ಮೇ 1 ರಿಂದ ಲೈವ್ ಆಗಲಿದೆ ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್ ಸೇಲ್!
ಟೆಕ್ ದಿಗ್ಗಜ ಕಂಪೆನಿಗಳಲ್ಲಿ ಒಂದಾದ ಸ್ಯಾಮ್‌ಸಂಗ್ ಕಂಪೆನಿ ತನ್ನ ಫ್ಯಾಬ್ ಗ್ರಾಬ್ ಫೆಸ್ಟ್ ಸೇಲ್ ಅನ್ನು ಘೋಷಣೆ ಮಾಡಿದೆ. ಈ ಸೇಲ್ ಮೇ 1ರಿಂದ ಪ್ರಾರಂಭವಾಗಲಿದ್ದು, ಸ್ಯಾಮ್‌ಸಂಗ್ ಪ್ರಾಡಕ್ಟ್‌ಗಳ ಮೇಲೆ ಬಿಗ್ ಆಫರ್ ನೀಡಲಿದೆ. ಇನ್ನು ಈ ಸೇಲ್‌ನಲ್ಲಿ ಬಿಗ್ ಆಫರ್, ಲೈವ್ ಡೆಮೊ, ಅತ್ಯಾಕರ್ಷಕ ಗಿಫ್ಟ್ ವೋಚರ್‌ಗಳು ಮತ್ತು ಮೆಗಾ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಸ್ಯಾಮ್‌ಸಂಗ್ ಗ್ಯಾಜೆಟ್ಸ್‌ಗಳನ್ನು ನೀವು ಖರೀದಿಸಲು ಬಯಸುವುದಾದರೆ ಇದು ಅತ್ಯುತ್ತಮ ಅವಕಾಶವಾಗಿದೆ.

ಹೌದು, ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್ ಸೇಲ್ ಮೇ1 ರಿಂದ ಶುರುವಾಗಲಿದೆ. ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಯಾಮ್‌ಸಂಗ್ ಪ್ರಾಡಕ್ಟ್‌ಗಳನ್ನು ಆಫರ್‌ನಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಸೇಲ್‌ನಲ್ಲಿ ನೀವು ಖರೀದಿಸಲು ಬಯಸುವ ಗ್ಯಾಜೆಟ್ಸ್‌ಗಳನ್ನು ಫ್ರಿ ರಿಸರ್ವ್ ಅನ್ನು ಕೂಡ ಘೋಷಣೆ ಮಾಡಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳು ಆಫರ್ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಯಾಲಕ್ಸಿ S20 FE 5G
ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್ ಸೇಲ್‌ನಲ್ಲಿ ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್ ಆಫರ್‌ನಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ MRP ಬೆಲೆ 74,999 ರೂ ಆಗಿದೆ. ಆದರೆ ಫ್ಯಾಬ್ ಗ್ರಾಬ್ ಸೇಲ್‌ನಲ್ಲಿ 40 ಸಾವಿರ ಒಳಗೆ ಲಭ್ಯವಾಗುವ ಸಾಧ್ಯತೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್,ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಈ ಫೋನ್‌ನ ಲೈವ್ ಮಾರಾಟವು ಮೇ 3 ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ.

ಗ್ಯಾಲಕ್ಸಿ M53 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್ ಫ್ಯಾಬ್ ಗ್ರಾಬ್ ಫೆಸ್ಟ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ರುತ್ತದೆ. ಈ ಸ್ಮಾರ್ಟ್‌ಫೋನ್ ಲೈವ್ ಮಾರಾಟವು ಮೇ 5 ರಂದು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ 6.7-ಇಂಚಿನ ಫುಲ್ HD+ ಇನ್ಫಿನಿಟಿ ಒ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಗ್ಯಾಲಕ್ಸಿ ವಾಚ್ 4
ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್ ಸೇಲ್‌ನ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ವೆರಿಯೆಬಲ್ಸ್ ಗ್ಯಾಜೆಟ್ಸ್‌ಗಳ ಮೇಲೂ ಕೂಡ ಆಕರ್ಷಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗ್ಯಾಲಕ್ಸಿ ವಾಚ್ 4 ಸೇರಿದೆ. ಈ ಸ್ಮಾರ್ಟ್‌ವಾಚ್ ಮೂಲಕ ನಿಮ್ಮ ದೇಹದ ನೀರು ಮತ್ತು ಬಯೋಆಕ್ಟಿವ್ ಸೆನ್ಸಾರ್ ಗಳನ್ನು ಬಳಸಿಕೊಂಡು ಹೆಚ್ಚಿನದನ್ನು ಟ್ರ್ಯಾಕ್ ಮಾಡಬಹುದು. ಇದು 90 ವಿಭಿನ್ನ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಅಲ್ಲದೆ ಈ ವಾಚ್ ಮೂಲಕ ಬ್ಲಡ್ ಆಕ್ಸಿಜನ್ ಲೆವೆಲ್ ಅನ್ನು ಅಳೆಯಬಹುದಾಗಿದೆ. ಈ ಸ್ಮಾರ್ಟ್‌ವಾಚ್ MRP ಬೆಲೆ 26,999ರೂಪಾಯಿಗಳನ್ನು ಹೊಂದಿದೆ. ಆದರೆ ಈ ವಾಚ್ ಫೆಸ್ಟ್ ಸೇಲ್‌ನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿರುತ್ತದೆ. ಈ ವಾಚ್ ಲೈವ್ ಸೇಲ್ ಮೇ 6 ರಂದು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ.

ಸ್ಯಾಮ್‌ಸಂಗ್ ಟಿವಿ 4K
ಈ ಸೇಲ್‌ನಲ್ಲಿ ಸ್ಮಾರ್ಟ್ ಟಿವಿಗಳು ಕೂಡ ಆಫರ್‌ನಲ್ಲಿ ಲಭ್ಯವಾಗಲಿದೆ. ಸ್ಯಾಮ್‌ಸಂಗ್ ಟಿವಿ 4K ಸ್ಮಾರ್ಟ್ ಟಿವಿಗಳು, ಕ್ಯೂಎಲ್‌ಇಡಿ ಟಿವಿಗಳು ಮತ್ತು ನಿಯೋ ಕ್ಯೂಎಲ್‌ಇಡಿ ಟಿವಿಗಳ ಮೇಲೆ ವಿಶೇಷ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ QLED 4K The Serif (55-inch) ಮತ್ತು The Frame QLED 4K ಟಿವಿಗಳು ಜನಪ್ರಿಯ ಆಫರ್ ಅನ್ನು ಪಡೆದುಕೊಂಡಿವೆ.


Click it and Unblock the Notifications








