ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಪರಿಚಯಿಸಿದ ಸ್ಯಾಮ್‌ಸಂಗ್! ಡಿಸೈನ್ ಹೇಗಿದೆ? ಬೆಲೆ ಎಷ್ಟು?
ಸ್ಯಾಮ್‌ಸಂಗ್ ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಪರಿಚಯಿಸಿದೆ. ಇದನ್ನು ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಐಸ್ಮಾರ್ಟ್ UHD ಎಂದು ಹೆಸರಿಸಲಾಗಿದ್ದು, ಈ ಸರಣಿಯಲ್ಲಿ 43 ಇಂಚು ಮತ್ತು 65 ಇಂಚಿನ ಟಿವಿಗಳನ್ನು ಅನಾವರಣಗೊಳಿಸಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳಲ್ಲಿ ಇನ್‌ಬಿಲ್ಟ್ IoT ಹಬ್‌ನಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ.
ಹೌದು, ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಐಸ್ಮಾರ್ಟ್ UHD ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆಯಾಗಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಅತ್ಯುನ್ನತ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವ ನೀಡಲಿವೆ ಎಂದು ಹೇಳಲಾಗಿದೆ. ಹಾಗಾದ್ರೆ ಹೊಸ ಸ್ಮಾರ್ಟ್‌ಟಿವಿ ಸರಣಿಯಲ್ಲಿ ನೀವು ಕಾಣಬಹುದಾದ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಐಸ್ಮಾರ್ಟ್ UHD ಫಿಚರ್ಸ್ ಹೇಗಿದೆ?
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಐಸ್ಮಾರ್ಟ್ UHD ಸರಣಿ ಸ್ಮಾರ್ಟ್‌ಟಿವಿಗಳು 43 ಇಂಚು ಮತ್ತು 65 ಇಂಚಿನ ಆಯ್ಕೆಗಳಲ್ಲಿ ಬರಲಿವೆ. ಈ ಸ್ಮಾರ್ಟ್‌ಟಿವಿಗಳ ಡಿಸ್‌ಪ್ಲೇ 3,840 x 2,160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ 50Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ಮೂರು ಬದಿಯ ಬೆಜೆಲ್-ಲೆಸ್ ವಿನ್ಯಾಸವನ್ನು ಪಡೆದುಕೊಂಡಿವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳ ವೀಡಿಯೊ ಪ್ರಕ್ರಿಯೆಯು ಕ್ರಿಸ್ಟಲ್ ಪ್ರೊಸೆಸರ್ 4K ಎಂಜಿನ್‌ನಿಂದ ಚಾಲಿತವಾಗಿದೆ ಎಂದು ಹೇಳಲಾಗಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಐಸ್ಮಾರ್ಟ್ UHD ಸ್ಮಾರ್ಟ್‌ಟಿವಿಗಳು ಎರಡು 20W ಸ್ಪೀಕರ್‌ಗಳೊಂದಿಗೆ ಬರುತ್ತವೆ. ಇದಲ್ಲದೆ ಈ ಟಿವಿಗಳು Q-Symphony (ಟಿವಿ ಮತ್ತು ಸ್ಪೀಕರ್ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತವೆ), OTS ಲೈಟ್ (3D ಧ್ವನಿ) ಮತ್ತು ಅಡಾಪ್ಟಿವ್ ಸೌಂಡ್ ಟೆಕ್ನಾಲಜಿಯಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಹಾಗೆಯೇ ಬ್ಲೂಟೂತ್ ಆಡಿಯೊ ಮತ್ತು ಡ್ಯುಯಲ್ ಆಡಿಯೊವನ್ನು ಬೆಂಬಲಿಸಲಿವೆ ಎಂದು ವರದಿಯಾಗಿದೆ.
ಇನ್ನು ಈ ಸ್ಮಾರ್ಟ್‌ಟಿವಿಗಳಲ್ಲಿ ಸ್ಮಾರ್ಟ್ ಫೀಚರ್ಸ್‌ಗಳು ಸಾಕಷ್ಟು ಇಂಟ್ರೆಸ್ಟಿಂಗ್ ಆಗಿವೆ. ಅದರಂತೆ ಈ ಸ್ಮಾರ್ಟ್‌ಟಿವಿ Tizen SmartTV ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್ ಆಗಲಿದ್ದು, ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ AI ಸ್ಪೀಕರ್‌ಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ಸ್ಯಾಮ್‌ಸಂಗ್ ಟಿವಿ ಪ್ಲಸ್, ಸ್ಯಾಮ್‌ಸಂಗ್ ಸ್ಮಾರ್ಟ್‌ಥಿಂಗ್ಸ್ ಮತ್ತು ಸ್ಯಾಮ್‌ಸಂಗ್ ಯೂನಿವರ್ಸಲ್ ಗೈಡ್‌ಗೆ ಬೆಂಬಲಿಸುವುದು ಪಕ್ಕಾ ಆಗಿದೆ.

