ಚೀನಾ ಫೋನ್ ಗಳು ಯಾಕೆ ಬೇಕು...? ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ...!
ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಕೂಡ ತನ್ನ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಸಾಕಷ್ಟು ಕಡಿತವನ್ನು ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್ ಬೆಲೆಯನ್ನು ಕಡಿತ ಮಾಡಲಾಗಿದೆ.

ಈಗಾಗಲೇ ಮಧ್ಯಮ ಸರಣಿಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಂಡಿದ್ದು, ಇನ್ನು ಹಲವು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುವ ಸನಿಹದಲ್ಲಿದೆ. ಈ ಹಿನ್ನಲೆಯಲ್ಲಿ ತನ್ನ ಸ್ಮಾರ್ಟ್ ಫೋನ್ ಗಳು ಬೇಡಿಕೆಯನ್ನು ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಸ್ಯಾಮ್ ಸಂಗ್ ತನ್ನ ಬೇಡಿಕೆಯ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದೆ ಎನ್ನಲಾಗಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್ ಬೆಲೆ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್ ಇದೇ ಮೇ ನಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತ್ತು. ಲಾಂಚ್ ಆದ ಸಂದರ್ಭದಲ್ಲಿ 32 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್ ಫೋನ್ ರೂ. 21,990ಕ್ಕೆ ಮಾರಾಟವಾಗುತಿತ್ತು, ಇದೇ ಮಾದರಿಯಲ್ಲಿ 64 GB ಆವೃತ್ತಿಯೂ ರೂ. 22,990ಕ್ಕೆ ಲಭ್ಯವಿತ್ತು.
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್ ಬೆಲೆ ಕಡಿತ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಸದ್ಯ ರೂ.2000 ಕಡಿತವನ್ನು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕ್ರಮವಾಗಿ ಈ ಸ್ಮಾರ್ಟ್ ಫೋನ್ ಗಳು ರೂ.19990 ಮತ್ತು ರೂ.20990ಕ್ಕೆ ಮಾರಾಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಬೇಡಿಕೆಯೂ ಮಾರುಕಟ್ಟೆಯಲ್ಲಿ ಹೆಚ್ಚಾಗುವ ಸಾಧ್ಯ ಇದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್:
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನಿನಲ್ಲಿ 5.6 ಇಂಚಿನ ಅಮೊಲೈಡ್ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 18.5:9 ಅನುಪಾತದಿಂದ ಕೂಡಿದ್ದು, HD+ ಗುಣಮಟ್ಟದಾಗಿದೆ. ಇದು ವಿಡಿಯೋ ನೋಡುವ ಅನುಭವನ್ನು ಉತ್ತಮ ಪಡಿಸಲಿದೆ. ಅಲ್ಲದೇ ದೊಡ್ಡ ಸ್ಕ್ರಿನ್ ಗೇಮ್ ಆಡಲು ಉತ್ತಮವಾಗಿದೆ.
ಕ್ಯಾಮೆರಾ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿಯೂ 16 MP ಕ್ಯಾಮೆರಾವನ್ನು ನೀಡಲಾಗಿದೆ. ಎರಡು ಕಡೆಯಲ್ಲಿಯೂ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಹೊಸ ಆಯ್ಕೆಯನ್ನು ಫೋಟೋ ತೆಗೆಯಲು ಇದರಲ್ಲಿ ನೀಡಲಾಗಿದೆ.
ಪ್ರೋಸೆಸರ್:
ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್ ಫೋನಿನಲ್ಲಿ ಆಕ್ಟಾ ಕೋರ್ ಎಕ್ಸೋನೊಸ್ 7 ಸರಣಿಯ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 4GB RAM ಅನ್ನು ನೀಡಲಾಗಿದೆ. ಇದಲ್ಲದೇ 32GB ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.


Click it and Unblock the Notifications








