Home
ಸುದ್ದಿಜಾಲ

ಭಾರತದಲ್ಲಿ ಗ್ಯಾಲಕ್ಸಿ A32 ಫೋನ್‌ ಮೇಲೆ ಭರ್ಜರಿ ಆಫರ್‌ ನೀಡಿದ ಸ್ಯಾಮ್‌ಸಂಗ್‌!

ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಈಗಾಗಲೇ ತನ್ನ ಎ ಮತ್ತು ಎಮ್‌ ಸರಣಿಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆದ್ದಿದೆ. ಇನ್ನು ಇತ್ತೀಚೆಗೆ ಭಾರತದಲ್ಲಿ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಸ್ಮಾರ್ಟ್‌ಫೋನ್‌ ಮೇಲೆ ಹೊಸ ಆಫರ್‌ಗಳನ್ನು ಪರಿಚಯಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪನಿಯು ಈಗ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಕೊಡುಗೆಗಳನ್ನು ಘೋಷಿಸಿದ್ದು, ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆ 21,999 ರೂ. ಆಗಿದ್ದು, ಹೊಸ ಆಫರ್‌ ಅನ್ವಯ ಇದನ್ನು ಕೇವಲ 18,999 ರೂ. ಬೆಲೆಯಲ್ಲಿ ಖರೀದಿಸಬಹುದು. ಹಾಗಾದ್ರೆ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಮೇಳೆ ಸ್ಯಾಮ್‌ಸಂಗ್‌ ನೀಡುತ್ತಿರುವ ವಿಶೇಷ ಆಫರ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಆಫರ್‌ ಏನು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಆಫರ್‌ ಏನು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಮೂಲಬೆಲೆ 21,999 ರೂ. ಆಗಿದ್ದು, ಆಫರ್‌ನಲ್ಲಿ ಕೇವಲ 18,999 ರೂ.ಗೆ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟಿನ ಬಳಕೆಯಿಂದ 1,500 ರೂ.ಗಳ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆಯಬಹುದು. ಇವೆಲ್ಲವೂ ಸೇರಿ ಒಟ್ಟು 3,000 ರೂ.ಗಳ ರಿಯಾಯಿತಿ ದೊರೆಯಲಿದೆ. ಇದರ ಜೊತೆಗೆ, ಜನರು ನೋ ಕಾಸ್ಟ್‌ ಇಎಂಐ ಪಡೆಯುವ ಆಯ್ಕೆಯನ್ನು ಸಹ ನೀಡಲಾಗಿದೆ. ಈ ಆಫರ್‌ಗಳು ಇದೀಗ ಕಂಪನಿಯ ವೆಬ್‌ಸೈಟ್ ಮೂಲಕ ಲೈವ್ ಆಗಿವೆ. ಇನ್ನು ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಕೆಳಗಿನ ಸ್ಲೈಡ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಗಿದ್ದು, 90Hz ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ.

ಪ್ರೊಸೆಸರ್

ಪ್ರೊಸೆಸರ್

ಇದು ಅಕ್ಟಾ-ಕೋರ್‌ ಮೀಡಿಯಾ ಟೆಕ್‌ ಹಿಲಿಯೊ G85 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM+128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ , ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾವೈಡ್ ಲೆನ್ಸ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 20ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಅಲ್ಲದೆ ಸಿಂಗಲ್‌ ಚಾರ್ಜ್‌ನಲ್ಲಿ ಫೋನ್ 20 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್‌, ಬ್ಲೂಟೂತ್‌, ಯುಎಸ್‌ಬಿ ಟೈಪ್‌ C 2.0 ಅನ್ನು ಬೆಂಬಲಿಸಲಿದೆ.

Best Mobiles in India

English summary
Samsung company now announced new offers on Galaxy A32 smartphone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+