ ಕಾದಾಟ ಸಾಮಾನ್ಯವಾಗಿರುತ್ತದೆ. ಇದು ಯಾವುದೇ ಕ್ಷೇತ್ರದಲ್ಲೂ ಕಂಡುಬರುವಂಥದ್ದೇ. ಟೆಕ್ನಾಲಜಿ ಕ್ಷೇತ್ರದಲ್ಲೂ ಈ ಸಮಸ್ಯೆ ಈಗ ಹೆಚ್ಚಾಗಿದ್ದು ಕೊನೆಗೂ ಸಾಮರಸ್ಯಕ್ಕೆ ಬರುವ ಮೂಲಕ ಇದು ಮುಕ್ತಿಯನ್ನು ಹೊಂದಿದೆ.
ಆಪಲ್ ಹಾಗೂ ಸ್ಯಾಮ್‌ಸಂಗ್ ಕಂಪೆನಿಗಳು ತೀವ್ರ ಪೈಪೋಟಿಯನ್ನು ಸ್ಪರ್ಧೆಯನ್ನು ಒಂದಕ್ಕೊಂದು ಏರ್ಪಡಿಸಿಕೊಳ್ಳುತ್ತಿದ್ದವು. ಆಪಲ್ ಒಂದು ಉತ್ಪನ್ನವನ್ನು ತಯಾರಿಸಿದರೆ ಸ್ಯಾಮ್‌ಸಂಗ್ ಕೂಡ ಅದೇ ಮಾದರಿಯ ಇನ್ನೊಂದು ಉತ್ಪನ್ನವನ್ನು ತಯಾರಿಸುತ್ತಿತ್ತು. ಇದು ಯಾವಾಗಲೂ ನಡೆಯುತ್ತಿದ್ದ ತೀವ್ರ ಪೈಪೋಟಿಯಾಗಿದ್ದು ನ್ಯಾಯಾಲಯದಲ್ಲೂ ಪರಿಹಾರವಾಗದೇ ಇನ್ನೂ ನಡೆಯುತ್ತಿತ್ತು.

ಆದರೆ ಕೊನೆಗೂ ಈ ಎರಡೂ ಮಹಾನ್ ಕಂಪೆನಿಗಳು ತಮ್ಮ ವೈರತ್ವವನ್ನು ಮರೆತು ಒಂದಾಗಲು ತೀರ್ಮಾನಿಸಿವೆ. ನ್ಯಾಯಾಲಯದಲ್ಲಿರುವ ಎಲ್ಲಾ ಹಳೆಯ ಕೇಸ್‌ಗಳನ್ನು ಹಿಂತೆಗೆದುಕೊಂಡು ಸಾಮರಸ್ಯದಿಂದ ಬಾಳುವ ತೀರ್ಮಾನಕ್ಕೆ ಬಂದಿವೆ. ತಮ್ಮ ಪೇಟೆಂಟ್ ವಿವಾದವನ್ನು ಬಗೆಹರಿಸಿಕೊಂಡು ನಷ್ಟ ಪರಿಹಾರವನ್ನು ನೀಡುವ ತೀರ್ಮಾನಕ್ಕೆ ಬಂದಿವೆ.
ವಾಲ್ ಸ್ಟ್ರೀಟ್ ಜರ್ನಲ್ ಹೇಳುವಂತೆ ಆಪಲ್ ಹಾಗೂ ಸ್ಯಾಮ್‌ಸಂಗ್‌ನ ಗಣ್ಯ ವ್ಯಕ್ತಿಗಳು ಒಟ್ಟಾಗಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದು ಹಲವಾರು ವರ್ಷಗಳಿಂದ ನಡೆಯುತ್ತಿದ್ದ ವಿವಾದವನ್ನು ಕೊನೆಗೂ ಅಂತ್ಯಗಾಣಿಸುವ ಇರಾದೆಯನ್ನು ಈ ಕಂಪೆನಿಗಳೆರಡೂ ತೀರ್ಮಾನಿಸಿಕೊಂಡಿವೆ.


Click it and Unblock the Notifications








