Just In
- 2 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 4 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 5 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಮ್‌ಸಂಗ್ ಎ ಸರಣಿಯ ಮೊದಲ 5ಜಿ ಫೋನ್ ''ಗ್ಯಾಲಕ್ಸಿ ಎ 90 5ಜಿ'' ಬಿಡುಗಡೆ!
ವಿಶ್ವ 5G ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತರಣೆಯ ಆರಂಭದಲ್ಲಿರುವಾಗಲೇ ಮತ್ತೊಂದು ಹೊಸ 5ಜಿ ಸ್ಮಾರ್ಟ್‌ಪೋನ್ ಅನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಸದ್ದು ಮಾಡಿದೆ. ದಕ್ಷಿಣ ಕೊರಿಯಾದಲ್ಲಿ ಮಂಗಳವಾರ ನಡೆದ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಎ ಸರಣಿಯ ಮೊದಲ 5ಜಿ 'ಸ್ಮಾರ್ಟ್‌ಫೋನ್ ''ಗ್ಯಾಲಕ್ಸಿ ಎ 90 5ಜಿ'' ಬಿಡುಗಡೆಕಂಡಿದೆ. ಇದು ಕೇವಲ 5ಜಿ ಮಾತ್ರವಲ್ಲದೇ, DeX ಅನ್ನು ಸಹ ಬೆಂಬಲಿಸಿದ ಮೊದಲನೆ ಸ್ಮಾರ್ಟ್‌ಪೋನ್ ಎಂಬ ಕೀರ್ತಿಗೆ ಪಾತ್ರವಾಗಿದೆ.

48 MP ತ್ರಿವಳಿ ಕ್ಯಾಮರಾ, ಸ್ನ್ಯಾಪ್‌ಡ್ರ್ಯಾಗನ್ 855 ಪ್ರೊಸೆಸರ್ ಸೇರಿದಂತೆ ಹಲವು ವಿಶೇಷ ಫೀಚರ್ಸ್‌ಗನ್ನು ಹೊತ್ತು "ಗ್ಯಾಲಕ್ಸಿ ಎ 90 5ಜಿ'' ಎಂಟ್ರಿ ನೀಡಿದ್ದು, ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆ ಯೋನ್‌ಹಾಪ್ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 90 5ಜಿ'' ಕಂಪನಿಯ ಗೃಹ ಮಾರುಕಟ್ಟೆಯಲ್ಲಿ ಕೆಆರ್‌ಡಬ್ಲ್ಯೂ 900,000 (ಸರಿಸುಮಾರು 53,100 ರೂ.) ಆರಂಭಿಕ ಬೆಲೆಯನ್ನು ಹೊಂದಿದೆ. ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ನಾಳೆಯಿಂದಲೇ ಗ್ಯಾಲಕ್ಸಿ ಎ 90 5ಜಿ ಫೋನ್ ಮಾರಾಟವನ್ನು ಖಚಿತಪಡಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ನಂತರ ಇದು ದಕ್ಷಿಣ ಕೊರಿಯಾದಲ್ಲಿ ಕಂಪನಿಯ ಮೂರನೇ 5ಜಿ ಫೋನ್ ಆಗಿದ್ದು, ಮುಂಬರುವ ವಾರಗಳಲ್ಲಿ ಈ ಫೋನ್ ಇತರ ಮಾರುಕಟ್ಟೆಗಳಿಗೆ ವಿಸ್ತರಿಸಲಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಹಾಗಾದರೆ, ಸ್ಯಾಮ್‌ಸಂಗ್ ಎ ಸರಣಿಯ ಮೊದಲ 5ಜಿ 'ಸ್ಮಾರ್ಟ್‌ಫೋನ್ ''ಗ್ಯಾಲಕ್ಸಿ ಎ 90 5ಜಿ'' ಫೋನ್ ಹೇಗಿದೆ?, ಡಿಎಕ್ಸ್ ಅನ್ನು ಬೆಂಬಲಿಸಿದ ಮೊದಲನೆ ಸ್ಮಾರ್ಟ್‌ಪೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ಯಾಲಕ್ಸಿ ಎ 90 5ಜಿ ಫೋನ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದ್ದು, ಗ್ರೇಡಿಯಂಟ್ ಫಿನಿಶ್ ಹೊಂದಿರುವ ಅರ್ಧಭಾಗದಲ್ಲಿ ಸಾಮಾನ್ಯ ಬಣ್ಣ ಮತ್ತು ಕಪ್ಪು ಆವೃತ್ತಿಯಲ್ಲಿ ಬಂದಿದೆ. 6.7-ಇಂಚಿನ ಪೂರ್ಣ-ಹೆಚ್‌ಡಿ + (1080x2400 ಪಿಕ್ಸೆಲ್) ಸೂಪರ್ ಅಮೋಲೆಡ್ ಡಿಸ್ಪ್ಲೇಯು ವಾಟರ್‌ಡ್ರಾಪ್ ಶೈಲಿಯ ನೋಚ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಫೀಚರ್ ಅನ್ನು ಹೊಂದಿದೆ.

