Home
ಸುದ್ದಿಜಾಲ

ಮನೆ ಉಪಕರಣಗಳಿಗೂ Samsung Care+ ಸೇವೆ ವಿಸ್ತರಣೆ: ದಿನಕ್ಕೆ ಕೇವಲ 2 ರೂ. ಮಾತ್ರ!

ಟೆಕ್ ದೈತ್ಯ Samsung ತನ್ನ Samsung Care+ ಸೇವೆಯನ್ನು ವಿಸ್ತರಿಸಿ ಗೃಹೋಪಯೋಗಿ ಉಪಕರಣಗಳಿಗೆ ವಿಸ್ತೃತ ಖಾತರಿ ಯೋಜನೆಗಳನ್ನು ಸೇರಿಸಿದೆ. ನಮ್ಮ ದೈನಂದಿನ ಜೀವನದ ಭಾಗವಾಗಿರುವ ಗೃಹಪಯೋಗಿ ಫ್ರಿಜ್, ವಾಷಿಂಗ್ ಮಷೀನ್, ಏರ್ ಕಂಡೀಷನರ್, ಮೈಕ್ರೋವೇವ್ ಅಥವಾ ಸ್ಮಾರ್ಟ್ ಟಿವಿಗಳಿಗೂ ಕೂಡ ಈಗ Samsung Care+ ಸೇವೆ ಲಭ್ಯವಾಗಲಿದೆ. ಗ್ರಾಹಕರು ತಮ್ಮ ಅಗತ್ಯದಂತೆ 1 ರಿಂದ 4 ವರ್ಷಗಳವರೆಗೆ ವಾರಂಟಿ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲ್ಯಾನ್‌ನ ದಿನಕ್ಕೆ ಕೇವಲ ₹2ರಿಂದ ಆರಂಭವಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

ಹೊಸದಾಗಿ ವಿಸೃತಗೊಳಿಸಲಾದ Samsung Care+ ಸೇವೆಯಲ್ಲಿ, ಭಾರತೀಯ ಸ್ಯಾಮ್‌ಸಂಗ್ ಗ್ರಾಹಕರಿಗೆ ರಿಫ್ರಿಜರೇಟರ್‌ಗಳು, ವಾಷಿಂಗ್ ಮಷೀನ್‌ಗಳು, ಏರ್ ಕಂಡೀಷನರ್‌ಗಳು, ಮೈಕ್ರೋವೇವ್ ಓವನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ಕೇವಲ ಹಾರ್ಡ್‌ವೇರ್ ಸಮಸ್ಯೆಗಳಿಗೆ ಮಾತ್ರವಲ್ಲದೆ, ಈಗ ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಸ್ಕ್ರೀನ್ ವೈಫಲ್ಯಗಳು (ಫಿಜಿಕಲ್ ಹಾನಿ ಇಲ್ಲದಿದ್ದರೆ)ಗೂ ರಕ್ಷಣೆ ನೀಡುತ್ತದೆ. ಇದು ಸ್ಮಾರ್ಟ್ ಉಪಕರಣಗಳ ತಂತ್ರಜ್ಞಾನವನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ ಮತ್ತು ದೀರ್ಘಾವಧಿಯ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ ಎಂದು ಸ್ಯಾಮ್‌ಸಂಗ್ ಕಂಪೆನಿ ತಿಳಿಸಿದೆ.

ಸ್ಯಾಮ್‌ಸಂಗ್ ಇಂಡಿಯಾದ ಡಿಜಿಟಲ್ ಅಪ್ಲಯನ್ಸಸ್ ವಿಭಾಗದ ಉಪಾಧ್ಯಕ್ಷ ಘುಫ್ರಾನ್ ಆಲಮ್ ಅವರು ಈ ಕುರಿತು ಮಾತನಾಡಿ, "ಗ್ರಾಹಕರ ಅನುಭವವನ್ನು ಹೆಚ್ಚಿಸಲು, ಸಾಫ್ಟ್‌ವೇರ್ ನವೀಕರಣಗಳು ಮತ್ತು ಪರದೆಯ ಅಸಮರ್ಪಕ ಕಾರ್ಯ ವ್ಯಾಪ್ತಿಯಂತಹ ಅನನ್ಯ ಪ್ರಯೋಜನಗಳೊಂದಿಗೆ ಗೃಹೋಪಯೋಗಿ ಉಪಕರಣಗಳ ಮಾಲೀಕತ್ವವನ್ನು ಹೆಚ್ಚಿಸಲು ಮತ್ತು ಎಲ್ಲಾ ಚಾನಲ್‌ಗಳಲ್ಲಿ ಸ್ಯಾಮ್‌ಸಂಗ್ ಕೇರ್+ ವಿಸ್ತೃತ ಖಾತರಿ ಯೋಜನೆಗಳ ಲಭ್ಯತೆಯನ್ನು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ. ಇದು ಇದು ಕೇವಲ ವಿಸ್ತೃತ ವಾರಂಟಿ ಸೇವೆಯಲ್ಲ, ಸಂಪೂರ್ಣ ರಕ್ಷಣಾ ಪ್ಯಾಕೇಜ್ ಆಗಿದೆ ಎಂದು ತಿಳಿಸಿದ್ದಾರೆ.

ಮನೆ ಉಪಕರಣಗಳಿಗೂ Samsung Care+ ಸೇವೆ ವಿಸ್ತರಣೆ: ದಿನಕ್ಕೆ ಕೇವಲ 2 ರೂ. ಮಾತ್ರ!

