Home
ಸುದ್ದಿಜಾಲ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ6 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ರೂ. 2000 ಕಡಿತ

By Gizbot Bureau

ಸೌತ್ ಕೋರಿಯಾದ ಟೆಕ್ ಕಂಪೆನಿ ಸ್ಯಾಮ್ ಸಂಗ್ ಈ ವರ್ಷದ ಮೇ ತಿಂಗಳಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+ ಫೋನನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆಗೊಂಡಾಗ ಈ ಫೋನಿನ ಬೆಲೆ 25,990 ರುಪಾಯಿಗಳಾಗಿತ್ತು. ಈ ಸ್ಮಾರ್ಟ್ ಫೋನ್ ನ್ನು ಗ್ಯಾಲಕ್ಸಿ ಎ6 ನೊಂದಿಗೆ ಬಿಡುಗಡೆಗೊಳಿಸಲಾಗಿತ್ತು. ಜೂನ್ ನಲ್ಲಿ ಈ ಫೋನ್ ಬೆಲೆ ಇಳಿಕೆಯನ್ನು ಕಂಡಿತ್ತು.

ಆದರೆ ಗ್ಯಾಲಕ್ಸಿ ಎ6+ ಮೊದಲ ಬಾರಿಗೆ ಜುಲೈನಲ್ಲಿ ಬೆಲೆ ಇಳಿಕೆ ಕಂಡಿದ್ದು 2000 ರುಪಾಯಿ ಇಳಿಕೆಯಾಗಿತ್ತು. ಈಗ ಮತ್ತೊಮ್ಮೆ ಈ ಫೋನಿನ ಬೆಲೆಯಲ್ಲಿ ಇಳಿಕೆಯಾಗಿದ್ದು ಹೊಸ ಬೆಲೆಯು ಕೇವಲ 21,990 ರುಪಾಯಿಗಳಾಗಿದೆ. ಎಲ್ಲಾ ಬಣ್ಣಗಳ ವೇರಿಯಂಟ್ ಗಳೂ ಕೂಡ ಈ ಹೊಸ ಬೆಲೆಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ6 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ರೂ. 2000 ಕಡಿತ

ನೀವು ಕೂಡ ಈ ಫೋನ್ ನ್ನು ಖರೀದಿಸಲು ಇಚ್ಛಿಸುತ್ತಿದ್ದರೆ ಎಲ್ಲಾ ಆನ್ ಲೈನ್ ಸ್ಟೋರ್ ಗಳಲ್ಲಿ , ಸ್ಯಾಮ್ ಸಂಗ್ ಆನ್ ಲೈನ್ ಸ್ಟೋರ್, ಅಮೇಜಾನ್ ಇಂಡಿಯಾ, ಪೇಟಿಎಂ ಮಾಲ್ ಗಳಲ್ಲಿ ಹೊಸ ಬೆಲೆಯಲ್ಲಿ ಸದ್ಯ ಮಾರಾಟಕ್ಕೆ ಲಭ್ಯವಿದೆ. ಮೊದಲಿಗೆ 25,990 ರುಪಾಯಿ ಬೆಲೆಗೆ ಮಾರುಕಟ್ಟೆಗೆ ಬಂದಿದ್ದ ಈ ಫೋನ್ ಜುಲೈ ನಲ್ಲಿ ಬೆಲೆ ಇಳಿಕೆ ಕಂಡಾಗ 23,990 ರುಪಾಯಿ ಆಗಿತ್ತು. ಸದ್ಯ ಇನ್ನೂ ಎರಡು ಸಾವಿರ ರುಪಾಯಿ ಇಳಿಕೆ ಕಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+ ಆಫರ್ ಗಳು

ನೀವು ಒಂದು ವೇಳೆ ಈ ಫೋನ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ ಅಮೇಜಾನ್ ಇಂಡಿಯಾದಲ್ಲಿ ನೋ ಕಾಸ್ಟ್ ಇಎಂಐ ನಲ್ಲಿ 1,045 ರುಪಾಯಿ ಬೆಲೆಗೆ ಖರೀದಿಸಬಹುದು. ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವುದಾದರೆ 2000 ರುಪಾಯಿಯ ಕ್ಯಾಷ್ ಬ್ಯಾಕ್ ಕೂಡ ಲಭ್ಯವಾಗುತ್ತದೆ.

