Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್‌:..ಇದರ ಡಿಸೈನ್‌ ನೋಡಿದ್ರೆ ಸ್ಟನ್‌ ಆಗಿ ಬಿಡ್ತೀರಾ

ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ ಬುಕ್‌ ಸರಣಿಯಲ್ಲಿ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಇದನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 Go 5G ಎಂದು ಹೆಸರಿಸಲಾಗಿದೆ. ಈ ಲ್ಯಾಪ್‌ಟಾಪ್‌ ಇದೇ ವರ್ಷದ ಜನವರಿಯಲ್ಲಿ ಪ್ರಾರಂಭವಾದ ಗ್ಯಾಲಕ್ಸಿ ಬುಕ್‌ 2 Go ನ ಉತ್ತರಾಧಿಕಾರಿಯಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 Go 5G ಲ್ಯಾಪ್‌ಟಾಪ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು 720p ವೆಬ್‌ಕ್ಯಾಮ್‌ ಅನ್ನು ಹೊಂದಿದ್ದು, ಡ್ಯುಯಲ್‌ 1.5W ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರಲಿದೆ. ಇನ್ನು ಲ್ಯಾಪ್‌ಟಾಪ್‌ ಸ್ನಾಪ್‌ಡ್ರಾಗನ್‌ 7c+ Gen 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಗ್ಯಾಲಕ್ಸಿ ಬುಕ್‌ 3 Go 5G ವಿಶೇಷತೆ ಏನು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್‌:ಡಿಸೈನ್‌ ಸ್ಟನ್‌ ಆಗಿ ಬಿಡ್ತೀರಾ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 Go 5G ವಿಶೇಷತೆ ಏನು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 Go 5G ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಆಂಟಿ-ಗ್ಲೇರ್ ಲೇಪನವನ್ನು ಹೊಂದಿದ್ದು, 720p ವೆಬ್‌ಕ್ಯಾಮ್ ಅನ್ನು ಹೊಂದಿದೆ. ಇದು 6nm ಪ್ರಕ್ರಿಯೆಯ ಆಧಾರದ ಮೇಲೆ ಸ್ನಾಪ್‌ಡ್ರಾಗನ್‌ 7c+ Gen 3 ಚಿಪ್‌ಸೆಟ್‌ ಹೊಂದಿದ್ದು, ವಿಂಡೋಸ್‌ 11 OS ನಲ್ಲಿ ಕಾರ್ಯನಿರ್ವಹಿಸಲಿದೆ. ಅಡ್ರಿನೊ ಜಿಪಿಯು ಆನ್‌ಬೋರ್ಡ್ ಹೊಂದಿದ್ದು, 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್‌:ಡಿಸೈನ್‌ ಸ್ಟನ್‌ ಆಗಿ ಬಿಡ್ತೀರಾ!

ಜೊತೆಗೆ 42.3WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದು 30 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 8 ಗಂಟೆಗಳ ಬಳಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ-6E, ಬ್ಲೂಟೂತ್ 5.1, ಎರಡು USB-C ಪೋರ್ಟ್‌ಗಳು, SD ಕಾರ್ಡ್ ಮತ್ತು 3.5mm ಜ್ಯಾಕ್ ಸೇರಿವೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 Go 5G ಲ್ಯಾಪ್‌ಟಾಪ್‌ ಡ್ಯುಯಲ್ 1.5W ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಸಜ್ಜುಗೊಂಡಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್‌:ಡಿಸೈನ್‌ ಸ್ಟನ್‌ ಆಗಿ ಬಿಡ್ತೀರಾ!

ಇದಲ್ಲದೆ ಲ್ಯಾಪ್‌ಟಾಪ್‌ ಕ್ವಿಕ್ ಶೇರ್, ಸೆಕೆಂಡ್ ಸ್ಕ್ರೀನ್, ಬಡ್ಸ್ ಆಟೋ ಸ್ವಿಚ್ ಮತ್ತು ಮಲ್ಟಿ ಕಂಟ್ರೋಲ್ ಸೇರಿದಂತೆ ಹಲವಾರು ಗ್ಯಾಲಕ್ಸಿ ಎಕೋ ಸಿಸ್ಟಂ ಫೀಚರ್ಸ್‌ಗಳನ್ನು ಆನಂದಿಸಬಹುದಾಗಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಆಗಿರುವುದರಿಂದ, ಇದರ ಬೆಲೆ KRW 557,700 (ಅಂದಾಜು 35,854ರೂ) ಆಗಿದೆ. ಇನ್ನು ಲ್ಯಾಪ್‌ಟಾಪ್‌ ಜನವರಿ 2 ರಿಂದ ಸ್ಯಾಮ್‌ಸಂಗ್ ಸ್ಟೋರ್‌ಗಳು ಮತ್ತು ಮೂರು ಕೊರಿಯನ್ ಕ್ಯಾರಿಯರ್‌ಗಳಿಂದ ಇದನ್ನು ಏಕೈಕ ಸಿಲ್ವರ್ ಬಣ್ಣದಲ್ಲಿ ಖರೀದಿಸಬಹುದು.

ಇನ್ನು ಇತ್ತೀಚಿಗೆ ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 1,080x2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ವಿನ್ಯಾಸವನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ ಎಕ್ಸಿನೋಸ್‌ 1280 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13-ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು Samsung ಐದು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಮತ್ತು ಹೊಸ ಹ್ಯಾಂಡ್‌ಸೆಟ್‌ಗಳಿಗಾಗಿ ನಾಲ್ಕು ವರ್ಷಗಳ OS ಅಪ್‌ಗ್ರೇಡ್‌ಗಳನ್ನು ಭರವಸೆ ನೀಡುತ್ತಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Best Mobiles in India

English summary
Samsung Galaxy Book 3 Go 5G With 45W Charging Launched:Details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+