ಗ್ಯಾಲಕ್ಸಿ A90 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 855 SoC ಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. 6 GB ಮತ್ತು 8 GB RAM ಆಯ್ಕೆಗಳಲ್ಲಿ ಬಿಡುಗಡೆಗೊಂಡಿರುವ ಫೋನಿನಲ್ಲಿ 128 GB ಸ್ಟೋರೇಜ್ ಲಭ್ಯವಿದ್ದು, ಎಸ್‌ಡಿ ಕಾರ್ಡ್ ಮೂಲಕ 512GBವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ.

ಗ್ಯಾಲಕ್ಸಿ ಎ 90 5 ಜಿ ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದರಲ್ಲಿ 48 ಮೆಗಾಪಿಕ್ಸೆಲ್ ಎಫ್/2.0 ಮುಖ್ಯ ಕ್ಯಾಮೆರಾ, ಎಫ್/2.2 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಆಳದ ಸಂವೇದಕವಿದೆ. ಎಫ್/2.0 ಅಪರ್ಚರ್ ಹೊಂದಿರುವ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಗ್ಯಾಲಕ್ಸಿ ಎ 90 5 ಜಿ ಫೋನಿನಲ್ಲಿ 25W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದ 4,500mAh ಬ್ಯಾಟರಿ ಅಳವಡಿಸಲಾಗಿದೆ. ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ 6 ಜಿಬಿ ರ್ಯಾಮ್ ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ, ಆಂದರೆ 8 ಜಿಬಿ ರ್ಯಾಮ್ ಮಾದರಿಯಲ್ಲಿ ಅಲ್ಲ. ಇನ್ನು ಫೋನ್ 164.8x76.4x8.4mm ದಪ್ಪವಿದ್ದು ಮತ್ತು 206 ಗ್ರಾಂ ತೂಕ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

ಗ್ಯಾಲಕ್ಸಿ ಎ 90 5 ಜಿ ಫೋನ್ DeX ಅನ್ನು ಸಹ ಬೆಂಬಲಿಸಿದ ಮೊದಲನೆ ಸ್ಮಾರ್ಟ್‌ಪೋನ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಸ್ಯಾಮ್‌ಸಂಗ್ ಬಳಕೆದಾರರು ತಮ್ಮ ಫೋನ್ ಅನ್ನು ಪಿಸಿ ಮಾನಿಟರ್ ಅಥವಾ ಟಿವಿಗೆ ಸಂಪರ್ಕಿಸಲು ಈ ಫೀಚರ್ ಅನುಮತಿಸುತ್ತದೆ. ಸುಲಭವಾಗಿ ಫೋನಿನ ಅನುಭವವನ್ನು ದೊಡ್ಡ ಪರದೆಯತ್ತ ವಿಸ್ತರಿಸಲು ಈ ಫೀಚರ್ ಸಹಾಯ ಮಾಡುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470