SAMSUNG Valentine's Day Sale: ಈ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಡಿಸ್ಕೌಂಟ್!
ಫೆಬ್ರವರಿ 14 ಬಂತೆಂದರೆ ಸಾಕು ಯುವ ಮನಸ್ಸುಗಳಿಗೆ ಹಬ್ಬ. ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕೆ ಹಾತೊರೆಯುವ ದಿನ. ಇದೇ ಕಾರಣಕ್ಕೆ ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳ ನಡುವೆ ಉಡುಗೊರೆ ವಿನಿಮಯ ಸಾಮಾನ್ಯ. ಇದನ್ನೆ ಬಂಡವಾಳವಾಗಿರಿಸಿಕೊಂಡಿರುವ ಕೆಲವು ಪ್ರತಿಷ್ಠಿತ ಸ್ಮಾರ್ಟ್‌ಫೋನ್ ಕಂಪೆನಿಗಳು ಭರ್ಜರಿ ಆಫರ್ ನೀಡಿದ್ದಾರೆ. ಆಫ್‌ಲೈನ್ ಮಾರುಕಟ್ಟೆ ಮಾತ್ರವಲ್ಲ, ಆನ್‌ಲೈನ್ ಮಳಿಗೆಗಳು ಸಹ ರಿಯಾಯಿತಿ ಮಾರಾಟವನ್ನು ಆಯೋಜಿಸುತ್ತಿವೆ. ಈ ವಾರ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್ ನೀಡುತ್ತಿವೆ.

ಹೌದು, ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಹಲವು ಸ್ಮಾರ್ಟ್‌ಫೋನ್ ಕಂಪೆನಿಗಳು ಬಾರಿ ಆಫರ್‌ಗಳನ್ನು ನೀಡಿವೆ. ಇದರಲ್ಲಿ ಸ್ಯಾಮ್‌ಸಂಗ್ ಕಂಪೆನಿ ಕೂಡ ವ್ಯಾಲೆಂಟೈನ್ಸ್ ಡೇ ಸೇಲ್ ಅನ್ನು ಘೋಷಿಸಿದೆ. ವ್ಯಾಲೆಂಟೈನ್ಸ್ ಡೇಗಾಗಿ ಸ್ಯಾಮ್ಸಂಗ್ ಡೇಸ್ ಸೇಲ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆಯೋಜಿಸಲಾಗಿದೆ. ಮಾರಾಟದ ಭಾಗವಾಗಿ, ಕಂಪನಿಯು ಹಲವಾರು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಗ್ಯಾಲಕ್ಸಿ ‘ಎ', ಗ್ಯಾಲಕ್ಸಿ ‘ಎಂ', ಗ್ಯಾಲಕ್ಸಿ ‘ನೋಟ್', ಮತ್ತು ಗ್ಯಾಲಕ್ಸಿ ‘ಎಫ್' ಸ್ಮಾರ್ಟ್‌ಫೋನ್ ಲೈನ್‌ಅಪ್‌ಗಳಿಂದ ಸಾಧನಗಳಲ್ಲಿ ಸೀಮಿತ ಅವಧಿಯ ಬೆಲೆಯನ್ನು ಕಂಪನಿ ಪ್ರಕಟಿಸಿದೆ. ಈ ಲೇಖನದಲ್ಲಿ, ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್ ಮೇಲೆ 13% ಆಫರ್ ನೀಡಲಾಗಿದೆ. ಇದನ್ನು ಸ್ಯಾಮ್‌ಸಂಗ್ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಇದು ಆಕ್ಟಾ-ಕೋರ್ ಎಕ್ಸಿನೋಸ್ 9611 10nm ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಅಲ್ಲದೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಗ್ಯಾಲಕ್ಸಿ M31
ಇನ್ನು ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್ 18% ಆಫರ್ ಅನ್ನು ಪಡೆದುಕೊಂಡಿದೆ. ಇದು 6.4-ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಆಕ್ಟಾ-ಕೋರ್ ಎಕ್ಸಿನೋಸ್ 9611 10nm ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ 6GB RAM+128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್, ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಇದು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಗ್ಯಾಲಕ್ಸಿ F41
ಸ್ಯಾಮ್‌ಸಂಗ್ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್ 21% ಆಫರ್ ಅನ್ನು ಪಡೆದುಕೊಂಡಿದೆ. ಇದು 6.4-ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಎಕ್ಸಿನೋಸ್ ಪ್ರೊಸೆಸರ್ ಅನ್ನು ಪಡೆದುಕೊಂಡಿದೆ.

ಗ್ಯಾಲಕ್ಸಿ M51
ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ 19% ಆಫರ್ ಅನ್ನು ಪಡೆದುಕೊಂಡಿದೆ. ಇದು ಸ್ಯಾಮ್‌ಸಂಗ್ ಅಧಿಕೃತ ಆನ್‌ಲೈನ್ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.7-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಇನ್ಫಿನಿಟಿ-ಒ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 730G ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ 6GB RAM+128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.


Click it and Unblock the Notifications