ಅಗಸ್ಟ್ 21 ರಿಂದ 25 ರ ವರೆಗೆ ಈ ಫೋನ್ ಖರೀದಿ ಮಾಡುವುದಾದರೆ ಉಚಿತವಾಗಿ ಒಂದು ವರ್ಷದ ಸ್ಕ್ರೀನ್ ಪ್ರೊಟೆಕ್ಷನ್ ಪ್ಲಾನ್ ನ್ನೂ ಕೂಡ ಪಡೆಯಬಹುದು. ಒಂದು ವೇಳೆ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲದೇ ಇದ್ದಲ್ಲಿ ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ಇಎಂಐ ಆಯ್ಕೆಯಲ್ಲಿ ಫೋನ್ ಖರೀದಿಸಲು ಅವಕಾಶವಿದ್ದು, ಹೆಚ್ಚುವರಿ 5 ಶೇಕಡಾ ರಿಯಾಯಿತಿ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+ ವೈಶಿಷ್ಟ್ಯತೆಗಳು :

ಈ ಸ್ಮಾರ್ಟ್ ಫೋನ್ 6 ಇಂಚಿನ ಫುಲ್ ಹೆಚ್ ಡಿ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇಯನ್ನು ಹೊಂದಿದ್ದು ಅದರ ರೆಸಲ್ಯೂಷನ್ 1080x2220 ಪಿಕ್ಸಲ್ ಆಗಿದೆ ಮತ್ತು 18.5:9 ಅನುಪಾತವನ್ನು ಇದು ಹೊಂದಿದೆ. Qualcomm Snapdragon 450 ಸಾಕೆಟ್ ನ್ನು ಒಳಗೊಂಡಿರುವ ಈ ಫೋನ್ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿದೆ.

ಆಪ್ಟಿಕಲ್ ಗಳ ವಿಚಾರವನ್ನು ಪ್ರಸ್ತಾಪಿಸುವುದಾದರೆ , ಈ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು ಪ್ರೈಮರಿ ಕ್ಯಾಮರಾ 16 ಮೆಗಾಪಿಕ್ಸಲ್ ಸಾಮಥ್ಯದಾಗಿದ್ದು f/1.7 ದ್ಯುತಿರಂಧ್ರವನ್ನು ಹೊಂದಿದೆ ಮತ್ತು ಸೆಕೆಂಡರಿ ಕ್ಯಾಮರಾವು 5 ಮೆಗಾಪಿಕ್ಸಲ್ ಸಾಮರ್ಥ್ಯದಾಗಿದ್ದು f/1.9 ದ್ಯುತಿರಂಧ್ರವನ್ನು ಹೊಂದಿದೆ. ಮುಂಭಾಗದಲ್ಲಿ ಗ್ಯಾಲಕ್ಸಿ ಎ6+ 24 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮರಾ ಹೊಂದಿದ್ದು ಫೋಟೋ ಮತ್ತು ವೀಡಿಯೋ ಕಾಲಿಂಗ್ ಗೂ ಕೂಡ ಅನುಕೂಲ ಮಾಡಿಕೊಡಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+ ಡುಯಲ್ ಸಿಮ್ ಕಾರ್ಡ್ ಗೆ ಬೆಂಬಲ ನೀಡುತ್ತದೆ. 3500mAhನ ಬ್ಯಾಟರಿಯನ್ನು ಇದು ಒಳಗೊಂಡಿದ್ದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿದೆ.

Best Mobiles in India

English summary
Samsung Galaxy A6+ gets a price cut of Rs 2,000 in India: Offers and deals. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+