ಸ್ಯಾಮ್‌ಸಂಗ್ ಕ್ರಿಸ್ಟಲ್ 4K iSmart UHD ಟಿವಿಗಳು ಗೂಗಲ್ ಮೀಟ್‌ಗೆ ಬೆಂಬಲವನ್ನು ನೀಡಲಿವೆ. ಜೊತೆಗೆ ಮೈಕ್ರೋಸಾಫ್ಟ್ 365 ಕ್ಲೌಡ್ ಸೇವೆಯನ್ನು ಸಹ ನೀಡಲಿವೆ. ಇದರಿಂದ ಮೊಬೈಲ್‌ನಿಂದ ಟಿವಿ ಮಿರರಿಂಗ್, ಟಿವಿ ಸೌಂಡ್ ಟು ಮೊಬೈಲ್, ಸೌಂಡ್ ಮಿರರಿಂಗ್ ಮತ್ತು ವೈರ್‌ಲೆಸ್ ಟಿವಿ ಆನ್‌ನಂತಹ ಮಲ್ಟಿ ಡಿವೈಸ್ ಎಕ್ಸ್‌ಪಿರಿಯನ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಸ್ಮಾರ್ಟ್‌ಟಿವಿಗಳು ಮೊಬೈಲ್ ಕ್ಯಾಮೆರಾಗೆ ಬೆಂಬಲವನ್ನು ನೀಡಲಿದ್ದು, ಅಪ್ಲಿಕೇಶನ್ ಕಾಸ್ಟಿಂಗ್ ಅನ್ನು ನೀಡಲಿವೆ ಎನ್ನಲಾಗಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ 4K iSmart UHD ಟಿವಿಗಳ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು HDMI ಪೋರ್ಟ್‌ಗಳು ಮತ್ತು ಒಂದು USB ಪೋರ್ಟ್ ಅನ್ನು ಕಾಣಬಹುದು. ಅಲ್ಲದೆ ಬ್ಲೂಟೂತ್ 5.2 ಆವೃತ್ತಿ ಮತ್ತು ಇನ್‌ಬಿಲ್ಟ್ ವೈಫೈ ಅನ್ನು ಪಡೆದುಕೊಂಡಿವೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೆಂದರೆ ಈ ಸ್ಮಾರ್ಟ್‌ಟಿವಿಗಳು ಆಟೋ ಗೇಮ್ ಮೋಡ್ ಮತ್ತು ಮೋಷನ್ ಎಕ್ಸ್‌ಸೆಲೇಟರ್ ಫೀಚರ್ಸ್‌ಗಳನ್ನು ಒಳಗೊಂಡಿವೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ 4K iSmart UHD ಟಿವಿಗಳ ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಕ್ರಿಸ್ಟಲ್ 4K iSmart UHD ಟಿವಿಗಳ ಶ್ರೇಣಿಯಲ್ಲಿ 43 ಇಂಚಿನ ಆಯ್ಕೆಯು 33,990ರೂ. ಬೆಲೆಯನ್ನು ಹೊಂದಿದೆ. ಇದರ 65 ಇಂಚಿನ ಆಯ್ಕೆಯು 71,990ರೂ. ಬೆಲೆಯಲ್ಲಿ ಬರಲಿದೆ. ಈ ಹೊಸ ಟಿವಿ ಶ್ರೇಣಿಯು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಶಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದಲ್ಲದೆ ಕಂಪನಿಯು ಸೀಮಿತ ಅವಧಿಯ ಕೊಡುಗೆಯಾಗಿ, ಟಿವಿಯೊಂದಿಗೆ 8,900 ರೂ ಮೌಲ್ಯದ ಉಚಿತ ಸ್ಲಿಮ್‌ಫಿಟ್ ಕ್ಯಾಮೆರಾವನ್ನು ಸಹ ನೀಡುತ್ತಿದೆ.


Click it and Unblock the Notifications








