ಗ್ರಾಹಕರಿಗೆ ಸಿಹಿಸುದ್ದಿ: ಉಚಿತವಾಗಿ ಸಿಗಲಿದೆ ಈ ದುಬಾರಿ ಬೆಲೆಯ ಸ್ಯಾಮ್‌ಸಂಗ್ ಫೋನ್
ಸ್ಯಾಮ್‌ಸಂಗ್ ಟಿವಿ ಖರೀದಿಸಬೇಕು ಅಂದುಕೊಂಡಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಅದೇನಂತೀರಾ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇದೆ. ಈ ಸಂದರ್ಭದಲ್ಲಿ ಸ್ಯಾಮ್‌ಸಂಗ್ ಕಂಪೆನಿ ತನ್ನ ಗ್ರಾಹಕರಿಗಾಗಿ ಸ್ಯಾಮ್‌ಸಂಗ್ ಫ್ರೀಡಂ ಫೆಸ್ಟ್ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಕಂಪೆನಿಯ ವಿವಿಧ ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್ ಆಫರ್ ದೊರೆಯಲಿದೆ.
ಹೌದು, ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ಫ್ರೀಡಂ ಫೆಸ್ಟ್ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ಪ್ರೀಮಿಯಂ ಟಿವಿಗಳ ಮೇಲೆ ವಿಶೇಷ ಡಿಸ್ಕೌಂಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಸ್ಯಾಮ್‌ಸಂಗ್ ನಿಯೋ QLED TV, OLED TV, QLED TV ಮತ್ತು ಕ್ರಿಸ್ಟಲ್ 4K UHD TVಗಳನ್ನು ನೀವು ಊಹೆಗೂ ಮೀರಿದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್ ಫ್ರೀಡಂ ಫೆಸ್ಟ್ ಸೇಲ್‌ನಲ್ಲಿ ಏನೆಲ್ಲಾ ಆಫರ್ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಫ್ರೀಡಂ ಫೆಸ್ಟ್ ಸೇಲ್ ಆಫರ್
ಸ್ಯಾಮ್‌ಸಂಗ್ 'ಫ್ರೀಡಂ ಫೆಸ್ಟ್' ಆಫರ್ ಇದೇ ಆಗಸ್ಟ್ 31, 2023 ರವರೆಗೆ ಮಾನ್ಯವಾಗಿರಲಿದೆ. ಈ ಸೇಲ್‌ನಲ್ಲಿ ಗ್ರಾಹಕರಿಗೆ 20 ಸಾವಿರ ರೂ.ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಸಿಗಲಿದೆ. ಅಷ್ಟೇ ಅಲ್ಲ ಈ ಸೇಲ್ ಸಮಯದಲ್ಲಿ ಗ್ರಾಹಕರು 1,24,999ರೂ. ಬೆಲೆ ಬಾಳುವ ಗ್ಯಾಲಕ್ಸಿ S23 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಅನ್ನು ಉಚಿತವಾಗಿ ಪಡೆದುಕೊಳ್ಳುವ ಅವಕಾಶ ಕೂಡ ಸಿಗಲಿದೆ. ಇದರೊಂದಿಗೆ ಫ್ರೀಸ್ಟೈಲ್ ಪ್ರೊಜೆಕ್ಟರ್ ಮೌಲ್ಯದಂತಹ ಖಚಿತವಾದ ಉಡುಗೊರೆ ಕೂಡ ಸಿಗಲಿದೆ.
ಇನ್ನು ಸ್ಯಾಮ್‌ಸಂಗ್ ಫ್ರೀಡಂ ಫೆಸ್ಟ್ ಸೇಲ್‌ನಲ್ಲಿ 98 ಇಂಚಿನ ನಿಯೋ QLED ಮತ್ತು QLED ಟಿವಿಗಳನ್ನು ಖರೀದಿಸುವವರಿಗೆ ಇನ್ನಿಲ್ಲದ ಆಫರ್‌ಗಳು ಸಿಗಲಿವೆ. ಅದರಂತೆ ನಿಯೋ QLED ಮತ್ತು QLED ಮತ್ತು ನಿಯೋ QLED 8K ಟಿವಿಗಳ ನಿರ್ದಿಷ್ಟ ಮಾದರಿಗಳನ್ನು ಖರೀದಿಸಿದರೆ ಗ್ಯಾಲಕ್ಸಿ S23 ಅಲ್ಟ್ರಾ 5G ಫೋನ್ ಉಚಿತವಾಗಿ ಸಿಗಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವ ಗ್ರಾಹಕರಿಗೆ 20,000ರೂ. ವರೆಗಿನ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಹಾಗೂ ಸುಲಭ EMI ಆಯ್ಕೆಗಳು ಸಿಗಲಿವೆ.
