Home
ಸುದ್ದಿಜಾಲ

ಈ ಸ್ಯಾಮ್‌ಸಂಗ್‌ ಫೋನ್‌ ನಿಮ್ಮ ಬಳಿ ಇದ್ದರೆ, ನಿಮಗೆ ಗುಡ್‌ನ್ಯೂಸ್‌ ಇಲ್ಲಿದೆ!

ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಸಂಸ್ಥೆಯ ಫೋನ್‌ಗಳು ಡಿಮ್ಯಾಂಡ್‌ ಪಡೆದಿವೆ. ಸಂಸ್ಥೆಯ ಗ್ಯಾಲಕ್ಸಿ ಸರಣಿಯ ಫೋನ್‌ಗಳು ಜನಪ್ರಿಯವಾಗಿದ್ದು, ಆ ಪೈಕಿ A ಸರಣಿಯ ಕೆಲವು ಮೊಬೈಲ್‌ಗಳು ಬಜೆಟ್‌ ದರದಲ್ಲಿ ಗಮನ ಸೆಳೆದಿವೆ. ಅವುಗಳಲ್ಲಿ ಗ್ಯಾಲಕ್ಸಿ A13 4G (Galaxy A13) ಫೋನ್‌ ಹೊಂದಿರುವ ಗ್ರಾಹಕರಿಗೆ ಈಗ ಗುಡ್‌ನ್ಯೂಸ್‌ ಇದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 4G ಫೋನ್‌ ಈಗ ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್ ಆಧಾರಿತ ಒನ್‌ ಯುಐ 6.0 ಅಪ್‌ಡೇಟ್‌ ಪಡೆಯುತ್ತಿದೆ. ಈ ಅಪ್‌ಡೇಟ್‌ನಲ್ಲಿ ಸ್ಯಾಮ್‌ಸಂಗ್ ಕ್ಯಾಲೆಂಡರ್, ರಿಮೈಂಡರ್ ಮತ್ತು ಸ್ಯಾಮ್‌ಸಂಗ್ ಇಂಟರ್ನೆಟ್‌ಗೆ ಸುಧಾರಣೆಗಳನ್ನು ಸಹ ಪರಿಚಯಿಸುತ್ತಿದೆ. ಸ್ಟೋರೇಜ್‌ ನಿರ್ವಹಿಸಲು ಮತ್ತು ಆಪ್‌ಗಳ ನಡುವೆ ಡ್ರ್ಯಾಗ್ ಮತ್ತು ಡ್ರಾಪ್ ಸಪೋರ್ಟ್‌ ನಿರ್ವಹಿಸಲು ನೂತನ ಮೈ ಫೈಲ್‌ಗಳ ಆಪ್‌ ಇದೆ.

ಈ ಸ್ಯಾಮ್‌ಸಂಗ್‌ ಫೋನ್‌ ನಿಮ್ಮ ಬಳಿ ಇದ್ದರೆ, ನಿಮಗೆ ಗುಡ್‌ನ್ಯೂಸ್‌ ಇಲ್ಲಿದೆ!

ಹಾಗೆಯೇ ಈ UI 6.0 ಹೊಸ ಸ್ವಯಂ ನಿರ್ಬಂಧಿಸಿದ ಫೀಚರ್‌ ಅನ್ನು ಪರಿಚಯಿಸುತ್ತದೆ, ಇದು USB ಸಂಪರ್ಕದ ಮೂಲಕ ಕಳುಹಿಸಲಾಗುತ್ತಿರುವ ದುರುದ್ದೇಶಪೂರಿತ ಆಜ್ಞೆಗಳನ್ನು ಇನ್‌ಸ್ಟಾಲ್‌ ಮತ್ತು ನಿರ್ಬಂಧಿಸುವುದರಿಂದ ಅಜ್ಞಾತ ಆಪ್‌ಗಳನ್ನು ತಡೆಯಲು ಹೆಚ್ಚುವರಿ ರಕ್ಷಣೆಯ ಸ್ಕ್ರೀನ್‌ ಅನ್ನು ಸೇರಿಸುತ್ತದೆ. ಇನ್ನು ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 4G ಫೀಚರ್ಸ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 4G ಸ್ಮಾರ್ಟ್‌ಫೋನ್‌ 1930 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದಿದೆ. ಈ ಡಿಸ್‌ಪ್ಲೇ 83.68% ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಎಕ್ಸಿನೋಸ್ ಆಕ್ಟಾ ಕೋರ್ಪ್ರೊಸೆಸರ್‌ ಬಲವನ್ನು ಹೊಂದಿದೆ. ಈ ಫೋನ್ ಇತ್ತೀಚಿನ ನೂತನ ಆಂಡ್ರಾಯ್ಡ್‌ ಓಎಸ್‌ ಸಪೋರ್ಟ್ನೊಂದಿಗೆ ಕಾರ್ಯ ನಿರ್ವಹಿಸಲಿದೆ.

ಈ ಸ್ಯಾಮ್‌ಸಂಗ್‌ ಫೋನ್‌ ನಿಮ್ಮ ಬಳಿ ಇದ್ದರೆ, ನಿಮಗೆ ಗುಡ್‌ನ್ಯೂಸ್‌ ಇಲ್ಲಿದೆ!

ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 4G ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾ 5 ಮೆಗಾ ಪಿಕ್ಸಲ್ ಸೆನ್ಸಾರ್ ಹಾಗೂ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ರಚನೆ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸೌಲಭ್ಯ ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ.

ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 5G ಮೊಬೈಲ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, 11 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ 4GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಹೊಂದಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರದ್ದು, 15W ನಲ್ಲಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Samsung Galaxy A13 4G is receiving Android 14 based One UI 6 update. all details is here in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+