Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಟಿವಿ ಖರೀದಿಸಿದರೆ 1,24,999ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ಫ್ರೀ!

ಭಾರತದ ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ದೈತ್ಯ ಬ್ರ್ಯಾಂಡ್‌ ಅಂತಾನೇ ಹೆಸರುವಾಸಿಯಾಗಿರುವ ಸ್ಯಾಮ್‌ಸಂಗ್‌ ಗುಡ್‌ನ್ಯೂಸ್‌ ನೀಡಿದೆ. ಸ್ಯಾಮ್‌ಸಂಗ್‌ ಭಾರತದಲ್ಲಿ ತನ್ನ ನಿಯೋ QLED 8K, ನಿಯೋ QLED, QLED, OLED, The Frame ಮತ್ತು Crystal 4K UHD ಟಿವಿಗಳಂತಹ ಪ್ರೀಮಿಯಂ ಟಿವಿಗಳ ಮೇಲೆ ಬಿಗ್‌ ಆಫರ್‌ ಅನ್ನು ಘೋಷಿಸಿದೆ.

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ 'ಬಿಗ್ ಟಿವಿ ಡೇಸ್' ಕೊಡುಗೆಗಳನ್ನು ಪ್ರಕಟಿಸಿದೆ. ಈ ಮೂಲಕ ಬಿಗ್‌ ಸೈಜ್‌ ಸ್ಮಾರ್ಟ್‌ಟಿವಿ ಖರೀದಿಸಬೇಕೆಂದು ಕೊಂಡವರಿಗೆ ಉತ್ತಮ ಅವಕಾಶ ಕಲ್ಪಿಸಿದೆ. ಇನ್ನು ಈ ಸೇಲ್‌ ಜೂನ್ 15 ಮತ್ತು ಜುಲೈ 25, 2023ರ ನಡುವೆ ನಡೆಯಲಿದೆ. ಈ ಆಫರ್ ಅವಧಿಯಲ್ಲಿ ಗ್ರಾಹಕರು EMI ಆಯ್ಕೆಯಲ್ಲಿ 20% ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಪಡೆಯುವ ಅವಕಾಶ ಸಿಗಲಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಬಿಗ್‌ಟಿವಿಡೇಸ್‌ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಟಿವಿ ಖರೀದಿಸಿದರೆ 1,24,999ರೂ. ಮೌಲ್ಯದ ಫೋನ್‌ ಫ್ರೀ!

ಸ್ಯಾಮ್‌ಸಂಗ್‌ 'ಬಿಗ್ ಟಿವಿ ಡೇಸ್' ಸೇಲ್‌ ಬಂಪರ್‌ ಆಫರ್‌
ಸ್ಯಾಮ್‌ಸಂಗ್‌ 'ಬಿಗ್ ಟಿವಿ ಡೇಸ್' ಸೇಲ್‌ನಲ್ಲಿ 98 ಇಂಚಿನ ಟಿವಿಯನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್‌ ದೊರೆಯಲಿದೆ. ನೀವು ನಿಮ್ಮ ಮನೆಗೆ 98 ಇಂಚಿನ ಟಿವಿ ಖರೀದಿಸಿದರೆ 1,24,999ರೂ. ಮೌಲ್ಯದ ಪ್ರಮುಖ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಉಚಿತವಾಗಿ ಪಡೆಯಬಹುದಾಗಿದೆ. ಇನ್ನು 85 ಮತ್ತು 75 ಇಂಚಿನ Neo QLED 8K ಟಿವಿಗಳನ್ನು ಖರೀದಿಸಿದರೆ ಗ್ರಾಹಕರಿಗೆ 69,990ರೂ. ಮೌಲ್ಯದ ಫ್ರೀಸ್ಟೈಲ್ ಪ್ರೊಜೆಕ್ಟರ್ ಫ್ರಿಯಾಗಿ ಸಿಗಲಿದೆ.

ಇದಲ್ಲದೆ ನೀವು 75 ಇಂಚಿನ ನಿಯೋ QLED 8K & 4K TV ಮತ್ತು 77 ಇಂಚಿನ OLED ಸ್ಮಾರ್ಟ್‌ಟಿವಿ ಖರೀದಿಸಿದರೆ 51,990ರೂ ಮೌಲ್ಯದ HW-S800B ಸೌಂಡ್‌ಬಾರ್ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲ 85 ಇಂಚಿನ ಕ್ರಿಸ್ಟಲ್‌ 4K UHD TV, 65 ಇಂಚಿನ ನಿಯೋ QLED, 65 ಇಂಚಿನ OLED TV ಮತ್ತು 75 ಇಂಚಿನ ದಿ ಫ್ರೇಮ್‌ ಅನ್ನು ಖರೀದಿಸಿದರೆ 28,990ರೂ. ಮೌಲ್ಯದ HW-Q600B ಸೌಂಡ್‌ಬಾರ್ ಅನ್ನು ಫ್ರೀ ಆಗಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 55 ಇಂಚಿನ ನಿಯೋ QLED ಟಿವಿ ಮತ್ತು 55 ಇಂಚಿನ OLED ಟಿವಿಯನ್ನು ಖರೀದಿಸಿದರೆ 15,490ರೂ. ಬೆಲೆ ಬಾಳುವ HW-B450 ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಟಿವಿ ಖರೀದಿಸಿದರೆ 1,24,999ರೂ. ಮೌಲ್ಯದ ಫೋನ್‌ ಫ್ರೀ!

