Samsung Galaxy A41 : ಸ್ಯಾಮ್ಸಂಗ್ ಗ್ಯಾಲಕ್ಸಿ A41 ಫೋನ್‌ನ ಫೀಚರ್ಸ್ ಬಹಿರಂಗ!
ಪ್ರಸ್ತುತ ಸ್ಮಾರ್ಟ್‌ಪೋನ್ ವಲಯದಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಟೆಕ್ ದಿಗ್ಗಜ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಕಂಪೆನಿ. ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಸಿದ್ದತೆ ನಡೆಸಿದೆ. ಈಗಾಗ್ಲೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಮತ್ತು ಎಂ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಜನಪ್ರಿಯತೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಬಹು ನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಆವೃತ್ತಿಯನ್ನ ಪ್ರಾರಂಭಿಸಲು ಸ್ಯಾಮ್‌ಸಂಗ್ ಕಂಪೆನಿ ಸಜ್ಜಾಗಿದೆ. ಈ ನಡುವೆ ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 41 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದವಾಗಿದ್ದು, ಇದರ ಫೀಚರ್ಸ್‌ಗಳೇನು ಅನ್ನೊದು ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

ಟೆಕ್ ಲೋಕದ ದಿಗ್ಗಜ ಎನಿಸಿಕೊಂಡಿರುವ ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆಯನ್ನ ಪಡೆದುಕೊಂಡಿವೆ. ಗ್ರಾಹಕರ ಆಶಯಗಳಿಗೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನ ಪ್ರತಿ ಆವೃತ್ತಿಯಲ್ಲೂ ಪರಿಚಯಿಸೋ ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ A41 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ. ಆದರೆ ಈ ಸ್ಮಾರ್ಟ್‌ಫೋನ್ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಬಿಟ್ಟುಕೊಟ್ಟಿರಲಿಲಲ್ಲ, ಆದರೆ ಇದೀಗ ಈ ಸ್ಮಾರ್ಟ್‌ಫೋನ್‌ಗೆ ಸಂಬಂದಿಸಿದ ಮಾಹಿತಿಯನ್ನ ಗೀಕ್‌ಬೆಂಚ್ ಪಟ್ಟಿ ಮಾಡಿದ್ದು, ಇದರ ಪ್ರಕಾರ ಈ ಗ್ಯಾಲಕ್ಸಿ A41 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ ಮಾದರಿ
ಈ ಸ್ಮಾರ್ಟ್‌ಫೋನ್ 1080 x 2340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.0 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಅಲ್ದೆ ಇದು ವಾಟರ್ ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇ ಯಾಗಿದ್ದು, ಐಪಿಎಸ್‌ಎಲ್‌ಸಿಡಿ ವಿನ್ಯಾಸವನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ 430ppi ಪಿಕ್ಸೆಲ್ ಸಾಂದ್ರತೆಯನ್ನ ಒಳಗೊಂಡಿದೆ. ಇನ್ನು ಇದರ ಡಿಸ್‌ಪ್ಲೇ ವಿನ್ಯಾಸವು ಉತ್ತಮವಾಗಿರೊದ್ರಿಂದ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ.

ಪ್ರೊಸೆಸರ್ ಸಾಮರ್ಥ್ಯ
ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ A41 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P65 SOC ಪ್ರೊಸೆಸರ್ ಹೊಂದಿದ್ದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಇದರ SoC ಆಕ್ಟಾಕೋರ್ ಸ್ಕೋರ್ ನಲ್ಲಿ 1.7GHz ಯನ್ನ ಹೊಂದಿದೆ. ಇದಲ್ಲದೆ, ಈ ಸ್ಮಾರ್ಟ್‌ಫೋನ್ 4GB RAM ಅನ್ನು ಹೊಂದಿದ್ದು, ಇಂಟರ್ ಸ್ಟೋರೇಜ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಮೆಮೊರಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯದ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ಸ್ಯಾಮ್‌ಸಂಗ್ ಅನೇಕ RAM ಮತ್ತು ಶೇಖರಣಾ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಯಲ್ಲಿ ಗ್ಯಾಲಕ್ಸಿ A41 ಸ್ಮಾರ್ಟ್‌ಫೋನ್ ಅನ್ನ ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಕ್ಯಾಮೆರಾ ವಿನ್ಯಾಸ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಅನ್ನು ಹೊಂದಿರಲಿದ್ದು, ಮೊದಲನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರಲಿದೆ. ಅಲ್ಲದೆ 25 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನ ನೀಡಲಾಗಿದೆ. ಇನ್ನು ಈ ಕ್ಯಾಮೆರಾಗಳಲ್ಲಿ ಎಲ್‌ಇಡಿ ಫ್ಲಾಶ್, ಡಿಜಿಟಲ್ ಜೂಮ್, ಆಟೋ ಫ್ಲಾಶ್,ಫೇಸ್ ಡಿಟೇಕ್ಷನ್, ಟಚ್ ದಿ ಫೋಕಸ್ ಫೀಚರ್ಸ್‌ಗಳನ್ನ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ.

ಬ್ಯಾಟರಿ ಸಾಮರ್ಥ್ಯ
ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ A41 ಸ್ಮಾರ್ಟ್‌ಫೋನ್ 3,500 mAh ಬ್ಯಾಟರಿ ಪ್ಯಾಕ್‌ಆಪ್ ಅನ್ನ ಹೊಂದಿದ್ದು, 15W ವೇಗದ ಚಾರ್ಜಿಂಗ್ ಅನ್ನ ಬೆಂಬಲಿಸಲಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್ ಸಿ, ವೈಫೈ 802.11, ಹಾಟ್‌ಸ್ಪಾಟ್, ಬ್ಲೂಟೂತ್ 5.0, ಅನ್ನ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದ್ದು, ಈ ಸ್ಮಾರ್ಟ್‌ಫೋನ್‌ನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








