Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್ ಫಸ್ಟ್‌ ಸೇಲ್‌ ಇಂದು..! ಆಕರ್ಷಕ ಆಫರ್ಸ್‌..!

By Avinash

ಭಾರತೀಯ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ದಿನಕ್ಕೊಂದು ಸ್ಮಾರ್ಟ್‌ಫೋನ್‌ ಲಾಂಚ್ ಆಗುತ್ತಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ಹೊಸ ಆಯ್ಕೆಗಳು ಸಿಗುತ್ತಿವೆ. ಅದರಂತೆ ಕಳೆದ ವಾರ ಭಾರತದಲ್ಲಿ ಬಿಡುಗಡೆಗೊಂಡಿದ್ದ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮೊದಲ ಬಾರಿಗೆ ಇಂದು ಮಾರಾಟವಾಗುತ್ತಿದೆ.

ದಕ್ಷಿಣ ಕೊರಿಯಾದ ಟೆಕ್‌ ಕಂಪನಿಯಾಗಿರುವ ಸ್ಯಾಮ್‌ಸಂಗ್‌ನ ಪ್ರಿಮೀಯಂ ಮಿಡ್‌ರೆಂಜ್‌ ಸ್ಮಾರ್ಟ್‌ಫೋನ್‌ ಆಗಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ನ ಮೂಲ ಜಾಗತಿಕ ಆವೃತ್ತಿ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A9 ಸ್ಟಾರ್‌ ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್ ಫಸ್ಟ್‌ ಸೇಲ್‌ ಇಂದು..! ಆಕರ್ಷಕ ಆಫರ್ಸ್‌.

ಎರಡು ತಿಂಗಳ ಹಿಂದೆ ಚೀನಾದಲ್ಲಿ ಬಿಡುಗಡೆಗೊಂಡಿದ್ದ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ A8 ಆಗಿದ್ದು, ಇಂದು ಅಮೆಜಾನ್‌ ಮೂಲಕ ಭಾರತದಲ್ಲಿ ಮಾರಾಟ ಪ್ರಾರಂಭಿಸಲಿದೆ. ಇಂದು ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ನ ಫೀಚರ್‌ಗಳೇನು..? ಆರಂಭಿಕ ಆಫರ್‌ಗಳೇನು ಎಂಬುದನ್ನು ಮುಂದೆ ನೋಡಿ.

ಲಾಂಚ್ ಆಫರ್

ಲಾಂಚ್ ಆಫರ್

ಅಮೆಜಾನ್‌ನಲ್ಲಿ ಇಂದು ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಸ್ಮಾರ್ಟ್‌ಫೋನ್‌ ಅನೇಕ ಲಾಂಚ್‌ ಆಫರ್‌ಗಳನ್ನು ಹೊಂದಿದೆ. ಒಂದು ವರ್ಷದ ಸ್ಕ್ರೀನ್‌ ಪ್ರೊಟೆಕ್ಷನ್ ಪ್ಲಾನ್‌, ಬಜಾಜ್‌ ಫಿನ್‌ಸರ್ವ್‌ ಮತ್ತು ಪ್ರಮುಖ ಕ್ರೆಡಿಟ್‌ ಕಾರ್ಡ್‌ಗಳಿಂದ ಖರೀದಿಸಿದರೆ ನೋಕಾಸ್ಟ್‌ ಇಎಂಐ ಸೌಲಭ್ಯ ಸಿಗಲಿದೆ. ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಉಪಯೋಗಿಸಿ ಖರೀದಿಸಿದರೆ ಶೇ.5ರಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ.

ಬೆಲೆ ಎಷ್ಟು..?

ಬೆಲೆ ಎಷ್ಟು..?

ಇಂದು ಅಮೆಜಾನ್‌ನಲ್ಲಿ ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಭಾರತದಲ್ಲಿ ರೂ. 34,990 ಮೌಲ್ಯ ಹೊಂದಿದ್ದು, 6GB RAM + 64GB Memory ಆವೃತ್ತಿಯಲ್ಲಿ ಸಿಗಲಿದ್ದು, ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 400GB ವರೆಗೂ ಮೆಮೊರಿ ವಿಸ್ತರಿಸಬಹುದಾಗಿದೆ.

ಉತ್ಕೃಷ್ಟ ಡಿಸ್‌ಪ್ಲೇ

ಉತ್ಕೃಷ್ಟ ಡಿಸ್‌ಪ್ಲೇ

ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ 6.3 ಇಂಚ್‌ ಸಂಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 1080x2160 ಪಿಕ್ಸೆಲ್ಸ್‌ ಗುಣಮಟ್ಟ ಹೊಂದಿದೆ. ಸೂಪರ್‌ AMOLED ಇನ್ಫಿನಿಟಿ ಡಿಸ್‌ಪ್ಲೇ ಪ್ಯಾನೆಲ್ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ 18.5:9 ಆಸ್ಪೆಕ್ಟ್‌ ರೇಷಿಯೋದೊಂದಿಗೆ 2.5D ಮತ್ತು 3D ಗ್ಲಾಸ್‌ ರಕ್ಷಣೆಯನ್ನು ಹೊಂದಿದೆ.