ನಿಯೋ QLED 8K ಮತ್ತು 4K ಟಿವಿಗಳು
ನಿಯೋ QLED ಟಿವಿ ಸರಣಿಯನ್ನು ಪ್ರಿಫೆಕ್ಟ್ ವೀಕ್ಷಣೆಯ ಅನುಭವ ನೀಡುವ ದೃಷ್ಟಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ಟಿವಿಹಗಳು ನಿಮಗೆ ಗೇಮಿಂಗ್‌ನಲ್ಲಿಯೂ ಸಹ ಅತ್ಯುತ್ತಮ ಅನುಭವವನ್ನು ನೀಡಲಿವೆ. ಜೊತೆಗೆ ನಿಮ್ಮ ಮನೆಯ ಇತರ ಸ್ಮಾರ್ಟ್‌ ಡಿವೈಸ್‌ಗಳನ್ನು ಕೂಡ ನಿಯಂತ್ರಿಸ ಬಲ್ಲ ಸ್ಮಾರ್ಟ್ ಹಬ್ ಆಗಿ ಕೂಡ ಕಾರ್ಯನಿರ್ವಹಿಸಲಿವೆ. ಇವುಗಳು ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅಲ್ಲದೆ 3D ಸರೌಂಡ್ ಸೌಂಡ್ ಹೋಮ್ ಥಿಯೇಟರ್ ಅನುಭವಕ್ಕಾಗಿ Q-Symphony 3.0 ಮತ್ತು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಪ್ರೊ (OTS Pro) ಒಳಗೊಂಡಿರುವ ಡಾಲ್ಬಿ ಅಟ್ಮಾಸ್ ಅನ್ನು ಸಹ ಬೆಂಬಲಿಸಲಿದೆ.

ಕ್ರಿಸ್ಟಲ್ 4K UHD ಟಿವಿಗಳು
ಸ್ಯಾಮ್‌ಸಂಗ್‌ ಕ್ರಿಸ್ಟಲ್‌ 4K iSmart UHD ಟಿವಿಗಳು ಕೂಡ ಅತ್ಯುತ್ತಮವಾದ ಪ್ರೀಮಿಯಂ ಅನುಭವ ನೀಡಲಿವೆ. ಇವುಗಳಲ್ಲಿ ತೀಕ್ಷ್ಣತೆ ಮತ್ತು ಕಾಂಟ್ರಾಸ್ಟ್ ಲೆವೆಲ್‌ಗಳು ಅತ್ಯುತ್ತಮವಾದ ಬಣ್ಣಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ ಕ್ರಿಸ್ಟಲ್ 4K ಡಿಸ್ಪ್ಲೇ, ವೀಡಿಯೊ ಕರೆ, ಸ್ಮಾರ್ಟ್ IoT ಹಬ್, ಅಡಾಪ್ಟಿವ್ ಸೌಂಡ್, ಟ್ಯಾಪ್ ವ್ಯೂ, ಸ್ಕ್ರೀನ್ ಮಿರರಿಂಗ್ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಸ್ಯಾಮ್‌ಸಂಗ್‌ QLED ಟಿವಿಗಳು
ಸ್ಯಾಮ್‌ಸಂಗ್‌ನ QLED ಟಿವಿಗಳು ಪ್ರೀಮಿಯಂ ರೇಂಜ್‌ನ ಸ್ಮಾರ್ಟ್‌ಟಿವಿಗಳಾಗಿವೆ. ಈ ಸ್ಮಾರ್ಟ್‌ಟಿವಿಗಳು ಕ್ವಾಂಟಮ್ ಡಾಟ್ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯುತ್ತಮವಾದ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿವೆ. ಅಲ್ಲದೆ QLED ಟಿವಿಗಳು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ (OTS) ಮತ್ತು ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ (AVA) ಹೊಂದಿದ್ದು, ಹೋಮ್‌ ಥಿಯೇಟರ್‌ ಅನುಭವ ನೀಡಲಿವೆ. ಅಲ್ಲದೆ ಇವುಗಳಿಗೆ ಸ್ಲಿಮ್‌ಫಿಟ್‌ ಕ್ಯಾಮೆರಾ ಅಳವಡಿಸುವ ಮೂಲಕ ವೀಡಿಯೊ ಕರೆಗಳನ್ನು ಸಹ ಮಾಡುವುದಕ್ಕೆ ಸಾದ್ಯವಾಗಲಿದೆ.

Best Mobiles in India

English summary
Samsung Big TV Days Sale Live Now : Huge Discounts, Freebies And Cashback Offers On Samsung Smart Tvs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+