ಇದಲ್ಲದೆ ಸ್ಯಾಮ್‌ಸಂಗ್ ಸಡಂಸ್ಥೆಯ ನಿಯೋ QLED 75 ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಗಾತ್ರದ ಟಿವಿಗಳನ್ನು ಖರೀದಿಸಿದರೆ 20% ಕ್ಯಾಶ್‌ಬ್ಯಾಕ್ ಸಿಗಲಿದೆ. ಜೊತೆಗೆ ಫ್ರೀಸ್ಟೈಲ್ ಪ್ರೊಜೆಕ್ಟರ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನು ಖರೀದಿದಾರರು 55-ಇಂಚಿನ ನಿಯೋ QLED ಟಿವಿ ಅಥವಾ 77 ಇಂಚಿನ OLED ಟಿವಿಯನ್ನು ಖರೀದಿಸಿದರೆ ಸೌಂಡ್‌ಬಾರ್ಗಳನ್ನು ಉಚಿತವಾಗಿ ಪಡೆಯಬಹುದು. ಅಲ್ಲದೆ ಹೆಚ್ಚುವರಿಯಾಗಿ 20% ಕ್ಯಾಶ್‌ಬ್ಯಾಕ್ ಪಡೆಯಲು ಅವಕಾಶವಿದೆ.
ಇನ್ನು ಸ್ಯಾಮ್‌ಸಂಗ್ ಸಂಸ್ಥೆ ಈ ಆಫರ್‌ಗಳ ಜೊತೆಗೆ ಗ್ರಾಹಕರಿಗೆ ಇನ್ನು ಹಲವು ಆಫರ್‌ಗಳನ್ನು ನೀಡುತ್ತಿದೆ. ಇದು ಗ್ರಾಹಕರು ಖರೀದಿಸುವ ಡಿವೈಸ್‌ಗಳ ಮೇಲೆ ಅವಲಂಬಿಸಿರಲಿದೆ. ಅಂದರೆ ನೀವು ಖರೀದಿಸಿದ ಸ್ಮಾರ್ಟ್ ಟಿವಿ ಮಾದರಿಯ ಆಧಾರದ ಮೇಲೆ ನಿಖರವಾದ ಮೊತ್ತವು ಬದಲಾಗುತ್ತದೆ. ಇದಲ್ಲದೆ ಸ್ಯಾಮ್‌ಸಂಗ್ ಕಂಪೆನಿ ಪ್ರಮಾಣಿತ ಮತ್ತು ನೋ ಕಾಸ್ಟ್ EMI ಆಯ್ಕೆಗಳನ್ನು ನೀಡುತ್ತಿದೆ. ಇದರಲ್ಲಿ ಇನ್ನೊಂದು ಮಹತ್ವದ ವಿಚಾರವೆಂದರೆ ನಿಮಗೆ ಡೆಬಿಟ್ ಕಾರ್ಡ್‌ಗಳಲ್ಲಿಯೂ ಸಹ EMI ಆಯ್ಕೆಗಳು ಸಿಗಲಿದೆ.
ಅದರಂತೆ ನೀವು ಕೆಲವು ಆಯ್ದ ಟಿವಿ ಮಾದರಿಗಳನ್ನು ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಖರೀದಿಸುವ ಗ್ರಾಹಕರು ತ್ವರಿತ ರಿಯಾಯಿತಿಗಳನ್ನು ಗಳಿಸಬಹುದು. ಇನ್ನು ಸ್ಯಾಮ್‌ಸಂಗ್ ಫ್ರೀಡಂ ಫೆಸ್ಟ್ ಆಫರ್‌ಗಳು ಭಾರತದಲ್ಲಿರುವ ಸ್ಯಾಮ್‌ಸಂಗ್‌ನ ಅಧಿಕೃತ ಸ್ಟೋರ್‌ಗಳು ಮತ್ತು ಎಲ್ಲಾ ಪ್ರಮುಖ ಎಲೆಕ್ಟ್ರಾನಿಕ್ ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿವೆ.


Click it and Unblock the Notifications