ಗ್ರಾಹಕರಿಗೆ ದೊರೆಯುವ ಪ್ರಮುಖ ಪ್ರಯೋಜನಗಳು ಹೀಗಿವೆ,
Samsung Care+ ಪ್ಲ್ಯಾನ್ ಗ್ರಾಹಕರಿಗೆ ಕೇವಲ ಹಣದ ಉಳಿತಾಯವಷ್ಟೇ ಅಲ್ಲ, ಭರವಸೆಯನ್ನು ಕೂಡ ಒದಗಿಸುತ್ತದೆ.
ತಾಂತ್ರಿಕ ಅಥವಾ ಸಾಫ್ಟ್‌ವೇರ್ ದೋಷ ಉಂಟಾದಾಗ ಸಂಪೂರ್ಣ ರಕ್ಷಣೆಯ ಭರವಸೆ.
ಉಪಕರಣದ ಆಯುಷ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಳ.
ಎಲ್ಲಾ ಉಪಕರಣಗಳಿಗೆ ಒಂದು ಏಕೀಕೃತ ವಾರಂಟಿ ಯೋಜನೆ, ನಿರ್ವಹಣೆ ಸುಲಭ.
ಆನ್‌ಲೈನ್ ಮತ್ತು ಆಫ್‌ಲೈನ್ ಮಾರ್ಗಗಳಲ್ಲಿ ಖರೀದಿ ಆಯ್ಕೆ, ಎಲ್ಲಿಂದಲೂ ಸೇವೆ ಪಡೆಯಲು ಸೌಲಭ್ಯ.
Samsung SmartThings ಅಥವಾ Care+ ಆಪ್ ಮೂಲಕ ಸೇವೆ ಟ್ರ್ಯಾಕ್ ಮಾಡುವ, ರಿಮೈಂಡರ್‌ಗಳು ಪಡೆಯುವ ವ್ಯವಸ್ಥೆ.
ಗ್ರಾಹಕರು ತಮ್ಮ ಉಪಕರಣದ ಸ್ಥಿತಿ ಮತ್ತು ವಾರಂಟಿ ಅವಧಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದು.

ಕಂಪೆನಿಯ ಇತ್ತೀಚಿನ ಪ್ರಕಟಣೆಯಲ್ಲಿ, Samsung Care+ ಯೋಜನೆಯು ಗ್ರಾಹಕ ಅನುಭವವನ್ನು ಹೆಚ್ಚು ಸುಲಭ ಮತ್ತು ವೇಗವಾದ ಸೇವೆಯತ್ತ ಕೊಂಡೊಯ್ಯುಲಿದೆ. 13,000+ ತರಬೇತಿ ಪಡೆದ ಇಂಜಿನಿಯರ್‌ಗಳು ಮತ್ತು 2,500+ ಅಧಿಕೃತ ಸರ್ವಿಸ್ ಕೇಂದ್ರಗಳು ಭಾರತದೆಲ್ಲೆಡೆ ಲಭ್ಯವಿದ್ದು, 100% ಅಸಲಿ Samsung ಭಾಗಗಳ ಗುಣಮಟ್ಟದ ಭರವಸೆ ನೀಡುತ್ತದೆ. 9 ಭಾರತೀಯ ಭಾಷೆಗಳಲ್ಲಿ ಗ್ರಾಹಕ ಸಹಾಯವು ಲಭ್ಯವಿರುವುದರಿಂದ ಎಲ್ಲ ವರ್ಗದ ಬಳಕೆದಾರರಿಗೆ ಸುಲಭ ಸೇವೆ ದೊರೆಯಲಿದೆ. ಇದು ಗ್ರಾಹಕರಿಗೆ ದೀರ್ಘಾವಧಿಯ ಭದ್ರತೆಯನ್ನು ಒದಗಿಸುತ್ತದೆ ಎಂದು ತಿಳಿಸಲಾಗಿದೆ.

ಗಮನಿಸಬೇಕಾದ ಮುಖ್ಯ ವಿಷಯಗಳು
ವಿಸೃತ Samsung Care+ ಸೇವೆಯು ದಿನಕ್ಕೆ ಕೇವಲ ₹2ರಿಂದ ಆರಂಭವಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಗ್ರಾಹಕರು ಈ ಯೋಜನೆಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಖರೀದಿಗೆ ಮುನ್ನ Samsung ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬೇಕು. ಇನ್ನು ಯಾವುದೇ ಉಪಕರಣವನ್ನು ಖರೀದಿಸಿದ 90 ದಿನಗಳೊಳಗೆ ವಿಸ್ತೃತ ವಾರಂಟಿ ಪ್ಲ್ಯಾನ್ ಖರೀದಿಸುವುದು ಅಗತ್ಯ. ಸ್ಕ್ರೀನ್ ಕವರ್ ಕೇವಲ ಭೌತಿಕ ಹಾನಿ ಇಲ್ಲದಿದ್ದಾಗ ಮಾತ್ರ ಇದು ಅನ್ವಯಿಸುತ್ತದೆ. ಒಟ್ಟಾರೆಯಾಗಿ, Samsung Care+ ವಿಸ್ತರಣೆ ಭಾರತೀಯ ಗ್ರಾಹಕರಿಗೆ ನವೀನ ರಕ್ಷಣಾ ಪರಿಹಾರ ನೀಡುವ ಹೊಸ ಹೆಜ್ಜೆಯಾಗಿದೆ ಎನ್ನಬಹುದು.

Best Mobiles in India

English summary
Samsung Care+ service will now be available for household refrigerators, washing machines, air conditioners, microwaves or even smart TVs. The company said that this plan starts from just ₹2 per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+