ಸ್ಯಾಮ್‌ಸಂಗ್ ಗ್ಯಾಲಕ್ಸಿ A ಕ್ವಾಂಟಮ್ ಸ್ಮಾರ್ಟ್‌ಫೋನ್ ಬಿಡುಗಡೆ!
ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿ ಕೊಂಡಿದೆ. ಸದ್ಯ ಸ್ಮಾರ್ಟ್‌ಫೋನ್ ವಲಯದ ದಿಗ್ಗಜ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ A ಕ್ವಾಂಟಮ್ ಹೊಂದಿರುವ ಕ್ವಾಂಟಮ್ ಎನ್‌ಕ್ರಿಪ್ಶನ್ ಟೆಕ್ನಾಲಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಫೋನ್‌ನಲ್ಲಿ ವಿಶ್ವದ ಅತಿ ಚಿಕ್ಕ ಕ್ವಾಂಟಮ್ ರಾಂಡಮ್ ನಂಬರ್ ಜನರೇಟರ್ ಚಿಪ್‌ಸೆಟ್ ಅನ್ನು ಒಳಗೊಂಡಿದೆ ಎಂದು ಹೇಳಲಾಗಿದ್ದು ಅದು ಸಾಧನದಲ್ಲಿ ಡೇಟಾ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಫೋನ್ 6.7-ಇಂಚಿನ ಇನ್ಫಿನಿಟಿ-ಒ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ನು ಈ ಸ್ಮಾರ್ಟ್‌ಫೋನ್ ನಲ್ಲಿ ಕ್ವಾಂಟಮ್ ಎನ್‌ಕ್ರಿಪ್ಶನ್ ಟೆಕ್ನಾಲಜಿಯನ್ನ ಹೊಂದಿರುವುದರಿಂದ ಇದು ಹೊಸ ಮಾದರಿಯ ಸ್ಮಾರ್ಟ್ ಫೋನ್ ಆಗಿದೆ. ಏಕೆಂದರೆ ಈ ಅನಿರೀಕ್ಷಿತ ಮತ್ತು ಮಾದರಿಯಿಲ್ಲದ ರಾಂಡಮ್ ನಂಬರ್‌ಗಳನ್ನು ಉತ್ಪಾದಿಸುವ ಮೂಲಕ QRNG ಚಿಪ್‌ಸೆಟ್ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ದೃಡೀಕರಣ ಮತ್ತು ಪಾವತಿಗಳಂತಹ ಸೇವೆಗಳನ್ನು ಸುರಕ್ಷಿತವಾಗಿ ಬಳಸಲು ಅನುಮತಿಸುತ್ತದೆ ಎಂದು ಎಸ್‌ಕೆ ಟೆಲಿಕಾಂ ಪೋಸ್ಟ್‌ನಲ್ಲಿ ತಿಳಿಸಿದೆ. ಇದಲ್ಲದೆ ಸೇವಾ ಸುರಕ್ಷತೆಯನ್ನು ಬಲಪಡಿಸಲು ರಾಂಡಮ್ ಸಂಖ್ಯೆಯ ಆಧಾರದ ಮೇಲೆ ಎನ್‌ಕ್ರಿಪ್ಶನ್ ಕೀಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗ್ತಿದೆ. ಅಲ್ಲದೆ ಡೇಟಾವನ್ನು ಸಂಗ್ರಹಿಸಿದಾಗ ಅಥವಾ ವಿನಿಮಯ ಮಾಡಿಕೊಂಡಾಗ ಈ ಎಲ್ಲಾ ಸೇವೆಗಳು ಎನ್‌ಕ್ರಿಪ್ಶನ್-ಡೀಕ್ರಿಪ್ಶನ್ ಪ್ರಕ್ರಿಯೆಯ ಮೂಲಕ ಹೋಗುತ್ತವೆ ಎಂದು ಹೇಳಲಾಗಿದೆ.

ಇದಲ್ಲದೆ ಈ ಚಿಪ್‌ಸೆಟ್‌ನಲ್ಲಿ CMOS ಇಮೇಜ್ ಸೆನ್ಸಾರ್ ಇದ್ದು, ಅದು ರಾಂಡಮ್ ಸಂಖ್ಯೆಗಳನ್ನು ಅನಿರೀಕ್ಷಿತವಾಗಿ ಉತ್ಪಾದಿಸಲು ಎಲ್ಇಡಿ ಹೊರಸೂಸುವ ಬೆಳಕನ್ನು ಪತ್ತೆ ಮಾಡುತ್ತದೆ. ಜೊತೆಗೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುವ ಎನ್‌ಕ್ರಿಪ್ಶನ್ ಕೀಗಳನ್ನು ಉತ್ಪಾದಿಸಲು ಚಿಪ್‌ಸೆಟ್ ಸಹಾಯ ಮಾಡಲಿದೆ. ಇದಲ್ಲದೆ ಕಂಪನಿಯು ಕ್ವಾಂಟಮ್ ಸೆಕ್ಯುರಿಟಿ ತಂತ್ರಜ್ಞಾನಗಳನ್ನು ಕ್ವಾಂಟಮ್ ಕಂಪ್ಯೂಟರ್‌ಗಳ ವಿರುದ್ಧ ಪ್ರತಿರೋಧವಾಗಿ ಪಿಚ್ ಮಾಡುತ್ತಿದೆ ಎಂದು ಹೇಳಲಾಗ್ತಿದೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಕ್ವಾಂಟಮ್ 6.7-ಇಂಚಿನ ಇನ್ಫಿನಿಟಿ-ಒ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿರಲಿ. ಇನ್ನು ಈ ಸ್ಮಾರ್ಟ್‌ಫೋನ್ ಎಕ್ಸಿನೋಸ್ 980 SoC ಪ್ರೊಸೆಸರ್ ಹೊಂದಿರಲಿದ್ದು, 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹಣಾ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳಬಹುದಾಗಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A ಕ್ವಾಂಟಮ್ ಸ್ಮಾರ್ಟ್‌ಫೋನ್ ಕ್ವಾಡ್-ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಅಲ್ಲದೆ ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಹೊಂದಿದ್ದು, ಇದು 25W ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆ KRW 640,000 (ಸುಮಾರು ರೂ. 39,000) ಆಗಿದ್ದು,ಮೇ 22 ರಂದು ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕಪ್ಪು, ನೀಲಿ ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗ್ತಿದೆ.


Click it and Unblock the Notifications