ಕಾರ್ಯನಿರ್ವಹಣೆ

ಕಾರ್ಯನಿರ್ವಹಣೆ

ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 660 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಸ್ಮಾರ್ಟ್‌ಫೋನ್‌ ಕ್ವಾಡ್‌ ಕೋರ್ 2.2GHz Kryo 260 ಮತ್ತು ಕ್ವಾಡ್‌ ಕೋರ್ 1.8GHz Kryo 260 ಸಿಪಿಯುಗಳನ್ನು ಹೊಂದಿದೆ. ಆಂಡ್ರಾಯ್ಡ್ 8.1 ಒರಿಯೋ ಒಎಸ್‌ನಿಂದ ಕಾರ್ಯನಿರ್ವಹಿಸುತ್ತದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಡ್ಯುಯಲ್‌ ರಿಯರ್ ಇಂಟೆಲಿಕ್ಯಾಮ್‌ ಸೆಟಪ್‌ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಹಿಂಭಾಗದಲ್ಲಿ 16MP ಮತ್ತು 24MP ಸೆನ್ಸಾರ್‌ಗಳನ್ನು ಹೊಂದಿದ್ದು, ಎರಡು f/1.7 ಅಪಾರ್ಚರ್ ಲೆನ್ಸ್‌ ಹೊಂದಿವೆ. ಫೋಟೋಗ್ರಾಫಿ ಪ್ರಿಯರಿಗೆ ಈ ಸ್ಮಾರ್ಟ್‌ಫೋನ್‌ ಇಷ್ಟವಾಗುವ ಸಾಧ್ಯತೆಯಿದೆ. Bixby ವರ್ಟ್ಯುಯಲ್ ಅಸಿಸ್ಟಂಟ್‌ ಇಂಟಿಗ್ರೇಷನ್‌ ಹೊಂದಿದೆ.

ಸ್ಮಾರ್ಟ್ ಫ್ರಾಂಟ್‌ ಕ್ಯಾಮೆರಾ

ಸ್ಮಾರ್ಟ್ ಫ್ರಾಂಟ್‌ ಕ್ಯಾಮೆರಾ

ಫ್ರಾಂಟ್‌ ಕ್ಯಾಮೆರಾದಲ್ಲಿ 24MP ಸೆನ್ಸಾರ್‌ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಸ್ಮಾರ್ಟ್‌ಫೋನ್‌ f/2.0 ಅಪಾರ್ಚರ್‌ ಲೆನ್ಸ್‌ನ್ನು ಹೊಂದಿದೆ. ಸ್ಮಾರ್ಟ್ ಬ್ಯೂಟಿ ಮತ್ತು ಪ್ರೋ ಲೈಟನಿಂಗ್‌ ಫೀಚರ್‌ಗಳನ್ನು ಹೊಂದಿದೆ. ಅದಲ್ಲದೇ AR Stickers ಮುಂತಾದ ಫೀಚರ್‌ಗಳಿಗೆ ಈ ಕ್ಯಾಮೆರಾ ವ್ಯವಸ್ಥೆ ಬೆಂಬಲಿಸುತ್ತದೆ. ಫೇಸ್‌ ಅನ್‌ಲಾಕ್‌ ಫೀಚರ್ ಕೂಡ ಲಭ್ಯವಿದ್ದು, ಫ್ರಾಂಟ್‌ ಕ್ಯಾಮೆರಾ ಮೂಲಕ ಈ ಫೀಚರ್ ಬಳಸಬಹುದು.

ಬ್ಯಾಟರಿ ಮತ್ತು ಇತರ ಫೀಚರ್ಸ್‌

ಬ್ಯಾಟರಿ ಮತ್ತು ಇತರ ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲೆಕ್ಷಿ A8 ಸ್ಟಾರ್‌ ಸ್ಮಾರ್ಟ್‌ಫೋನ್‌ 3,700mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 4G VoLTE, Wi-Fi 802.11ac, Bluetooth 5, GPS/ A-GPS, NFC, USB Type-C ಚಾರ್ಜರ್ ಮತ್ತು 3.5mm ಹೆಡ್‌ಫೋನ್‌ ಜಾಕ್‌ ಹೊಂದಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಹೊಂದಿದೆ.

Best Mobiles in India

English summary
Samsung Galaxy A8 Star to Go on Sale in India Today for the First Time. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+